• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Rizwan Sajan: ಅಂದು ಬೀದಿ ಬದಿಯಲ್ಲಿ ಪುಸ್ತಕ ಮಾರಿದ ಈ ವ್ಯಕ್ತಿ ಇಂದು ಗಳಿಸಿದ ಹಣದ ಲೆಕ್ಕ ಕೇಳಿದ್ರೆ ದಂಗಾಗ್ತೀರಾ!

Rizwan Sajan: ಅಂದು ಬೀದಿ ಬದಿಯಲ್ಲಿ ಪುಸ್ತಕ ಮಾರಿದ ಈ ವ್ಯಕ್ತಿ ಇಂದು ಗಳಿಸಿದ ಹಣದ ಲೆಕ್ಕ ಕೇಳಿದ್ರೆ ದಂಗಾಗ್ತೀರಾ!

ರಿಜ್ವಾನ್ ಸಾಜನ್

ರಿಜ್ವಾನ್ ಸಾಜನ್

ಎಷ್ಟೋ ಜನರ ಜೀವನದ ಕಥೆಗಳನ್ನು ನಾವು ನೋಡುತ್ತಿರುತ್ತೇವೆ, ಅದರಲ್ಲಿ ಹೆಚ್ಚಿನ ಕಥೆಗಳು ಬಡತನದಿಂದಲೇ ಶುರುವಾಗಿರುತ್ತವೆ. ಆದರೆ ಕಥೆಯ ಕೊನೆ ಮಾತ್ರ ಅನೇಕ ಜನರ ಜೀವನಕ್ಕೆ ಒಂದು ಸ್ಪೂರ್ತಿಯಾಗಿರುತ್ತದೆ. ಇಲ್ಲಿಯೂ ಇಂತಹದೇ ಒಂದು ಕಥೆ ಇದೆ ನೋಡಿ.

  • Share this:

ನಾವೆಲ್ಲಾ ‘ಬಡತನದಲ್ಲಿ ಹುಟ್ಟುವುದು ತಪ್ಪಲ್ಲ, ಕೊನೆಯವರೆಗೆ ಬಡತನದಲ್ಲಿ ಬದುಕುವುದು ತಪ್ಪು' ಎಂಬ ಮಾತನ್ನು ಅನೇಕ ಬಾರಿ ಕೇಳಿರುತ್ತೇವೆ ಅಲ್ಲವೇ? ಈ ಮಾತನ್ನು ಕೆಲವರು ಅಷ್ಟಾಗಿ ಗಂಭೀರವಾಗಿ ಪರಿಗಣಿಸುವುದಿಲ್ಲ, ಆದರೆ ಇನ್ನೂ ಕೆಲವರಿಗೆ ಇದು ಮನಸ್ಸಿನಲ್ಲಿ ಸದಾ ಕಾಡುತ್ತಿರುವ ವಿಷಯವಾಗಿರುತ್ತದೆ (Subject). ತಾವು ಬಡತನದಲ್ಲಿ (Poor) ಹುಟ್ಟಿದರೆ ಏನಾಯ್ತು ಬಡತನದಲ್ಲಿ ಬದುಕುವುದು ಬೇಡ ಅಂತ ಅಂದುಕೊಂಡು ದೃಢ ನಿಶ್ಚಯದಿಂದ ಮತ್ತು ಕಠಿಣ ಪರಿಶ್ರಮದಿಂದ (Effort) ಕೆಲಸ ಮಾಡಿ ದೊಡ್ಡ ಶ್ರೀಮಂತಾರಾಗುತ್ತಾರೆ.


ಎಷ್ಟೋ ಜನರ ಜೀವನದ ಕಥೆಗಳನ್ನು ನಾವು ನೋಡುತ್ತಿರುತ್ತೇವೆ, ಅದರಲ್ಲಿ ಹೆಚ್ಚಿನ ಕಥೆಗಳು ಬಡತನದಿಂದಲೇ ಶುರುವಾಗಿರುತ್ತವೆ. ಆದರೆ ಕಥೆಯ ಕೊನೆ ಮಾತ್ರ ಅನೇಕ ಜನರ ಜೀವನಕ್ಕೆ ಒಂದು ಸ್ಪೂರ್ತಿಯಾಗಿರುತ್ತದೆ. ಇಲ್ಲಿಯೂ ಇಂತಹದೇ ಒಂದು ಕಥೆ ಇದೆ ನೋಡಿ.


ಈ ಬಿಲಿಯನೇರ್ ಉದ್ಯಮಿ ಕಡು ಬಡತನದಲ್ಲಿ ಹುಟ್ಟಿ, ಬೆಳೆದವರಂತೆ..


ಡ್ಯಾನ್ಯೂಬ್ ಮಾಲೀಕ ಮತ್ತು ಬಿಲಿಯನೇರ್ ಉದ್ಯಮಿ ರಿಜ್ವಾನ್ ಸಾಜನ್ ಅವರ ತಂದೆ ನಿಧನರಾದಾಗ ಅವರಿಗೆ ಕೇವಲ 16 ವರ್ಷ ವಯಸ್ಸಂತೆ. ಈಗ 55 ವರ್ಷದ ರಿಜ್ವಾನ್ ಮೂವರು ಒಡಹುಟ್ಟಿದವರಲ್ಲಿ ಹಿರಿಯನಾಗಿದ್ದರಿಂದ, ತಮ್ಮ ಕುಟುಂಬದ ಆರ್ಥಿಕ ಅಗತ್ಯಗಳನ್ನು ನೋಡಿಕೊಳ್ಳುವ ಪೂರ್ತಿ ಜವಾಬ್ದಾರಿಯನ್ನು ಅವರೇ ನೋಡಿಕೊಳ್ಳಬೇಕಾಯಿತು.


ರಿಜ್ವಾನ್ ಸಾಜನ್ ಬೀದಿ ಬದಿ ವ್ಯಾಪಾರಿಯಾಗಿ ಕೆಲಸ ಮಾಡಲು ಪ್ರಾರಂಭಿಸಿದರಂತೆ ಮತ್ತು ತನ್ನ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡಲು ಪುಸ್ತಕಗಳು ಮತ್ತು ಸ್ಟೇಷನರಿಗಳನ್ನು ಮಾರಾಟ ಮಾಡಿದರಂತೆ. ಅವರು ಹೆಚ್ಚುವರಿ ಆದಾಯಕ್ಕಾಗಿ ದಿನಾ ಬೆಳಗ್ಗೆ ಮನೆ ಮನೆಗೆ ಹೋಗಿ ಹಾಲನ್ನು ಸಹ ಹಾಕಿದ್ರಂತೆ.


ತಂದೆಗೆ ಬರುವ ಸಂಬಳದಲ್ಲಿ ಮನೆ ನಡೆಸುವುದು ತುಂಬಾನೇ ಕಷ್ಟವಾಗುತ್ತಿತ್ತಂತೆ..


"ಬಡತನದಲ್ಲಿದ್ದಾಗ ನಮಗೆ ಎಲ್ಲಾದಕ್ಕೂ ತುಂಬಾನೇ ಕಷ್ಟವಾಗುತ್ತಿತ್ತು. ನನ್ನ ತಂದೆ ಉಕ್ಕಿನ ಕಾರ್ಖಾನೆಯಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದರು ಮತ್ತು ಅವರಿಗೆ ತಿಂಗಳಿಗೆ 7,000 ರೂಪಾಯಿ ಸಂಬಳ ಮಾತ್ರ ಬರುತ್ತಿತ್ತು.


ಈ ಹಣದಲ್ಲಿ ಮಕ್ಕಳೆಲ್ಲರ ಶಾಲೆ ಫೀಸ್ ಕಟ್ಟುವುದು ಮತ್ತು ಮನೆ ನಡೆಸುವುದು ತುಂಬಾನೇ ಕಷ್ಟವಾಗುತ್ತಿತ್ತು" ಎಂದು ಸಾಜನ್ ಅವರು ಗಲ್ಫ್ ನ್ಯೂಸ್ ಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿಕೊಂಡರು.


ಆದರೆ ರಿಜ್ವಾನ್ ಸಾಜನ್ ತಮ್ಮ ಜೀವನದ ಸಂಘರ್ಷವನ್ನು ಎಂದಿಗೂ ಬಿಟ್ಟುಕೊಡಲಿಲ್ಲ ಮತ್ತು 1993 ರಲ್ಲಿ ಡ್ಯಾನ್ಯೂಬ್ ಗ್ರೂಪ್ ಅನ್ನು ಪ್ರಾರಂಭಿಸಿದರು. 2019 ರ ಹೊತ್ತಿಗೆ, ಡ್ಯಾನ್ಯೂಬ್ ಗ್ರೂಪ್ ನ ವಾರ್ಷಿಕ ವಹಿವಾಟು ಸುಮಾರು 1.3 ಬಿಲಿಯನ್ ಡಾಲರ್ ಆಗಿತ್ತು ಎಂದು ಹೇಳಲಾಗುತ್ತಿದ್ದು, ಇಂದು ಯುಎಇಯ ಶ್ರೀಮಂತ ಭಾರತೀಯರಲ್ಲಿ ರಿಜ್ವಾನ್ ಸಾಜನ್ ಸಹ ಒಬ್ಬರು.


ಡ್ಯಾನ್ಯೂಬ್ ಗ್ರೂಪ್ ಕಟ್ಟಡ ಸಾಮಗ್ರಿಗಳ ಕಂಪನಿ, ರಿಯಲ್ ಎಸ್ಟೇಟ್ ಸಂಸ್ಥೆ ಮತ್ತು ಮೂಲಸೌಕರ್ಯ ಕಂಪನಿ ಸೇರಿದಂತೆ ಹಲವಾರು ಪೋರ್ಟ್‌ಫೋಲಿಯೋಗಳನ್ನು ನಿರ್ವಹಿಸುತ್ತದೆ.


18 ವರ್ಷ ವಯಸ್ಸಾಗಿದ್ದಾಗಲೇ ಕುವೈತ್ ಗೆ ಬಂದಿದ್ರಂತೆ ರಿಜ್ವಾನ್


ರಿಜ್ವಾನ್ ಸಾಜನ್ ಅವರ ಚಿಕ್ಕಪ್ಪ 1981 ರಲ್ಲಿ 18 ವರ್ಷ ತುಂಬಿದಾಗ ಕುವೈತ್ ನಲ್ಲಿ ಉದ್ಯೋಗವನ್ನು ನೀಡುವ ಮೂಲಕ ಅವರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಕುವೈತ್ ನಲ್ಲಿ ರಿಜ್ವಾನ್ ಸಾಜನ್ ತಿಂಗಳಿಗೆ 150 ಕುವೈತ್ ದಿನಾರ್ ಎಂದರೆ ಭಾರತೀಯ ಮೌಲ್ಯದಲ್ಲಿ 18,000 ರೂಪಾಯಿಗಳ ಸಂಬಳಕ್ಕೆ ಸೇಲ್ಸ್ ಟ್ರೈನಿಯಾಗಿ ಕೆಲಸಕ್ಕೆ ಸೇರಿದರು.


ರಿಜ್ವಾನ್ ಎಂಟು ವರ್ಷಗಳ ಕಾಲ ಕುವೈತ್ ನಲ್ಲಿಯೇ ಕೆಲಸ ಮಾಡಿದರು ಮತ್ತು ಅಲ್ಲಿಯೇ ಸೇಲ್ಸ್ ಮ್ಯಾನೇಜರ್ ಆಗಿ ಬಡ್ತಿ ಪಡೆದರು. ಆದರೆ ನಂತರ ಸದ್ದಾಂ ಹುಸೇನ್ ಕುವೈತ್ ಮೇಲೆ ದಾಳಿ ಮಾಡಿ 1990 ರಲ್ಲಿ ನಗರವನ್ನು ನಾಶಪಡಿಸಿದರು. ಗಲ್ಫ್ ಯುದ್ಧದ ನಂತರ ಸಾಜನ್ ಮತ್ತೆ ಮುಂಬೈಗೆ ಮರಳಿದರು ಮತ್ತು ಹೊಸ ಉದ್ಯೋಗವನ್ನು ಹುಡುಕಲು ಶುರು ಮಾಡಿದರು. ಆದರೆ ಅವರು ದುಬೈನಲ್ಲಿ ಹೊಸ ಕೆಲಸವನ್ನು ಪಡೆದರು ಮತ್ತು ಕಟ್ಟಡ ಸಾಮಗ್ರಿಗಳ ಬ್ರೋಕರೇಜ್ ವ್ಯವಹಾರಕ್ಕೆ ಸೇರಿದರು.


ಒಂದು ದಿನ, ರಿಜ್ವಾನ್ ಆ ಕೆಲಸವನ್ನು ಸಹ ಬಿಟ್ಟು ತನ್ನದೇ ಆದ ಕಟ್ಟಡ ಸಾಮಗ್ರಿಗಳ ವ್ಯಾಪಾರ ಕಂಪನಿಯನ್ನು ಸ್ಥಾಪಿಸಲು ನಿರ್ಧರಿಸಿದರು. ಆಗ ಈ ಡ್ಯಾನ್ಯೂಬ್ ಕಂಪನಿ ಹುಟ್ಟಿತು.

top videos
    First published: