ಬೆಂಗಳೂರು ಮೂಲದ ವಿದ್ಯುತ್ ಚಾಲಿತ ಕಂಪನಿಯಲ್ಲಿ 50.16 ಕೋಟಿ ರೂ. ಹೂಡಿಕೆ ಮಾಡಿದ RIL

ರಿಲಯನ್ಸ್‌ ಇಂಡಸ್ಟ್ರೀಸ್ ಲಿಮಿಟೆಡ್‍ನ ಅಂಗ ಸಂಸ್ಥೆಯಾದ ರಿಲಯನ್ಸ್ ನ್ಯೂ ಎನರ್ಜಿ ಲಿಮಿಟೆಡ್ (RNEL Reliance New Energy Limited) ಬೆಂಗಳೂರು ಮೂಲದ ಆಲ್ಟೀಗ್ರೀನ್ ಪ್ರೊಪಲ್ಷನ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್‍ನಲ್ಲಿ (Altigreen Propulsion Labs Private Limited (Altigreen)) 50.16 ಕೋಟಿ ರೂ. ಹೂಡಿಕೆ ಮಾಡುವ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಮುಕೇಶ್ ಅಂಬಾನಿ ನೇತೃತ್ವದ ಸಮೂಹ ಸಂಸ್ಥೆಗಳು ತಿಳಿಸಿವೆ.

ರಿಲಯನ್ಸ್​ ಮುಖ್ಯಸ್ಥರಾದ ಮುಖೇಶ್​ ಅಂಬಾನಿ

ರಿಲಯನ್ಸ್​ ಮುಖ್ಯಸ್ಥರಾದ ಮುಖೇಶ್​ ಅಂಬಾನಿ

  • Share this:
ದಕ್ಷಿಣ ಭಾರತ(South India)ದಲ್ಲಿ ಹೂಡಿಕೆ (Investment) ಮಾಡಲು ಸಾಕಷ್ಟು ಕಂಪನಿಗಳು ಆಸಕ್ತಿ ತೋರುತ್ತಿವೆ. ಈಗ ಮುಕೇಶ್‌ ಅಂಬಾನಿ (Mukesh Ambani) ಅವರ ಒಡೆತನದ ರಿಲಯನ್ಸ್‌ ಸಂಸ್ಥೆ (Reliance Industries)ಯೂ ಕೂಡ ಮುಂದಾಗಿದೆ. ರಿಲಯನ್ಸ್‌ ಇಂಡಸ್ಟ್ರೀಸ್ ಲಿಮಿಟೆಡ್‍ನ ಅಂಗ ಸಂಸ್ಥೆಯಾದ ರಿಲಯನ್ಸ್ ನ್ಯೂ ಎನರ್ಜಿ ಲಿಮಿಟೆಡ್ (RNEL Reliance New Energy Limited) ಬೆಂಗಳೂರು ಮೂಲದ ಆಲ್ಟೀಗ್ರೀನ್ ಪ್ರೊಪಲ್ಷನ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್‍ನಲ್ಲಿ (Altigreen Propulsion Labs Private Limited (Altigreen)) 50.16 ಕೋಟಿ ರೂ. ಹೂಡಿಕೆ ಮಾಡುವ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಮುಕೇಶ್ ಅಂಬಾನಿ ನೇತೃತ್ವದ ಸಮೂಹ ಸಂಸ್ಥೆಗಳು ತಿಳಿಸಿವೆ.

ಬೆಂಗಳೂರು ಮೂಲದ ಈ ಕಂಪನಿಯಿಂದ RNEL ಕಡ್ಡಾಯವಾಗಿ ಪರಿವರ್ತನೆಗೊಳ್ಳುವ ಆದ್ಯತೆ ಹೊಂದಿರುವ ಶೇರುಗಳನ್ನು ಖರೀದಿಸಲಿದೆ. ಆಲ್ಟೀಗ್ರೀನ್ ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕು ಚಕ್ರದ ವಾಣಿಜ್ಯ ವಾಹನಗಳಿಗೆ ಕೊನೆಯ ಮೈಲಿಯವರೆಗೂ ಸಾರಿಗೆ ಸೇವೆ ಒದಗಿಸುವ ವಿದ್ಯುತ್ ಚಾಲಿತ ವಾಹನ ಮತ್ತು ಪರಿಹಾರ ಒದಗಿಸುವ ಸಂಸ್ಥೆಯಾಗಿದೆ. ಈ ಪ್ರಸ್ತಾವಿತ ವಹಿವಾಟು ಮಾರ್ಚ್ ಒಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಈ ಕುರಿತು ಪ್ರತಿಕ್ರಿಯಿಸಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, “ನೂತನ ಇಂಧನ ಹಾಗೂ ನೂತನ ಸಾರಿಗೆ ಪರಿಸರ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆವಿಷ್ಕಾರಕ ಕಂಪನಿಗಳೊಂದಿಗೆ ಸಹಭಾಗಿತ್ವ ಮಾಡಿಕೊಂಡು ಹೂಡಿಕೆ ಮಾಡುವುದು ನಮ್ಮ ಕಂಪನಿಯ ವ್ಯೂಹಾತ್ಮಕ ಉದ್ದೇಶವಾಗಿದೆ” ಎಂದು ತಿಳಿಸಿದೆ. ಆದರೆ, ಆಲ್ಟೀಗ್ರೀನ್‍ ನಲ್ಲಿ ಖರೀದಿಸಲಿರುವ ಪರಿವರ್ತನಾ ಷೇರುಗಳ ಮೊತ್ತ ಎಷ್ಟಾಗಬಹುದು ಎಂಬ ಕುರಿತು RIL ಏನನ್ನೂ ಬಹಿರಂಗಪಡಿಸಿಲ್ಲ.

ಇದನ್ನೂ ಓದಿ:  Reliance: ಗುಜರಾತ್‌ನಲ್ಲಿ ಹೊಸ ಇಂಧನ ಯೋಜನೆಗಳಲ್ಲಿ 6 ಟ್ರಿಲಿಯನ್ ರೂ. ಹೂಡಿಕೆ ಮಾಡಲಿದೆ ರಿಲಯನ್ಸ್‌

2013ರಲ್ಲಿ ಪ್ರಾರಂಭವಾದ ಕಂಪನಿ

ಆಲ್ಟೀಗ್ರೀನ್ ಇ3 ವಾಹನವನ್ನು ಬೆಂಗಳೂರಿನಲ್ಲಿ ಸ್ವದೇಶಿಯಾಗಿ ಅಭಿವೃದ್ಧಿಪಡಿಸಿದ್ದು, ಈ ವಾಹನವು ಶೇ. 100ರಷ್ಟು ಸ್ವದೇಶಿ ಸಾರಿಗೆ ವೇದಿಕೆಯಾಗಿದೆ. ಈ ಸಂಸ್ಥೆಯು ಹಾಲಿ 60 ದೇಶಗಳಲ್ಲಿ ಕಾರ್ಯಾಚರಿಸುತ್ತಿದ್ದು, 26 ಜಾಗತಿಕ ಬೌದ್ಧಿಕ ಹಕ್ಕುಸ್ವಾಮ್ಯ (ಪೇಟೆಂಟ್) ಹೊಂದಿದೆ.

ಫೆಬ್ರವರಿ 8, 2013ರಲ್ಲಿ ಭಾರತದಲ್ಲಿ ಪ್ರಾರಂಭವಾದ ಈ ಕಂಪನಿಯು 2019, 2020 ಹಾಗೂ 2021ನೇ ಆರ್ಥಿಕ ವರ್ಷದಲ್ಲಿ ಕ್ರಮವಾಗಿ 193.53 ಲಕ್ಷ ರೂ. , 61.62 ಲಕ್ಷ ರೂ. ಹಾಗೂ 103.82 ಲಕ್ಷ ರೂ. ವಹಿವಾಟು ನಡೆಸಿದೆ.

ಈ ಸ್ವಾಧೀನವು ಯಾವುದೇ ಬಗೆಯ ವ್ಯಕ್ತಿ ಸಂಬಂಧಿ ವಹಿವಾಟಾಗಲಿ ಮತ್ತು ಆರ್‌ ಐಎಲ್‍ ಸಂಸ್ಥೆಯ ಉತ್ತೇಜಕರಾಗಲಿ, ಉತ್ತೇಜಕ ಗುಂಪಾಗಲಿ ಅಥವಾ ಸಮೂಹ ಕಂಪನಿಗಳಾಗಲಿ ಈ ಸಂಸ್ಥೆಯ ವಹಿವಾಟಿನಲ್ಲಿ ಯಾವುದೇ ಹಿತಾಸಕ್ತಿಯನ್ನು ಹೊಂದಿಲ್ಲ. ಈ ವಹಿವಾಟಿಗೆ ಯಾವುದೇ ಸರ್ಕಾರಿ ಅಥವಾ ಸರ್ಕಾರಿ ಪ್ರಾಧಿಕಾರದ ಅನುಮೋದನೆಯ ಅಗತ್ಯವಿಲ್ಲ ಎಂದು ಆರ್‌ಐಎಲ್‍ ಸ್ಪಷ್ಪಪಡಿಸಿದೆ.

ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ವೇದಿಕೆ ವಿಸ್ತರಿಸಲು ಒಡಂಬಡಿಕೆ

ಭಾರತದಲ್ಲಿನ ವಿದ್ಯುತ್ ಚಾಲಿತ ಸಾರಿಗೆಯು ಆರ್‌ಐಎಲ್‍, ಅದಾನಿ ಸಮೂಹ ಹಾಗೂ ಟಾಟಾ ಸಮೂಹದಂತಹ ಸಮೂಹ ಸಂಸ್ಥೆಗಳನ್ನು ಆಕರ್ಷಿಸಿದ್ದು, ಅವು ಮೊದಲಿಗೆ ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ವೇದಿಕೆಗಳನ್ನು ವಿಸ್ತರಿಸಲು ಸ್ಥಳೀಯ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುತ್ತಿವೆ.

ಇದನ್ನೂ ಓದಿ:  RIL AGM 2021: ನಾವು ಸಂಸ್ಥೆಯ ಸಿಬ್ಬಂದಿ, ಕುಟುಂಬ, ದೇಶ, ಭೂಮಿ, ಜನರ ಬಗ್ಗೆ ಕಾಳಜಿ ವಹಿಸುತ್ತೇವೆ; ಮುಖೇಶ್ ಅಂಬಾನಿ

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಆರ್‌ಐಎಲ್‍ ಮತ್ತು ಬಿಪಿ ಫ್ಯುಯೆಲ್ ಆ್ಯಂಡ್ ಮೊಬಿಲಿಟಿ ಜಾಯಿಂಟ್ ವೆಂಚರ್, ರಿಲಯನ್ಸ್‍ ಬಿಪಿ ಮೊಬಿಲಿಟಿ ಲಿಮಿಟೆಡ್, ನವಿ ಮುಂಬೈನಲ್ಲಿ ತನ್ನ ಮೊದಲ ಜಿಯೊ-ಬಿಪಿ ಸಾರಿಗೆ ನಿಲ್ದಾಣವನ್ನು ಸ್ಥಾಪಿಸಿತ್ತು. ಈ ಜಂಟಿ ಪಾಲುದಾರಿಕೆಯು ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ನಿಲ್ದಾಣಗಳ ಜಾಲ ಮತ್ತು ವಿದ್ಯುತ್ ಕೋಶಗಳ ವಿನಿಮಯ ನಿಲ್ದಾಣಗಳನ್ನು ಸಾರಿಗೆ ನಿಲ್ದಾಣಗಳು ಹಾಗೂ ಪ್ರತ್ಯೇಕ ಸ್ಥಳಗಳಲ್ಲಿ ಸ್ಥಾಪಿಸಲು ಯೋಜಿಸಿದೆ.

ಮಹೀಂದ್ರಾ ಸಮೂಹ ಸಂಸ್ಥೆಯೊಂದಿಗೆ ಒಡಂಬಡಿಕೆ

ಅದೇ ವರ್ಷದಲ್ಲಿ ಗುರುಗ್ರಾಮ್‍ ಮೂಲದ ಬ್ಲೂಸ್ಮಾರ್ಟ್‍ ಕಂಪನಿಯೊಂದಿಗೆ ಚಾರ್ಜಿಂಗ್ ಸಂಪನ್ಮೂಲಗಳನ್ನು ಸ್ಥಾಪಿಸಲು ರಿಲಯನ್ಸ್ ಬಿಪಿ ಮೊಬಿಲಿಟಿ ಒಪ್ಪಂದ ಮಾಡಿಕೊಂಡಿತ್ತು. ಇದೇ ಹೊತ್ತಿನಲ್ಲಿ ಆರ್‌ಐಎಲ್‍ ಅಂಗ ಸಂಸ್ಥೆಯು ವಿದ್ಯುತ್ ಚಾಲಿತ ವಾಹನ ಉತ್ಪನ್ನಗಳು ಹಾಗೂ ಸೇವೆಗಳನ್ನು ಪರಿಶೋಧಿಸಲು ಮತ್ತು ಕಡಿಮೆ ಇಂಗಾಲ ಹಾಗೂ ಸಾಂಪ್ರದಾಯಿಕ ಇಂಧನಗಳಲ್ಲಿ ಕ್ಷಮತೆಯನ್ನು ಕಂಡುಕೊಳ್ಳಲು ಮಹೀಂದ್ರಾ ಸಮೂಹ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿತ್ತು.
Published by:Mahmadrafik K
First published: