Russia-Ukraine Crisis: ಮುಂದಿನ 2 ವರ್ಷದಲ್ಲಿ ಚಿನ್ನದ ಬೆಲೆ 10,000 ರೂ. ಏರಿಕೆ ಸಾಧ್ಯತೆ

ಈ ಎಲ್ಲ ಏರಿಕೆಗಳ ನಡುವೆ ಮುಂದಿನ ವರ್ಷ ಚಿನ್ನಾಭರಣ ಪ್ರಿಯರಿಗೆ ದೊಡ್ಡ ಶಾಕ್ ಎದುರಾಗಲಿದೆ. ಈ ಎಲ್ಲ ಮಾರುಕಟ್ಟೆ ಬೆಳವಣಿಗೆಗಳು ಚಿನ್ನದ ಬೆಲೆ ಏರಿಕೆಗೆ ಕಾರಣವಾಗುವ ಸಾಧ್ಯತೆಗಳಿವೆ. ಅಂದರೆ ಅಂದಾಜು 10 ಸಾವಿರ ರೂ.ಗಳಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಬ್ಯುಸಿನೆಸ್ ಟುಡೆ ವರದಿ ಮಾಡಿದೆ.

ಚಿನ್ನ

ಚಿನ್ನ

  • Share this:
ದೂರದಲ್ಲಿ ರಷ್ಯಾ ಮತ್ತು ಉಕ್ರೇನ್ (Russia Ukraine War) ನಡುವೆ ಯುದ್ಧ ನಡೆಯುತ್ತಿದ್ರೆ, ಇತ್ತ ಭಾರತದ ಷೇರು ಮಾರುಕಟ್ಟೆ (Shares Market) ತಲ್ಲಣಗೊಂಡಿದೆ.ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸುತ್ತಿದ್ದಂತೆ ಷೇರು ಮಾರುಕಟ್ಟೆ ಕುಸಿತ ಕಾಣಲಾರಂಭಿಸಿತು. ಈ ನಡುವೆ ಕಚ್ಛಾ ತೈಲದ (Crude Oil) ಬೆಲೆಯೂ ಸಹ ದಾಖಲೆ ಮಟ್ಟದಲ್ಲಿ ಏರಿಕೆ (Price Hike) ಆಗುತ್ತಿದೆ. ಇತ್ತ ಉಕ್ರೇನ್ ಉತ್ಪನ್ನಗಳ ಪೂರೈಕೆ ಸ್ಥಗಿತಗೊಳ್ಳುತ್ತಿದ್ದಂತೆ ಜಾಗತೀಕ ಮಟ್ಟದಲ್ಲಿ ಬೇಡಿಕೆ (Demand) ಹೆಚ್ಚಾಗಿ ಬೆಲೆ ಏರಿಕೆಯಾಗುತ್ತಿದೆ. ಸೆನ್ಸೆಕ್ಸ್ (Sensex) ಮತ್ತು ನಿಫ್ಟಿ (Nifty) ಎರಡೂ ಮೇ 2020 ರಿಂದ ಕೋವಿಡ್ ಸಾಂಕ್ರಾಮಿಕ  (COVID Pandemic) ರೋಗವು ಡಿ-ಸ್ಟ್ರೀಟ್ ಅನ್ನು ಬೆಚ್ಚಿಬೀಳಿಸಿದ ನಂತರ ಅತಿದೊಡ್ಡ ಕುಸಿತಕ್ಕೆ ಗುರುವಾರ ಸಾಕ್ಷಿಯಾಗಿತ್ತು.

ಈ ಎಲ್ಲ ಏರಿಕೆಗಳ ನಡುವೆ ಮುಂದಿನ ವರ್ಷ ಚಿನ್ನಾಭರಣ ಪ್ರಿಯರಿಗೆ ದೊಡ್ಡ ಶಾಕ್ ಎದುರಾಗಲಿದೆ. ಈ ಎಲ್ಲ ಮಾರುಕಟ್ಟೆ ಬೆಳವಣಿಗೆಗಳು ಚಿನ್ನದ ಬೆಲೆ ಏರಿಕೆಗೆ ಕಾರಣವಾಗುವ ಸಾಧ್ಯತೆಗಳಿವೆ. ಅಂದರೆ ಅಂದಾಜು 10 ಸಾವಿರ ರೂ.ಗಳಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಬ್ಯುಸಿನೆಸ್ ಟುಡೆ ವರದಿ ಮಾಡಿದೆ.

ಚಿನ್ನದ ಬೆಲೆಗಳು ಹೆಚ್ಚಾಗುವ ಸಾಧ್ಯತೆ

ಜಾಗತಿಕವಾಗಿ ಅರ್ಥ  ವ್ಯವಸ್ಥೆ ಕುಸಿತ, ರಷ್ಯಾ ಮತ್ತು ಉಕ್ರೇನ್ ರಾಜಕೀಯ ಬೆಳವಣಿಗೆಗಳು ಮತ್ತು ಪರಸ್ಪರ ವಸ್ತುಗಳ ಆಮದು ಮತ್ತು ರಫ್ತು ಮೇಲಿನ ನಿರ್ಬಂಧ ಈ ಎಲ್ಲ ಅಂಶಗಳು ಚಿನ್ನದ ಬೆಲೆ ಏರಿಕೆಗೆ ಕಾರಣಗಳಾಗಿವೆ.

ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ (ಸರಕುಗಳು) ತಪನ್ ಪಟೇಲ್, ಗುರುವಾರ ಎಂಸಿಎಕ್ಸ್ ಗೋಲ್ಡ್ ಏಪ್ರಿಲ್ ಫ್ಯೂಚರ್ಸ್‌ ನೊಂದಿಗೆ ಚಿನ್ನದ ಬೆಲೆಗಳು ಶೇಕಡಾ 2.25 ರಷ್ಟು ಏರಿಕೆಯಾಗಿದ್ದು, 10 ಗ್ರಾಂಗೆ 51,500 ರೂ. ಆಗಿದೆ.

ಇದನ್ನೂ ಓದಿ:  Edible Oil Prices: ಉಕ್ರೇನ್ ಬಿಕ್ಕಟ್ಟು, ಮತ್ತೆ ಏರಿಕೆಯಾಗಲಿದೆ ಅಡುಗೆ ತೈಲ ಬೆಲೆ!

ರಾಕೆಟ್ ವೇಗದಲ್ಲಿ ಚಿನ್ನದ ಬೆಲೆ ಏರಿಕೆ

ಬಿಸಿನೆಸ್ ಟುಡೇ ವರದಿಯ ಪ್ರಕಾರ ಚಿನ್ನದ ಬೆಲೆ ಈ ವರ್ಷ 55,000 ಮತ್ತು ಮುಂದಿನ ವರ್ಷದಲ್ಲಿ 62,000 ಕ್ಕೆ ತಲುಪುವ ನಿರೀಕ್ಷೆಯಿದೆ ಎಂದು ತಜ್ಞರು ಹೇಳಿದ್ದಾರೆ. ಈ ವರ್ಷ 54,000 ರಿಂದ 55,000 ಮತ್ತು ಮುಂದಿನ ವರ್ಷದಲ್ಲಿ 60,000 ರೂ.ನಿಂದ 62,000 ರೂ.ಗಳಂತೆ ರಾಕೆಟ್ ವೇಗದಲ್ಲಿ ಚಿನ್ನದ ಏರಿಕೆ ಆಗಲಿದೆ ಎಂದು ನಿರ್ಮಲ್ ಬ್ಯಾಂಗ್‌ ನ ಸರಕುಗಳ ಸಂಶೋಧನೆಯ ಮುಖ್ಯಸ್ಥ ಕುನಾಲ್ ಶಾ ಹೇಳಿದ್ದಾರೆ.

ರೆಡ್  ಲೈನ್  ನಲ್ಲಿ ಶೇ.90ಕ್ಕಿಂತ ಹೆಚ್ಚು ಸ್ಟಾಕ್ ಗಳು

ಜಾಗತಿಕ ಇಕ್ವಿಟಿ ಮಾರುಕಟ್ಟೆಯಲ್ಲಿ ಭಾರೀ ಮಾರಾಟದ ಒತ್ತಡದ ನಡುವೆ, ಬಿಎಸ್‌ಇ ಸೆನ್ಸೆಕ್ಸ್ (BSE Sensex) ‌ನಲ್ಲಿ ವಹಿವಾಟು ನಡೆಸಿದ ಶೇಕಡಾ 90 ಕ್ಕಿಂತ ಹೆಚ್ಚು ಷೇರುಗಳು ಗುರುವಾರ ಕೆಂಪು ಬಣ್ಣದಲ್ಲಿ (Red Line) ಕ್ಲೋಸ್ ಆಗಿವೆ. ಬಿಎಸ್‌ಇ ಸೆನ್ಸೆಕ್ಸ್‌ ನಲ್ಲಿ ಇಂದು ಒಟ್ಟು 3,478 ಷೇರುಗಳು ವಹಿವಾಟಿಗೆ ಒಳಪಟ್ಟಿವೆ. ಸೆನ್ಸೆಕ್ಸ್ ಶೇಕಡಾ 4.72 ಅಥವಾ 2,702 ಪಾಯಿಂಟ್‌ಗಳ ಕುಸಿತದಿಂದಾಗಿ ಒಟ್ಟು 3,161 ಷೇರುಗಳು ಕುಸಿದವು.

ಸೆನ್ಸೆಕ್ಸ್ ಪ್ಯಾಕ್‌ ನಲ್ಲಿನ ಎಲ್ಲಾ 30 ಘಟಕಗಳು ಕೆಂಪು ಬಣ್ಣದಲ್ಲಿ ಕೊನೆಗೊಂಡಿವೆ. ಬಿಎಸ್‌ಇ ರಿಯಾಲ್ಟಿ ಸೂಚ್ಯಂಕವು ವಲಯಗಳಲ್ಲಿ ಶೇ.7.27 ರಷ್ಟು ದೊಡ್ಡ ಕುಸಿತವನ್ನು ಕಂಡಿದೆ. ಬಿಎಸ್‌ಇ ಆಟೋ, ಟೆಲಿಕಾಂ, ಬ್ಯಾಂಕೆಕ್ಸ್, ಆಯಿಲ್ & ಗ್ಯಾಸ್ ಮತ್ತು ಪವರ್ ಶೇ. ಇತರ ವಲಯದ ಸೂಚ್ಯಂಕಗಳು ಶೇಕಡಾ 3 ಮತ್ತು 5 ರ ನಡುವೆ ಸ್ಥಗಿತಗೊಂಡಿವೆ.

ಇದನ್ನೂ ಓದಿ:  Russia Ukraine Crisis: ಯುದ್ಧದ ಭೀತಿ; ರಷ್ಯಾದ ಶ್ರೀಮಂತರು ಕಳೆದುಕೊಂಡ ಹಣ ಕೇಳಿದ್ರೆ ಶಾಕ್ ಆಗ್ತೀರಿ!

ಶೇ.5ರಷ್ಟು ಕುಸಿತ

ಇಂಡಸ್‌ಇಂಡ್ ಬ್ಯಾಂಕ್, ಮಹೀಂದ್ರಾ ಮತ್ತು ಮಹೀಂದ್ರಾ, ಬಜಾಜ್ ಫೈನಾನ್ಸ್, ಆಕ್ಸಿಸ್ ಬ್ಯಾಂಕ್ ಮತ್ತು ಟೆಕ್ ಮಹೀಂದ್ರಾ ಟಾಪ್ ಹಿಂದುಳಿದಿವೆ. ಟಾಟಾ ಸ್ಟೀಲ್, ಮಾರುತಿ ಸುಜುಕಿ, ಎಚ್‌ಡಿಎಫ್‌ಸಿ ಬ್ಯಾಂಕ್, ಬಜಾಜ್ ಫಿನ್‌ಸರ್ವ್, ಅಲ್ಟ್ರಾಟೆಕ್ ಸಿಮೆಂಟ್, ವಿಪ್ರೋ, ಏಷ್ಯನ್ ಪೇಂಟ್ಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಐಸಿಐಸಿಐ ಬ್ಯಾಂಕ್ ಕೂಡ ಶೇ.5ರಷ್ಟು ಕುಸಿದಿವೆ.
Published by:Mahmadrafik K
First published: