Safest Cars: 2021ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಅತ್ಯಂತ ಸುರಕ್ಷಿತ ಕಾರುಗಳು ಯಾವುವು ಗೊತ್ತಾ..?

SaferCarsForIndia ಅಭಿಯಾನದಡಿ ಪ್ರಪ್ರಥಮವಾಗಿ ಪರೀಕ್ಷೆಗೊಳಗಾಗಿರುವ ವಿದ್ಯುತ್ ಚಾಲಿತ ಕಾರು ಟಾಟಾ ಟಿಗೋರ್ ಇವಿಯಾಗಿದೆ. ಈ ಕಾರು ಇಡೀ ಭಾರತದಲ್ಲಿ ಕೈಗೆಟುಕುವ ದರದ ವಿದ್ಯುತ್ ಚಾಲಿತ ಕಾರು ಆಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತದ ಆಟೋಮೊಬೈಲ್ ಉದ್ಯಮದ ( Automobile Industry) ಪಾಲಿಗೆ 2022 ಚೇತರಿಕೆಯ(Recovery) ವರ್ಷ. ಅದಕ್ಕೂ ಮುನ್ನ ಆರ್ಥಿಕ ಹಿಂಜರಿತ ಹಾಗೂ ಕೊರೊನಾ ( Corona pandemic ) ಸಾಂಕ್ರಾಮಿಕದ ಕಾರಣಕ್ಕೆ ಬಿಕ್ಕಟ್ಟಿಗೆ (Crisis) ಈಡಾಗಿ ಕಳೆಗುಂದಿತ್ತು. ಆದರೆ, 2021 ಭಾರತದ ಆಟೋಮೊಬೈಲ್ ಉದ್ಯಮದ ಪಾಲಿಗೆ ಚೇತರಿಕೆಯ ವರ್ಷ ಮಾತ್ರವಲ್ಲ‌; ಬದಲಿಗೆ ಕೊಂಚ ಹುಮ್ಮಸ್ಸು, ಸಂತೋಷ ಮೂಡಿಸಿರುವ ವರ್ಷವೂ ಹೌದು. ಕಾರಣ: ಜಾಗತಿಕ ಹೊಸ ಕಾರುಗಳ ಮೌಲ್ಯಮಾಪನ(Cars Evaluation System) ವಿಧಾನದ ಪ್ರಕಾರ ಭಾರತದಲ್ಲಿ 2021ರ ಅವಧಿಯಲ್ಲಿ ಅತಿ ಹೆಚ್ಚು ಸುರಕ್ಷಿತ ಕಾರುಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿವೆ.

ಇತ್ತೀಚಿಗೆ ನಡೆದ ಜಾಗತಿಕ ಹೊಸ ಕಾರುಗಳ ಮೌಲ್ಯಮಾಪನ ವಿಧಾನ ಅಭಿಯಾನದಲ್ಲಿ ಭಾರತದಲ್ಲಿ ಉತ್ಪಾದನೆಯಾಗಿರುವ ಹಲವಾರು ಕಾರುಗಳನ್ನು ಸುರಕ್ಷಿತ ಕಾರು ತಯಾರಿಕೆಗಾಗಿ ಅಳವಡಿಸಲಾಗಿರುವ ಪ್ರಮಾಣಿತ ವಿಧಾನಗಳನ್ನು ಮೌಲ್ಯಮಾಪನ ಮಾಡಲು ಪರೀಕ್ಷೆಗೆ ಒಳಪಡಿಸಲಾಗಿತ್ತು. 2014ರಿಂದ ಫೋಕ್ಸ್‌ವ್ಯಾಗನ್ ಪೋಲೋ, ಮಾರುತಿ ಸುಜುಕಿ ಬ್ರೀಜಾ, ಮಹೀಂದ್ರಾ ಎಕ್ಸ್‌ಯುವಿ 300, ಟೊಯೋಟಾ ಈಟಿಯೋಸ್, ಟಾಟಾ ನೆಕ್ಸಾನ್ ಮತ್ತು ಇನ್ನು ಕೆಲವು ಮಾದರಿಯ ಕಾರುಗಳು 4 ಅಥವಾ 5 ಸ್ಟಾರ್‌ ಪಡೆಯುವಂಥ ಬಲಿಷ್ಠ ಸಾಮರ್ಥ್ಯ ತೋರಿವೆ. ಹಾಗಾದರೆ, ಜಾಗತಿಕ ಹೊಸ ಕಾರುಗಳ ಮೌಲ್ಯಮಾಪನ ವಿಧಾನದ ಪ್ರಕಾರ, 2021ರಲ್ಲಿ ಭಾರತದಲ್ಲಿ ಬಿಡುಗಡೆಯಾಗಿರುವ ಅತ್ಯಂತ ಸುರಕ್ಷಿತ ಕಾರುಗಳು ಯಾವುವು?

ಇದನ್ನೂ ಓದಿ: Car Sales: ಈ ವರ್ಷ ಅತಿ ಹೆಚ್ಚು ಮಾರಾಟವಾದ ಕಾರು ಯಾವುದು ಗೊತ್ತೇ?

ಟಾಟಾ ಪಂಚ್

ಸ್ವದೇಶಿ ಕಂಪನಿ ಟಾಟಾ 2021ರ ಅಕ್ಟೋಬರ್ 18ರಂದು ತನ್ನ ನೂತನ ಮಾದರಿಯ ಟಾಟಾ ಪಂಚ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿತ್ತು. ಅಂದಿನಿಂದ ಈ ಕಾರು ಗ್ರಾಹಕರಲ್ಲಿ ಆಸಕ್ತಿಯನ್ನು ಕೆರಳಿಸುತ್ತಲೇ ಇದೆ. ಕಾರಣ: ವಯಸ್ಕ ಪ್ರಯಾಣಿಕರ ಸುರಕ್ಷತೆಗಾಗಿ ನೀಡುವ 17.00 ಅಂಕಗಳ ಪೈಕಿ 16.45 ಅಂಕಗಳು, ಸಣ್ಣ ವಯಸ್ಸಿನ ಪ್ರಯಾಣಿಕರ ಸುರಕ್ಷತೆಗಾಗಿ ನೀಡುವ 49.00 ಅಂಕಗಳ ಪೈಕಿ 40.89 ಅಂಕಗಳನ್ನು ಟಾಟಾ ಪಂಚ್ ಕಾರು ಸಂಪಾದಿಸಿದೆ.

ಈ ಕಾರನ್ನು ಪ್ರತಿ ಗಂಟೆಗೆ 64 ಕಿಮೀ ವೇಗದಲ್ಲಿ ಚಲಾಯಿಸಲಾಗಿದ್ದು, ಅದರ ಕವಚದ ಸ್ಥಿರತೆ ಸೂಚ್ಯಂಕವನ್ನು ಸ್ಥಿರವೆಂದು ಘೋಷಿಸಲಾಗಿದೆ. ಹೀಗಾಗಿ ಟಾಟಾ ಪಂಚ್ ಕಾರು ವಯಸ್ಕ ಪ್ರಯಾಣಿಕರ ಸುರಕ್ಷತೆಯಲ್ಲಿ 5 ಸ್ಟಾರ್‌ ಹಾಗೂ ಸಣ್ಣ ವಯಸ್ಸಿನ ಪ್ರಯಾಣಿಕರ ಸುರಕ್ಷತೆಯಲ್ಲಿ ಐದರ ಪೈಕಿ ನಾಲ್ಕು ಸ್ಟಾರ್‌ಗಳನ್ನು ಸಂಪಾದಿಸಿದೆ. ಇದಕ್ಕಿಂತ ಮುಖ್ಯವಾಗಿ ಟಾಟಾ ಪಂಚ್ ಕಾರನ್ನು ಮೂಲಭೂತ ಸುರಕ್ಷತಾ ಮಾನದಂಡಗಳನ್ನು ಅಳವಡಿಸಿ ಪರೀಕ್ಷಿಸಲಾಗಿದ್ದು, ಎರಡು ಏರ್ ಬ್ಯಾಗ್, ಎಬಿಎಸ್ ಬ್ರೇಕ್‌ಗಳು ಹಾಗೂ ಐಸೋಫಿಕ್ಸ್ ಆ್ಯಂಕರೇಜ್ ಒಳಗೊಂಡಿದೆ.

ಮಹೀಂದ್ರಾ ಎಕ್ಸ್‌ಯುವಿ700

ಮಹೀಂದ್ರಾ ಎಕ್ಸ್‌ಯುವಿ700 ಗ್ರಾಹಕರು ಅತ್ಯಂತ ನಿರೀಕ್ಷೆಯಿಂದ ಕಾಯುತ್ತಿದ್ದ ಕಾರು. ಇದು ಈ ಮುಂಚಿನ ಎಕ್ಸ್‌ಯುವಿ500ಗೆ ಬದಲಿಯಾಗಿ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಸಣ್ಣ ವಯಸ್ಸಿನ ಪ್ರಯಾಣಿಕರ ಸುರಕ್ಷತಾ ಪ್ರದೇಶದಲ್ಲಿ 49.00 ಅಂಕಗಳ ಪೈಕಿ 41.66 ಅಂಕಗಳು ಹಾಗೂ ವಯಸ್ಕ ಪ್ರಯಾಣಿಕರ ಸುರಕ್ಷತಾ ಪ್ರಮಾಣದಲ್ಲಿ 17.00 ಅಂಕಗಳ ಪೈಕಿ 16.03 ಅಂಕಗಳನ್ನು ಪಡೆಯುವ ಮೂಲಕ ಬಲಿಷ್ಠ ಸಾಮರ್ಥ್ಯ ಪ್ರದರ್ಶಿಸಿದೆ. ಇದರರ್ಥ ಎಕ್ಸ್‌ಯುವಿ700 ಐದಕ್ಕೆ ಐದೂ ಸ್ಟಾರ್‌ಗಳನ್ನು ಸಂಪಾದಿಸಿದೆ ಎಂದು. ಈ ಕಾರಿನ ಕವಚದ ಸ್ಥಿರತೆ ಸೂಚ್ಯಂಕವನ್ನು ಸ್ಥಿರವೆಂದು ಘೋಷಿಸಲಾಗಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಮಹೀಂದ್ರಾ ಎಕ್ಸ್‌ಯುವಿ700 ಕಾರು ಮೂಲಭೂತ ಸುರಕ್ಷತಾ ಮಾನದಂಡಗಳನ್ನು ಒಳಗೊಂಡಿದ್ದು, ಎರಡು ಏರ್ ಬ್ಯಾಗ್, ಎಬಿಎಸ್ ಬ್ರೇಕ್‌ಗಳು ಹಾಗೂ ಐಸೋಫಿಕ್ಸ್ ಆ್ಯಂಕರೇಜ್ ಹೊಂದಿದೆ.

ಇದನ್ನೂ ಓದಿ: Car: 2022ಕ್ಕೆ ಕಾರಿನ ಬೆಲೆ ಹೆಚ್ಚಾಗಲಿದೆ! ಕಡಿಮೆ ಬೆಲೆಗೆ ಖರೀದಿಸಲು ಇಲ್ಲಿದೆ ಉಪಾಯ

ಟಾಟಾ ಟಿಗೋರ್

ಜಾಗತಿಕ ಹೊಸ ಕಾರುಗಳ ಮೌಲ್ಯಮಾಪನ ವಿಧಾನದ #SaferCarsForIndia ಅಭಿಯಾನದಡಿ ಪ್ರಪ್ರಥಮವಾಗಿ ಪರೀಕ್ಷೆಗೊಳಗಾಗಿರುವ ವಿದ್ಯುತ್ ಚಾಲಿತ ಕಾರು ಟಾಟಾ ಟಿಗೋರ್ ಇವಿಯಾಗಿದೆ. ಈ ಕಾರು ಇಡೀ ಭಾರತದಲ್ಲಿ ಕೈಗೆಟುಕುವ ದರದ ವಿದ್ಯುತ್ ಚಾಲಿತ ಕಾರು ಆಗಿದ್ದು, ವಯಸ್ಕ ಪ್ರಯಾಣಿಕರ ಸುರಕ್ಷತಾ ಪ್ರಮಾಣದಲ್ಲಿ 17.00 ಅಂಕಗಳ ಪೈಕಿ 12.00 ಸಂಪಾದಿಸಿದೆ. ಇದರರ್ಥ ಟಾಟಾ ಟಿಗೋರ್ ಇವಿ ಕಾರು 5 ಸ್ಟಾರ್‌ಗಳ ಪೈಕಿ 4 ಸ್ಟಾರ್‌ಗಳನ್ನು ಪಡೆದಿದೆಯೆಂದು. ಆದರೆ, ಟಾಟಾ ಟಿಗೋರ್ ಇವಿ ಕಾರಿನ ಕವಚದ ಸ್ಥಿರತೆಯ ಸೂಚ್ಯಂಕ ಅಸ್ಥಿರವೆಂದು ಹೇಳಲಾಗಿದೆ. ಜಾಗತಿಕ ಹೊಸ ಕಾರುಗಳ ಮೌಲ್ಯಮಾಪನ ವಿಧಾನಗಳ ಪ್ರಕಾರ, ಈ ಕಾರಿನ ಕವಚವು ಅಸ್ಥಿರವಾಗಿದ್ದು, ಹೆಚ್ಚುವರಿ ಹೊರೆ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿಲ್ಲ ಎಂದು ಹೇಳಿದೆ.
Published by:vanithasanjevani vanithasanjevani
First published: