• Home
 • »
 • News
 • »
 • business
 • »
 • Job Loss: 2,50,000 ಭಾರತೀಯರ ಉದ್ಯೋಗ ಕಸಿದ ರಷ್ಯಾ ಉಕ್ರೇನ್ ಯುದ್ಧ; ಮಾರಣಾಂತಿಕ ಹೊಡೆತ ತಿಂದ ಉದ್ಯಮ ಇದು

Job Loss: 2,50,000 ಭಾರತೀಯರ ಉದ್ಯೋಗ ಕಸಿದ ರಷ್ಯಾ ಉಕ್ರೇನ್ ಯುದ್ಧ; ಮಾರಣಾಂತಿಕ ಹೊಡೆತ ತಿಂದ ಉದ್ಯಮ ಇದು

ವ್ಲಾಡಿಮಿರ್ ಪುಟಿನ್ (ಸಾಂದರ್ಭಿಕ ಚಿತ್ರ)

ವ್ಲಾಡಿಮಿರ್ ಪುಟಿನ್ (ಸಾಂದರ್ಭಿಕ ಚಿತ್ರ)

Russia Ukraine War Effect: ಭಾರತವು ಪ್ರಪಂಚದ 90% ವಜ್ರಗಳನ್ನು ಕತ್ತರಿಸಿ ಹೊಳಪು ಮಾಡುತ್ತದೆ.  ಪಾಶ್ಚಿಮಾತ್ಯ ದೇಶಗಳ ನಿರ್ಬಂಧಗಳು ಮಾಸ್ಕೋವನ್ನು ತ್ವರಿತವಾಗಿ ಗಡಿಯಾಚೆಗಿನ ಪಾವತಿ ವ್ಯವಸ್ಥೆಯಿಂದ ಹೊರಹಾಕಿದಾಗಿನಿಂದ ರಷ್ಯಾದ ಸರಬರಾಜುಗಳು ಕುಗ್ಗಿವೆ.

 • Share this:

  ರಷ್ಯಾ ಉಕ್ರೇನ್ ಯುದ್ಧದ ದುಷ್ಪರಿಣಾಮಗಳನ್ನು ಭಾರತೀಯರಾದ ನಾವೂ ಅನುಭವಿಸುತ್ತಲೇ ಇದ್ದೇವೆ. ರಷ್ಯಾ ಉಕ್ರೇನ್ ಯುದ್ಧದಿಂದಾಗಿ (Russia Ukraine Crisis) ಬರೋಬ್ಬರಿ 2,50,000 ಭಾರತೀಯರ ಉದ್ಯೋಗಕ್ಕೆ ಕುತ್ತು (Unemployment Crisis) ಬಂದಿದೆ. ರಷ್ಯಾದ ವಜ್ರ ಗಣಿಗಾರರಿಂದ ಸರಬರಾಜುಗಳಾದ ವಜ್ರ ಕತ್ತರಿಸುವ ಮತ್ತು ಪಾಲಿಶ್ ಮಾಡುವ ಉದ್ಯಮಕ್ಕೆ ರಷ್ಯಾ ಉಕ್ರೇನ್ ಯುದ್ಧದಿಂದ ಭಾರೀ ಹೊಡೆತ ಬಿದ್ದಿದ್ದು 250,000 ಕ್ಕೂ ಹೆಚ್ಚು ವಜ್ರವನ್ನು ನುಣುಪು ಮಾಡುವ ಕೆಲಸಗಾರರನ್ನು (Indian Diamond Polishers) ರಜೆಯ ಮೇಲೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ. ಈಮೂಲಕ ಅಲ್ಲೆಲ್ಲೋ ನಡೆಯುತ್ತಿರುವ ಯುದ್ಧ ಭಾರತೀಯರ ಉದ್ಯೋಗವನ್ನೂ ಕಸಿದಿರುವುದು ಆತಂಕಕ್ಕೆ ಕಾರಣವಾಗಿದೆ.


  ಅಮೆರಿಕಾ ಮತ್ತು ಯುರೋಪ್​ಗಳಲ್ಲಿ ಭಾರತದಲ್ಲಿ ಪಾಲಿಶ್ ಮಾಡಿದ ರಷ್ಯಾದ ವಜ್ರಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದ್ದರಿಂದ ಕಂಪನಿಗಳು ನಗದು ಹರಿವು ಮತ್ತು ಪೂರೈಕೆಯಲ್ಲಿ ಕಡಿತ ಉಂಟಾಗಿದೆ ಎಂದು ಗುಜರಾತ್ ಡೈಮಂಡ್ ವರ್ಕರ್ಸ್ ಯೂನಿಯನ್ ಅಧ್ಯಕ್ಷ ರಮೇಶ್ ಜಿಲೇರಿಯಾ ಬೇಸರ ವ್ಯಕ್ತಪಡಿಸಿದ್ದಾರೆ. ರಷ್ಯಾ ಮೇಲೆ ಹೇರಲಾದ ನಿರ್ಬಂಧಗಳು ಭಾರತದ ವಜ್ರ ರಫ್ತುದಾರರನ್ನು ರಷ್ಯಾದಿಂದ ಒರಟಾದ ಅಥವಾ ಪಾಲಿಶ್ ಮಾಡದ ಮೂಲ ಸ್ವರೂಪದ ವಜ್ರಗಳನ್ನು ಆಮದು ಮಾಡಿಕೊಳ್ಳುವುದನ್ನು ನಿರ್ಬಂಧ ಹೇರಿದೆ.


  ವಿವಿಧ ವಸ್ತುಗಳ ಪೂರೈಕೆ ಸರಪಳಿ ಅನಿಶ್ಚಿತತೆಗೆ
  ಭಾರತವು ಪ್ರಪಂಚದ 90% ವಜ್ರಗಳನ್ನು ಕತ್ತರಿಸಿ ಹೊಳಪು ಮಾಡುತ್ತದೆ.  ಪಾಶ್ಚಿಮಾತ್ಯ ದೇಶಗಳ ನಿರ್ಬಂಧಗಳು ಮಾಸ್ಕೋವನ್ನು ತ್ವರಿತವಾಗಿ ಗಡಿಯಾಚೆಗಿನ ಪಾವತಿ ವ್ಯವಸ್ಥೆಯಿಂದ ಹೊರಹಾಕಿದಾಗಿನಿಂದ ರಷ್ಯಾದ ಸರಬರಾಜುಗಳು ಕುಗ್ಗಿವೆ ಎಂದು ವಜ್ರದ ವ್ಯಾಪಾರಿಗಳು ಹೇಳುತ್ತಾರೆ. ಹೀಗಾಗಿ ವಿವಿಧ ವಸ್ತುಗಳ ಪೂರೈಕೆ ಸರಪಳಿಗಳನ್ನು ಅನಿಶ್ಚಿತತೆಗೆ ದೂಡಿದೆ ಎಂದು ಸುದ್ದಿ ಸಂಸ್ಥೆ AFP ವರದಿ ಮಾಡಿದೆ.


  ಇದನ್ನೂ ಓದಿ: Explained: ಅಮೆರಿಕಾದಲ್ಲಿ ಓದಲು ಇರುವ ಅವಕಾಶಗಳೇನು? ವಿದ್ಯಾರ್ಥಿಗಳು ಅಮೆರಿಕಾವನ್ನೇ ಬಯಸುವುದು ಏಕೆ?


  ಅಖಿಲ ಭಾರತ ಜೆಮ್ ಮತ್ತು ಜ್ಯುವೆಲ್ಲರಿ ಡೊಮೆಸ್ಟಿಕ್ ಕೌನ್ಸಿಲ್ ನಿರ್ದೇಶಕ ಶ್ರೀಪಾಲ್ ಧೋಲಾಕಿಯಾ ಮಾತನಾಡಿ, ರಷ್ಯಾದ ಸರಬರಾಜುಗಳು ಆಮದು ಮಾಡಿಕೊಳ್ಳಲು ಇನ್ನೂ ಅಡ್ಡಿಪಡಿಸುತ್ತಿವೆ. ಜೊತೆಗೆ ಹಣ ಪಾವತಿಗಳು ಹೆಚ್ಚಾಗಿ ಸ್ಥಗಿತಗೊಂಡಿವೆ ಎಂದು ಖೇದ ವ್ಯಕ್ತಪಡಿಸಿದ್ದಾರೆ.


  ಭಾರತದ UPI ವ್ಯವಸ್ಥೆಯ ಮೂಲಕ ಭವಿಷ್ಯದ ಪಾವತಿ ಮಾಡಿ
  ಭಾರತದ UPI ವ್ಯವಸ್ಥೆಯ ಮೂಲಕ ಭವಿಷ್ಯದ ಪಾವತಿಗಳನ್ನು ಮಾಡಲು ಭಾರತ ಸರ್ಕಾರವನ್ನು ಒತ್ತಾಯಿಸಿದ ಧೋಲಾಕಿಯಾ, ರಷ್ಯಾದಿಂದ ಆಮದುಗಳು ಪ್ರಸ್ತುತ ಸಾಕಷ್ಟಿಲ್ಲ.  ಭಾರತೀಯ ವ್ಯಾಪಾರಿಗಳಿಗೆ ನೇರವಾಗಿ ರೂಪಾಯಿ ಅಥವಾ ರೂಬಲ್ಸ್‌ಗಳಲ್ಲಿ ಪಾವತಿಗಳನ್ನು ಮಾಡುವಾಗ ಹೆಚ್ಚಿನ ಬ್ಯಾಂಕ್ ಶುಲ್ಕಗಳು ಸಮಸ್ಯೆ ಉಂಟುಮಾಡಿವೆ ಎಂದು ತಿಳಿಸಿದ್ದಾರೆ.


  ರಷ್ಯಾ ಸೈನಿಕರನ್ನು ತಡೆಯಲು ಡ್ಯಾಂ ಓಪನ್ ಮಾಡಿದ ಉಕ್ರೇನ್ ಸೈನಿಕರು!
  ರಷ್ಯಾ ಉಕ್ರೇನ್ ಯುದ್ಧ (Russia vs Ukraine War) ಯಾವಾಗ ನಿಲ್ಲುವುದೋ ಎಂದು ಇಡೀ ಜಗತ್ತೇ ಕಾಯುತ್ತಿದೆ. ಆದರೆ ರಷ್ಯಾ ಕಾಲು ಕೆದರಿ ಯುದ್ಧ ನಿಲ್ಲಿಸುವ ಲಕ್ಷಣ ತೋರಿಸುತ್ತಿಲ್ಲ. ಉಕ್ರೇನ್ ಸಹ ಪಟ್ಟುಬಿಡದೇ ಈಗಲೂ ತಕ್ಕ ಪ್ರತಿರೋಧ ನೀಡುತ್ತಿದೆ. ಅಲ್ಲದೇ ಸದ್ಯದ ಪರಿಸ್ಥಿತಿಯಲ್ಲಿ ಉಕ್ರೇನ್ ಮುನ್ನಡೆ ಗಳಿಸುತ್ತಿದೆ. ರಷ್ಯಾ ಪಡೆಗಳನ್ನು (Russian Military) ಎದುರಿಸಲು, ಓಡಿಸಲು ಉಕ್ರೇನ್ ಉದ್ದೇಶಪೂರ್ವಕವಾಗಿ ಪ್ರವಾಹವನ್ನೇ ಸೃಷ್ಟಿಸಿದೆ. ಬೃಹತ್ ಆಣೆಕಟ್ಟನ್ನೇ ತೆರೆದು (Open Dam to Create Flood) ಅಗಾಧ ಪ್ರಮಾಣದ ನೀರನ್ನು ಹೊರಬಿಡಲಾಗಿದೆ. ಹೌದು, ಇದು ನಂಬಲೂ ಕಷ್ಟ. ಆದರೆ ಯುದ್ಧ ಅಂತ ಬಂದರೆ ಏನು ಬೇಕಾದರೂ ಸಾಧ್ಯವಾಗಬಹುದು ಅಲ್ಲವೇ? ಇಲ್ಲಿ ಆಗಿದ್ದೂ ಅದೇ.


  ಇದನ್ನೂ ಓದಿ: Supreme Court on GST: ಕೇಂದ್ರ ಮತ್ತು ರಾಜ್ಯ ಇಬ್ಬರಿಗೂ ಜಿಎಸ್‌ಟಿ ಕಾನೂನು ರೂಪಿಸುವ ಅಧಿಕಾರವಿದೆ: ಸುಪ್ರೀಂ ಕೋರ್ಟ್


  ಉಕ್ರೇನ್​ನ ಕೀವ್‌ನ ಉತ್ತರದ ಒಂದು ಸಣ್ಣ ಹಳ್ಳಿಯಲ್ಲಿ ಜನರೇ ಪ್ರವಾಹವನ್ನು ಸೃಷ್ಟಿಸಿದ್ದಾರೆ. ಈ ಪ್ರವಾಹದಿಂದ ನೆಲಮಾಳಿಗೆಗಳು ಮತ್ತು ಹೊಲಗಳು ಮುಳುಗಿಹೋಗಿವೆ. ಆದರೆ ಈ ಪ್ರವಾಹಕ್ಕೆ ಸಿಲುಕಿ ಉಕ್ರೇನ್ ರಾಜಧಾನಿಯ ಮೇಲೆ ದಾಳಿ ಮಾಡಲಿದ್ದ ರಷ್ಯಾದ ಸೈನಿಕರು ಅಲ್ಲೇ ನಿಂತುಬಿಟ್ಟಿದ್ದಾರೆ. ಪ್ರವಾಹಕ್ಕೆ ಸಿಲುಕಿ ತತ್ತರಿಸಿ ಹೋಗಿದ್ದಾರೆ ಎನ್ನಲಾಗಿದೆ.

  Published by:guruganesh bhat
  First published: