Diamonds: ಮಾನವ ನಿರ್ಮಿತ ವಜ್ರಗಳ ತಯಾರಿಕೆಗೆ ಹಣಕಾಸು ಒದಗಿಸಲು ಎಸ್‌ಬಿಐ ಹೊಸ ನೀತಿ!

ಉನ್ನತ ಮಟ್ಟದ ಬ್ಯಾಂಕ್‌ಗಳು ಅನುಮಾನಸ್ಪದವಾಗಿ ನೋಡುವಂತೆ ಸಾಂಪ್ರದಾಯಿಕ ವಜ್ರಗಳಿಗೆ ಸರಿಸಮಾನವಲ್ಲವೆಂದು ಕಡೆಗಣಿಸಲಾದ, ನೈಸರ್ಗಿಕ ಕಲ್ಲುಗಳ ಪ್ರತಿರೂಪದಂತಿರುವ ಲ್ಯಾಬ್‌ನಲ್ಲಿ ತಯಾರಾದ ವಜ್ರಗಳ (ಮಾನವ ನಿರ್ಮಿತ ವಜ್ರ) ತಯಾರಕರಿಗೆ ಧನಸಹಾಯ ಮಾಡಲು ನೀತಿಯನ್ನು ರೂಪಿಸಿದ ಮೊದಲ ಭಾರತೀಯ ಸಾಲದಾತ ಎಂಬುದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪರಿಗಣಿತವಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಉನ್ನತ ಮಟ್ಟದ ಬ್ಯಾಂಕ್‌ಗಳು (Banks) ಅನುಮಾನಸ್ಪದವಾಗಿ ನೋಡುವಂತೆ ಸಾಂಪ್ರದಾಯಿಕ ವಜ್ರಗಳಿಗೆ ಸರಿಸಮಾನವಲ್ಲವೆಂದು ಕಡೆಗಣಿಸಲಾದ, ನೈಸರ್ಗಿಕ ಕಲ್ಲುಗಳ ಪ್ರತಿರೂಪದಂತಿರುವ ಲ್ಯಾಬ್‌ನಲ್ಲಿ ತಯಾರಾದ ವಜ್ರಗಳ (ಮಾನವ ನಿರ್ಮಿತ ವಜ್ರ) (Man Made Diamond) ತಯಾರಕರಿಗೆ ಧನಸಹಾಯ ಮಾಡಲು ನೀತಿಯನ್ನು ರೂಪಿಸಿದ ಮೊದಲ ಭಾರತೀಯ ಸಾಲದಾತ ಎಂಬುದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (Bank of India) ಪರಿಗಣಿತವಾಗಿದೆ. ವಜ್ರದ ವ್ಯಾಪಾರದಲ್ಲಿನ ನಿಧಾನಗತಿಯ ಬದಲಾವಣೆಯನ್ನು ಪ್ರತಿಬಿಂಬಿಸುತ್ತಾ, ಸಿಂಥೆಟಿಕ್ ವಜ್ರಗಳನ್ನು ಉತ್ಪಾದಿಸಲು ಆಭರಣ ತಯಾರಕರು (Jewelry Maker) ಸೂರತ್‌ನಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸುವ ಹಾಗೂ ಮತ್ತು ಡೈಮಂಡ್ ಕಟರ್ ಮತ್ತು ಪಾಲಿಷರ್‌ಗಳ ಕೇಂದ್ರವೆಂದೆನಿಸಿರುವ ಮುಂಬೈನಿಂದ ದಕ್ಷಿಣ ಗುಜರಾತ್ ಪಟ್ಟಣಕ್ಕೆ ಅನೇಕ ವಜ್ರ ವ್ಯಾಪಾರಿಗಳು ತಮ್ಮ ಮಳಿಗೆಗಳನ್ನು ಸ್ಥಳಾಂತರಿಸುವ ಯೋಜನೆಯ ನಡುವೆಯೇ ದೇಶದ ಅತಿದೊಡ್ಡ ಬ್ಯಾಂಕ್ ಈ ನಿರ್ಧಾರ ತಾಳಿದೆ.

ಹೆಚ್ಚಾದ ಬೇಡಿಕೆ:

ಮಾನವ ನಿರ್ಮಿತ (ಅಥವಾ ಲ್ಯಾಬ್-ನಿರ್ಮಾತ) ವಜ್ರದ ಮಾರುಕಟ್ಟೆಯು ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ. ಇವುಗಳು ನೈಸರ್ಗಿಕ ವಜ್ರಗಳ ಒಂದು ಭಾಗವಾಗಿರುವ ಕಾರಣ, ಎಸ್‌ಬಿಐ ಇದನ್ನು ಬಹುಶಃ ಉದಯೋನ್ಮುಖ ವ್ಯಾಪಾರ ಎಂದು ಭಾವಿಸುತ್ತದೆ. ಸಾಂಕ್ರಾಮಿಕ ಮತ್ತು ಕೈಗೆಟುಕುವ ದರದಲ್ಲಿನ ಕುಸಿತದ ಕಾರಣದಿಂದ, ಲ್ಯಾಬ್‌ನಲ್ಲಿ ತಯಾರಾದ ವಜ್ರಗಳಿಗೆ ಬೇಡಿಕೆ ಸುಧಾರಿಸಿದೆ" ಎಂದು ಉದ್ಯಮದ ಹಿರಿಯ ವ್ಯಕ್ತಿಯೊಬ್ಬರು ಸುದ್ದಿವಾಹಿನಿಗೆ ತಿಳಿಸಿದ್ದಾರೆ.

ಆರ್ಥಿಕ ನೆರವು ನೀಡುವ ಬ್ಯಾಂಕ್ ನೀತಿ:

ನೈಸರ್ಗಿಕ (ಅಥವಾ, ಭೂಮಿಯಿಂದ ಗಣಿಗಾರಿಕೆ ಮಾಡಿದ) ವಜ್ರಗಳು, ಸಿಂಥೆಟಿಕ್ ವಜ್ರಗಳಿಂದ 30-40% ಕಡಿಮೆ ಬೆಲೆಯಿರುವ ಡಿಬೀರ್ಸ್ ಮತ್ತು ಅಲ್ರೋಸಾದಂತಹ ಜಾಗತಿಕ ಗಣಿಗಾರರ ಪ್ರಾಶಸ್ತ್ಯಕ್ಕೆ ಒಳಗಾಗದ ಪರಿಸರ ಸ್ನೇಹಿ ಉತ್ಪನ್ನ ಎಂದೆನಿಸಿದರೂ ವಂಚಕ ಆಭರಣಕಾರರು ಕೃತಕ ಕಲ್ಲುಗಳನ್ನು ನೈಜ ಕಲ್ಲುಗಳೊಂದಿಗೆ ಮಿಶ್ರಮಾಡಿ ಮಾಧ್ಯಮ ಹಾಗೂ ಜಾರಿ ಏಜೆನ್ಸಿಗಳ ಗಮನಕ್ಕೆ ಬರುವಂತೆ ಮಾಡಿ ಇವುಗಳ ಅಧಃಪತನಕ್ಕೆ ಕಾರಣವಾಗುತ್ತಿದ್ದಾರೆ. ಲ್ಯಾಬ್‌ನಲ್ಲಿ ತಯಾರಾದ ವಜ್ರಗಳನ್ನು ತಯಾರಿಸುವ ಘಟಕಗಳಿಗೆ ಆರ್ಥಿಕ ನೆರವನ್ನು ನೀಡುವ ನೀತಿಯನ್ನು ಬ್ಯಾಂಕ್ ರೂಪಿಸಿದೆ ಎಂದು ಕೆಲವು ವಾರಗಳ ಹಿಂದೆ SBI ಮೂಲಗಳು ದೃಢಪಡಿಸಿದ್ದವು. ಇದು ಹೆಚ್ಚುಕಡಿಮೆ ಯಂತ್ರೋಪಕರಣಗಳ ಆಮದಿಗಾಗಿ ಇರುವ ಅವಧಿಯ ಸಾಲಗಳಾಗಿರುತ್ತದೆ. ಕಾರ್ಯನಿರತ ಬಂಡವಾಳವಾಗಿ ಬಹಳ ಕಡಿಮೆ ವಿತರಿಸಲಾಗುತ್ತದೆ.

ಇದನ್ನೂ ಓದಿ: Startup: ಸ್ಟಾರ್ಟ್​ಅಪ್​ ಕಂಪೆನಿ ಸೇರುವ ಮುನ್ನ ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಿ! ನಿಮ್ಗೆ ಸಹಾಯ ಆಗುತ್ತೆ

ವ್ಯಾಪಾರ ಕೇಂದ್ರಗಳು:

"ಮುಂಬೈ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಡೈಮಂಡ್ ಬೋರ್ಸ್ ಶಾಖೆ ಮತ್ತು ಸೂರತ್‌ನಲ್ಲಿರುವ ಕಮರ್ಷಿಯಲ್ ಶಾಖೆಯನ್ನು ವ್ಯಾಪಾರಕ್ಕಾಗಿ ಗುರುತಿಸಲಾಗಿದೆ" ಎಂದು ಹಿರಿಯ ವ್ಯಕ್ತಿಯೊಬ್ಬರು ತಿಳಿಸಿದ್ದು ಸ್ವತ್ತುಗಳಲ್ಲಿ ಹೂಡಿಕೆ ಮಾಡುವ ಮೂಲಕ ಅಪಾಯವನ್ನು ತಗ್ಗಿಸಲು ಆಂತರಿಕ ಅಥವಾ ನೈಸರ್ಗಿಕ ಕಾರ್ಯವಿಧಾನದ ಸಂಪರ್ಕ ಹೊಂದಿರುವ ಸ್ವತ್ತುಗಳು ಲಭ್ಯವಿರುವುದನ್ನು ಹೊರತುಪಡಿಸಿ ವಿದೇಶಿ ಕರೆನ್ಸಿಗೆ ಸಾಲಗಾರನ ಮಾನ್ಯತೆಯನ್ನು ಸಂಪೂರ್ಣವಾಗಿ ತಡೆಗಟ್ಟಬೇಕೆಂದು ತಿಳಿಸಿದ್ದಾರೆ.

ಈ ಉದ್ಯಮಕ್ಕೆ ತೊಡಗುವ ಮುನ್ನ ಬ್ಯಾಂಕ್ ಮಾನವ ನಿರ್ಮಿತ ವಜ್ರಗಳ ಬೆಲೆಯಲ್ಲಿನ ಏರಿಳಿತವನ್ನು ಅಧ್ಯಯನ ಮಾಡುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 1950ರ ದಶಕದಲ್ಲಿ ಜನರಲ್ ಎಲೆಕ್ಟ್ರಿಕ್‌ನಿಂದ ಮೊದಲ ಬಾರಿಗೆ ಉತ್ಪಾದಿಸಲಾದ ಸಿಂಥೆಟಿಕ್ ಡೈಮಂಡ್ ತಂತ್ರಜ್ಞಾನವು ಭೂಮಿಯಾಳದಲ್ಲಿ ಒತ್ತಡ ಹಾಗೂ ತಾಪಮಾನವನ್ನು ಮರುಸೃಷ್ಟಿಸುವ ವಿಧಾನವನ್ನು ಒಳಗೊಂಡಿದ್ದು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯನ್ನು ಕಂಡುಕೊಂಡಿದೆ.

ಪಾಲಿಶ್ ಮಾಡದ ಮಾನವ ನಿರ್ಮಿತ ವಜ್ರಗಳ ರಫ್ತು

ಇಂತಹ ವಜ್ರಗಳಿಗೆ ಸ್ಥಳೀಯ ಉತ್ಪಾದನಾ ಸಾಮರ್ಥ್ಯ ಲಭ್ಯವಿಲ್ಲದೇ ಇದ್ದರೂ ಅಪೆಕ್ಸ್ ಇಂಡಸ್ಟ್ರಿ ಬಾಡಿ ಜೆಮ್ ಹಾಗೂ ಜ್ಯುವೆಲ್ಲರಿ ಎಕ್ಸ್‌ಪೋರ್ಟ್ ಪ್ರಮೋಶನ್ ಕೌನ್ಸಿಲ್ (GJEPC) ಪ್ರಕಾರ, $358.3 ಮಿಲಿಯನ್ ಬೆಲೆಯ ಪಾಲಿಶ್ ಮಾಡದ ಮಾನವ ನಿರ್ಮಿತ ವಜ್ರಗಳನ್ನು ಏಪ್ರಿಲ್ ಹಾಗೂ ಜೂನ್ 2022ರ ನಡುವೆ ಆಮದು ಮಾಡಿಕೊಳ್ಳಲಾಗಿದೆ ಎಂದು ತೋರಿಸಿದೆ. ಕುತೂಹಲಕಾರಿಯಾಗಿ, ಆದಾಗ್ಯೂ, ಕೌನ್ಸಿಲ್ ಅಂಕಿ ಅಂಶವು ಭಾರತದಿಂದ $11.3 ಮಿಲಿಯನ್ನಷ್ಟು ಪಾಲಿಶ್ ಮಾಡದ ಮಾನವ ನಿರ್ಮಿತ ವಜ್ರಗಳನ್ನು ರಫ್ತು ಮಾಡಿದೆ ಎಂದು ತೋರಿಸುತ್ತದೆ. ಭಾರತದಲ್ಲಿ ತಯಾರಾದ ಇಂತಹ ವಜ್ರಗಳನ್ನು ಇಲ್ಲಿಂದ ಏಕೆ ರಫ್ತು ಮಾಡಬೇಕು? ಇವುಗಳು ಎಲ್ಲಿಗೆ ಹೋಗುತ್ತಿವೆ? ಅದರಲ್ಲೂ ವಜ್ರ ಕತ್ತರಿಸುವ ಕೇಂದ್ರ ಸೂರತ್ ಆಗಿದ್ದು ದುಬೈ ಅಲ್ಲ ಎಂಬುದಾಗಿ ಹಿರಿಯ ವ್ಯಾಪಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:  15 ಕೋಟಿ ಸ್ಯಾಲರಿ ಪಡೆಯುತ್ತಿದ್ದ Ambani ಈ ವರ್ಷ ಒಂದು ರೂಪಾಯಿ ತೆಗೆದುಕೊಂಡಿಲ್ಲ, ಕಾರಣವೇನು?

ಎಸ್‌ಬಿಐ ಯ ನಿರ್ಧಾರವು ಈ ಉದ್ಯಮಕ್ಕೆ ಧನಾತ್ಮಕವಾಗಿದ್ದು, ಅನೇಕ ಮೋಸಗಾರರ ಕೃತ್ಯಗಳಿಂದ ಕಳಂಕಿತವಾಗಿರುವ ಉದ್ಯಮಕ್ಕೆ ಆಸರೆಯಾಗಿದೆ ಎಂಬುದಾಗಿ ಹಿರಿಯ ಉದ್ಯಮಿ ಅಭಿಪ್ರಾಯ ಪಟ್ಟಿದ್ದಾರೆ.
Published by:Ashwini Prabhu
First published: