• Home
  • »
  • News
  • »
  • business
  • »
  • SBI Super Plan: ಹಿರಿಯ ನಾಗರಿಕರಿಗಾಗಿ ಎಸ್‌ಬಿಐ ಸೂಪರ್ ಪ್ಲಾನ್! ₹ 5 ಲಕ್ಷ ಠೇವಣಿ ಜೊತೆಗೆ ₹ 2 ಲಕ್ಷ ಬಡ್ಡಿ!

SBI Super Plan: ಹಿರಿಯ ನಾಗರಿಕರಿಗಾಗಿ ಎಸ್‌ಬಿಐ ಸೂಪರ್ ಪ್ಲಾನ್! ₹ 5 ಲಕ್ಷ ಠೇವಣಿ ಜೊತೆಗೆ ₹ 2 ಲಕ್ಷ ಬಡ್ಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

'ಎಸ್‌ಬಿಐ ವಿಕೇರ್ ಠೇವಣಿ ಯೋಜನೆ' ಅಡಿಯಲ್ಲಿ ಹಿರಿಯ ನಾಗರಿಕರಿಗೆ ಹೆಚ್ಚುವರಿ ಪ್ರಯೋಜನಗಳನ್ನು ನೀಡಲಾಗುತ್ತಿದೆ. ಈ ಯೋಜನೆಯ ಗಡುವನ್ನು 31 ಮಾರ್ಚ್ 2023 ರವರೆಗೆ ವಿಸ್ತರಿಸಲಾಗಿದೆ.

  • Share this:

ಹಣದುಬ್ಬರ ಮತ್ತು ದುಬಾರಿ ಸಾಲಗಳ ನಡುವೆ, ಬ್ಯಾಂಕ್‌ಗಳು ಗ್ರಾಹಕರಿಗೆ ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿಯನ್ನು ನೀಡಲು ಪ್ರಾರಂಭಿಸಿವೆ. ಇತ್ತೀಚಿನ ದಿನಗಳಲ್ಲಿ, ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳು (Bank Interest Rates) ವಿವಿಧ ಅವಧಿಯ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು (Interest Rate) ಹೆಚ್ಚಿಸಿವೆ. ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ ಕೂಡ ಎಫ್‌ಡಿ (SBI FD Interest Rates) ಮೇಲಿನ ಠೇವಣಿ ದರಗಳನ್ನು ಹೆಚ್ಚಿಸಿದೆ. ಇದರಲ್ಲಿ ಪ್ರಸ್ತುತ ಸಾಮಾನ್ಯ ಗ್ರಾಹಕರು ಗರಿಷ್ಠ 6.75 ಪ್ರತಿಶತ ಮತ್ತು ಹಿರಿಯ ನಾಗರಿಕರು7.25 ಪ್ರತಿಶತದಷ್ಟು ಬಡ್ಡಿಯನ್ನು ಪಡೆಯುತ್ತಿದ್ದಾರೆ.


'ಎಸ್‌ಬಿಐ ವಿಕೇರ್ ಠೇವಣಿ ಯೋಜನೆ' ಅಡಿಯಲ್ಲಿ ಹಿರಿಯ ನಾಗರಿಕರಿಗೆ ಹೆಚ್ಚುವರಿ ಪ್ರಯೋಜನಗಳನ್ನು ನೀಡಲಾಗುತ್ತಿದೆ. ಈ ಯೋಜನೆಯ ಗಡುವನ್ನು 31 ಮಾರ್ಚ್ 2023 ರವರೆಗೆ ವಿಸ್ತರಿಸಲಾಗಿದೆ.


₹5 ಲಕ್ಷ ಠೇವಣಿ ಮೇಲೆ ₹2 ಲಕ್ಷ ಬಡ್ಡಿ


ಎಸ್‌ಬಿಐ ವಿಶೇಷ ಯೋಜನೆಯಾದ ಎಸ್‌ಬಿಐ ವಿಕೇರ್ ಠೇವಣಿಯಿಂದ 7.25 ಪ್ರತಿಶತದವರೆಗೆ ಬಡ್ಡಿಯನ್ನು ಹಿರಿಯ ನಾಗರಿಕರು ಪಡೆಯುತ್ತಿದ್ದಾರೆ. ಈ ಯೋಜನೆಯಲ್ಲಿ 5 ಲಕ್ಷ ರೂ. ಠೇವಣಿ ಇಟ್ಟರೆ, 5 ವರ್ಷಗಳ ಮೆಚ್ಯೂರಿಟಿಯಲ್ಲಿ 7,16,130 ರೂ.ಪಡೆಯಬಹುದು. ಇದರ ಬಡ್ಡಿ ಆದಾಯವಾಗಿ 2,16,130 ರೂ.ಸಿಗಲಿದೆ.


ಇದನ್ನೂ ಓದಿ: 7th Pay Commission: ಕೇಂದ್ರ ಸರ್ಕಾರಿ ನೌಕರರೇ ಅಲರ್ಟ್, ಮಾ.31ರ ನಂತರ ಈ ಸೌಲಭ್ಯ ಕಡಿತ ಸಾಧ್ಯತೆ


ಈ ಯೋಜನೆಯಲ್ಲಿ, 0.50 ಪ್ರತಿಶತದ ಹೊರತಾಗಿ, 0.30 ಪ್ರತಿಶತದಷ್ಟು ಬಡ್ಡಿ ಪಡೆಯಬಹುದು. ಅಂದರೆ ಒಟ್ಟು 0.80 ಶೇಕಡದಷ್ಟು ಹೆಚ್ಚಿನ ಬಡ್ಡಿಯನ್ನು ಎಲ್ಲಾ ಹಿರಿಯ ನಾಗರಿಕರಿಗೆ 5 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಎಫ್‌ಡಿಗಳಲ್ಲಿ ನೀಡಲಾಗುತ್ತಿದೆ.


ಈ ಬಡ್ಡಿ ದರಗಳು ಡಿಸೆಂಬರ್ 13, 2022 ರಿಂದ 2 ಕೋಟಿಗಿಂತ ಕಡಿಮೆ ಠೇವಣಿ ಇರುವ ಖಾತೆಗಳಿಗೆ ಅನ್ವಯಿಸುತ್ತದೆ.


ಎಸ್‌ಬಿಐ ಎಫ್‌ಡಿ : ತೆರಿಗೆ ಕಡಿತದ ಪ್ರಯೋಜನ
ಬ್ಯಾಂಕ್‌ಗಳ ಸ್ಥಿರ ಠೇವಣಿ / ಅವಧಿ ಠೇವಣಿಗಳನ್ನು ಸಾಮಾನ್ಯವಾಗಿ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಅಪಾಯ-ವಿರೋಧಿ ಹೂಡಿಕೆದಾರರಿಗೆ ಇದು ಉತ್ತಮ ಆಯ್ಕೆಯಾಗಿದೆ. 5 ವರ್ಷಗಳ ತೆರಿಗೆ ಉಳಿತಾಯ ಎಫ್‌ಡಿ ಯಲ್ಲಿ ಸೆಕ್ಷನ್ 80ಸಿ ಅಡಿಯಲ್ಲಿ 1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಲಭ್ಯವಿದೆ.


ಇದನ್ನೂ ಓದಿ: Ratan Tata: ಮೊಬೈಲೂ ಇಲ್ಲ, ಎರಡು ಕೋಣೆಯ ಮನೆಯಲ್ಲಿ ವಾಸ: ಇದು ರತನ್ ಟಾಟಾ ತಮ್ಮ ಜಿಮ್ಮಿ ಲೈಫ್​​ಸ್ಟೈಲ್!


ಆದರೂ ಎಫ್‌ಡಿಯಲ್ಲಿ ಗಳಿಸಿದ ಬಡ್ಡಿಯು ತೆರಿಗೆಗೆ ಒಳಪಡುತ್ತದೆ. ಇದು 5 ವರ್ಷಗಳ ಲಾಕ್ ಇನ್ ಹೊಂದಿದೆ. ಈ ಅವಧಿಯು 10 ವರ್ಷಗಳವರೆಗೆ ವಿಸ್ತರಿಸಬಹುದು. ಎಸ್‌ಬಿಐ ತನ್ನ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಅಸ್ತಿತ್ವದಲ್ಲಿರುವ ಎಫ್‌ಡಿ ದರಗಳಿಗಿಂತ 1% ಹೆಚ್ಚಿನ ಬಡ್ಡಿಯನ್ನು ನೀಡುತ್ತಿದೆ.


ಯೋಜನೆಯ ವೈಶಿಷ್ಟ್ಯಗಳು :


ಠೇವಣಿ ಅವಧಿ: ಕನಿಷ್ಠ - 5 ವರ್ಷಗಳು. ಗರಿಷ್ಠ - 10 ವರ್ಷಗಳು


ಬಡ್ಡಿ ದರ: ಸಾರ್ವಜನಿಕರಿಗೆ ಕಾರ್ಡ್ ದರಕ್ಕಿಂತ 30 bps (50 bps ಅಸ್ತಿತ್ವದಲ್ಲಿರುವ ಪ್ರೀಮಿಯಂ ಮತ್ತು ಅದಕ್ಕಿಂತ ಹೆಚ್ಚು) ಹೆಚ್ಚುವರಿ ಪ್ರೀಮಿಯಂ ಆಗಿರುತ್ತದೆ. ಅಂದರೆ ಸಾರ್ವಜನಿಕರಿಗೆ ಕಾರ್ಡ್ ದರಕ್ಕಿಂತ 80 bps ಇರುತ್ತದೆ.


ಬಡ್ಡಿಯ ಪಾವತಿ: ಅವಧಿ ಠೇವಣಿ - ಮಾಸಿಕ / ತ್ರೈಮಾಸಿಕ , ಮಧ್ಯಂತರ ವಿಶೇಷ ಅವಧಿಯ ಠೇವಣಿ- ಮೆಚ್ಯೂರಿಟಿ ಬಡ್ಡಿಯ ಟಿಡಿಎಸ್ ಅನ್ನು ಗ್ರಾಹಕರ ಖಾತೆಗೆ ಜಮಾ ಮಾಡಲಾಗುತ್ತದೆ


ಸಾಲ ಸೌಲಭ್ಯ: ಲಭ್ಯವಿದೆ.


ವಿಶೇಷ ಹಿರಿಯ ನಾಗರಿಕರ ಎಫ್‌ಡಿ ಯೋಜನೆಗಳನ್ನು ನೀಡುವ ಇತರೆ ಬ್ಯಾಂಕ್‌ಗಳು :


ಕಳೆದ ಎರಡು ವರ್ಷಗಳಲ್ಲಿ ಆಕರ್ಷಕ ಬಡ್ಡಿ ದರಗಳೊಂದಿಗೆ ಹಿರಿಯ ನಾಗರಿಕರಿಗಾಗಿ ವಿಶೇಷ ಎಫ್‌ಡಿ ಯೋಜನೆಗಳನ್ನು ಪ್ರಾರಂಭಿಸಿದ ಹಲವು ಬ್ಯಾಂಕ್‌ಗಳಿವೆ. ಇವುಗಳಲ್ಲಿ ಐಸಿಐಸಿ ಬ್ಯಾಂಕ್, ಹೆಚ್ ಡಿಎಫ್ ಸಿ ಬ್ಯಾಂಕ್ ಸೇರಿದಂತೆ ಇತರೆ ಬ್ಯಾಂಕ್ ಗಳು ಸೇರಿವೆ. ಹಿರಿಯ ನಾಗರಿಕರು ಈ ಯೋಜನೆಯನ್ನು ಬಳಸಿಕೊಂಡು ಹೆಚ್ಚಿನ ಬಡ್ಡಿಯನ್ನು ಪಡೆಯಬಹುದು.

Published by:ಗುರುಗಣೇಶ ಡಬ್ಗುಳಿ
First published: