Roshni Nadar: ಇವರೇ ಭಾರತದ ಅತ್ಯಂತ ಶ್ರೀಮಂತ ಮಹಿಳೆ ರೋಶನಿ ನಾಡರ್; ಪಟ್ಟಿಯಲ್ಲಿ ಇನ್ಯಾರ‍್ಯಾರಿದ್ದಾರೆ?

ಮಹಿಳೆಯರು ಕೂಡ ನಾವು ಯಾರಿಗೂ ಕಡಿಮೆ ಇಲ್ಲ ಎಂದು ತಮ್ಮ ಆರ್ಥಿಕತೆಯನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸಿಕೊಳ್ಳುತ್ತಾ ದೇಶದ ಆರ್ಥಿಕತೆಗೆ ಕೈ ಜೋಡಿಸುತ್ತಿರುವುದು ನಿಜಕ್ಕೂ ಸಂತಸದ ಸುದ್ದಿ. ಇದನ್ನು ಏಕೆ ಹೇಳುತ್ತಿದ್ದೇವೆ ಎಂದರೆ ಇತ್ತಿಚೀಗೆ ಕೋಟಕ್‌ ಖಾಸಗಿ ಬ್ಯಾಂಕಿಂಗ್‌ ಹುರುನ್‌ ಪಟ್ಟಿಯು ಭಾರತದ ಅತ್ಯಂತ ಶ್ರೀಮಂತ ಮಹಿಳೆಯರು ಎಂದು 100 ಮಹಿಳೆಯರ ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ. ಅದರ ಬಗ್ಗೆ ನಾವಿಂದು ಈ ಲೇಖನದಲ್ಲಿ ನೋಡೋಣ ಬನ್ನಿ.

ರೋಶನಿ ನಾಡರ್

ರೋಶನಿ ನಾಡರ್

  • Share this:
ಮುಂಬೈ: ಮಹಿಳೆಯರು (Women) ಅಂದರೆ ಕೇವಲ ಅಡುಗೆ ಮನೆಗೆ ಮಾತ್ರ ಎಂದು ತಿಳಿದವರಿಗೆ ಈ ವರದಿಯು ಸ್ವಲ್ಪ ಅಚ್ಚರಿಯನ್ನು ತರಬಹುದು. ಏಕೆಂದರೆ ಮಹಿಳೆಯರು ಕೂಡ ನಾವು ಯಾರಿಗೂ ಕಡಿಮೆ ಇಲ್ಲ ಎಂದು ತಮ್ಮ ಆರ್ಥಿಕತೆಯನ್ನು (Economy) ವರ್ಷದಿಂದ ವರ್ಷಕ್ಕೆ ಹೆಚ್ಚಿಸಿಕೊಳ್ಳುತ್ತಾ ದೇಶದ ಆರ್ಥಿಕತೆಗೆ ಕೈ ಜೋಡಿಸುತ್ತಿರುವುದು ನಿಜಕ್ಕೂ ಸಂತಸದ ಸುದ್ದಿ. ಇದನ್ನು ಏಕೆ ಹೇಳುತ್ತಿದ್ದೇವೆ ಎಂದರೆ ಇತ್ತಿಚೀಗೆ ಕೋಟಕ್‌ ಖಾಸಗಿ ಬ್ಯಾಂಕಿಂಗ್‌ (Kotak Private Banking) ಹುರುನ್‌ ಪಟ್ಟಿಯು ಭಾರತದ ಅತ್ಯಂತ ಶ್ರೀಮಂತ ಮಹಿಳೆಯರು (Rich woman) ಎಂದು 100 ಮಹಿಳೆಯರ ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ. ಅದರ ಬಗ್ಗೆ ನಾವಿಂದು ಈ ಲೇಖನದಲ್ಲಿ ನೋಡೋಣ ಬನ್ನಿ.

ಭಾರತದ ಅತ್ಯಂತ ಶ್ರೀಮಂತ ಮಹಿಳೆ
ಇದೇ 2021 ರಲ್ಲಿ ಎಚ್‌ಸಿಎಲ್ ಟೆಕ್ನಾಲಜೀಸ್‌ನ ಅಧ್ಯಕ್ಷೆ ರೋಶನಿ ನಾಡರ್ ಮಲ್ಹೋತ್ರಾ ಅವರು ಭಾರತದ ಅತ್ಯಂತ ಶ್ರೀಮಂತ ಮಹಿಳೆಯಾಗಿ ಹೊರ ಹೊಮ್ಮಿದ್ದಾರೆ. ಇವರು 2021 ರಲ್ಲಿ ತಮ್ಮ 84,330 ಕೋಟಿ ರೂ. ಗೆ ವಾರ್ಷಿಕ ನಿವ್ವಳ ಮೌಲ್ಯವನ್ನು 54% ರಷ್ಟು ಹೆಚ್ಚಿಸಿಕೊಂಡು ಕೋಟಿ ಒಡತಿಯಾಗಿದ್ದಾರೆ. ಇದರ ಜೊತೆಗೆ ಭಾರತದ ಅತ್ಯಂತ ಶ್ರೀಮಂತ ಮಹಿಳೆಯಾಗಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಬುಧವಾರ ಪ್ರಕಟವಾದ ಕೋಟಕ್ ಖಾಸಗಿ ಬ್ಯಾಂಕಿಂಗ್-ಹುರುನ್ ಪಟ್ಟಿಯ ಪ್ರಕಾರ, ಸುಮಾರು ಒಂದು ದಶಕದ ಹಿಂದೆ ಸೌಂದರ್ಯ ಕೇಂದ್ರಿತ ಬ್ರ್ಯಾಂಡ್ ನೈಕಾ ಆರಂಭಿಸಲು ತನ್ನ ಬ್ಯಾಂಕಿಂಗ್ ವೃತ್ತಿಯನ್ನು ತ್ಯಜಿಸಿದ ಫಾಲ್ಗುಣಿ ನಾಯರ್, 57,520 ಕೋಟಿ ರೂ.ಗಳ ನಿವ್ವಳ ಮೌಲ್ಯದೊಂದಿಗೆ ಶ್ರೀಮಂತ ಸೆಲ್ಫ್‌-ಮೇಡ್‌ ಮಹಿಳೆಯಾಗಿ ಹೊರಹೊಮ್ಮಿದ್ದಾರೆ.

ಎರಡನೇ ಶ್ರೀಮಂತ ಮಹಿಳೆ
59 ವರ್ಷದ ನಾಯರ್, ಈ ವರ್ಷದಲ್ಲಿ ತನ್ನ ಸಂಪತ್ತಿನಲ್ಲಿ 963 % ರಷ್ಟು ಹೆಚ್ಚಳವನ್ನು ಕಂಡಿದ್ದಾರೆ ಮತ್ತು ಒಟ್ಟಾರೆಯಾಗಿ ಎರಡನೇ ಶ್ರೀಮಂತ ಮಹಿಳೆಯಾಗಿದ್ದಾರೆ. ವರದಿಯ ಪ್ರಕಾರ ಹೆಚ್‌ಸಿಎಲ್ ಟೆಕ್ನಾಲಜೀಸ್ ಸಂಸ್ಥಾಪಕ ಶಿವ ನಾಡಾರ್ ಅವರ ಪುತ್ರಿ 40 ವರ್ಷದ ಮಲ್ಹೋತ್ರಾ ಅವರನ್ನು ಹಿಂದಿಕ್ಕಿದ್ದಾರೆ.

ಇದನ್ನೂ ಓದಿ: Food Business: ಫಾಸ್ಟ್ ಫುಡ್ ಸೆಂಟರ್ ಇಟ್ಕೊಂಡಿದ್ರೆ ಇದನೆಲ್ಲಾ ಫಾಲೋ ಮಾಡಿ! ಇಲ್ದಿದ್ರೆ 5 ಲಕ್ಷ ದಂಡ, 6 ತಿಂಗಳು ಜೈಲು

ಮೂರನೇ ಶ್ರೀಮಂತ ಮಹಿಳೆ 
ಬಯೋಕಾನ್‌ನ ಕಿರಣ್ ಮಜುಂದಾರ್-ಶಾ ಅವರ ಸಂಪತ್ತು ಈ ವರ್ಷ 21 % ರಷ್ಟು ಕುಸಿತ ಕಂಡಿದೆ ಮತ್ತು 29,030 ಕೋಟಿ ರೂಪಾಯಿ ಸಂಪತ್ತನ್ನು ಹೊಂದಿರುವ ದೇಶದ ಮೂರನೇ ಶ್ರೀಮಂತ ಮಹಿಳೆಯಾಗಿ ಇವರು ಸ್ಥಾನವನ್ನು ಪಡೆದಿದ್ದಾರೆ ಎಂದು ವರದಿಯಲ್ಲಿ ಪ್ರಕಟವಾಗಿದೆ.

ಕೋಟಕ್ ಖಾಸಗಿ ಬ್ಯಾಂಕಿಂಗ್-ಹುರುನ್ ಪಟ್ಟಿಯಲ್ಲಿ100 ಮಹಿಳೆಯರು ಆಯ್ಕೆ
ಕೋಟಕ್ ಖಾಸಗಿ ಬ್ಯಾಂಕಿಂಗ್-ಹುರುನ್ ಪಟ್ಟಿಯ ಪ್ರಕಾರ - ಈ ಪಟ್ಟಿಯಲ್ಲಿ 100 ಮಹಿಳೆಯರು ಇದ್ದು ಅವರೆಲ್ಲರೂ ಭಾರತೀಯ ಮಹಿಳೆಯರು ಮಾತ್ರ ಆಗಿದ್ದಾರೆ. ಈ ಪಟ್ಟಿಯಲ್ಲಿ ಭಾರತೀಯ ಮಹಿಳೆಯರಿಗೆ ಮಾತ್ರ ಅವಕಾಶ ಇರುವುದು ವಿಶೇಷ. ಇದರಲ್ಲಿ ಭಾರತದಲ್ಲಿ ಜನಿಸಿದವರು ಅಥವಾ ಇಲ್ಲಿಯೇ ಬೆಳೆದವರ ಹೆಸರನ್ನು ಮಾತ್ರ ಪಟ್ಟಿಗೆ ಆಯ್ಕೆ ಮಾಡಲಾಗುವುದು ಎಂದು ವ್ಯಾಖ್ಯಾನಿಸಲಾಗಿದೆ ಮತ್ತು ಈ ಪಟ್ಟಿಗೆ ಸೇರುವ ಮಹಿಳೆಯರು ತಮ್ಮ ಸ್ವಂತ ಪರಿಶ್ರಮದಿಂದ ವ್ಯವಹಾರದಲ್ಲಿ ಉತ್ತಮ ಪ್ರಗತಿ ಹೊಂದಿದವರಾಗಿರಬೇಕು. ಅಂತಹವರನ್ನು ಮಾತ್ರ ಈ ಪಟ್ಟಿಗೆ ಪರಿಗಣಿಸಲಾಗುತ್ತದೆ.

ಇದನ್ನೂ ಓದಿ:  Savitri Jindal: ಭಾರತದ ಅತ್ಯಂತ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್: ಇವರ ಬಗ್ಗೆ ನಿಮಗೆಷ್ಟು ಗೊತ್ತು?

ಒಟ್ಟು, ಈ 100 ಮಹಿಳೆಯರ ವಾರ್ಷಿಕ ಸಂಪತ್ತು 2020 ರಲ್ಲಿ 2.72 ಲಕ್ಷ ಕೋಟಿ ಮಾತ್ರ ಇತ್ತು. ಆದರೆ 2021 ರಲ್ಲಿ 4.16 ಲಕ್ಷ ಕೋಟಿಗೆ ಏರಿ ಕೇವಲ ಒಂದು ವರ್ಷದಲ್ಲಿಯೇ 53 % ರಷ್ಟು ಹೆಚ್ಚಾಗಿರುವುದು ಈ ಮಹಿಳೆಯರ ಪರಿಶ್ರಮಕ್ಕೆ ತಕ್ಕ ಬೆಲೆ ಆಗಿದೆ. ಈ ಟಾಪ್‌ ಮೋಸ್ಟ್‌ 100 ಮಹಿಳೆಯರು ಈಗ ಸದ್ಯಕ್ಕೆ ಭಾರತದ GDP ಯ 2% ರಷ್ಟು ಕೊಡುಗೆ ನೀಡಿದ್ದಾರೆ. ಟಾಪ್ 100 ರಲ್ಲಿ ಮಾಡುವ ಕಟ್-ಆಫ್ ಈ ಹಿಂದೆ 100 ಕೋಟಿ ರೂ.ನಿಂದ 300 ಕೋಟಿ ರೂ.ಗೆ ಹೆಚ್ಚಾಗಿದೆ ಮತ್ತು ಟಾಪ್ 10 ಕಟ್-ಆಫ್ ರೂ. 6,620 ಕೋಟಿಯಲ್ಲಿದೆ, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 10 % ಹೆಚ್ಚಾಗಿದೆ ಎಂದು ಹೇಳಬಹುದು.

ದೇಶದ ಆರ್ಥಿಕತೆಗೆ ಮಹಿಳೆಯರ ಕೊಡುಗೆ 
ಅಂತಿಮವಾಗಿ ಹಿಂದಿನ ಕಾಲದಲ್ಲಿ ಮಹಿಳೆಯರು ಕೇವಲ ಅಡುಗೆ ಮನೆ, ಮಕ್ಕಳು ಎಂದು ಸೀಮಿತವಾಗಿದ್ದವರು ಇಂದು ದೇಶದ ಆರ್ಥಿಕತೆಗೆ ತಮ್ಮ ಕೊಡುಗೆಯನ್ನು ನೀಡುತ್ತಿದ್ದಾರೆ ಎಂದರೆ ಇದು ನಿಜವಾದ ಸಾಧನೆ ಎಂದು ಹೇಳಬಹುದು. ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಯಾವಾಗಲೂ ಕೇಳಿ ಬರುತ್ತಿದ್ದ ಧ್ವನಿ ಇತ್ತಿಚೀಗೆ ಅತ್ಯಂತ ಶ್ರೀಮಂತ ಮಹಿಳೆಯರು ಎಂದು ಕೇಳಿ ಬರುತ್ತಿರುವುದು ಮಹಿಳೆಯರ ಸಾಧನೆಗೆ ಮತ್ತೊಂದು ಮೈಲಿಗಲ್ಲು ಎಂದೇ ಹೇಳಬಹುದು.
Published by:Ashwini Prabhu
First published: