SBI Hackathon 2022: ಹ್ಯಾಕಥಾನ್​ನಲ್ಲಿ ಸ್ಪರ್ಧಿಸಿ, 9,00,000 ವರೆಗೆ ಬಹುಮಾನ ಗೆಲ್ಲಿ! ವಿವರ ಇಲ್ಲಿದೆ

Innovate for Bank Hackathon 2022: ಅರೇ? ಏನಿದು ಹ್ಯಾಕಥಾನ್? ಹೇಗೆ ನಾವೂ ಭಾಗವಹಿಸಬಹುದು? ಇಲ್ಲಿದೆ ಉತ್ತರ

ಹ್ಯಾಕಥಾನ್

ಹ್ಯಾಕಥಾನ್

  • Share this:
    ಇನ್ನೋವೇಶನ್ ಬ್ಯಾಂಕ್ 2022 ಹ್ಯಾಕಥಾನ್ ಅನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)  ಘೋಷಿಸಿದೆ. ಈ ಹ್ಯಾಕಥಾನ್​ಗೆ ಮೈಕ್ರೋಸಾಪ್ಟ್ ಸಂಸ್ಥೆಯ (Microsoft) ಸಹಯೋಗವೂ ಇರಲಿದೆ.   ಹ್ಯಾಕಥಾನ್ 2022ನ್ನು (Innovate for Bank 2022 Hackathon) ಘೋಷಿಸಿದೆ. ಮೈಕ್ರೋಸಾಫ್ಟ್ ಸಂಸ್ಥೆಯ ಸಹಯೋಗದೊಂದಿಗೆ ಹ್ಯಾಕಥಾನ್  ನಡೆಸಲಾಗುತ್ತಿದೆ. ಬ್ಯಾಂಕ್ ಎದುರಿಸುತ್ತಿರುವ ಸವಾಲುಗಳಿಗೆ ತಾಂತ್ರಿಕ ಪರಿಹಾರವನ್ನು ತೋರಿಸುವ ಮೂಲಕ ಎಸ್‌ಬಿಐ (State Bank of India) ಬಹುಮಾನದ ಹಣವನ್ನು ಗೆಲ್ಲಬಹುದಾಗಿದೆ. ಈ ಹ್ಯಾಕಥಾನ್‌ಗಾಗಿ ಎಸ್‌ಬಿಐ ಒಟ್ಟು 9,00,000 ರೂಪಾಯಿಗಳ ಬಹುಮಾನವನ್ನು ಘೋಷಿಸಿದೆ. ಅರೇ? ಏನಿದು ಹ್ಯಾಕಥಾನ್? ಹೇಗೆ ನಾವೂ ಭಾಗವಹಿಸಬಹುದು? ಇಲ್ಲಿದೆ ಉತ್ತರ

    ಈ ಹ್ಯಾಕಥಾನ್‌ಗೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಮೇ 20, 2022 ರವರೆಗೆ ಆಸಕ್ತರು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಇದರ ನಂತರ ಐಡಿಯಾ ಸಲ್ಲಿಕೆ, ಮೂಲ ಮಾದರಿ ಮತ್ತು ವಿಜೇತರ ಪ್ರಕಟಣೆಯಂತಹ ಹಲವಾರು ಹಂತಗಳನ್ನು ನಡೆಯಲಿವೆ.

    5 ಥೀಮ್​ಗಳಲ್ಲಿ ಹ್ಯಾಕಥಾನ್
    SBI ಈ ಹ್ಯಾಕಥಾನ್​ ಸ್ಪರ್ಧೆಯ ವಿಜೇತರನ್ನು ಜೂನ್ 29, 2022 ರಂದು ಘೋಷಿಸಲಿದೆ. ಈ ಹ್ಯಾಕಥಾನ್  5 ಥೀಮ್‌ಗಳಲ್ಲಿ ನಡೆಯುತ್ತಿದೆ. ಇಮೇಜ್, ಡಾಕ್ಯುಮೆಂಟ್ ಆಪ್ಟಿಮೈಸೇಶನ್, ವಿಡಿಯೋ ಕಂಪ್ರೆಷನ್, ವಾಯ್ಸ್ ಬಯೋಮೆಟ್ರಿಕ್ಸ್, ಐಡೆಂಟಿಫಿಕೇಶನ್ ಮತ್ತು ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್, ವಿಡಿಯೋ ಅನಾಲಿಟಿಕ್ಸ್ ಕುರಿತು ಎಸ್‌ಬಿಐ ಐಡಿಯಾಗಳನ್ನು ಆಹ್ವಾನಿಸುತ್ತಿದೆ.

    ಇನ್ನೋವೇಶನ್ ಬ್ಯಾಂಕ್ 2022 ಹ್ಯಾಕಥಾನ್ ಹಂತಗಳು ಹೀಗಿವೆ

    ರೌಂಡ್ 1 ನೋಂದಣಿ ಪ್ರಾರಂಭ:  ಏಪ್ರಿಲ್ 22, 2022
    ರೌಂಡ್ 1 ನೋಂದಣಿಗೆ ಕೊನೆಯ ದಿನಾಂಕ : ಮೇ 20, 2022
    ರೌಂಡ್ 2 ಐಡಿಯಾ ಸಲ್ಲಿಕೆ ಪ್ರಾರಂಭ : ಏಪ್ರಿಲ್ 22, 2022
    ರೌಂಡ್ 2 ಐಡಿಯಾ ಸಲ್ಲಿಕೆಗೆ ಅಂತಿಮ ದಿನಾಂಕ :  ಮೇ 24, 2022
    ಐಡಿಯಾಗಳ ಪರೀಕ್ಷೆ: 2022 ಮೇ 25 ರಿಂದ ಮೇ 31
    ಮೂಲ ಮಾದರಿಯ ಅರ್ಹತೆಗಳ ಪ್ರಕಟಣೆ :  2022 ಜೂನ್ 1
    ರೌಂಡ್ 3 ಮಾದರಿ ಅಭಿವೃದ್ಧಿ : ಜೂನ್ 1, 2022 ರಿಂದ ಜೂನ್ 20, 2022
    ಮೂಲ ಮಾದರಿಯ ವೀಕ್ಷಣೆ : 2022 ಜೂನ್ 21 ರಿಂದ ಜೂನ್ 28 ರವರೆಗೆ
    ವಿಜೇತರ ಪ್ರಕಟಣೆ : 2022 ಜೂನ್ 29

    ಹೇಗಿರುತ್ತೆ ಹ್ಯಾಕಥಾನ್?
    ಇದು ತಂಡದ ಭಾಗವಹಿಸುವಿಕೆಯ ಹ್ಯಾಕಥಾನ್ ಆಗಿದೆ. ತಂಡವು ನಾಲ್ಕು ಅಥವಾ ಹೆಚ್ಚಿನ ಸದಸ್ಯರನ್ನು ಹೊಂದಿರಬೇಕು. ಇದು ಆನ್‌ಲೈನ್ ಹ್ಯಾಕಥಾನ್ ಆಗಿದೆ. ಈ ಹ್ಯಾಕಥಾನ್‌ನಲ್ಲಿ ಭಾಗವಹಿಸುವವರು ಭಾರತದಲ್ಲಿ ವಾಸಿಸುತ್ತಿರಬೇಕು.



    ಇದನ್ನು ಓದಿ: Startups: ಬೆಂಗಳೂರು vs ಚೆನ್ನೈ vs ಮುಂಬೈ vs ದೆಹಲಿ: ಇದು ಐಪಿಎಲ್​ ಅಲ್ಲ!

    ಒಬ್ಬರು ಎಷ್ಟು ಹ್ಯಾಕ್‌ಗಳನ್ನು ಬೇಕಾದರೂ ಸಲ್ಲಿಸಬಹುದು. ಆದರೂ ಗಡುವಿನ ಮೊದಲು ಬಂದ ಹ್ಯಾಕ್​ ಐಡಿಯಾಗಳನ್ನು ಮಾತ್ರ  ಪರಿಗಣಿಸಲಾಗುತ್ತದೆ. ಐಡಿಯಾ ಹಂತಕ್ಕೆ ಆಯ್ಕೆಯಾದವರು ಮಾತ್ರ ಹ್ಯಾಕಥಾನ್‌ನಲ್ಲಿ ಮುಂದುವರಿಯುತ್ತಾರೆ. ಅವರು ಕೇವಲ ಒಂದು ಮೂಲ ಮಾದರಿಯನ್ನು ರಚಿಸಬೇಕಾಗಿದೆ.

    ಏನೇನು ಬಳಸಬಹುದು?
    ಹ್ಯಾಕಥಾನ್‌ನಲ್ಲಿ ಭಾಗವಹಿಸುವವರು ನವೀನ ಆಲೋಚನೆಗಳನ್ನು ಸಲ್ಲಿಸಬೇಕು. ಬೇರೆಡೆ ಇರುವ ವಿಚಾರಗಳನ್ನು ನಕಲು ಮಾಡಿದರೆ ಅನರ್ಹಗೊಳಿಸಲಾಗುತ್ತದೆ. Microsoft Azure ಅನ್ನು ಹ್ಯಾಕಥಾನ್‌ಗಾಗಿ ಬಳಸಬಹುದು. ವಿಷುಯಲ್ ಸ್ಟುಡಿಯೋ, ಪವರ್ ಅಪ್ಲಿಕೇಶನ್‌ಗಳು ಮತ್ತು ಗಿಟ್‌ಹಬ್‌ನಂತಹ ಮೈಕ್ರೋಸಾಫ್ಟ್ ಉಪಕರಣಗಳನ್ನು ಸಹ ಬಳಸಬಹುದು.

    ಇದನ್ನೂ ಓದಿ: Organic Farming Training: 30 ದಿನಗಳಲ್ಲಿ ಸಾವಯವ ಕೃಷಿ ಕಲಿಯಿರಿ! ಇಲ್ಲಿ ಅಪ್ಲೈ ಮಾಡಿ

    ಮೈಕ್ರೋಸಾಫ್ಟ್ ಪ್ರತಿಸ್ಪರ್ಧಿ ಉತ್ಪನ್ನಗಳನ್ನು ಬಳಸಬಾರದು. ಎಸ್‌ಬಿಐ ಉದ್ಯೋಗಿಗಳೂ ಈ ಹ್ಯಾಕಥಾನ್‌ನಲ್ಲಿ ಭಾಗವಹಿಸಬಹುದು. ಎಸ್‌ಬಿಐ ಹ್ಯಾಕಥಾನ್ ಪ್ರಥಮ ಬಹುಮಾನ 5,00,000, ದ್ವಿತೀಯ ಬಹುಮಾನ 3,00,000 ಮತ್ತು ತೃತೀಯ ಬಹುಮಾನ 1,00,000 ನೀಡಲಿದೆ. ಈ ಹ್ಯಾಕಥಾನ್ ಕುರಿತು ಹೆಚ್ಚಿನ ವಿವರಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.
    Published by:guruganesh bhat
    First published: