QR Code Scam Alert: ಹಣ ಸ್ವೀಕರಿಸೋಕೂ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಕೆ?

ನೀವು ಅರ್ಥಮಾಡಿಕೊಳ್ಳಬೇಕಾದ ಕೆಲವು ಸುರಕ್ಷತಾ ಸಲಹೆಗಳನ್ನು ಬ್ಯಾಂಕ್ ನೀಡಿದೆ. ಇವುಗಳಲ್ಲಿ ಒಂದಾದರೂ ತಪ್ಪು ಮಾಡಿದರೆ ಬ್ಯಾಂಕ್ ಅಕೌಂಟ್​ನಲ್ಲಿಯ ಹಣ ಮಂಗಮಾಯ ಆಗಬಹುದು ಗಮನಿಸಿ!

ಕ್ಯೂಆರ್​​​ ಕೋಡ್

ಕ್ಯೂಆರ್​​​ ಕೋಡ್

  • Share this:
    ಕ್ಯೂಆರ್ ಕೋಡ್ ಸ್ಕ್ಯಾನ್ (QR Code Scan) ಮಾಡೋದು ಈಗ ಯಾರಿಗೂ ಹೊಸದಲ್ಲ. ಪ್ರತಿದಿನ ಏನಾದರೂ ಹಣ ಪಾವತಿ (Money Transaction) ಮಾಡೋಕೆ ಎಲ್ಲರೂ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡ್ತಾನೇ ಇರುತ್ತಾರೆ. ಆದರೆ ಕ್ಯೂಆರ್​ಕೋಡ್​ಗಳ ಬಗ್ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI Alert) ಒಂದು ಗಂಭೀರ ಎಚ್ಚರಿಕೆ ನೀಡಿದೆ. ನೀವು ಹಣವನ್ನು ಪಡೆಯಲು ಕ್ಯೂಆರ್​ ಕೋಡ್​ಗಳನ್ನು ತಪ್ಪಾಗಿ ಸ್ಕ್ಯಾನ್ ಮಾಡಬೇಡಿ (QR Code Scam)ಎಂದು ಬ್ಯಾಂಕ್ ಹೇಳಿದೆ. ಹಾಗೆ ಮಾಡುವುದರಿಂದ ನಿಮ್ಮ ಖಾತೆಯಿಂದ ಹಣ ಕಣ್ಮರೆಯಾಗಬಹುದು. ಎಸ್‌ಬಿಐ ತನ್ನ ಗ್ರಾಹಕರನ್ನು ಎಚ್ಚರಿಸುವ ಸಂದರ್ಭದಲ್ಲಿ ಕೆಲವು ಸುರಕ್ಷತಾ ಸಲಹೆಗಳನ್ನು ನೀಡಿದೆ.

    ಎಸ್‌ಬಿಐ ಗ್ರಾಹಕರಿಗೆ ಎಚ್ಚರಿಕೆ: ದೇಶದಲ್ಲಿ ಅತ್ಯಂತ ವೇಗದಲ್ಲಿ ನಡೆಯುತ್ತಿರುವ  ಡಿಜಿಟಲೀಕರಣದೊಂದಿಗೆ ಆನ್‌ಲೈನ್ ವಂಚನೆ ಮತ್ತು ಸೈಬರ್ ಅಪರಾಧ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಇತ್ತೀಚಿಗೆ ಹಲವು ಮೊಬೈಲ್ ಗ್ರಾಹಕರು ಕ್ಯೂಆರ್ ಕೋಡ್ ನಿಂದ ವಂಚನೆಗೆ ಒಳಗಾದ ಪ್ರಕರಣಗಳೂ ಬೆಳಕಿಗೆ ಬಂದಿವೆ. ಹೆಚ್ಚುತ್ತಿರುವ QR ಕೋಡ್ ವಂಚನೆಯ ಪ್ರಕರಣವನ್ನು ಗಮನದಲ್ಲಿಟ್ಟುಕೊಂಡು, ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ SBI (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ತನ್ನ 44 ಕೋಟಿ ಗ್ರಾಹಕರನ್ನು ಎಚ್ಚರಿಸಿದೆ.

    ಹಣ ಮಂಗಮಾಯವಾಗಬಹುದಾದ ಅಪಾಯ ಇದೆ
    ನೀವು ಯಾವುದೇ ವ್ಯಕ್ತಿಯಿಂದ ಯಾವುದೇ ಕ್ಯೂಆರ್ ಕೋಡ್ ಪಡೆದರೆ ಅದನ್ನು ತಪ್ಪಾಗಿ ಸ್ಕ್ಯಾನ್ ಮಾಡಬೇಡಿ ಎಂದು ಬ್ಯಾಂಕ್ ಹೇಳಿದೆ. ಹೀಗೆ ಮಾಡುವುದರಿಂದ ನಿಮ್ಮ ಅಕೌಂಟ್​ನಲ್ಲಿಯ ಹಣ ಮಂಗಮಾಯವಾಗಬಹುದಾದ ಅಪಾಯ ಇದೆ ಎಂದು ಎಸ್​ಬಿಐ ಎಚ್ಚರಿಕೆ ನೀಡಿದೆ.

    ಹಣ ಸ್ವೀಕರಿಸೋಕೆ ಸ್ಕ್ಯಾನ್ ಮಾಡಬೇಕೇ?
    ಎಸ್‌ಬಿಐ ತನ್ನ ಕೋಟ್ಯಂತರ ಗ್ರಾಹಕರನ್ನು ಟ್ವೀಟ್ ಮೂಲಕ ಎಚ್ಚರಿಸಿದೆ. ಬ್ಯಾಂಕ್ ತನ್ನ ಟ್ವೀಟ್‌ನಲ್ಲಿ, 'ಹಣವನ್ನು ಸ್ವೀಕರಿಸಲು ನೀವು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಅಗತ್ಯವಿಲ್ಲ. ನೀವು ಪ್ರತಿ ಬಾರಿ UPI ಪಾವತಿಗಳನ್ನು ಮಾಡುವಾಗ ಸುರಕ್ಷತಾ ಸಲಹೆಗಳನ್ನು ನೆನಪಿಡಿ ಎಂದು ಗ್ರಾಹಕರಿಗೆ ಸಲಹೆ ನೀಡಿದೆ.

    ಇದನ್ನೂ ಓದಿ: Artificially Ripened Mangoes: ಎಚ್ಚರ! ಕೃತಕವಾಗಿ ಹಣ್ಣಾದ ಮಾವು ಸಿಕ್ರೆ ತಕ್ಷಣ ಹೀಗೆ ಮಾಡಿ

    ತಪ್ಪಾಗಿಯೂ ಸ್ಕ್ಯಾನ್ ಮಾಡಬೇಡಿ
    ಕ್ಯೂಆರ್ ಕೋಡ್ ಅನ್ನು ಯಾವಾಗಲೂ ಪಾವತಿ ಮಾಡಲು ಬಳಸಲಾಗುತ್ತದೆ. ಪಾವತಿಗಳನ್ನು ತೆಗೆದುಕೊಳ್ಳಲು ಅಲ್ಲ ಎಂದು ಎಸ್‌ಬಿಐ ಹೇಳಿದೆ. ಅಂತಹ ಪರಿಸ್ಥಿತಿಯಲ್ಲಿ, ಪಾವತಿಯನ್ನು ಸ್ವೀಕರಿಸುವ ಹೆಸರಿನಲ್ಲಿ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಲು ನಿಮಗೆ ಸಂದೇಶ ಅಥವಾ ಮೇಲ್ ಬಂದರೆ, ತಪ್ಪಾಗಿಯೂ ಸ್ಕ್ಯಾನ್ ಮಾಡಬೇಡಿ. ಇದು ನಿಮ್ಮ ಖಾತೆಯನ್ನು ಖಾಲಿ ಮಾಡಬಹುದು. ನೀವು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ, ನಿಮಗೆ ಹಣ ಸಿಗುವುದಿಲ್ಲ ಎಂದು ಬ್ಯಾಂಕ್ ಹೇಳಿದೆ. ಆದರೆ ಬ್ಯಾಂಕ್ ಖಾತೆಯಿಂದ ಹಣವನ್ನು ಹಿಂಪಡೆದಿರುವ ಸಂದೇಶ ಬರುತ್ತದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಚ್ಚರಿಕೆಯ ಸಲಹೆ ನೀಡಿದೆ.

    ಈ ಸುರಕ್ಷತಾ ಸಲಹೆಗಳನ್ನು ಅನುಸರಿಸಿ
    ನೀವು ಅರ್ಥಮಾಡಿಕೊಳ್ಳಬೇಕಾದ ಕೆಲವು ಸುರಕ್ಷತಾ ಸಲಹೆಗಳನ್ನು ಬ್ಯಾಂಕ್ ನೀಡಿದೆ. ಇವುಗಳಲ್ಲಿ ಒಂದಾದರೂ ತಪ್ಪು ಮಾಡಿದರೆ ಬ್ಯಾಂಕ್ ಅಕೌಂಟ್​ನಲ್ಲಿಯ ಹಣ ಮಂಗಮಾಯ ಆಗಬಹುದು ಗಮನಿಸಿ!

    ಯಾವುದೇ ಪಾವತಿ ಮಾಡುವ ಮೊದಲು UPI ಐಡಿಯನ್ನು ಪರಿಶೀಲಿಸಿ.

    UPI ಪಾವತಿಗಳನ್ನು ಮಾಡುವಾಗ ಕೆಲವು ಭದ್ರತಾ ನಿಯಮಗಳನ್ನು ಅನುಸರಿಸಬೇಕು.

    UPI ಪಿನ್ ಹಣ ವರ್ಗಾವಣೆಗೆ ಮಾತ್ರ ಅಗತ್ಯವಿದೆಯೇ ಹೊರತು ಹಣವನ್ನು ಸ್ವೀಕರಿಸಲು ಅಲ್ಲ.

    ಹಣವನ್ನು ಕಳುಹಿಸುವ ಮೊದಲು ಯಾವಾಗಲೂ ಮೊಬೈಲ್ ಸಂಖ್ಯೆ, ಹೆಸರು ಮತ್ತು UPI ಐಡಿಯನ್ನು ಪರಿಶೀಲಿಸಿ.

    UPI ಪಿನ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.

    ತಪ್ಪಾಗಿಯೂ UPI ಪಿನ್ ಅನ್ನು ಗೊಂದಲಗೊಳಿಸಬೇಡಿ.

    ಹಣ ವರ್ಗಾವಣೆಗಾಗಿ ಸ್ಕ್ಯಾನರ್ ಅನ್ನು ಸರಿಯಾಗಿ ಬಳಸಿ.

    ಯಾವುದೇ ಸಂದರ್ಭದಲ್ಲಿ, ಅಧಿಕೃತ ಮೂಲಗಳನ್ನು ಹೊರತುಪಡಿಸಿ ಅನಧಿಕೃತ ವಿಧಾನಗಳನ್ನು ಹುಡುಕಬೇಡಿ.

    ಇದನ್ನೂ ಓದಿ: Salary in Gold: ಸಂಬಳವಾಗಿ ಚಿನ್ನ ಕೊಡ್ತಾರೆ! ಹಣ ಕೊಡದೇ ಚಿನ್ನ ಪಾವತಿಸೋ ಕಂಪನಿಯಿದು!

    ಯಾವುದೇ ವ್ಯತ್ಯಾಸಗಳಿದ್ದಲ್ಲಿ, ಬ್ಯಾಂಕಿನ ಕುಂದುಕೊರತೆ ಪರಿಹಾರ ಪೋರ್ಟಲ್  ಮೂಲಕ ಪರಿಹಾರವನ್ನು ಪಡೆದುಕೊಳ್ಳಲು  ಇಲ್ಲಿ ಕ್ಲಿಕ್ ಮಾಡಿ

    ಯಾವುದೇ ಪಾವತಿ ಅಥವಾ ತಾಂತ್ರಿಕ ಸಮಸ್ಯೆಗಳಿಗೆ ಅಪ್ಲಿಕೇಶನ್‌ನ ಸಹಾಯ ವಿಭಾಗವನ್ನು ಬಳಸಿ.
    Published by:guruganesh bhat
    First published: