Sankarsh Chand: 100 ಕೋಟಿಯ ಒಡೆಯ ಈ 23ರ ಯುವಕ! ಕಾಲೇಜು ಓದಿದ್ದು ಎರಡೇ ವರ್ಷ!
Inspiration: ಸಾಧನೆ ಮಾಡಲು ಹೆಚ್ಚು ಕಲಿತಿರಬೇಕು ಅಂತಿಲ್ಲ. ಸಾಧನೆ ಮಾಡುವ ಛಲ ಒಂದಿದ್ದರೆ ಏನನ್ನು ಬೇಕಾದರೂ ಮಾಡಬಹುದು. 2 ಸಾವಿರದಿಂದ ಹೂಡಿಕೆ ಮಾಡಿ ತಮ್ಮ 23 ರನೇ ವಯಸ್ಸಿನಲ್ಲೇ 100 ಕೋಟಿ ಆಸ್ತಿ ಗಳಿಸಿದ ಈ ಯಶಸ್ವೀ ಭಾರತೀಯ ಯುವಕನಿಂದ ನೀವೂ ಸ್ಪೂರ್ತಿ ಪಡೆಯಬಹುದು!
ವಾರೆನ್ ಬಫೆಟ್, ಬೆಂಜಮಿನ್ ಗ್ರಹಾಂ, ಜಾರ್ಜ್ ಸೊರೊಸ್, ರಾಕೇಶ್ ಜುಂಜುನ್ವಾಲಾ ಮತ್ತು ರಾಧಾಕಿಶನ್ ದಮಾನಿ. ಷೇರು ಮಾರುಕಟ್ಟೆಯ ಈ ಪಂಟರ್ಗಳ (Successful Share Market Investors) ಸಾಲಿಗೆ ಭಾರತೀಯ ಯುವಕನೋರ್ವನ ಹೆಸರು ಸೇರಿಸಿಕೊಳ್ಳುವ ಸಮಯ ಬಂದಿದೆ. ಪ್ರಪಂಚದಾದ್ಯಂತ ಜನ ಅಚ್ಚರಿಯಿಂದ ನೋಡುವ ಷೇರು ಮಾರುಕಟ್ಟೆ (Share Market) ಪರಿಣಿತ ಹೂಡಿಕೆದಾರರನ್ನೂ ಮೀರಿಸಿ ಬೆಳೆಯುವ ತಾಕತ್ತುಳ್ಳ ಸಂಕರ್ಷ್ ಚಂದ (Sankarsh Chanda) ಯುವಕನೋರ್ವ ಇದೀಗ ಸಖತ್ ಸುದ್ದಿ ಮಾಡುತ್ತಿದ್ದಾರೆ. ಸ್ಪೂರ್ತಿ ಪಡೆದರೆ ಈ ಯುವಕನಿಂದ ಪಡೆಯಬೇಕು (Inspiration Story) ಎಂದು ಅನಿಸುವಂತೆ ಮಾಡುತ್ತೆ ಈ ಯುವಕನ ಕಥೆ. ಅಷ್ಟಕ್ಕೂ ಯಾರೀತ? ಏನಿವರ ಕಥೆ? ಇಲ್ಲಿದೆ.
ಹೀಗೆ ಸ್ಫೂರ್ತಿ ಪಡೆಯಬೇಕಾದ ಇನ್ನೊಂದು ಹೆಸರು ಸಂಕರ್ಷ್ ಚಂದ! ಹೈದರಾಬಾದ್ನ ಈ 23 ವರ್ಷದ ಸಂಕರ್ಷ್ ಚಂದ ಭಾರತೀಯ ಷೇರು ಮಾರುಕಟ್ಟೆಯ ಯುವ ಮತ್ತು ಅತ್ಯಂತ ಯಶಸ್ವೀ ಹೂಡಿಕೆದಾರ. ಇಷ್ಟು ಸಣ್ಣ ವಯಸ್ಸಿಗೇ ಸಂಕರ್ಷ ಚಂದ ಹೂಡಿಕೆ ಮಾಡುವ ಷೇರುಗಳ ಮೇಲೆ ಎಲ್ಲರ ಕಣ್ಣು ಬೀಳುತ್ತಿದೆ. ಇದಕ್ಕೆ ಕಾರಣ ಸಣ್ಣದೇನೂ ಅಲ್ಲ, ತಮ್ಮ 17 ನೇ ವಯಸ್ಸಿನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದ ಸಂಕರ್ಷ್ ಚಂದ ಈಗ ₹ 100 ಕೋಟಿಗಳ ಬೃಹತ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ!
ಎರಡೇ ವರ್ಷಕ್ಕೆ ಕಾಲೇಜಿಗೆ ಕೈಮುಗಿದು ಹೊರಬಂದರು 23 ವರ್ಷದ ಸಂಕರ್ಷ್ ಫಿನ್ಟೆಕ್ ಸ್ಟಾರ್ಟ್ಅಪ್ ಸಾವರ್ಟ್ನ ಸಂಸ್ಥಾಪಕರಾಗಿದ್ದಾರೆ. ಈ ಕಂಪನಿಯು ಜನರಿಗೆ ಷೇರು, ಮ್ಯೂಚುವಲ್ ಫಂಡ್ಗಳು ಮತ್ತು ಬಾಂಡ್ಗಳಲ್ಲಿ ಹೂಡಿಕೆ ಮಾಡಲು ಸಹಾಯ ಮಾಡುತ್ತದೆ. ಅವರ ಕಂಪನಿಯ ನೋಂದಾಯಿತ ಹೆಸರು ಸ್ವಬೋಧ ಇನ್ಫಿನಿಟಿ ಇನ್ವೆಸ್ಟ್ಮೆಂಟ್ ಅಡ್ವೈಸರ್ಸ್ ಪ್ರೈವೇಟ್ ಲಿಮಿಟೆಡ್. ಬಿಟೆಕ್ ಕಂಪ್ಯೂಟರ್ ಸೈನ್ಸ್ ಪದವಿಯಲ್ಲಿ ಎರಡನೇ ವರ್ಷಕ್ಕೇ ಕಾಲೇಜಿಗೆ ಕೈಮುಗಿದರು. 2017 ರಲ್ಲಿ 8 ಲಕ್ಷ ರೂಪಾಯಿ ಹೂಡಿಕೆಯೊಂದಿಗೆ ಸಾವರ್ಟ್ ಕಂಪನಿಯನ್ನು ಪ್ರಾರಂಭಿಸಿದರು.
2 ಸಾವಿರದಿಂದ ಹೂಡಿಕೆ ಶುರು! 12ನೇ ತರಗತಿಯನ್ನು ಪೂರ್ಣಗೊಳಿಸಿದಾಗಲೇ ಸಂಕರ್ಷ್ ಚಂದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದ್ದರು. ಕೇವಲ 2,000 ರೂ.ಗಳಿಂದ ಅವರು ಹೂಡಿಕೆ ಮಾಡಿದ್ದರು ಎಂಬುದು ಇನ್ನೊಂದು ವಿಶೇಷ.
ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಸುಮಾರು 1.5 ಲಕ್ಷ ರೂಪಾಯಿ ಹೂಡಿಕೆ ಮಾಡಿದ ಸಂಕರ್ಷ್ ಚಂದ ಅವರ ಷೇರುಗಳ ಮಾರುಕಟ್ಟೆ ಮೌಲ್ಯ ಸುಮಾರು 13 ಲಕ್ಷ ರೂ.ಗಳಿಗೆ ಏರಿಸಿಕೊಂಡರು.
ಕಂಪನಿ ಶುರು ಮಾಡಲು ಷೇರು ಮಾರಾಟ! ನಂತರ 2017 ರಲ್ಲಿ ತಮ್ಮ ಕಂಪನಿಯನ್ನು ಪ್ರಾರಂಭಿಸಲು ರೂ 8 ಲಕ್ಷ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರು. ''ಈಗ ನನ್ನ ನಿವ್ವಳ ಮೌಲ್ಯ 100 ಕೋಟಿ ರೂ. ಇದು ನನ್ನ ಷೇರು ಮಾರುಕಟ್ಟೆ ಹೂಡಿಕೆ ಮಾತ್ರವಲ್ಲ, ನನ್ನ ಕಂಪನಿಯ ಮೌಲ್ಯಮಾಪನವನ್ನು ಆಧರಿಸಿದೆ" ಎಂದು ಸಂಕರ್ಷ್ ಹೇಳುತ್ತಾರೆ.
ಅವರು 'ಮೌಲ್ಯ ಹೂಡಿಕೆಯ ಪಿತಾಮಹ' ಎಂದು ಕರೆಯಲ್ಪಡುವ ಅಮೇರಿಕನ್ ಅರ್ಥಶಾಸ್ತ್ರಜ್ಞ ಬೆಂಜಮಿನ್ ಗ್ರಹಾಂ ಅವರ ಲೇಖನವನ್ನು ಓದಿದ ನಂತರ ಷೇರು ಮಾರುಕಟ್ಟೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಿದ್ದಾಗಿಯೂ ಹೇಳಲು ಮರೆಯುವುದಿಲ್ಲ.
ಈ ಪುಸ್ತಕ ಓದಬೇಕಂತೆ! ಹಣ ಮತ್ತು ಹೂಡಿಕೆಯ ಬಗ್ಗೆ ತಿಳಿದುಕೊಳ್ಳಲು ಬಯಸುವವರಿಗೆ ಸಂಕರ್ಷ್ ಚಂದ ಮೂರು ಪುಸ್ತಕಗಳನ್ನು ಶಿಫಾರಸು ಮಾಡುತ್ತಾರೆ. ಆ ಪುಸ್ತಕಗಳ ಹೆಸರು ಹೀಗಿವೆ- The Intelligent Investor, Security Analysis, and The First Three Minutes of the Universe.
ಅಲ್ಲದೇ ಸಂಕರ್ಷ್ ಚಂದ ಸ್ವತಃ ಪುಸ್ತಕವೊಂದನ್ನು ಪ್ರಕಟಿಸಿದ್ದಾರೆ. 2016 ರಲ್ಲಿ ಸಂಕರ್ಷ್ ಅವರು ಫೈನಾನ್ಶಿಯಲ್ ನಿರ್ವಾಣ ಎಂಬ ಪುಸ್ತಕವನ್ನು ಪ್ರಕಟಿಸಿದ್ದು ಅದರಲ್ಲಿ ಅವರು ವ್ಯಾಪಾರ ಮತ್ತು ಹೂಡಿಕೆಯ ನಡುವಿನ ವ್ಯತ್ಯಾಸದ ಬಗ್ಗೆ ವಿವರಿಸಿದ್ದಾರೆ. ಹೂಡಿಕೆಯನ್ನು ವೈವಿಧ್ಯಗೊಳಿಸಲು ಮತ್ತು ಮಾರುಕಟ್ಟೆಯನ್ನು ಅರ್ಥಮಾಡಿಕೊಳ್ಳಲು ಸಲಹೆಗಳನ್ನು ನೀಡುತ್ತಾರೆ.
ಸಂಕರ್ಷ್ ಅವರು ಬಾಹ್ಯಾಕಾಶ ವಿಜ್ಞಾನದಲ್ಲಿ ಆಸಕ್ತಿ ಹೊಂದಿದ್ದಾರೆ. ಬಾಹ್ಯಾಕಾಶ ಚಲನಶೀಲತೆ ತಂತ್ರಜ್ಞಾನ ಮತ್ತು ಆಳವಾದ ಬಾಹ್ಯಾಕಾಶ ಪರಿಶೋಧನೆಯಲ್ಲಿ ತೊಡಗಿಸಿಕೊಳ್ಳಲು ಹೊರಟಿರುವ ಏರೋಸ್ಪೇಸ್ ತಂತ್ರಜ್ಞಾನದ ಸ್ಟಾರ್ಡೋರ್ ಎಂಬ ಸ್ಟಾರ್ಟಪ್ನ್ನು ಅವರು ಪ್ರಾರಂಭಿಸಿದ್ದಾರೆ. ಚಿಕ್ಕವಯಸ್ಸಿನಲ್ಲಿ ಸಂಪಾದಿಸಿದ ಸಂಪತ್ತಿಗೆ ಸಂಕರ್ಷ್ ಸರಳ ಜೀವನ ನಡೆಸಲು ಇಷ್ಟಪಡುತ್ತಾನೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ