ಮೊದಲೆಲ್ಲಾ ನಮ್ಮ ರೈತರು (Farmer) ಕೇವಲ ಒಂದೆರಡು ಬೆಳೆಗಳನ್ನು ತಮ್ಮ ಗದ್ದೆಯಲ್ಲಿ (Agricultural Land) ಬೆಳೆಯುವುದನ್ನು ಮತ್ತು ವರ್ಷವಿಡೀ ಅದನ್ನು ಕಾಪಾಡಿಕೊಂಡು ನಂತರ ಉತ್ತಮ ಮಳೆಯಾಗಿ ಫಸಲು ಚೆನ್ನಾಗಿ ಬಂದು ಮಾರುಕಟ್ಟೆಯಲ್ಲಿ (Market) ಬೆಳೆಗಳಿಗೆ ಉತ್ತಮ ಬೆಲೆ ಸಿಕ್ಕರೆ ಆ ವರ್ಷ ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಂತಾಗುತ್ತಿತ್ತು. ಆದರೆ ಈಗ ಕಾಲ ತುಂಬಾನೇ ಬದಲಾಗಿದೆ ಅಂತ ಹೇಳಬಹುದು, ಏಕೆಂದರೆ ರೈತರು ವ್ಯವಸಾಯವನ್ನು (Agriculture) ತುಂಬಾನೇ ವಿಭಿನ್ನವಾದ ರೀತಿಯಲ್ಲಿ ಎಂದರೆ ಹೊಸ ಹೊಸ ಯಂತ್ರೋಪಕರಣಗಳನ್ನು (Machine) ಬಳಸುವುದರೊಂದಿಗೆ ಒಂದೆರಡಕ್ಕಿಂತಲೂ ಹೆಚ್ಚಿನ ಬೆಳೆಗಳನ್ನು ಬೆಳೆಯುವುದರೊಂದಿಗೆ ವ್ಯವಸಾಯವನ್ನು ಬೇರೆ ಒಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಬರೀ ವ್ಯವಸಾಯವಲ್ಲದೆ, ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ಮಾಡುತ್ತಾ ಮತ್ತು ತ್ಯಾಜ್ಯ ವಸ್ತುಗಳಿಂದ ಏನಾದರೊಂದು ಉಪಯೋಗವಾಗುವಂತಹ ವಸ್ತುವನ್ನು ತಯಾರಿಸಿ ಬದುಕಿಗೆ ಒಂದು ಉತ್ತಮವಾದ ದಾರಿಯನ್ನು ಕಂಡುಕೊಂಡಿದ್ದಾರೆ ಅಂತ ಹೇಳಬಹುದು.
ಎಷ್ಟೋ ಜನರು ಈ ತ್ಯಾಜ್ಯ ವಸ್ತುಗಳು ಉಪಯೋಗಕ್ಕೆ ಬರುವುದಿಲ್ಲ ಅಂತ ಹೇಳಿ ಬೀಸಾಡುವುದನ್ನು ನೋಡಿರುತ್ತೇವೆ. ಆದರೆ ಇನ್ನೂ ಕೆಲವರು ಕಸದಿಂದ ರಸವನ್ನು ತೆಗೆಯುವ ಮಾರ್ಗವನ್ನು ಕಂಡುಕೊಳ್ಳುತ್ತಾರೆ ಎಂದು ಹೇಳಬಹುದು. ಇಲ್ಲಿಯೂ ಸಹ ಒಬ್ಬ ರೈತರು ತ್ಯಾಜ್ಯದಿಂದ ಉಪಯೋಗ ಪಡೆದುಕೊಂಡಿದ್ದಾರೆ ನೋಡಿ.
ಬೆಳೆಯ ತ್ಯಾಜ್ಯದಿಂದ ಏನು ಮಾಡಿದ್ರು ನೋಡಿ ಈ ರೈತ
ಪಿ ಎಂ ಮುರುಗೇಶನ್ ಅವರು ತಮ್ಮ ತಂದೆಯ ಕೃಷಿಯನ್ನೆ ಮುಂದುವರೆಸಿಕೊಂಡು ಹೋಗಲು ತಮ್ಮ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಲು ನಿರ್ಧರಿಸಿದಾಗ, ಅವರ ಮನಸ್ಸಿನಲ್ಲಿ ಅನೇಕ ಆಲೋಚನೆಗಳು ಇದ್ದವು. ವಿಶೇಷವಾಗಿ, ಅವರು ಬಾಳೆ ಗಿಡದೊಂದಿಗೆ ಹೇಗೆ ವಿಭಿನ್ನವಾಗಿ ವ್ಯವಹಾರ ಶುರು ಮಾಡಬೇಕು ಎಂಬುದರ ಬಗ್ಗೆ ಹೆಚ್ಚು ಕೆಲಸ ಮಾಡಲು ಬಯಸಿದ್ದರು.
ರೈತರು ಟನ್ ಗಟ್ಟಲೆ ಬಾಳೆ ತ್ಯಾಜ್ಯವನ್ನು ಸುಡುತ್ತಿದ್ದುದ್ದನ್ನು ನೋಡಿದ ಇವರು ಬೆಳೆಯ ಪ್ರತಿಯೊಂದು ಭಾಗಕ್ಕೂ ಅದರದೇ ಆದಂತಹ ಉಪಯುಕ್ತತೆ ಇದೆ ಎಂದು ಚೆನ್ನಾಗಿ ಇವರಿಗೆ ಮಾತ್ರ ಚೆನ್ನಾಗಿಯೇ ತಿಳಿದಿತ್ತು.
2008 ರಲ್ಲಿ, ಅವರು ಬಾಳೆಹಣ್ಣಿನ ಮರದ ತ್ಯಾಜ್ಯದಿಂದ ಉತ್ಪನ್ನಗಳನ್ನು ತಯಾರಿಸುವ ಮಾರ್ಗಗಳ ಬಗ್ಗೆ ಯೋಚಿಸಲು ಪ್ರಾರಂಭಿಸಿದರು. ಈ ತ್ಯಾಜ್ಯದಿಂದ ಹೇಗೆ ಹಗ್ಗಗಳನ್ನು ತಯಾರಿಸಬಹುದು ಅನ್ನೋ ಆಸಕ್ತಿದಾಯಕವಾಗಿಸುವ ಆಲೋಚನೆಯನ್ನು ಅವರು ಕಂಡುಕೊಂಡರು.
ಹೂಮಾಲೆಗಳನ್ನು ನೋಡಿ ಇವರಿಗೆ ಐಡಿಯಾ ಬಂತಂತೆ!
"ಹೂಮಾಲೆಗಳಿಗಾಗಿ ಹೂವುಗಳನ್ನು ಎಳೆಯಲು ಬಾಳೆ ದಾರಗಳನ್ನು ಬಳಸುವುದನ್ನು ನೋಡಿದಾಗ ನನಗೆ ಈ ಆಲೋಚನೆ ಹೊಳೆಯಿತು. ತೆಂಗಿನ ಹೊಟ್ಟನ್ನು ಹಗ್ಗವಾಗಿ ಪರಿವರ್ತಿಸುವ ಯಂತ್ರವನ್ನು ನಾನು ಬಳಸಿದೆ ಮತ್ತು ಬಾಳೆ ನಾರಿನ ಸಂಸ್ಕರಣೆಗೆ ಉತ್ತಮವಾಗಿ ಕೆಲಸ ಮಾಡಲು ಅದನ್ನು ಮಾರ್ಪಡಿಸಿದೆ" ಎಂದು ಅನ್ವೇಷಕರು ಹೇಳುತ್ತಾರೆ.
ಅವರು 1.5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ ಯಂತ್ರಕ್ಕೆ ಪೇಟೆಂಟ್ ಪಡೆದರು ಮತ್ತು ಹಗ್ಗಗಳನ್ನು ಬಳಸಿಕೊಂಡು ಬುಟ್ಟಿಗಳು, ಚೀಲಗಳು ಮತ್ತು ಚಾಪೆಗಳಂತಹ ವಸ್ತುಗಳನ್ನು ತಯಾರಿಸಲು ನಿರ್ಧರಿಸಿದರು.
ಸಾಕಷ್ಟು ವಿಚಾರಣೆ ಮತ್ತು ದೋಷಗಳ ನಂತರ, ಅವರು ದಿನಕ್ಕೆ ಸರಾಸರಿ 15,000 ಮೀಟರ್ ಗಳನ್ನು ಉತ್ಪಾದಿಸುವ ಯಂತ್ರವನ್ನು ಕಂಡು ಹಿಡಿದರು ಮತ್ತು ಪ್ರಾರಂಭದಲ್ಲಿ ಈ ಕೆಲಸ ಮಾಡಲು ಕೇವಲ ನಾಲ್ಕು ಜನರ ಅಗತ್ಯ ಮಾತ್ರವೇ ಇತ್ತು.
ಈಗ ದೊಡ್ಡ ವ್ಯವಹಾರವಾಗಿ ಬದಲಾಗಿದೆ..
"ನಾವು ಐದು ಜನರೊಂದಿಗೆ ಈ ಕೆಲಸವನ್ನು ಪ್ರಾರಂಭಿಸಿದೆವು, ಆ ಸಂಖ್ಯೆ ನಂತರ 10 ಆಯಿತು, ಆನಂತರ ಅದು 20ಕ್ಕೆ ಬೆಳೆಯಿತು ಮತ್ತು ಇಂದು ನಾವು 350 ಕ್ಕೂ ಹೆಚ್ಚು ಜನರನ್ನು ನೇಮಿಸಿಕೊಂಡಿದ್ದೇವೆ, ಅವರಲ್ಲಿ ಹೆಚ್ಚಿನವರು ಮಹಿಳೆಯರಾಗಿದ್ದಾರೆ" ಎಂದು ಮಧುರೈನ ಎಂ.ಎಸ್ ರೋಪ್ಸ್ ಪ್ರೊಡಕ್ಷನ್ ಸೆಂಟರ್ ನ ಸ್ಥಾಪಕ ಮುರುಗೇಶನ್ ಅವರು ಹೇಳುತ್ತಾರೆ.
ಇದನ್ನೂ ಓದಿ: Small Business Ideas: ಇದೊಂದು ಹೊಸ ಬ್ಯುಸಿನೆಸ್ ಐಡಿಯಾ, ತಿಂಗಳಿಗೆ 1 ಲಕ್ಷ ಆದಾಯ ಮಿಸ್ಸೇ ಇಲ್ಲ!
ಈ ಉದ್ಯಮವು 500 ಟನ್ ಬಾಳೆ ತ್ಯಾಜ್ಯವನ್ನು ಸಂಸ್ಕರಿಸುತ್ತದೆ ಮತ್ತು ವಾರ್ಷಿಕವಾಗಿ ಸುಮಾರು 1.5 ಕೋಟಿ ರೂಪಾಯಿಗಳನ್ನು ಗಳಿಸುತ್ತದೆ. ಹಗ್ಗಗಳಿಂದ ತಯಾರಿಸಿದ ಉತ್ಪನ್ನಗಳನ್ನು ಮಲೇಷ್ಯಾ, ಸಿಂಗಾಪುರ್, ಫ್ರಾನ್ಸ್ ಮತ್ತು ನೆದರ್ಲ್ಯಾಂಡ್ಸ್ ಸೇರಿದಂತೆ ಇನ್ನೂ ಅನೇಕ ದೇಶಗಳಿಗೆ ರಫ್ತು ಮಾಡಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ