FD ಮೇಲಿನ ಬಡ್ಡಿದರವನ್ನು ಹೆಚ್ಚಿಸಿದ SBI: ಸಿಗಲಿದೆ ಮೊದಲಿಗಿಂತ ಹೆಚ್ಚು ಆದಾಯ, ಹೊಸ ದರಗಳನ್ನು ತಿಳಿಯಿರಿ

ರಿಸ್ಕ್ ಕಡಿಮೆ ಇರುವ ಹೂಡಿಕೆಗಳಲ್ಲಿ ಮೊದಲು ನೆನಪಿಗೆ ಬರುವುದು ಫಿಕ್ಸೆಡ್ ಡೆಪಾಸಿಟ್​ಗಳು. ಈ ಎಫ್​ಡಿಗಳು ಬಹಳ ಸೇಫ್ ಇನ್ವೆಸ್ಟ್ಮೆಂಟ್ ಯೋಜನೆಗಳಾಗಿ ಈಗಲೂ ಆದ್ಯತೆಯಲ್ಲಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಿಸ್ಕ್ ಕಡಿಮೆ ಇರುವ ಹೂಡಿಕೆಗಳಲ್ಲಿ ಮೊದಲು ನೆನಪಿಗೆ ಬರುವುದು ಫಿಕ್ಸೆಡ್ ಡೆಪಾಸಿಟ್​ಗಳು. ಈ ಎಫ್​ಡಿಗಳು ಬಹಳ ಸೇಫ್ ಇನ್ವೆಸ್ಟ್ಮೆಂಟ್ ಯೋಜನೆಗಳಾಗಿ ಈಗಲೂ ಆದ್ಯತೆಯಲ್ಲಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿದೆ. ಈ ಹೆಚ್ಚಳವು ರೂ 2 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ದೇಶೀಯ ಬೃಹತ್ ಅವಧಿಯ ಠೇವಣಿಗಳಿಗೆ ಅನ್ವಯಿಸುತ್ತದೆ. 2 ಕೋಟಿಗಿಂತ ಕಡಿಮೆ ಚಿಲ್ಲರೆ ಅವಧಿಯ ಠೇವಣಿಗಳ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ಹೊಸ FD ಬಡ್ಡಿ ದರಗಳು 15 ಡಿಸೆಂಬರ್ 2021 ರಿಂದ ಜಾರಿಗೆ ಬಂದಿವೆ. ಬ್ಯಾಂಕ್ FD ದರವನ್ನು ಶೇಕಡಾ 0.10 ರಷ್ಟು ಹೆಚ್ಚಿಸಿದೆ.

ಈಗ ಎಸ್‌ಬಿಐನಲ್ಲಿ ಈ ಅವಧಿಯ ಠೇವಣಿ ಮೇಲಿನ ಬಡ್ಡಿ ದರವು ವಾರ್ಷಿಕ 3 ಪ್ರತಿಶತದಿಂದ ಪ್ರಾರಂಭವಾಗುತ್ತಿದೆ. ಹಿರಿಯ ನಾಗರಿಕರಿಗೆ, ಇದು ವರ್ಷಕ್ಕೆ 3.50 ಪ್ರತಿಶತದಿಂದ ಪ್ರಾರಂಭವಾಗುತ್ತದೆ. ಪರಿಷ್ಕೃತ ದರಗಳು ಹೊಸ ಬಲ್ಕ್ ಎಫ್‌ಡಿಗಳು ಮತ್ತು ಮೆಚ್ಯೂರ್ ಆದ ಹಳೆಯ ಎಫ್‌ಡಿಗಳ ನವೀಕರಣಗಳಿಗೆ ಅನ್ವಯಿಸುತ್ತವೆ.

ಮೂಲ ದರವನ್ನು 10 ಅಂಕಗಳಷ್ಟು ಹೆಚ್ಚಿಸಲಾಗಿದೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಮೂಲ ದರವನ್ನು 10 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ ಎಂದು ತಿಳಿಸೋಣ. ಎಸ್‌ಬಿಐನ ಈ ಕ್ರಮವು ಅಸ್ತಿತ್ವದಲ್ಲಿರುವ ಸಾಲಗಾರರಿಗೆ ಸಾಲವನ್ನು ಸ್ವಲ್ಪ ದುಬಾರಿಯಾಗಿಸುವುದು ಖಚಿತ. ಎಸ್‌ಬಿಐ ವೆಬ್‌ಸೈಟ್ ಪ್ರಕಾರ, ಮೂಲ ದರವನ್ನು 10 ಬಿಪಿಎಸ್ ಹೆಚ್ಚಿಸಲಾಗಿದೆ. ಹಿಂದಿನ ಸೆಪ್ಟೆಂಬರ್‌ನಲ್ಲಿ ಬ್ಯಾಂಕ್ ತನ್ನ ಮೂಲ ದರವನ್ನು 5 ಅಂಕಗಳಷ್ಟು ಕಡಿತಗೊಳಿಸಿತ್ತು.

ಇದನ್ನೂ ಓದಿ:  ಒಮ್ಮೆ ಪ್ರೀಮಿಯಂ ಪಾವತಿಸಿ, ಜೀವನ ಪರ್ಯಂತ ಪಿಂಚಣಿ ಪಡೆಯಿರಿ

ಭಾರತೀಯ ರಿಸರ್ವ್ ಬ್ಯಾಂಕ್ ಕನಿಷ್ಠ ಬಡ್ಡಿ ದರವನ್ನು ನಿಗದಿಪಡಿಸುತ್ತದೆ, ಇದನ್ನು ಎಲ್ಲಾ ಬ್ಯಾಂಕುಗಳು ತಮ್ಮ ಪ್ರಮಾಣಿತ ದರವಾಗಿ ಬಳಸುತ್ತವೆ. ಕೇಂದ್ರ ಬ್ಯಾಂಕ್ ಈಗಾಗಲೇ ನಿಗದಿಪಡಿಸಿದ ಮೂಲ ದರಕ್ಕಿಂತ ಕಡಿಮೆ ದರದಲ್ಲಿ ಸಾಲ ನೀಡಲು ಬ್ಯಾಂಕ್‌ಗಳಿಗೆ ಅನುಮತಿ ಇಲ್ಲ.

ಜನವರಿಯಿಂದ ಬಡ್ಡಿ ಹೆಚ್ಚಿಸುವ ವೇಗ ಹೆಚ್ಚಲಿದೆ

ಜನವರಿಯಿಂದ ಬಡ್ಡಿದರ ಏರಿಕೆಯ ವೇಗ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್ ಆಗಿರುವ HDFC ಬ್ಯಾಂಕ್ ಆಯ್ದ ಸಮಯದ FD ಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದೆ. ಈ ಹೊಸ ದರಗಳು ಡಿಸೆಂಬರ್ 1 ರಿಂದ ಜಾರಿಗೆ ಬಂದಿವೆ. ಬ್ಯಾಂಕ್‌ನ ವೆಬ್‌ಸೈಟ್ ಪ್ರಕಾರ, 7 ರಿಂದ 29 ದಿನಗಳ FD ಗಳಲ್ಲಿ 2.50% ಬಡ್ಡಿ ಲಭ್ಯವಿರುತ್ತದೆ. 30 ರಿಂದ 90 ದಿನಗಳ ಠೇವಣಿಗಳ ಮೇಲೆ 3% ಮತ್ತು 91 ದಿನಗಳಿಂದ 6 ತಿಂಗಳ ಅವಧಿಯ ಠೇವಣಿಗಳ ಮೇಲೆ 3.5% ಬಡ್ಡಿ ಲಭ್ಯವಿರುತ್ತದೆ.

ಹಿರಿಯ ನಾಗರಿಕರಿಗೆ ಹೆಚ್ಚಿನ ಲಾಭ

ಹಿರಿಯ ನಾಗರಿಕರಿಗೆ ಶೇಕಡ ಅರ್ಧದಷ್ಟು ಬಡ್ಡಿ ಹೆಚ್ಚುವರಿಯಾಗಿ ದೊರೆಯಲಿದೆ ಎಂದು ಬ್ಯಾಂಕ್ ತಿಳಿಸಿದೆ. ಸಾಮಾನ್ಯ ಜನರು 3% ಬಡ್ಡಿಯನ್ನು ಪಡೆದರೆ ಹಿರಿಯ ನಾಗರಿಕರು 3.5% ಬಡ್ಡಿಯನ್ನು ಪಡೆಯುತ್ತಾರೆ. ಇತರ ಬ್ಯಾಂಕುಗಳ ಬಡ್ಡಿ ದರ ಗಮನಿಸಿದ್ರೆ., ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 2.9 ರಿಂದ 5.4% ರ ನಡುವೆ ಬಡ್ಡಿಯನ್ನು ನೀಡುತ್ತಿದೆ. ICICI ಬ್ಯಾಂಕ್ 2.5 ರಿಂದ 5.5% ಬಡ್ಡಿ ನೀಡುತ್ತಿದೆ.

ಇದನ್ನೂ ಓದಿ:  ದಿನಕ್ಕೆ 20 ರೂಪಾಯಿ ಉಳಿಸಿ ಕೋಟ್ಯಧಿಪತಿಯಾಗಲು ನೀವು ಮಾಡಬೇಕಿರೋದು ಇಷ್ಟೇ…!

ಎನ್ಬಿಎಫ್ಸಿಗಳು ಸಹ ಬಡ್ಡಿದರಗಳನ್ನು ಹೆಚ್ಚಿಸುತ್ತಿವೆ

ಈ ಹಿಂದೆ, ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ NBFC) ಸಹ ಬಡ್ಡಿದರಗಳನ್ನು ಹೆಚ್ಚಿಸಿವೆ. ಎಚ್‌ಡಿಎಫ್‌ಸಿ ಲಿಮಿಟೆಡ್ ಮತ್ತು ಬಜಾಜ್ ಫೈನಾನ್ಸ್ ಮಂಗಳವಾರ ಬಡ್ಡಿದರದಲ್ಲಿ ಹೆಚ್ಚಳವನ್ನು ಘೋಷಿಸಿವೆ. ಎಲ್ಲಾ ಬ್ಯಾಂಕುಗಳು ಮತ್ತು ಕಂಪನಿಗಳು ಜನವರಿಯಿಂದ ಬಡ್ಡಿದರಗಳನ್ನು ಹೆಚ್ಚಿಸಲು ಪ್ರಾರಂಭಿಸುತ್ತವೆ ಎಂದು ಬ್ಯಾಂಕಿಂಗ್ ಉದ್ಯಮವು ನಂಬುತ್ತದೆ. ಏಕೆಂದರೆ ಮುಂದಿನ ವರ್ಷದಿಂದ ವಿಶ್ವದಾದ್ಯಂತ ಕೇಂದ್ರೀಯ ಬ್ಯಾಂಕುಗಳು ತಮ್ಮ ರೆಪೋ ದರವನ್ನು ಹೆಚ್ಚಿಸಲು ಯೋಜಿಸುತ್ತಿವೆ.
Published by:Mahmadrafik K
First published: