ಕಳೆದ ವರ್ಷ ಸಿಇಒ (CEO) ಹುದ್ದೆಯಿಂದ ವಜಾಗೊಂಡಿದ್ದ ಸಿಂಗಾಪುರ ಮೂಲದ ಫ್ಯಾಶನ್ ಟೆಕ್ ಸಂಸ್ಥೆ ಝಿಲಿಂಗೊದ ಭಾರತೀಯ ಮೂಲದ ಸಹ-ಸಂಸ್ಥಾಪಕಿ ಅಂಕಿತಿ ಬೋಸ್, ಕಂಪನಿಯ ಮಂಡಳಿಯ ಅನುಮೋದನೆಯಿಲ್ಲದೆ 10 ಪಟ್ಟು ಸಂಬಳವನ್ನು ಹೆಚ್ಚಿಸಿದ್ದಾರೆ ಎಂದು ವರದಿಯಾಗಿದೆ. 31 ವರ್ಷದ ಬೋಸ್ ಅವರು ಹೂಡಿಕೆದಾರ ಮಹೇಶ್ ಮೂರ್ತಿ (Mahesh Murthi) ವಿರುದ್ಧ ಅಕ್ರಮವಾಗಿ ಸ್ಟಾರ್ಟ್‌ಅಪ್‌ನಿಂದ ಹಣವನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿ $100 ಮಿಲಿಯನ್ (ಸುಮಾರು ರೂ 820 ಕೋಟಿ) ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದು ಇದೇ ಸಮಯದಲ್ಲಿ ಅಂಕಿತಿ ಮೇಲೆ ಆಪಾದನೆ ಕೇಳಿ ಬಂದಿದೆ. 2017 ಮತ್ತು 2019 ರ ನಡುವೆ, ಬೋಸ್ ಅವರು ಸ್ವತಃ ಸಹ-ಸಂಸ್ಥಾಪಕ ಧ್ರುವ್ ಕಪೂರ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದಿ ವೈದ್ಯ (Doctor) ಅವರಿಗೆ ವೇತನವನ್ನು ಹೆಚ್ಚಿಸಿದ್ದಾರೆ ಎಂಬುದು ತಿಳಿದು ಬಂದಿದೆ. ವರದಿಯ ಪ್ರಕಾರ, ಆಕೆಯ ವೇತನವು 2017 ರಲ್ಲಿ SGD 5,500 ರಿಂದ 2019 ರಲ್ಲಿ SGD 58,900 (10 ಕ್ಕಿಂತ ಹೆಚ್ಚು ಬಾರಿ) ಏರಿಕೆಯಾಗಿದ್ದು, ಕಪೂರ್ ಸಂಬಳವು 3 ಪಟ್ಟು ಅಧಿಕಗೊಂಡಿದ್ದರೆ, ವೈದ್ಯ ಅವರ ಸಂಬಳವು 7 ಪಟ್ಟು ದ್ವಿಗುಣಗೊಂಡಿದೆ ಎಂಬುದು ವರದಿಯಾಗಿದೆ.
ಅಂಕಿತಿ ಬೋಸ್ ಅಮಾನತು
ಮುಂಬೈನಲ್ಲಿ ಬೆಳೆದ ಅಂಕಿತಿ ಬೋಸ್ ಸಿಇಒ ಸ್ಥಾನದಿಂದ ವಜಾಗೊಂಡಿರುವುದರ ಹಿಂದೆ ಷಡ್ಯಂತ್ರ ಇದೆ ಎಂದು ತಿಳಿಸಿದ್ದು ತಮಗೆ ಹಾಗೂ ತನ್ನ ಕುಟುಂಬಕ್ಕೆ ಬೆದರಿಕೆ ಇದೆ ಎಂದು ತಿಳಿಸಿದ್ದಾರೆ. ಸಿಕ್ವೊಯಾ ಕ್ಯಾಪಿಟಲ್ ಇಂಡಿಯಾ ಮತ್ತು ಟೆಮಾಸೆಕ್ ಹೋಲ್ಡಿಂಗ್ಸ್ ಪಿಟಿಇ ಬೆಂಬಲಿತ ಝಿಲಿಂಗೋ ಕೆಲವೊಂದು ಆಪಾದನೆಗಳ ಹಿನ್ನಲೆಯಲ್ಲಿ ಬೋಸ್ ಅವರನ್ನು ಸಿಇಒ ಸ್ಥಾನದಿಂದ ಕೆಳಗಿಳಿಸುವ ನಿರ್ಧಾರವನ್ನು ಜಂಟಿಯಾಗಿ ತೆಗೆದುಕೊಂಡಿದೆ ಎಂದು ತಿಳಿಸಿದ್ದು, ಇದಕ್ಕೆ ಯಾವುದೇ ವೈಯಕ್ತಿಕ ಹೂಡಿಕೆದಾರರು ಕಾರಣರಲ್ಲ ಎಂದು ಝಿಲಿಂಗೋ ತಿಳಿಸಿದೆ.
ಯೂನಿಕಾರ್ನ್ ಕ್ಲಬ್ ಪ್ರವೇಶಿಸಿದ ಸ್ಟಾರ್ಟಪ್
B2B ಸ್ಟಾರ್ಟ್-ಅಪ್ ಆಗಿರುವ ಝಿಲಿಂಗೋ ಫ್ಯಾಷನ್ ಚಿಲ್ಲರೆ ವ್ಯಾಪಾರಿಗಳಿಗೆ ಸಗಟು ಸರಬರಾಜುಗಳನ್ನು ಮೂಲವಾಗಿಸಲು ಅವಕಾಶವನ್ನೊದಗಿಸುತ್ತದೆ. ಝಿಲಿಂಗೋ ಆಗ್ನೇಯ ಏಷ್ಯಾದ ಅತ್ಯಂತ ಪ್ರಸಿದ್ಧವಾದ ಸ್ಟಾರ್ಟ್‌ಅಪ್‌ಗಳಲ್ಲಿ ಒಂದಾಗಿ ಖ್ಯಾತಿ ಪಡೆದುಕೊಂಡಿದೆ.
ಆಗ್ನೇಯ ಏಷ್ಯಾದಲ್ಲಿ ಸಿಕ್ವೊಯಾ ಕ್ಯಾಪಿಟಲ್ ಇಂಡಿಯಾದ ಪ್ರಮುಖ ಹೂಡಿಕೆಗಳಲ್ಲಿ ಒಂದಾದ ಝಿಲಿಂಗೋ ಯುನಿಕಾರ್ನ್ ಕ್ಲಬ್ ಅನ್ನು ಕಳೆದ ವರ್ಷ ಏಪ್ರಿಲ್‌ನಲ್ಲಿ $226-ಮಿಲಿಯನ್ ಹಣವನ್ನು ಸಂಗ್ರಹಿಸಿ ಪ್ರವೇಶಿಸಿದೆ. ಬ್ಯುಸಿನೆಸ್ ಕ್ಷೇತ್ರದಲ್ಲಿ ಝಿಲಿಂಗೋ ಹೆಸರು ಹಾಗೂ ಖ್ಯಾತಿಯನ್ನು ಗಳಿಸಿದೆ.
ಎಳವೆಯಲ್ಲಿಯೇ ಸಾಧನೆಗೈದ ಝಿಲಿಂಗೋ ಸಿಇಒ ಅಂಕಿತಿ ಬೋಸ್
ದಕ್ಷಿಣ ಮತ್ತು ಆಗ್ನೇಯ ಏಷ್ಯಾದಾದ್ಯಂತ ತಮ್ಮ ಸರಕುಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಸಹಾಯ ಮಾಡಲು 2015 ರಲ್ಲಿ ಅಂಕಿತಿ ಬೋಸ್ ಮತ್ತು ಧ್ರುವ್ ಕಪೂರ್ ಅವರಿಂದ ಝಿಲಿಂಗೋ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಆ ಸಮಯದಲ್ಲಿ ಕಂಪನಿಯ ಸಹ-ಸ್ಥಾಪಕರಾದಾಗ ಬೋಸ್ ಕೇವಲ 23 ವರ್ಷ ವಯಸ್ಸಿನವರಾಗಿದ್ದರು.
2019 ರಲ್ಲಿ, ಸಿಕ್ವೊಯಾ ಮತ್ತು ಟೆಮಾಸೆಕ್ ಸೇರಿದಂತೆ ಹೂಡಿಕೆದಾರರಿಂದ ಝಿಲಿಂಗೋ $ 226 ಮಿಲಿಯನ್ ಸಂಗ್ರಹಿಸಿದಾಗ, ಕಂಪನಿಯ ಮೌಲ್ಯಮಾಪನವು $ 970 ಮಿಲಿಯನ್‌ಗೆ ಏರಿಕೆಯಾಯಿತು ಅಂತೆಯೇ ಬೋಸ್ ಅವರನ್ನು ಉದ್ಯಮಶೀಲತೆಯ ಸಂಪೂರ್ಣ ದೃಷ್ಟಿಕೋನವನ್ನೇ ಬದಲಾಯಿಸಿದ ಉದ್ಯಮಿ ಎಂದು ಕರೆಯಲಾಯಿತು. 27 ರ ಹರೆಯದ ಅಂಕಿತಿ ಬೋಸ್ ತಮ್ಮ ಸತತ ಪರಿಶ್ರಮ ಹಾಗೂ ಅವಿರತ ಶ್ರಮದಿಂದ ಕಂಪನಿಯ ಅಭಿವೃದ್ಧಿಗೆ ನೆರವಾದರು.
ಸಂಸ್ಥೆಯಲ್ಲಿನ ಕೆಲವೊಂದು ಭಿನ್ನಾಭಿಪ್ರಾಯಗಳು ಹಾಗೂ ಕಂಪನಿಯ ಖಾತೆಗಳಲ್ಲಿ ವ್ಯತ್ಯಾಸಗಳು ಕಂಡುಬಂದಿದ್ದರಿಂದ ಭಾರತೀಯ ಮೂಲದ ಸಹ-ಸಂಸ್ಥಾಪಕಿ ಮತ್ತು ಸಿಇಒ ಅಂಕಿತಿ ಬೋಸ್ ಅವರನ್ನು ಅಮಾನತುಗೊಳಿಸಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ