• Home
  • »
  • News
  • »
  • business
  • »
  • PPF Saving Scheme: ಪ್ರತಿ ತಿಂಗಳು 12,500 ರೂಪಾಯಿ ಉಳಿಸಿದ್ರೆ, 2.27 ಕೋಟಿ ಸಿಗುತ್ತೆ! ಅದೇಗಪ್ಪಾ ಅಂತೀರಾ? ಇಲ್ಲಿ ನೋಡಿ

PPF Saving Scheme: ಪ್ರತಿ ತಿಂಗಳು 12,500 ರೂಪಾಯಿ ಉಳಿಸಿದ್ರೆ, 2.27 ಕೋಟಿ ಸಿಗುತ್ತೆ! ಅದೇಗಪ್ಪಾ ಅಂತೀರಾ? ಇಲ್ಲಿ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಒಂದು ಸರ್ಕಾರಿ ಬೆಂಬಲಿತ ಸಣ್ಣ ಉಳಿತಾಯ ಯೋಜನೆಯಾಗಿದ್ದು, ಮೆಚ್ಯೂರಿಟಿಯ ಸಮಯದಲ್ಲಿ ತನ್ನ ಹೂಡಿಕೆದಾರರಿಗೆ ಖಚಿತವಾದ ಲಾಭ ಒದಗಿಸುವ ಗುರಿ ಹೊಂದಿದೆ.

  • Share this:

ಜೀವನ (Life) ದ ಬಗ್ಗೆ ಸರಿಯಾದ ಪ್ಲಾನಿಂಗ್‌ (Planning) ಹೊಂದಿರುವವರು ಯಾರಾದರೂ ತಾವು ದುಡಿದ ಹಣ (Money) ವನ್ನು ಸರಿಯಾದ ದಾರಿಯಲ್ಲಿ ಹೂಡಿಕೆ ಅಥವಾ ಉಳಿತಾಯ ಮಾಡುತ್ತಾರೆ. ಮಾರುಕಟ್ಟೆ (Market) ಗಳ ಸ್ಥಿತಿಗತಿ, ಬಡ್ಡದರಗಳ ಏರಿಳಿತಗಳ ಹೊರತಾಗಿಯೂ ಒಂದಷ್ಟು ಲಾಭ (Profit) ನೀಡುವಂಥ ಯೋಜನೆಗಳಲ್ಲಿ ಹಣ ಹೂಡಿರುತ್ತಾರೆ. ಅಂದಹಾಗೆ ನಮ್ಮಲ್ಲಿ ದೀರ್ಘಾವಧಿಯಲ್ಲಿ ಹೂಡಿಕೆಯ ಲಾಭ ನೀಡುವಂಥ ಅನೇಕ ಯೋಜನೆಗಳಿವೆ. ಅದರಲ್ಲೊಂದು ಪಿಪಿಎಫ್‌ ಉಳಿತಾಯ ಯೋಜನೆ (PPF Saving Scheme) .


ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಒಂದು ಸರ್ಕಾರಿ ಬೆಂಬಲಿತ ಸಣ್ಣ ಉಳಿತಾಯ ಯೋಜನೆಯಾಗಿದ್ದು, ಮೆಚ್ಯೂರಿಟಿಯ ಸಮಯದಲ್ಲಿ ತನ್ನ ಹೂಡಿಕೆದಾರರಿಗೆ ಖಚಿತವಾದ ಲಾಭ ಒದಗಿಸುವ ಗುರಿ ಹೊಂದಿದೆ.


ಪಬ್ಲಿಕ್ ಪ್ರಾವಿಡೆಂಟ್ ಫಂಡ್​ನಲ್ಲಿ ಉಳಿತಾಯ ಮಾಡಿ!


ಪಿಪಿಎಫ್‌ ಖಾತೆದಾರರು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿ ಪಡೆಯಲು ಅರ್ಹರಾಗಿರುತ್ತಾರೆ. ಆದಾಗ್ಯೂ, ವಿನಾಯಿತಿ ಮಿತಿಯನ್ನು ಒಂದೇ ಹಣಕಾಸು ವರ್ಷದಲ್ಲಿ ₹1.50 ಲಕ್ಷಕ್ಕೆ ಮಿತಿಗೊಳಿಸಲಾಗಿದೆ. ಇದು ಹೂಡಿಕೆದಾರರಿಗೆ ಹೆಚ್ಚಿನ ಲಾಭವನ್ನು ನೀಡುವ ಅಪರೂಪದ ಅಪಾಯ-ಮುಕ್ತ ಹೂಡಿಕೆ ಆಯ್ಕೆಗಳಲ್ಲಿ ಒಂದಾಗಿದೆ.


ಪಿಪಿಎಫ್‌ ಬಡ್ಡಿ ದರ


ಪ್ರಸ್ತುತ, ಪಿಪಿಎಫ್‌ ಖಾತೆದಾರರಿಗೆ PPF ಬಡ್ಡಿ ದರವನ್ನು ಶೇ. 7.10 ರಷ್ಟು ನೀಡಲಾಗುತ್ತದೆ. ಆದರೂ, ಪಿಪಿಎಫ್‌ ಬಡ್ಡಿ ದರವು ತ್ರೈಮಾಸಿಕ ಆಧಾರದ ಮೇಲೆ ಬದಲಾವಣೆಗೆ ಒಳಪಟ್ಟಿರುತ್ತದೆ. ಹಿಂದಿನ ಅನುಭವದ ಆಧಾರದ ಮೇಲೆ, ಮುಂದಿನ 35 ವರ್ಷಗಳ ಕಾಲ ಈ PPF ಆದಾಯವನ್ನು ನಾವು ಊಹಿಸಿದರೆ, ಒಬ್ಬ ಹೂಡಿಕೆದಾರನು ಒಬ್ಬರ ಪಿಪಿಎಫ್‌ ಖಾತೆಯಲ್ಲಿ ತಿಂಗಳಿಗೆ ₹12,500 ಹೂಡಿಕೆ ಮಾಡಿದರೆ ಒಬ್ಬ ಸುಮಾರು ₹ 2.27 ಕೋಟಿ ಮೆಚುರಿಟಿ ಮೊತ್ತವನ್ನು ಪಡೆಯುತ್ತಾನೆ.


ಇದನ್ನೂ ಓದಿ: ಅಂಚೆ ಕಚೇರಿಯ 4 ಅದ್ಭುತ ಯೋಜನೆ, 400 ರೂಪಾಯಿ ಉಳಿಸಿ 40 ಲಕ್ಷ ಗಳಿಸಿ!


ಪಿಪಿಎಫ್ ಖಾತೆಯ ಪ್ರಯೋಜನ


ಪಿಪಿಎಫ್ ಖಾತೆಯ ಪ್ರಯೋಜನಗಳ ಕುರಿತು ಮಾತನಾಡಿದ ಸೆಬಿ ನೋಂದಾಯಿತ ತೆರಿಗೆ ಮತ್ತು ಹೂಡಿಕೆ ತಜ್ಞರಾದ ಜಿತೇಂದ್ರ ಸೋಲಂಕಿ ಅವರು, "₹1.5 ಲಕ್ಷದವರೆಗಿನ ಹೂಡಿಕೆಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ವಿನಾಯಿತಿ ಇದೆ. ಆದ್ದರಿಂದ, ವಾರ್ಷಿಕ ಒಬ್ಬರು ₹ 1.5 ಲಕ್ಷ. ವರೆಗೆ ಆದಾಯ ತೆರಿಗೆ ವಿನಾಯಿತಿ ಪಡೆಯಬಹುದು. ಆದಾಗ್ಯೂ, PPF ಖಾತೆ ಮೆಚ್ಯೂರಿಟಿ ಅವಧಿಯು 15 ವರ್ಷಗಳು ಮತ್ತು ಒಬ್ಬರ ಪಿಪಿಎಫ್‌ ಖಾತೆಯನ್ನು ವಿಸ್ತರಿಸಲು ಫಾರ್ಮ್ 16-H ಅನ್ನು ಸಲ್ಲಿಸುವ ಅಗತ್ಯವಿದೆ ಎಂದು ಹೇಳಿದರು.


12,500 ರೂಪಾಯಿ ಉಳಿಸಿ, 2.27 ಕೋಟಿ ಗಳಿಸಿ!


"ಪಿಪಿಎಫ್ ಖಾತೆಯನ್ನು 5 ವರ್ಷಗಳ ಅವಧಿಗೆ ವಿಸ್ತರಿಸಬಹುದು ಮತ್ತು ಅದಕ್ಕಾಗಿ ಒಬ್ಬರು ಪಿಪಿಎಫ್ ಖಾತೆ ತೆರೆಯುವ 15 ನೇ ವರ್ಷದಲ್ಲಿ ಫಾರ್ಮ್ 16-ಎಚ್ ಅನ್ನು ಸಲ್ಲಿಸಬೇಕಾಗುತ್ತದೆ. ಅದೇ ರೀತಿ, ಹೂಡಿಕೆದಾರರು ಮುಂದಿನ ಐದು ವರ್ಷಗಳವರೆಗೆ ಪಿಪಿಎಫ್‌ನಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದರೆ ಅವರು ಖಾತೆ ತೆರೆಯುವ 20ನೇ ವರ್ಷದಲ್ಲಿ ಫಾರ್ಮ್ 16-ಎಚ್ ಅನ್ನು ಸಲ್ಲಿಸಬೇಕಾಗುತ್ತದೆ" ಎಂದು ಸೋಲಂಕಿ ಹೇಳಿದರು.


ಹಾಗಾಗಿ ಹೂಡಿಕೆದಾರರು 35 ವರ್ಷಗಳ ಕಾಲ ಪಿಪಿಎಫ್‌ ಖಾತೆಯಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದರೆ, ಅವರು ಪಿಪಿಎಫ್‌ ಖಾತೆ ತೆರೆಯುವ 15, 20, 25 ಮತ್ತು 30 ನೇ ವರ್ಷದಲ್ಲಿ 16-H ಸಲ್ಲಿಸಬೇಕಾಗುತ್ತದೆ.ಆದ್ದರಿಂದ, ಮುಂದಿನ 35 ವರ್ಷಗಳವರೆಗೆ 7.10 ಪ್ರತಿಶತ ಪಿಪಿಎಫ್‌ ಬಡ್ಡಿ ದರವನ್ನು ಊಹಿಸಿ, ಹೂಡಿಕೆದಾರರು ತಿಂಗಳಿಗೆ ₹ 12,500 ಅಥವಾ ಒಂದು ವರ್ಷದಲ್ಲಿ ₹ 1.50 ಲಕ್ಷವನ್ನು ಹೂಡಿಕೆ ಮಾಡಿದರೆ, ಅಂತಿಮದಲ್ಲಿ ಅವರು ₹ 2,26,97,857 ಅಥವಾ ಸುಮಾರು ₹ 2.27 ಕೋಟಿ ಮೊತ್ತವನ್ನು ಪಡೆಯುತ್ತಾರೆ.


ಇದನ್ನೂ ಓದಿ: ದುಡ್ಡು ಮಾಡೋ ಆಸೆ ಇದ್ರೆ ಈ ಬ್ಯುಸಿನೆಸ್ ಆರಂಭಿಸಿ, ರೈಟ್ ಟೈಮ್​ ಇದು ಆದಾಯನೂ ಹೆಚ್ಚು!


ಇನ್ನು, ಪಿಪಿಎಫ್‌ ಕ್ಯಾರ್ಕ್ಯುಲೇಟರ್‌ ಪ್ರಕಾರ, ಹೂಡಿಕೆದಾರರು ತನ್ನ PPF ಖಾತೆಯಲ್ಲಿ ₹52,50,000 ಹೂಡಿಕೆ ಮಾಡುತ್ತಾರೆ ಅಂದರೆ ಈ ಅವಧಿಯಲ್ಲಿ ಗಳಿಸಿದ ಪಿಪಿಎಫ್‌ ಬಡ್ಡಿ ಸುಮಾರು ₹1,74,47,857 ಆಗಿರುತ್ತದೆ.

First published: