FD: ಎಸ್‌ಬಿಐ, ಪೋಸ್ಟ್ ಆಫೀಸ್​ನಲ್ಲಿ ಫಿಕ್ಸೆಡ್ ಡೆಪಾಸಿಟ್ ಅಕೌಂಟ್ ಓಪನ್ ಮಾಡ್ಬೇಕಾ? ತುಂಬಾ ಸಿಂಪಲ್​ ಹೀಗ್ ಮಾಡಿ

ಸ್ಥಿರ ಠೇವಣಿಗಳ ಹೂಡಿಕೆಯನ್ನು ಬ್ಯಾಂಕುಗಳು ಮತ್ತು ಅಂಚೆ ಇಲಾಖೆ ಎರಡೂ ಕೂಡ ನೀಡುತ್ತಿರುವುದು ಹಣ ಹೂಡಿಕೆದಾರರಿಗೆ ಸಹಾಯಕವಾಗಿದೆ. ಸುಮ್ಮನೆ ಹೋಗಿ ಹೂಡಿಕೆ ಮಾಡಿಬಿಡ್ತಿರಾ? ಆಗಲ್ಲ ಅಲ್ವಾ. ಮೊದಲು ಈ ಸ್ಥಿರ ಠೇವಣಿ ಹೂಡಿಕೆ ಮಾಡುವ ಮೊದಲು ಹೂಡಿಕೆದಾರರಾದ ನೀವು ಇದರ ಅನುಕೂಲ ಮತ್ತು ಅನಾನೂಕೂಲಗಳನ್ನು ತಿಳಿದುಕೊಳ್ಳಬೇಕಾದುದು ನಿಮ್ಮ ಕರ್ತವ್ಯ ಆಗಿರುತ್ತದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಇತ್ತೀಚೆಗೆ ಅತಿ ಹೆಚ್ಚು ಜನರು ಹಣವನ್ನು (Money) ವಿಧ-ವಿಧವಾಗಿ ಬೇರೆ ಬೇರೆ ಕಡೆ ಹೂಡಿಕೆ ಮಾಡಿ ಅದರಿಂದ ಅನೇಕ ಲಾಭಗಳನ್ನು ಗಳಿಸುತ್ತಿದ್ದಾರೆ. ಈಗ ಸ್ಥಿರ ಠೇವಣಿ ಬಡ್ಡಿ ದರಗಳು (Interest Rate) ಹೆಚ್ಚುತ್ತಿರುವ ಕಾರಣ ಸಾಲ ಹೂಡಿಕೆದಾರರು ಈಗ ಮಾರುಕಟ್ಟೆಯಲ್ಲಿ ಹೆಚ್ಚಿನ ಬಡ್ಡಿದರಗಳೊಂದಿಗೆ ಸ್ಥಿರ ಠೇವಣಿ (Fixed Deposit) ಯೋಜನೆಯಲ್ಲಿ ಹಣ ಹೂಡಿಕೆ ಮಾಡುತ್ತಿದ್ದಾರೆ. ಈ ಸ್ಥಿರ ಠೇವಣಿಗಳ ಹೂಡಿಕೆಯನ್ನು ಬ್ಯಾಂಕುಗಳು (Banks) ಮತ್ತು ಅಂಚೆ ಇಲಾಖೆ (Post Office) ಎರಡೂ ಕೂಡ ನೀಡುತ್ತಿರುವುದು ಹಣ ಹೂಡಿಕೆದಾರರಿಗೆ ಸಹಾಯಕವಾಗಿದೆ. ಸುಮ್ಮನೆ ಹೋಗಿ ಹೂಡಿಕೆ ಮಾಡಿಬಿಡ್ತಿರಾ? ಆಗಲ್ಲ ಅಲ್ವಾ. ಮೊದಲು ಈ ಸ್ಥಿರ ಠೇವಣಿ ಹೂಡಿಕೆ ಮಾಡುವ ಮೊದಲು ಹೂಡಿಕೆದಾರರಾದ ನೀವು ಇದರ ಅನುಕೂಲ ಮತ್ತು ಅನಾನೂಕೂಲಗಳನ್ನು ತಿಳಿದುಕೊಳ್ಳಬೇಕಾದುದು ನಿಮ್ಮ ಕರ್ತವ್ಯ ಆಗಿರುತ್ತದೆ.

ಹಣ ಹೂಡಿಕೆದಾರರು ಹೆಚ್ಚಾಗಿ ಎಸ್‌ಬಿಐ ನ ಬಡ್ಡಿದರಗಳಲ್ಲಿ ಆಸಕ್ತಿ ಹೊಂದಿದ್ದಾರೆ ಏಕೆಂದರೆ ಎಸ್‌ಬಿಐ ನಮ್ಮ ರಾಷ್ಟ್ರದ ಅತಿದೊಡ್ಡ ರಾಷ್ಟ್ರೀಕೃತ ಬ್ಯಾಂಕ್ ಆಗಿದೆ. ಆದರೆ ಸ್ಥಿರ ಠೇವಣಿ ಖಾತೆ ಆರಂಭಿಸಲು ಬಡ್ಡಿದರಗಳ ಹೋಲಿಕೆ ಮತ್ತು ಆನ್‌ಲೈನ್ ಖಾತೆಯನ್ನು ಆರಂಭಿಸುವ ಪ್ರಕ್ರಿಯೆಯು ಹೂಡಿಕೆದಾರರ ತಲೆಯಲ್ಲಿ ಬರುವ ಮೊದಲ ಮತ್ತು ಅಗತ್ಯ ಪ್ರಶ್ನೆಯಾಗಿರುತ್ತದೆ. ಅಂಚೆ ಕಚೇರಿ ಸ್ಥಿರ ಠೇವಣಿ ಯೋಜನೆಯು ಎಸ್‌ಬಿಐ ಗಿಂತ ಹೆಚ್ಚಿನ ಬಡ್ಡಿ ದರಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.

ಹಾಗಿದ್ರೆ ಎಸ್‌ಬಿಐ ಸ್ಠಿರ ಠೇವಣಿ ಮತ್ತು ಅಂಚೆ ಕಚೇರಿಯ ಸ್ಥಿರ ಠೇವಣಿಗೂ ಇರುವ ವ್ಯತ್ಯಾಸ ನೋಡೋಣ ಬನ್ನಿ:
ಎಸ್‌ಬಿಐ ಸ್ಥಿರ ಠೇವಣಿ
ಎಸ್‌ಬಿಐ ಕೊನೆಯದಾಗಿ 14.06.2022 ರಂದು ₹2 ಕೋಟಿಗಿಂತ ಕಡಿಮೆ ಇರುವ ಸ್ಥಿರ ಠೇವಣಿಗಳ ಮೇಲೆ, ಎಸ್‌ಬಿಐ ತನ್ನ ಬಡ್ಡಿದರಗಳನ್ನು ಪರಿಷ್ಕರಿಸಿತ್ತು. ಪರಿಷ್ಕರಣೆಯ ನಂತರ, ಬ್ಯಾಂಕ್ ಈಗ ಸಾಮಾನ್ಯ ಜನರಿಗೆ 2.90% - 5.50% ಮತ್ತು ಹಿರಿಯ ನಾಗರಿಕರಿಗೆ 3.40% - 6.30% ವರೆಗಿನ ಸ್ಥಿರ ಠೇವಣಿ ಬಡ್ಡಿದರವನ್ನು ನೀಡುತ್ತಿದೆ. ತೆರಿಗೆ ಉಳಿಸುವ ಸ್ಥಿರ ಠೇವಣಿಗಳ ಮೇಲೆ, ಎಸ್‌ಬಿಐ ಹಿರಿಯ ನಾಗರಿಕರಿಗೆ 5.50% ಮತ್ತು 6.30% ಬಡ್ಡಿದರವನ್ನು ನೀಡುತ್ತಿದೆ.

ಇದನ್ನೂ ಓದಿ:  EPFO: ಇನ್ಮುಂದೆ ಒಂದೇ ಗಂಟೆಯಲ್ಲಿ ಪಿಎಫ್​ ಹಣ ಪಡೆದುಕೊಳ್ಳಬಹುದು! ಅದಕ್ಕೆ ಮಾಡಬೇಕಾಗಿರೋದು ಇಷ್ಟೆ ನೋಡಿ

ಇತ್ತಿಚೀಗೆ ಎಸ್‌ಬಿಐ ತನ್ನ ವೆಬ್‌ಸೈಟ್‌ನಲ್ಲಿ ಹಿರಿಯ ನಾಗರಿಕರಿಗಾಗಿ ವಿಶೇಷವಾದ “ಎಸ್‌ಬಿಐ ವಿ ಕೇರ್‌ ” ಠೇವಣಿಯನ್ನು ಚಿಲ್ಲರೆ ಟಿಡಿ ವಿಭಾಗದಲ್ಲಿ ಪರಿಚಯಿಸಲಾಗಿದೆ, ಇದರಲ್ಲಿ 30 ಬಿಪಿಎಸ್‌ ಹೆಚ್ಚುವರಿ ಪ್ರೀಮಿಯಂ ಅನ್ನು ಹಿರಿಯ ನಾಗರಿಕರಿಗೆ ಅವರ ಚಿಲ್ಲರೆ ಟಿಡಿ ಯಲ್ಲಿ 5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ಮಾತ್ರ ಪಾವತಿಸಲಾಗುತ್ತದೆ. "ಎಸ್‌ಬಿಐ ವಿ ಕೇರ್‌" ಠೇವಣಿ ಯೋಜನೆಯು 30 ನೇ ಸೆಪ್ಟೆಂಬರ್, 2022 ರವರೆಗೆ ವಿಸ್ತರಿಸಲ್ಪಟ್ಟಿದೆ" ಎಂದು ಹೇಳಲಾಗಿದೆ.

ಆನ್‌ಲೈನ್‌ ನಲ್ಲಿ ಎಸ್‌ಬಿಐ ಸ್ಥಿರ ಠೇವಣಿ ಖಾತೆಯನ್ನು ತೆರೆಯುವುದು ಹೇಗೆ?

  1. retail.onlinesbi.com/retail/login.htm ಗೆ ಭೇಟಿ ನೀಡಿ ಮತ್ತು 'ಲಾಗಿನ್ ಮಾಡಲು ಮುಂದುವರಿಸಿ' ಕ್ಲಿಕ್ ಮಾಡಿ.

  2. ಈಗ ನಿಮ್ಮ ಬಳಕೆದಾರರ ಹೆಸರು, ಪಾಸ್‌ವರ್ಡ್ ಅನ್ನು ನಮೂದಿಸಿ ಮತ್ತು 'ಲಾಗಿನ್' ಮೇಲೆ ಕ್ಲಿಕ್ ಮಾಡಿ.

  3. ಈಗ ‘ಠೇವಣಿ ಮತ್ತು ಹೂಡಿಕೆ’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ಡ್ರಾಪ್-ಡೌನ್ ಮೆನುವಿನ ಅಡಿಯಲ್ಲಿ, ‘ಫಿಕ್ಸೆಡ್ ಡೆಪಾಸಿಟ್’ ಆಯ್ಕೆಮಾಡಿ.

  4. ಈಗ ‘ಫಿಕ್ಸೆಡ್ ಡೆಪಾಸಿಟ್ (e-TDR/e-STDR)’ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಿದ ಒಟಿಪಿ ಅನ್ನು ನಮೂದಿಸಿ.

  5. ಈಗ ‘ಪ್ರೊಸೀಡ್’ ಕ್ಲಿಕ್ ಮಾಡಿ ಮತ್ತು ನೀವು ಠೇವಣಿ ಮಾಡಲು ಬಯಸುವ ಮೊತ್ತವನ್ನು ನಮೂದಿಸಿ.

  6. ನೀವು ಹಿರಿಯ ನಾಗರಿಕರಾಗಿದ್ದರೆ, ಹಿರಿಯ ನಾಗರಿಕ ವರ್ಗವನ್ನು ಗುರುತಿಸಿ.

  7. ಈಗ ಆಯ್ಕೆಯಾದ ಎಸ್‌ಟಿಡಿಆರ್‌ ಮತ್ತು ಆಯ್ಕೆಯಾದ ಟಿಡಿಆರ್‌ ನಿಂದ ಹೂಡಿಕೆ ಪ್ರಕಾರವನ್ನು ಆಯ್ಕೆಮಾಡಿ.

  8. ಅವಧಿ ಮತ್ತು ಮುಕ್ತಾಯ ಸೂಚನೆಯನ್ನು ಆಯ್ಕೆಮಾಡಿ.

  9. ನಿಯಮಗಳು ಮತ್ತು ಷರತ್ತುಗಳನ್ನು ಸ್ವೀಕರಿಸಿ ಮತ್ತು 'ಸಲ್ಲಿಸು' ಕ್ಲಿಕ್ ಮಾಡಿ.

  10. ಸಲ್ಲಿಸಿದ ವಿವರಗಳನ್ನು ಪರಿಶೀಲಿಸಿ ಮತ್ತು 'ದೃಢೀಕರಿಸಿ' ಎಂಬುದರ ಮೇಲೆ ಕ್ಲಿಕ್ ಮಾಡಿ.


ಅಂಚೆ ಕಚೇರಿ ಸ್ಥಿರ ಠೇವಣಿ: ಅಂಚೆ ಕಚೇರಿಯಲ್ಲಿ ಸ್ಥಿರ ಠೇವಣಿ ಖಾತೆ ತೆರೆಯಲು ಕನಿಷ್ಠ 1,000 ರೂಪಾಯಿ ಠೇವಣಿ ಮತ್ತು ಗರಿಷ್ಠ 10,00,000 ರೂಪಾಯಿ ಮೊತ್ತದ ಠೇವಣಿಗಳ ಅಗತ್ಯವಿದೆ. ಖಾತೆಯು 1 ರಿಂದ 5 ವರ್ಷಗಳ ಅವಧಿಯನ್ನು ಹೊಂದಿರುತ್ತದೆ. 1961 ರ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80ಸಿ ಐದು ವರ್ಷಗಳೊಳಗಿನ ಹೂಡಿಕೆಗಳಿಗೆ ಅನ್ವಯಿಸುತ್ತದೆ. ಇದು ಬ್ಯಾಂಕ್ ಸ್ಥಿರ ಠೇವಣಿಗಳಿಗೂ ಕೂಡ ಅನ್ವಯಿಸುತ್ತದೆ. ಅಂಚೆ ಕಚೇರಿಯ ಸ್ಥಿರ ಠೇವಣಿಯು ಒಂದರಿಂದ ಮೂರು ವರ್ಷಗಳವರೆಗೆ ಮಾಡಿದ ಠೇವಣಿಗಳಿಗೆ 5.5 % ಮತ್ತು ಐದು ವರ್ಷಗಳವರೆಗೆ ಮಾಡಿದ ಠೇವಣಿಗಳಿಗೆ 6.7 % ಬಡ್ಡಿದರಗಳನ್ನು ಪಾವತಿಸುತ್ತದೆ.

ಇದನ್ನೂ ಓದಿ:  MultiBagger Stock: ಒಂದೇ ವರ್ಷದಲ್ಲಿ ಈ ಷೇರಿನ ಬೆಲೆ ಶೇಕಡಾ 961ರಷ್ಟು ಏರಿಕೆ! ನೀವೂ ಇಲ್ಲಿ ಹೂಡಿಕೆ ಮಾಡಿದ್ದೀರಾ?

ಆನ್‌ಲೈನ್‌ನಲ್ಲಿ ಅಂಚೆ ಕಚೇರಿ ಸ್ಥಿರ ಠೇವಣಿ ಖಾತೆಯನ್ನು ತೆರೆಯುವುದು ಹೇಗೆ?

  1. ebanking.indiapost.gov.in ಗೆ ಭೇಟಿ ನೀಡಿ ಮತ್ತು ನಿಮ್ಮ ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್ ಅನ್ನು ಬಳಸಿಕೊಂಡು DoP eBanking ಪೋರ್ಟಲ್‌ಗೆ ಲಾಗಿನ್ ಮಾಡಿ.

  2. ಈಗ 'ಸಾಮಾನ್ಯ ಸೇವೆಗಳು' ಮೆನುವಿನ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ 'ಸೇವಾ ವಿನಂತಿ' ಆಯ್ಕೆಯನ್ನು ಆರಿಸಿ.

  3. ಈಗ ಡ್ರಾಪ್-ಡೌನ್ ಮೆನುವಿನಿಂದ 'ಹೊಸ ವಿನಂತಿಗಳು' ಆಯ್ಕೆಮಾಡಿ, ತದನಂತರ 'TD ಖಾತೆಗಳು - TD ಖಾತೆ ತೆರೆಯಿರಿ' ಕ್ಲಿಕ್ ಮಾಡಿ.

  4. ಈಗ ಠೇವಣಿ ಮೊತ್ತ, ಠೇವಣಿ ಅವಧಿಯನ್ನು ನಮೂದಿಸಿ ಮತ್ತು ನಿಮ್ಮ ಡೆಬಿಟ್ ಖಾತೆಯನ್ನು ಆಯ್ಕೆಮಾಡಿ.

  5. ಈಗ ನಿಮ್ಮ ನವೀಕರಣ ಮತ್ತು ರಿಡೆಂಪ್ಶನ್ ಸೂಚನೆಗಳನ್ನು ನಿರ್ದಿಷ್ಟಪಡಿಸಿ ಮತ್ತು 'ಆನ್‌ಲೈನ್‌ನಲ್ಲಿ ಸಲ್ಲಿಸಿ' ಎಂಬುದರ ಮೇಲೆ ಕ್ಲಿಕ್ ಮಾಡಿ.

  6. 'ವಿನಂತಿ ದೃಢೀಕರಣ' ಪುಟದ ಅಡಿಯಲ್ಲಿ, ನೀವು ನಮೂದಿಸಿದ ವಿವರಗಳನ್ನು ಪರಿಶೀಲಿಸಿ ಮತ್ತು ವಿವರಗಳನ್ನು ಖಚಿತಪಡಿಸಲು ನಿಮ್ಮ ಖಾತೆಯ ಪಾಸ್‌ವರ್ಡ್ ಅನ್ನು ನಮೂದಿಸಿ.

  7. ನೀವು ಈಗ ಪರದೆಯ ಮೇಲೆ ಯಶಸ್ವಿ ಸಂದೇಶವನ್ನು ಮತ್ತು ನಿಮ್ಮ ವಹಿವಾಟಿನ ಆನ್‌ಲೈನ್ ರಸೀದಿಯನ್ನು ಪಡೆಯುತ್ತೀರಿ, ಅದನ್ನು ನೀವು PDF ಪ್ರತಿಯಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.


ಇದನ್ನೂ ಓದಿ: Business Idea: 5 ಸಾವಿರದಿಂದ ಈ ಬ್ಯುಸಿನೆಸ್​ ಶುರು ಮಾಡಿ, ರುಚಿ-ಶುಚಿ ಇದ್ರೆ ತಿಂಗಳಲ್ಲಿ ಲಕ್ಷಾಧಿಪತಿಗಳಾಗ್ತೀರಿ!

ಅಂತಿಮವಾಗಿ ಅಂಚೆ ಕಚೇರಿ ಸ್ಥಿರ ಠೇವಣಿಗಳ ಮೇಲಿನ ಈಗೀನ ಬಡ್ಡಿದರವು 6.7 % ರಷ್ಟಿದೆ. ಇದು ಎಸ್‌ಬಿಐ ಮಾತ್ರವಲ್ಲದೆ ಎಚ್‌ಡಿಎಫ್‌ಸಿ, ಐಸಿಐಸಿಐ, ಆಕ್ಸಿಸ್, ಬೋಬಿ, ಪಿಎನ್‌ಬಿ ಮತ್ತು ಇತರ ಪ್ರಮುಖ ಬ್ಯಾಂಕ್‌ಗಳು ನೀಡುವ ಸ್ಥಿರ ಠೇವಣಿ ಬಡ್ಡಿ ದರಗಳಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಆದರೆ ಮುಖ್ಯವಾದ ವಿಚಾರವೆಂದ್ರೆ ಅಂಚೆ ಕಚೇರಿಯ ಸ್ಥಿರ ಠೇವಣಿ ಯೋಜನೆಯು ಹಿರಿಯ ನಾಗರಿಕರಿಗೆ ಅಂತಹ ಪ್ರಯೋಜನವನ್ನು ನೀಡಲು ವಿಫಲವಾಗಿವೆ ಆದರೆ ಬ್ಯಾಂಕ್ ಸ್ಥಿರ ಠೇವಣಿಗಳು ಹಿರಿಯ ನಾಗರಿಕರಿಗೆ ಹೆಚ್ಚುವರಿ ಬಡ್ಡಿದರವನ್ನು ಒದಗಿಸುವಲ್ಲಿ ಸಫಲವಾಗಿವೆ.
Published by:Ashwini Prabhu
First published: