SBI Alert: 5 ಗಂಟೆಗಳ ಕಾಲ ಎಲ್ಲಾ SBI ಸೇವೆಗಳು ಬಂದ್; ನೆಟ್ ಬ್ಯಾಂಕಿಂಗ್ ಕೂಡ ಸ್ಥಗಿತ; ತುರ್ತು ಕೆಲಸಗಳಿದ್ರೆ ಬೇಗ ಮಾಡ್ಕೊಳ್ಳಿ

ತಿಂಗಳ ಎರಡನೇ ಶನಿವಾರ ಮತ್ತು ಭಾನುವಾರದ ರಜೆ ಇರುವುದರಿಂದ ಬ್ಯಾಂಕ್ ಎರಡು ದಿನ ಮುಚ್ಚಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಯಾವುದೇ ಬ್ಯಾಂಕ್ ಸಂಬಂಧಿತ ಕೆಲಸವನ್ನು ಹೊಂದಿದ್ದರೂ, ಅದನ್ನು ತಕ್ಷಣ ಇವತ್ತೆ ಆನ್‌ಲೈನ್‌ನಲ್ಲಿ (Online Service Portal) ಮಾಡಿ, ಇದರಿಂದ ನೀವು ನಂತರ ಕೈ ಕೈ ಹಿಸುಕಿಕೊಳ್ಳುವ ಪ್ರಸಂಗ ಬರಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
SBI Alert: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI State Bank Of India) ಗ್ರಾಹಕರಿಗೆ ಬಹಳ ಮುಖ್ಯವಾದ ಸುದ್ದಿ ಇದೆ. ಇಂದು ಶನಿವಾರ, ಎಸ್‌ಬಿಐ ಗ್ರಾಹಕರು (SBI Customers) ಇಂಟರ್ನೆಟ್ ಬ್ಯಾಂಕಿಂಗ್ ಸೇವೆಯನ್ನು (Internet Banking Service) ಬಳಸಲು ಸಾಧ್ಯವಾಗುವುದಿಲ್ಲ. ಇಂದು ಮತ್ತು ನಾಳೆ ಮುಂದಿನ ಎರಡು ದಿನಗಳು ಅಂದರೆ ಶನಿವಾರ ಮತ್ತು ಭಾನುವಾರವೂ ಬ್ಯಾಂಕ್‌ಗಳು (Bank Holiday) ಮುಚ್ಚಲ್ಪಡುತ್ತವೆ. ತಿಂಗಳ ಎರಡನೇ ಶನಿವಾರ ಮತ್ತು ಭಾನುವಾರದ ರಜೆ ಇರುವುದರಿಂದ ಬ್ಯಾಂಕ್ ಎರಡು ದಿನ ಮುಚ್ಚಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಯಾವುದೇ ಬ್ಯಾಂಕ್ ಸಂಬಂಧಿತ ಕೆಲಸವನ್ನು ಹೊಂದಿದ್ದರೂ, ಅದನ್ನು ತಕ್ಷಣ ಇವತ್ತೆ ಆನ್‌ಲೈನ್‌ನಲ್ಲಿ (Online Service Portal) ಮಾಡಿ, ಇದರಿಂದ ನೀವು ನಂತರ ಕೈ ಕೈ ಹಿಸುಕಿಕೊಳ್ಳುವ ಪ್ರಸಂಗ ಬರಲ್ಲ.

ಎಸ್‌ಬಿಐ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡಿದ್ದು, ನಾವು ಉತ್ತಮ ಬ್ಯಾಂಕಿಂಗ್ ಅನುಭವವನ್ನು ನೀಡಲು ಪ್ರಯತ್ನಿಸುತ್ತಿದ್ದೇವೆ. ಹಾಗಾಗಿ ನಮ್ಮ ಗ್ರಾಹಕರು ನಮ್ಮೊಂದಿಗೆ ಸಹಕರಿಸುವಂತೆ ಮನವಿ ಮಾಡಿಕೊಂಡಿದೆ.

ಯೊನೊ ಲೈಟ್ (Yono Lite) ಹಾಗೂ ಯುಪಿಐ (SBI UPI Payments) ಸೇವೆಗಳು ಸೇರಿದಂತೆ ಇಂಟರ್ನೆಟ್ ಬ್ಯಾಂಕಿಂಗ್ (SBI Internet Banking) ಸೇವೆಯನ್ನು ಬಳಸುವ ತನ್ನ ಗ್ರಾಹಕರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅತಿಮುಖ್ಯವಾದ ಮಾಹಿತಿಯೊಂದನ್ನು ನೀಡಿದೆ.

ಇದನ್ನೂ ಓದಿ.: IRCTC ನಲ್ಲಿ ಈ ರೀತಿಯ ತತ್ಕಾಲ್ ಟಿಕೆಟ್‌ ಬುಕ್ ಮಾಡಿ, ನಿಮಗೆ ಎಂದಿಗೂ Waiting Ticket ಸಿಗಲ್ಲ

SBI ಹೇಳಿದ್ದೇನು ಗೊತ್ತಾ?

ಡಿಸೆಂಬರ್ 11, 2021 ರಂದು ರಾತ್ರಿ 23:30 ರಿಂದ 4:30 ರವರೆಗೆ (300 ನಿಮಿಷಗಳು) ಐಟಿ ಸೇವೆಯನ್ನು ಸುಧಾರಿಸಲು ನಾವು ಕೆಲಸ ಮಾಡುತ್ತಿದ್ದೇವೆ ಎಂದು ಅದು ನಂತರ ಟ್ವೀಟ್‌ನಲ್ಲಿ ಬರೆದಿದೆ.

ಈ ಅವಧಿಯಲ್ಲಿ INB / Yono / Yono Lite / Yono Business / UPI ಲಭ್ಯವಿರುವುದಿಲ್ಲ. ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ ಮತ್ತು ನಮ್ಮೊಂದಿಗೆ ಸಹಕರಿಸುವಂತೆ ವಿನಂತಿಸುತ್ತೇವೆ. SBI ಬಳಕೆದಾರರು ಶನಿವಾರ ಮತ್ತು ಭಾನುವಾರದಂದು 300 ನಿಮಿಷಗಳ ಕಾಲ ಇಂಟರ್ನೆಟ್ ಬ್ಯಾಂಕಿಂಗ್ ಸೇವೆ, YONO, YONO Lite, UPI, ಮೊಬೈಲ್ ಬ್ಯಾಂಕಿಂಗ್ ಅನ್ನು ಬಳಸಲು ಸಾಧ್ಯವಾಗುವುದಿಲ್ಲ.



ಎಸ್‌ಬಿಐ ದೇಶದ ಅತಿ ದೊಡ್ಡ ಬ್ಯಾಂಕ್ ಆಗಿದೆ

ಎಸ್‌ಬಿಐ ವೆಬ್‌ಸೈಟ್ ಪ್ರಕಾರ, ಇದು ನಾಲ್ಕನೇ ಒಂದು ಭಾಗದಷ್ಟು ಮಾರುಕಟ್ಟೆ ಪಾಲನ್ನು ಹೊಂದಿರುವ ದೇಶದ ಅತಿದೊಡ್ಡ ಬ್ಯಾಂಕ್ ಆಗಿದೆ. ಇದು ತನ್ನ 11 ಅಂಗಸಂಸ್ಥೆಗಳ ಮೂಲಕ ಎಸ್‌ಬಿಐ ಜನರಲ್ ಇನ್ಶೂರೆನ್ಸ್, ಎಸ್‌ಬಿಐ ಲೈಫ್ ಇನ್ಶುರೆನ್ಸ್, ಎಸ್‌ಬಿಐ ಮ್ಯೂಚುಯಲ್ ಫಂಡ್, ಎಸ್‌ಬಿಐ ಕಾರ್ಡ್ ಮುಂತಾದ ವಿಭಿನ್ನ ವ್ಯವಹಾರಗಳಲ್ಲಿ ಯಶಸ್ವಿಯಾಗಿದೆ.

ಇದು ಪ್ರಪಂಚದಾದ್ಯಂತ 32 ದೇಶಗಳು ಮತ್ತು 233 ಕಚೇರಿಗಳ ಮೂಲಕ ಎಲ್ಲಾ ಸಮಯ ವಲಯಗಳಲ್ಲಿ ಅಸ್ತಿತ್ವವನ್ನು ಹೊಂದಿದೆ. SBI ದೇಶಾದ್ಯಂತ 22,000 ಕ್ಕೂ ಹೆಚ್ಚು ಶಾಖೆಗಳನ್ನು ಮತ್ತು 57,889 ಕ್ಕಿಂತ ಹೆಚ್ಚು ATM ಜಾಲವನ್ನು ಹೊಂದಿದೆ.

ಗ್ರಾಹಕರ ಸುರಕ್ಷೆಗಾಗಿ SMI Binding:

ತನ್ನ ಗ್ರಾಹಕರಿಗೆ ತೃಪ್ತಿಕರವಾದ ಸೇವೆಯನ್ನು ಒದಗಿಸುವುದರ ಜೊತೆಗೆ ಸರಕಾರಿ ಬ್ಯಾಂಕ್ ವಂಚನೆಗಳ ಬಗ್ಗೆ ಜಾಗೃತರಾಗಿರಲು ಗ್ರಾಹಕರಿಗೆ ತಿಳಿಸಿದೆ. 'ಎಸ್‌ಎಮ್‌ಐ ಬೈಂಡಿಂಗ್' ಎಂಬ ಹೊಸ ಫೀಚರ್ ಅನ್ನು ಯೊನೊ ಹಾಗೂ ಯೊನೊ ಲೈಟ್‌ ಆ್ಯಪ್‌ಗಳಿಗೆ ಬ್ಯಾಂಕ್ ಸೇರಿಸಿದ್ದು ಇದು ಗ್ರಾಹಕರಿಗೆ ಹೆಚ್ಚುವರಿ ಭದ್ರತೆಯನ್ನು ಒದಗಿಸಲಿದೆ ಎಂದು ಬ್ಯಾಂಕ್ ತಿಳಿಸಿದೆ.

ಇದನ್ನೂ ಓದಿ:  Gold, Silver Price Today: ಹೂಡಿಕೆದಾರರಿಗೆ ಶುಭ ಸುದ್ದಿ ನೀಡಿದ ಚಿನ್ನ, ಬೆಳ್ಳಿ

ಡಿಜಿಟಲ್ ಮೋಸಗಳಿಂದ ಗ್ರಾಹಕರನ್ನು ಸಂರಕ್ಷಿಸುವ ಕಾರ್ಯವನ್ನು ಈ ಪ್ಲಾಟ್‌ಫಾರ್ಮ್‌ಗಳ ಅತ್ಯಾಧುನಿಕ ಫೀಚರ್ ಒದಗಿಸಲಿದೆ. ಸಿಮ್ ಬೈಂಡಿಂಗ್ ಫೀಚರ್ ಅನ್ನು ಯೊನೊ ಹಾಗೂ ಯೊನೊ ಲೈಟ್ ಆ್ಯಪ್‌ಗಳು ಒಳಗೊಂಡಿದ್ದು ಎಸ್‌ಬಿಐ ಬ್ಯಾಂಕ್‌ನೊಂದಿಗೆ ನೋಂದಾಯಿಸಿರುವ ಮೊಬೈಲ್ ಸಂಖ್ಯೆಗಳ ಸಿಮ್‌ ಹೊಂದಿರುವ ಡಿವೈಸ್‌ಗಳಲ್ಲಿ ಮಾತ್ರವೇ ಕಾರ್ಯನಿರ್ವಹಿಸುತ್ತವೆ.
Published by:Mahmadrafik K
First published: