SBI Offer: ಕಾರ್ ಖರೀದಿಸೋಕೆ ಎಸ್​ಬಿಐ ನೀಡ್ತಿದೆ ಬಂಪರ್ ಆಫರ್! ವಿವರ ಇಲ್ಲಿ ಚೆಕ್ ಮಾಡಿ

ನೀವು ಬಹುತೇಕ ಎಲ್ಲಾ ಪ್ರಮುಖ ಬ್ರ್ಯಾಂಡ್‌ಗಳಿಂದ ಈ ಕೊಡುಗೆಗಳನ್ನು ಪಡೆಯಬಹುದಾಗಿದೆ. ಹಾಗಿದ್ದರೆ ಯಾವ ಕಾರುಗಳಿಗೆ ಈ ಆಫರ್​ಗಳು ಲಭ್ಯವಿದೆ? ಇಲ್ಲಿದೆ ಮಾಹಿತಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

 • Share this:
  ನೀವು ಹೊಸ ಕಾರ್ ಖರೀದಿಸಬೇಕು ಅಂದುಕೊಂಡಿದ್ದೀರಾ? ಕಡಿಮೆ ಬೆಲೆಗೆ ಒಳ್ಳೆಯ ಕಾರಲ್ಲಿ ಸುಯ್ ಅಂತ ಪ್ರಯಾಣ ಮಾಡಬೇಕು ಅಂದುಕೊಂಡಿದ್ದೀರಾ? ಹಾಗಾದರೆ ನಿಮ್ಮ ಆಸೆಯನ್ನು ಪೂರೈಸಲು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಯಾವುದೇ ಮಾದರಿಯ ಕಾರನ್ನು ಖರೀದಿಸಲು ಭರ್ಜರಿ ಆಫರ್ (Car Offers) ನೀಡಿದೆ. Yono SBI ಮೂಲಕ ಸಾಲವನ್ನು ನೀವು ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸಲು ಅಥವಾ ಹೊಸ ಕಾರನ್ನು ಬುಕ್ ಮಾಡಲು ಎಸ್‌ಬಿಐ ಕೊಡುಗೆಗಳನ್ನು ನೀಡುತ್ತಿದೆ. ನೀವು ಬಹುತೇಕ ಎಲ್ಲಾ ಪ್ರಮುಖ ಬ್ರ್ಯಾಂಡ್‌ಗಳಿಂದ ಈ ಕೊಡುಗೆಗಳನ್ನು ಪಡೆಯಬಹುದಾಗಿದೆ. ಹಾಗಿದ್ದರೆ ಯಾವ ಕಾರುಗಳಿಗೆ ಈ ಆಫರ್​ಗಳು ಲಭ್ಯವಿದೆ? ಇಲ್ಲಿದೆ ಮಾಹಿತಿ.

  ಟಾಟಾ ಮೋಟಾರ್ಸ್, ಹ್ಯುಂಡೈ, ಟೊಯೊಟಾ, ಆಡಿ, ಕಿಯಾ ಮೋಟಾರ್ಸ್, ಮಾರುತಿ ಸುಜುಕಿ ಮತ್ತು ರೆನಾಲ್ಟ್‌ನಂತಹ ಬ್ರಾಂಡ್ ಕಾರುಗಳ ಮೇಲೆ ಎಸ್‌ಬಿಐ ಕೊಡುಗೆಗಳನ್ನು ಪ್ರಕಟಿಸಿದೆ. ಯೋನೋ ಎಸ್‌ಬಿಐ ವೆಬ್‌ಸೈಟ್ ಅಥವಾ ಆ್ಯಪ್ ಮೂಲಕ ಕಾರನ್ನು ಬುಕ್ ಮಾಡವ ಮೂಲಕ ಗ್ರಾಹಕರು ಈ ಆಫರ್​ನ ಪ್ರಯೋಜನವನ್ನು ಪಡೆಯಬಹುದಾಗಿದೆ. ಅಂದಹಾಗೆ ನೀವೇ ಯಾವ ಬ್ರಾಂಡ್‌ನ ಕಾರುಗಳಿಗೆ ಯಾವ ಯಾವ ಆಫರ್‌ಗಳು ಲಭ್ಯವಿವೆ ಎಂಬುದನ್ನು ತಿಳಿದುಕೊಳ್ಳಿ.

  Mercedes-Benz: 25,000 ರೂಪಾಯಿಗಳ ನಗದು ಲಾಭದೊಂದಿಗೆ Mercedes Benz ಕಾರನ್ನು ಖರೀದಿಸಬಹುದಾಗಿದೆ.

  ಆಡಿ: ಆಡಿ ಕಾರನ್ನು ಬುಕ್ ಮಾಡಿ ಮತ್ತು ರೂ 25,000 ಹೆಚ್ಚುವರಿ ನಗದು ಲಾಭವನ್ನು ಪಡೆಯಬಹುದಾಗಿದೆ.

  ಟಾಟಾ ಮೋಟಾರ್ಸ್: ನೀವು ಟಾಟಾ ಮೋಟಾರ್ಸ್ ಕಾರನ್ನು ಖರೀದಿಸಿದರೆ, ನೀವು ರೂ 5,000 ವರೆಗೆ ಹೆಚ್ಚುವರಿ ನಗದು ರಿಯಾಯಿತಿಗಳನ್ನು ಪಡೆಯಬಹುದು.

  ಟೊಯೊಟಾ: ಟೊಯೊಟಾ ಕಾರು ಖರೀದಿಸಿ ಮತ್ತು 5,000 ರೂಪಾಯಿ ಮೌಲ್ಯದ ಉಚಿತ ಬಿಡಿಭಾಗಗಳನ್ನು ಪಡೆಯಬಹುದು.

  Datsun: Datsun ಕಾರಿನ ಮೇಲೆ 4,000 ರೂಪಾಯಿಗಳ ನಗದು ರಿಯಾಯಿತಿ ಪಡೆಯಬಹುದು.

  ರೆನಾಲ್ಟ್: ರೆನಾಲ್ಟ್ ಕಾರನ್ನು ಖರೀದಿಸಿ ಮತ್ತು 5,000 ರೂಪಾಯಿ ಮೌಲ್ಯದ ಬಿಡಿಭಾಗಗಳನ್ನು ಉಚಿತವಾಗಿ ಪಡೆಯಬಹುದು.

  ಹುಂಡೈ: ನೀವು ಹ್ಯುಂಡೈ ಕಾರನ್ನು ಬುಕ್ ಮಾಡಿದರೆ ಆಯ್ದ ಮಾದರಿಗಳಲ್ಲಿ ಆದ್ಯತೆಯ ವಿತರಣೆ ಲಭ್ಯವಿದೆ.

  ಮಹೀಂದ್ರಾ: ನೀವು ಮಹೀಂದ್ರಾ SUV ಕಾರನ್ನು ಬುಕ್ ಮಾಡಿದರೆ, ನೀವು 3,000 ರೂಪಾಯಿ ಮೌಲ್ಯದ ಬಿಡಿಭಾಗಗಳನ್ನು ಉಚಿತವಾಗಿ ಪಡೆಯಬಹುದು.

  ಮಾರುತಿ ಸುಜುಕಿ: ಮಾರುತಿ ಸುಜುಕಿ ಕಾರನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಲು ಸಾಧ್ಯವಿದೆ.

  ಕಿಯಾ ಮೋಟಾರ್ಸ್: ಕಿಯಾ ಮೋಟಾರ್ಸ್ ಕಾರನ್ನು ಖರೀದಿಸಿದಾಗ ಆದ್ಯತೆಯ ವಿತರಣಾ ಸೌಲಭ್ಯ ಲಭ್ಯವಿದೆ.

  ಇದನ್ನೂ ಓದಿ: FD Interest Rate Hike: ಹೆಚ್ಚಾಯ್ತು ಎಫ್​ಡಿ ಬಡ್ಡಿದರ, ಹಣವನ್ನು ಬ್ಯಾಂಕಲ್ಲಿ ಇಡೋದೇ ಬೆಸ್ಟಾ?

  Yono SBI ಪ್ಲಾಟ್‌ಫಾರ್ಮ್ ಮೂಲಕ ಕಾರ್ ಲೋನ್ ತೆಗೆದುಕೊಂಡರೆ ಇನ್ನೂ ಹಲವು ಪ್ರಯೋಜನಗಳಿವೆ. ಕಾರು ಸಾಲದ ಬಡ್ಡಿದರಗಳು ಶೇಕಡಾ 7.35 ರಿಂದ ಪ್ರಾರಂಭವಾಗುತ್ತವೆ. ಶೂನ್ಯ ಸಂಸ್ಕರಣಾ ಶುಲ್ಕ ಇರುತ್ತದೆ. ಸಾಲವು ತಕ್ಷಣವೇ ಅನುಮೋದನೆಗೊಳ್ಳುತ್ತದೆ. ಕೆಲವು ವಾಹನಗಳಲ್ಲಿ 100% ಹಣಕಾಸು ಲಭ್ಯವಿದೆ. ಯೋನೋ SBI ಪ್ಲಾಟ್‌ಫಾರ್ಮ್‌ನಲ್ಲಿ ಕಾರ್ ಲೋನ್ ಪಡೆಯುವುದು ಹೇಗೆ ಎಂದು ತಿಳಿಯಿರಿ.

  ಹಂತ ಹಂತದ ವಿವರ ಇಲ್ಲಿದೆ

  ಹಂತ 1- ಮೊದಲು ನೀವು Yono SBI ಅಪ್ಲಿಕೇಶನ್ ಅನ್ನು ತೆರೆಯಬೇಕು.

  ಹಂತ 2- ನಿಮ್ಮ ವಿವರಗಳೊಂದಿಗೆ ನೋಂದಣಿಯನ್ನು ಮಾಡಬೇಕು.

  ಹಂತ 3- ಪೂರ್ವ-ನೋಂದಾಯಿತ ಬಳಕೆದಾರರು ತಮ್ಮ ವಿವರಗಳೊಂದಿಗೆ ಲಾಗಿನ್ ಮಾಡಬೇಕಾಗುತ್ತದೆ.

  ಹಂತ 4- ನಂತರ ಶಾಪ್ & ಆರ್ಡರ್ ಮೇಲೆ ಕ್ಲಿಕ್ ಮಾಡಿ.

  ಹಂತ 5- ಅದರ ನಂತರ ಆಟೋಮೊಬೈಲ್ಸ್ ವಿಭಾಗವನ್ನು ತೆರೆಯಿರಿ.

  ಹಂತ 6- ನಂತರ ಕಾರನ್ನು ಆಯ್ಕೆಮಾಡಿ.

  ಇದನ್ನೂ ಓದಿ: Invest in Karnataka: ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕವೇ ನಂಬರ್ 1, ಬರೋಬ್ಬರಿ 50 ಸಾವಿರ ಎಕರೆ ಭೂಸ್ವಾಧೀನ

  ಹಂತ 7- ಕಾರನ್ನು ಆರ್ಡರ್ ಮಾಡಿ ಮತ್ತು ಲೋನ್ ಆಯ್ಕೆಯನ್ನು ಆರಿಸಿ.

  ಹಂತ 8- ಅದರ ನಂತರ ನೀವು ನಿಮ್ಮ ವಿವರಗಳನ್ನು ನಮೂದಿಸಬೇಕು.

  ಹಂತ 9- ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಲೋನ್ ಮೊತ್ತ, ಅವಧಿಯನ್ನು ಆಯ್ಕೆಮಾಡಿ.

  ಹಂತ 10- ಅಂತಿಮವಾಗಿ ಸಲ್ಲಿಸಿ ಮತ್ತು ಅಪ್ಲಿಕೇಶನ್ ಪ್ರೊಸೆಸ್ ಅನ್ನು ಪೂರ್ಣಗೊಳಿಸಿ.
  Published by:guruganesh bhat
  First published: