Bank Rule: SBI, PNB & BoBಯಲ್ಲಿ ಫೆಬ್ರವರಿ 1 ರಿಂದ ಈ ನಿಯಮಗಳು ಬದಲಾವಣೆ

Bank New Rule: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India), ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank), ಬ್ಯಾಂಕ್ ಆಫ್ ಬರೋಡಾ (Bank Of Baroda) ಗ್ರಾಹಕರಿಗೆ ಇದು ಪ್ರಮುಖ ಸುದ್ದಿಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Bank New Rule: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India), ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank), ಬ್ಯಾಂಕ್ ಆಫ್ ಬರೋಡಾ (Bank Of Baroda) ಗ್ರಾಹಕರಿಗೆ ಇದು ಪ್ರಮುಖ ಸುದ್ದಿಯಾಗಿದೆ. ಈ ಎಲ್ಲಾ ಬ್ಯಾಂಕ್‌ಗಳಿಗೆ ಸಂಬಂಧಿಸಿದ ಅಗತ್ಯ ನಿಯಮಗಳು (Rules) ಬದಲಾಗಲಿವೆ. ಇತ್ತೀಚಿನ ಮಾಹಿತಿಯ ಪ್ರಕಾರ, ಈ ನಿಯಮಗಳು ಫೆಬ್ರವರಿ 1, 2022 ರಿಂದ ಬ್ಯಾಂಕ್ ಖಾತೆದಾರರಿಗೆ (Account Holders) ಅನ್ವಯಿಸುತ್ತವೆ. ಈ ಬಗ್ಗೆ ಬ್ಯಾಂಕ್‌ ಗಳು ತಮ್ಮ ಖಾತೆದಾರರಿಗೆ ಹಲವು ಬಾರಿ ಮಾಹಿತಿ ನೀಡಿವೆ. ಈ ನಿಯಮಗಳ ಬಗ್ಗೆ ವಿಶೇಷ ಗಮನ ಹರಿಸುವಂತೆ ಬ್ಯಾಂಕ್‌ಗಳು ಖಾತೆದಾರರನ್ನು ಕೇಳಿಕೊಂಡಿವೆ.

ಬ್ಯಾಂಕ್ ಆಫ್ ಬರೋಡಾ ನಿಯಮಗಳು

ಫೆಬ್ರವರಿ 1 ರಿಂದ ಬ್ಯಾಂಕ್ ಆಫ್ ಬರೋಡಾ ಚೆಕ್ ಕ್ಲಿಯರೆನ್ಸ್ ನಿಯಮಕ್ಕೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸಲಿದೆ. ಬ್ಯಾಂಕ್ ನೀಡಿರುವ ಮಾಹಿತಿ ಪ್ರಕಾರ ಫೆಬ್ರವರಿ 1ರಿಂದ ಚೆಕ್ ಪಾವತಿಗೆ ಗ್ರಾಹಕರು ಪಾಸಿಟಿವ್ ಪೇ ಸಿಸ್ಟಂ ಅನುಸರಿಸಬೇಕು. ಅಂದರೆ ಈಗ ಗ್ರಾಹಕರು ತಮ್ಮ ಚೆಕ್ ನೀಡಿದ ನಂತರ ಆ ಚೆಕ್‌ಗೆ ಸಂಬಂಧಿಸಿದ ಮಾಹಿತಿಯನ್ನು ಬ್ಯಾಂಕ್‌ಗೆ ಕಳುಹಿಸಬೇಕಾಗುತ್ತದೆ. ನೀವು ಚೆಕ್ ನೀಡಿದರೆ ಮತ್ತು ಅದರ ಸಂಬಂಧಿಸಿದ ಮಾಹಿತಿ ತಿಳಿಸದಿದ್ದರೆ, ನಿಮ್ಮ ಚೆಕ್ ಅನ್ನು ಹಿಂದಿರುಗಿಸಬಹುದು.

ಅಂದರೆ ಚೆಕ್ ನ್ನು ನಗದು ಮಾಡಲು ಸಾಧ್ಯವಾಗುವುದಿಲ್ಲ. SMS, ಮೊಬೈಲ್ ಅಪ್ಲಿಕೇಶನ್, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ATM ಮೂಲಕ ನೀಡಬಹುದು.

ಇದನ್ನೂ ಓದಿ:  Union Budget 2022: ಬಜೆಟ್ ಮಂಡನೆಗೆ ಒಂದು ವಾರ ಬಾಕಿ; ದಿನಾಂಕ, ಸಮಯ ಸೇರಿದಂತೆ ಈ ಮಾಹಿತಿ ನಿಮಗಿರಲಿ

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇದು 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಚೆಕ್‌ಗಳಿಗೆ ಮಾತ್ರ ಅನ್ವಯವಾಗಲಿದೆ. ನೀವು ಯಾರಿಗಾದರೂ ಸಣ್ಣ ಮೊತ್ತದ ಚೆಕ್ ನೀಡಿದ್ದರೆ, ನೀವು ಈ ಪ್ರಕ್ರಿಯೆಯನ್ನು ಅನುಸರಿಸುವ ಅಗತ್ಯವಿಲ್ಲ. ವಂಚನೆಯಿಂದ ರಕ್ಷಿಸಲು ಆರ್‌ಬಿಐ ಈ ಹೊಸ ನಿಯಮವನ್ನು ಹೊರಡಿಸಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಯಮ

ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಕೂಡ ನಿಯಮವನ್ನು ಬದಲಾಯಿಸಲಿದೆ. ಫೆಬ್ರವರಿ 1 ರಿಂದ, ನಿಮ್ಮ ಯಾವುದೇ ಕಂತುಗಳು ಅಥವಾ ಹೂಡಿಕೆಗಳ ಡೆಬಿಟ್ ವಿಫಲವಾದರೆ ಮತ್ತು ಇದಕ್ಕೆ ಕಾರಣ ನಿಮ್ಮ ಖಾತೆಯಲ್ಲಿ ಹಣವಿಲ್ಲದಿದ್ದರೆ, ಅದು ನಿಮಗೆ ದುಬಾರಿಯಾಗುತ್ತದೆ.

ಇದಕ್ಕಾಗಿ ನೀವು ರೂ 250 ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈವರೆಗೆ ಕೇವಲ 100 ರೂಪಾಯಿ ಶುಲ್ಕ ವಿಧಿಸಲಾಗುತ್ತಿತ್ತು. ಇದಲ್ಲದೇ ಡಿಮ್ಯಾಂಡ್ ಡ್ರಾಫ್ಟ್ ರದ್ದು ಮಾಡಿದರೆ 100ರ ಬದಲು 150 ರೂಪಾಯಿ ಪಾವತಿಸಬೇಕಾಗುತ್ತದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಯಮಗಳು

ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಗ್ರಾಹಕರಾಗಿದ್ದರೆ, ಈಗ ಹಣವನ್ನು ವರ್ಗಾವಣೆ ನಿಮಗೆ ದುಬಾರಿಯಾಗಲಿದೆ. ಎಸ್‌ಬಿಐ ವೆಬ್‌ ಸೈಟ್ ಪ್ರಕಾರ, ಫೆಬ್ರವರಿ 1, 2022 ರಿಂದ ಜಾರಿಗೆ ಬರುವಂತೆ IMPS ವಹಿವಾಟುಗಳಲ್ಲಿ (IMPS) ಬ್ಯಾಂಕ್ ಹೊಸ ಸ್ಲ್ಯಾಬ್ ಅನ್ನು ಸೇರಿಸಿದೆ.

ಇದನ್ನೂ ಓದಿ:  PAN Card Update: ನಿಮ್ಮ ಪ್ಯಾನ್ ಕಾರ್ಡ್ ನಲ್ಲಿ Last Name ಬದಲಿಸಬೇಕಾ? ಹೀಗೆ ಮಾಡಿ  

ಇದು 2 ಲಕ್ಷದಿಂದ 5 ಲಕ್ಷದವರೆಗೆ ಇರುತ್ತದೆ. ಮುಂದಿನ ತಿಂಗಳಿನಿಂದ ರೂ. 2 ಲಕ್ಷದಿಂದ ರೂ. 5 ಲಕ್ಷದವರೆಗೆ, ಬ್ಯಾಂಕ್ ಶಾಖೆಯಿಂದ ಐಎಂಪಿಎಸ್ ಮೂಲಕ ಹಣ ಕಳುಹಿಸುವ ಶುಲ್ಕ ರೂ. 20 ಮತ್ತು ಜಿಎಸ್ ಟಿ ಸೇರಿರುತ್ತದೆ.

ಫೆಬ್ರವರಿಯಲ್ಲಿ 12 ದಿನ ಬ್ಯಾಂಕ್ ರಜೆ

ವರ್ಷದ ಎರಡನೇ ತಿಂಗಳ ಫೆಬ್ರವರಿ (February)ಯಲ್ಲಿ 12 ದಿನಗಳ ಕಾಲ ಬ್ಯಾಂಕ್ ‌ಗಳು ಮುಚ್ಚಿರುತ್ತವೆ. ಜನವರಿ(January)ಯಲ್ಲಿ 16 ದಿನ ರಜೆ ಇತ್ತು. ಫೆಬ್ರವರಿಯ ಈ ರಜಾದಿನಗಳು ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರದ (Saturday And Sunday) ರಜಾದಿನಗಳನ್ನು ಸಹ ಒಳಗೊಂಡಿವೆ.
Published by:Mahmadrafik K
First published: