SBI Employee Error: ಕಾಪಿ ಪೇಸ್ಟ್ ತಪ್ಪಿನಿಂದ 1.5 ಕೋಟಿ ಹಣ ತಪ್ಪು ಖಾತೆಗೆ ಜಮೆ! ಪ್ಲೀಸ್, ಹಣ ಹಿಂತಿರುಗಿಸಿ ಎಂದ ಬ್ಯಾಂಕ್

ತಪ್ಪು ಖಾತೆಗೆ ಹಣ ವರ್ಗಾವಣೆ ಮಾಡಿದ ತಪ್ಪಿನ ಅರಿವಾದ ಕೂಡಲೇ ಎಸ್​ಬಿಐ ಅಧಿಕಾರಿಗಳು ಉದ್ಯೋಗಿಗಳಿಗೆ ಕರೆ ಮಾಡಿ ಮೊತ್ತವನ್ನು ಹಿಂದಕ್ಕೆ ವರ್ಗಾಯಿಸುವಂತೆ ಕೇಳಿಕೊಂಡಿದ್ದಾರೆ. 14  ಬ್ಯಾಂಕ್ ಉದ್ಯೋಗಿಗಳು ಹಣವನ್ನು ಹಿಂತಿರುಗಿಸಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

 • Share this:
  ತಪ್ಪು ಮಾಡದವರು ಯಾರಿದ್ದಾರೆ? ಎಲ್ಲರೂ ಒಂದಲ್ಲ ಒಂದು ತಪ್ಪು ಮಾಡಿದವರೇ, ಮಾಡುವವರೇ. ಮನುಷ್ಯರಾದ ನಾವು ತಪ್ಪನ್ನೇ ಮಾಡದಿರೋಕೆ ಸಾಧ್ಯವಿಲ್ಲ. ಆದರೆ ಒಂದೇ ಒಂದು ತಪ್ಪು ಏನೆಲ್ಲ ಸೃಷ್ಟಿಸಬಹುದು ಅನ್ನೋದನ್ನು ಕಲ್ಪನೆಯನ್ನೂ ಮಾಡಿಕೊಳ್ಳೋಕೆ ಆಗದು. ಅಂತಹುದೇ ಬಹು ದೊಡ್ಡ ಉದಾಹರಣೆಯಲ್ಲೊಂದು ಇದಿಗ ಭಾರೀ ವೈರಲ್ ಆಗುತ್ತಿದೆ. ಇದು ಒಂದೆರಡು ರೂಪಾಯಿಯ ಕಥೆಯಲ್ಲ, ಬ್ಯಾಂಕ್​ನವರ ಚಿಕ್ಕ ತಪ್ಪಿನಿಂದ ಬರೋಬ್ಬರಿ 1.5 ಕೋಟಿ ರೂಪಾಯಿ ಹಣವೇ ಮಂಗಮಾಯವಾದ ಸುದ್ದಿಯಿದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉದ್ಯೋಗಿಯೋರ್ವರು (SBI Employee) ಕೆಲಸದಲ್ಲಿ ಮಾಡಿದ ತಪ್ಪೊಂದು 1.50 ಕೋಟಿ ರೂ.ಗಳನ್ನು ತಪ್ಪು ಫಲಾನುಭವಿಗಳಿಗೆ ವರ್ಗಾಯಿಸಲು (Money Transferred to Wrong Accounts) ಕಾರಣವಾಗಿದೆ.  

  ಎಸ್‌ಬಿಐ ಉದ್ಯೋಗಿಯ ಕಾಪಿ ಪೇಸ್ಟ್ (Copy-Paste Error) ತಪ್ಪಿನಿಂದಾಗಿ ದಲಿತ ಬಂಧು ಯೋಜನೆಯ ಫಲಾನುಭವಿಯ ಖಾತೆಗೆ ವರ್ಗಾವಣೆ ಆಗಬೇಕಿದ್ದ ಹಣ ಆಕಸ್ಮಿಕವಾಗಿ ಲೋಟಸ್ ಎಂಬ ಆಸ್ಪತ್ರೆಯ 15 ಉದ್ಯೋಗಿಗಳ ಖಾತೆಗಳಿಗೆ ಜಮಾ ಆಗಿದೆ.

  ಆಕಸ್ಮಿಕವಾಗಿ ನಡೆದ ಘಟನೆ
  ಎಸ್‌ಬಿಐ ರಂಗಾರೆಡ್ಡಿ ಜಿಲ್ಲಾಧಿಕಾರಿ ಶಾಖೆಯ ಉದ್ಯೋಗಿಯೊಬ್ಬರು ಏಪ್ರಿಲ್ 24 ರಂದು ಆಕಸ್ಮಿಕವಾಗಿ 1.50 ಕೋಟಿ ರೂಪಾಯಿಗಳನ್ನು ತಪ್ಪು ಖಾತೆಗಳಿಗೆ ವರ್ಗಾಯಿಸಿದ್ದಾರೆ ಎಂದು ಹೈದರಾಬಾದ್‌ನ ಸೈಫಾಬಾದ್ ಪೊಲೀಸರು ತಿಳಿಸಿದ್ದಾರೆ.

  ದಿಢೀರ್ ಅಂತ ಖಾತೆಗೆ ಬಂತು 10 ಲಕ್ಷ!
  ಲೋಟಸ್ ಹಾಸ್ಪಿಟಲ್ಸ್‌ನ ಪ್ರತಿಯೊಬ್ಬ ಉದ್ಯೋಗಿ ವೇತನ ಖಾತೆಯಲ್ಲಿ 10 ಲಕ್ಷ ರೂ. ಹಣ ಜಮಾ ಆಗಿದೆ. ಆದರೆ ಈ ಹಣ ತೆಲಂಗಾಣ ಸರ್ಕಾರದ ದಲಿತ ಬಂಧು ಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ಸೇರಬೇಕಿತ್ತು.

  ತಮ್ಮ ಖಾತೆಗೆ 10 ಲಕ್ಷ ರೂ.ಗಳನ್ನು ಪಡೆದ 15 ಜನರಲ್ಲಿ 14 ಮಂದಿ ಹಣವನ್ನು ಹಿಂದಿರುಗಿಸಿದ್ದಾರೆ.

  ಪ್ಲೀಸ್, ಹಣ ವಾಪಾಸ್ ಹಾಕಿ!
  ತಪ್ಪು ಖಾತೆಗೆ ಹಣ ವರ್ಗಾವಣೆ ಮಾಡಿದ ತಪ್ಪಿನ ಅರಿವಾದ ಕೂಡಲೇ ಎಸ್​ಬಿಐ ಅಧಿಕಾರಿಗಳು ಉದ್ಯೋಗಿಗಳಿಗೆ ಕರೆ ಮಾಡಿ ಮೊತ್ತವನ್ನು ಹಿಂದಕ್ಕೆ ವರ್ಗಾಯಿಸುವಂತೆ ಕೇಳಿಕೊಂಡಿದ್ದಾರೆ. 14  ಬ್ಯಾಂಕ್ ಉದ್ಯೋಗಿಗಳು ಹಣವನ್ನು ಹಿಂತಿರುಗಿಸಿದ್ದಾರೆ.

  ಲ್ಯಾಬ್ ತಂತ್ರಜ್ಞ ಮಹೇಶ್ ಅವರು ಖಾತೆಗೆ ತಪ್ಪಾಗಿ ವರ್ಗಾವಣೆ ಆದ ಹಣ ಇನ್ನೂ ದೊರೆತಿಲ್ಲ ಎಂದು ಹಿರಿಯ ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ.

  ಇದನ್ನೂ ಓದಿ: 25X25 Work Model: ಏನಿದು 25X25 ಕೆಲಸದ ಮಾದರಿ? ಉದ್ಯೋಗಿಗಳಿಗೆ ಲಾಭವೇ ನಷ್ಟವೇ?

  ಹಳೆ ಸಾಲ ತೀರಿಸಿದ ಆಕಸ್ಮಿಕ ಫಲಾನುಭವಿ!
  ಸರ್ಕಾರದ ಯಾವುದೋ ಯೋಜನೆಯಡಿ ತನ್ನ ಖಾತೆಗೆ 10 ಲಕ್ಷ ರೂಪಾಯಿ ಜಮೆಯಾಗಿದೆ ಎಂದು ಮಹೇಶ್ ತಪ್ಪಾಗಿ ಭಾವಿಸಿ ತಾವು ಹಿಂದೆ ಮಾಡಿದ್ದ ಸಾಲವನ್ನು ತೀರಿಸಲು ಸ್ವಲ್ಪ ಹಣವನ್ನು ಬಳಸಿದ್ದಾರೆ. ಮತ್ತೊಮ್ಮೆ ಹಣವನ್ನು ಹಿಂತಿರುಗಿಸುವಂತೆ ವಿನಂತಿ ಮಾಡಿದರೂ ಅವರು ಹಣವನ್ನು ಹಿಂದಿರುಗಿಸಲಿಲ್ಲ. ಹೀಗಾಗಿ  ಬುಧವಾರ ಬ್ಯಾಂಕ್ ಅಧಿಕಾರಿ ದೂರು ನೀಡಿದ್ದು, ಮಹೇಶ್ ವಿರುದ್ಧ ಐಪಿಸಿ ಸೆಕ್ಷನ್ 403 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  ಎಸ್‌ಬಿಐ ಉದ್ಯೋಗಿಯ ವಿರುದ್ಧ ಯಾವುದೇ ಪ್ರಕರಣ ಇಲ್ಲ!
  ವಿಪರ್ಯಾಸವೆಂದರೆ, ಸೈಫಾಬಾದ್ ಪೊಲೀಸರು ಆಕಸ್ಮಿಕ ಫಲಾನುಭವಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆಯೇ ಹೊರತು ಇಡೀ ಗೊಂದಲಕ್ಕೆ ಕಾರಣವಾದ ತಪ್ಪಿನಿಂದಾಗಿ ಎಸ್‌ಬಿಐ ಉದ್ಯೋಗಿಯ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ.

  ಇದನ್ನೂ ಓದಿ: Top 10 Safest Cars: ಭಾರತದ ಟಾಪ್ 10 ಸುರಕ್ಷಿತ ಕಾರುಗಳಲ್ಲಿ ನೀವು ಪ್ರಯಾಣಿಸಿದ್ದೀರಾ?

  ಮಹೇಶ್ ಅವರು 6.70 ಲಕ್ಷ ರೂ.ಗಳನ್ನು ಹಿಂದಿರುಗಿಸಿದರೂ ಈಗಾಗಲೇ ಅವರು ಖರ್ಚು ಮಾಡಿದ 3.30 ಲಕ್ಷ ರೂ. ಹಣ ಬ್ಯಾಂಕ್‌ಗೆ ಇನ್ನೂ ಕಡಿಮೆ ಬೀಳಲಿದೆ. ಬ್ಯಾಂಕ್ ಉದ್ಯೋಗಿ ಮಾಡಿದ ಕಾಪಿ ಪೇಸ್ಟ್ ದೋಷವು ಇಂತಹ ದೊಡ್ಡ ಗದ್ದಲಕ್ಕೆ ಕಾರಣವಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
  Published by:guruganesh bhat
  First published: