Health Insurance: ಆರೋಗ್ಯ ವಿಮೆಯಿಂದಲೂ ಬರಬಹುದು ಇಷ್ಟೆಲ್ಲ ಸಮಸ್ಯೆ! ಇಲ್ಲಿದೆ ನೋಡಿ ಉದಾಹರಣೆ

ಆರೋಗ್ಯ ವಿಮೆಯನ್ನು ಆರಿಸಿಕೊಳ್ಳುವ ಮೊದಲು ಅದರ ವ್ಯಾಪ್ತಿ, ನಿಯಮಗಳು ಮತ್ತು ಪ್ರೀಮಿಯಂ ಅನ್ನು ಸಂಕ್ಷೀಪ್ತವಾಗಿ ತಿಳಿದುಕೊಳ್ಳುವುದು ಉತ್ತಮ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕೊರೋನಾ ಎಂಬ ಸಾಂಕ್ರಾಮಿಕ ಬಂದ ಬಳಿಕ ಜನರಲ್ಲಿನ ಆರೋಗ್ಯದ ಕಾಳಜಿ (Health Concerns) ಹೆಚ್ಚಾಗಿದೆ. ಅನೇಕರು ಈಗಾಗಲೇ ಆರೋಗ್ಯ ವಿಮೆಗಳತ್ತ (Health Insurance) ಮೊರೆ ಹೋಗಿರುವುದು ಸಾಮಾನ್ಯವಾಗಿದೆ. ಆದರೆ ಅನೇಕರು ಮಾಡುವ ತಪ್ಪು ಏನೆಂದರೆ ಯಾವುದೇ ವಿಮಾ ಪಾಲಿಸಿ ಖರೀದಿಸುವಾಗ ಸರಿಯಾದ ದಾಖಲೆಗಳನ್ನು ಪರಿಶೀಲಿಸುವುದಿಲ್ಲ. ಜೊತೆಗೆ ನಿಯಮ ಮತ್ತು ಷರತ್ತುಗಳನ್ನು (Term and Condition) ಗಮನಿಸುವುದಿಲ್ಲ. ಹೀಗಾಗಿ ಜನರು ಆರೋಗ್ಯ ವಿಮೆಯನ್ನು ಆರಿಸಿಕೊಳ್ಳುವ ಮೊದಲು ಅದರ ವ್ಯಾಪ್ತಿ, ನಿಯಮಗಳು ಮತ್ತು ಪ್ರೀಮಿಯಂ ಅನ್ನು ಸಂಕ್ಷೀಪ್ತವಾಗಿ ತಿಳಿದುಕೊಳ್ಳುವುದು ಉತ್ತಮ. ಏಕೆಂದರೆ ಪಾಲಿಸಿಯನ್ನು ಖರೀದಿಸಿದ ನಂತರ ಪಶ್ಚಾತಾಪ ಪಡುವುದಕ್ಕಿಂತ ಮೊದಲೇ ಎಲ್ಲವನ್ನು ತಿಳಿದುಕೊಂಡು ಮುಂದುವರಿಯುವುದು ಉತ್ತಮ ಭವಿಷ್ಯವನ್ನು (Good Future) ನಮ್ಮದಾಗಿಸಿಕೊಳ್ಳಲು ಸಹಾಯವಾಗುತ್ತದೆ.

ಆರೋಗ್ಯ ವಿಮೆ ಬಗ್ಗೆ ಸೂಕ್ತ ಮಾಹಿತಿ ತಿಳಿಯದೇ ಮುಂದುವರಿದರೆ ಹಲವು ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ಸರಿಯಾದ ಮಾಹಿತಿ ಇಲ್ಲದೇ ಆರೋಗ್ಯ ವಿಮೆ ಮಾಡಿಸಿಕೊಂಡು ಅದರಿಂದ ತೊಂದರೆಗೀಡಾದ ಕೆಲವು ಪ್ರಕರಣಗಳನ್ನು ಇಲ್ಲಿ ನೋಡೋಣ ಬನ್ನಿ.

ಪ್ರಕರಣ 1 
ಈ ವ್ಯಕ್ತಿಯು ವಿಮಾ ಕಂಪನಿಯೊಂದಿಗೆ ಯಾವುದೇ ಪೂರ್ವ ದೃಢೀಕರಣ ಹೊಂದಿರಲಿಲ್ಲ. ಹಲವು ದಾಖಲೆಗಳ ಸಲ್ಲಿಕೆ, ವೈದ್ಯರ ಮಂಜೂರಾತಿ ಮತ್ತು ಕವರೇಜ್ ಮೊತ್ತದ ಅಡಿಯಲ್ಲಿ ಬಿಲ್ ಅನ್ನು ಕೂಡ ವಿಮಾ ಕಂಪನಿಗೆ ಸಲ್ಲಿಸಿದರು 26 ವರ್ಷದ ಫಿನ್‌ಟೆಕ್ ಉದ್ಯೋಗಿ ರಾಹುಲ್ ಪಿನಾಕಿ.  ಆದರೆ, ಒಂದೊಮ್ಮೆ ಅವರು ಯಾವುದೋ ಆರೋಗ್ಯ ಸಮಸ್ಯೆಯಿಂದ ದುಬಾರಿ ವೈದ್ಯಕೀಯ ಪ್ರಕ್ರಿಯೆಗೆ ಒಳಗಾಗ ಬೇಕಾಯಿತು ಹಾಗೂ ಅದಕ್ಕಾಗಿ ಅವರು ಪಾಲಿಸಿಯಿಂದ ಹಣ ಪಡೆಯಲು ಬಯಸಿದರು. ಆದರೆ ಆ ವಿಮಾ ಕಂಪನಿ ಅವರಿಗೆ ಪಾವತಿಸಿದ ಹಣ ಎಷ್ಟು ಗೊತ್ತೆ? ಏನೂ ಇಲ್ಲ. ಅದು ಯಾವುದೇ ಮರು ಪಾವತಿಯ ಹಣ ನೀಡಲಿಲ್ಲ.

ಇದನ್ನೂ ಓದಿ: Girl's Campaign: ಶಾಲೆ ವಿರುದ್ಧವೇ ಸಿಡಿದೆದ್ದ ವಿದ್ಯಾರ್ಥಿನಿ! ಬಾಲಕಿಯರ ಮಾನ ಕಾಪಾಡಲು ಅಭಿಯಾನ

ವೈದ್ಯಕೀಯ ಪರೀಕ್ಷೆಯ ಸಮಯದಲ್ಲಿ ಸೇರಿಸಲಾದ ವಿಷಯವು ಪಾಲಿಸಿಯು ಒಳಗೊಂಡಿರುವ ವಿಷಯಕ್ಕಿಂತ ಭಿನ್ನವಾಗಿರುವುದರಿಂದ, ರಾಹುಲ್‌ ಪಿನಾಕಿಗೆ ಇದನ್ನು ವಿಮಾ ಕಂಪನಿಯವರು ಆರಂಭದಲ್ಲಿ ತಿಳಿಸಿರಲಿಲ್ಲ. ಇದರಿಂದ ರಾಹುಲ್‌ ಮೋಸಕ್ಕೆ ಬಲಿಯಾಗಿದ್ದರು. "ನಾನು ಆಪರೇಷನ್‌ಗೆ ಒಳಗಾಗುವ ಮೊದಲು ವಿಮಾ ಕಂಪನಿಯೊಂದಿಗೆ ಮಾತನಾಡಿದ್ದೆ ಮತ್ತು ಅವರು ಈ ಯೋಜನೆಯ ಅಡಿಯಲ್ಲಿ ಇದು ಒಳಗೊಳ್ಳುವುದಾಗಿ ನನಗೆ ತಿಳಿಸಿದರು" ಎಂದು ಪಿನಾಕಿ ಹೇಳುತ್ತಾರೆ.

“ಆದರೆ ಅವರು ನಂತರ ಇದು ಸಾಧ್ಯವಿಲ್ಲ. ಈ ವಿಮಾ ಪಾಲಿಸಿಯಲ್ಲಿ ಇದು ಒಳಗೊಂಡಿಲ್ಲ ಎಂದು ಹೇಳಿದರು. ಇದರಿಂದ ನಾನು ಸಂಪೂರ್ಣವಾಗಿ ಕುಗ್ಗಿ ಹೋದೆ” ಎನ್ನುತ್ತಾರೆ ರಾಹುಲ್‌. "ಇದು ವಿಮೆಯ ಮೋಸದ ಮಾರಾಟಕ್ಕೆ ಒಂದು ಶ್ರೇಷ್ಠ ಪ್ರಕರಣವಾಗಿದೆ. ಇದು ಮಾನಸಿಕ ಸಂಕಟ ತರುವ ಕೆಲಸವಾಗಿದೆ” ಎಂದು ಅವರು ಹೇಳುತ್ತಾರೆ.

ಪ್ರಕರಣ 2
ನಾನು ಈ ಹಿಂದೆ ಒಂದು ಆರೋಗ್ಯ ವಿಮೆಯನ್ನು ಮಾಡಿಸಿದ್ದೆ. ಆದ್ದರಿಂದ ನನಗೆ ಬಾಕಿಯಿರುವುದನ್ನು ಪಾವತಿಸಲು ವಿಮಾ ಕಂಪನಿಯನ್ನು ಅಂಗಲಾಚಿ ಬೇಡಿಕೊಳ್ಳಬೇಕಾಯಿತು. ಸಂಕಟ ಪಟ್ಟು ಅಳಬೇಕಾಯಿತು. “ಪ್ರತಿ ಬಾರಿಯೂ ವಿಭಿನ್ನ ವ್ಯಕ್ತಿಗಳು ಫೋನ್ ಕರೆಯನ್ನು ತೆಗೆದುಕೊಂಡಾಗ, ನಾನು ಪ್ರತಿ ಬಾರಿಯು ನನ್ನ ಪರಿಸ್ಥಿತಿಯನ್ನು ವಿವರಿಸಿ ವಿವರಿಸಿ ಸೋತು ಹೋದೆ. ಆದರೆ ಕೊನೆಗೂ ಎಲ್ಲವೂ ವ್ಯರ್ಥವಾಯಿತು,” ಎಂದು ಗರ್ಭಕಂಠದ ಆಪರೇಷನ್‌ಗೆ ಒಳಗಾದ 57 ವರ್ಷದ ವಿಧಿಶಾ ಶರ್ಮಾ ಹೇಳುತ್ತಾರೆ.

ಶರ್ಮಾ ಅವರು ಆರಂಭದಲ್ಲಿ ನಗದು ರಹಿತ ಕ್ಲೈಮ್ ಮಾಡಬೇಕೆಂದು ಬಯಸಿದ್ದರು ಆದರೆ ಆಪರೇಷನ್‌ ಅನ್ನು ಬೇಗನೆ ಮಾಡಬೇಕಾಗಿತ್ತು ಮತ್ತು ಶಸ್ತ್ರಚಿಕಿತ್ಸೆಯ ನಂತರ ಆಕೆಗೆ ಮರುಪಾವತಿ ಮಾಡಲಾಗುವುದು ಎಂದು ವಿಮಾ ಕಂಪನಿಯು ಭರವಸೆ ನೀಡಿತು. ಅದರ ಜೊತೆಗೆ, ಆಪರೇಷನ್‌ ಮಾಡುವಾಗ ಆಕೆಯ ಗರ್ಭಾಶಯದಲ್ಲಿ ಹೆಚ್ಚಿನ ಗಡ್ಡೆಗಳು ಇರುವುದು ಕಾಣಿಸಿದೆ. ಅದರಿಂದ ಹೆಚ್ಚಿನ ಹಣದ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಆಪರೇಷನ್‌ ಮಾಡಲು ಬೇಕಿರುವ ಸಾಧನಕ್ಕಾಗಿ ಆಕೆಗೆ ರೂ 85,000 ಶುಲ್ಕ ವಿಧಿಸಲಾಯಿತು.

ಇದನ್ನೂ ಓದಿ:  Chikkamagaluru: ಸಾವಿನಲ್ಲೂ ಸಾರ್ಥಕತೆ ಮೆರೆದ ಯುವತಿ; ಮಗಳ ಅಂಗಾಂಗ ದಾನಕ್ಕೆ ಮುಂದಾದ ಪೋಷಕರು

ಆಕೆಯು ರೂ. 15 ಲಕ್ಷದ ಕವರೇಜ್ ಇರುವ ಪಾಲಿಸಿಯನ್ನು ಹೊಂದಿದ್ದರೂ ಸಹ ಅದನ್ನು ನೀಡಲು ವಿಮಾ ಕಂಪನಿ ನಿರಾಕರಿಸಿದೆ. ಕೇವಲ ರೂ. 23,000 ಕೊಡಲು ಒಪ್ಪಿಕೊಂಡಿದೆ. ಅದಕ್ಕಿಂತ ಹೆಚ್ಚು ಪಾವತಿಸಲು ತಕ್ಷಣವೇ ನಿರಾಕರಿಸಿತು. ಹೀಗೆ ಈ ಎರಡು ಪ್ರಕರಣಗಳನ್ನು ಗಮನಿಸಿದರೆ ಆರೋಗ್ಯ ವಿಮೆಯನ್ನು ಮಾಡಿಸುವುದೇ ನಮ್ಮ ಆರೋಗ್ಯ ಅಸ್ತವ್ಯಸ್ತಗೊಂಡಾಗ ಅದಕ್ಕೆ ಬೇಕಾಗುವಷ್ಟು ಹಣದ ಕೊರತೆಯನ್ನು ನೀಗಿಸಬೇಕೆಂಬ ಉದ್ದೇಶದಿಂದ ಈ ವಿಮೆಗಳನ್ನು ಮಾಡಿಸಲಾಗುತ್ತದೆ. ಆದರೆ ಸೂಕ್ತ ಮಾಹಿತಿಯ ಕೊರತೆಯಿಂದ ಭವಿಷ್ಯದಲ್ಲಿ ಇಂತಹ ಸಮಸ್ಯೆಗಳಿಗೆ ಗುರಿಯಾಗುತ್ತೇವೆ.

ಭಾರತದಲ್ಲಿ ಆರೋಗ್ಯ ವಿಮಾ ಪಾಲಿಸಿದಾರರು ಎದುರಿಸುವ ಸಮಸ್ಯೆಗಳಿವು:
“ಭಾರತದಲ್ಲಿ ಆರೋಗ್ಯ ವಿಮೆಯ ಕ್ಲೈಮ್‌ಗಳನ್ನು ವಿಮಾ ಪಾಲಿಸಿ ತೆಗೆದುಕೊಂಡವರಿಗೆ ಪಾವತಿಸಬೇಕಾದಷ್ಟು ಹಣವನ್ನು ಪಾವತಿಸಲಾಗುವುದಿಲ್ಲ. ಆದರೆ ಕೆನಡಾ, ಆಸ್ಟ್ರೇಲಿಯಾ ಮತ್ತು ಯುಕೆ ನಂತಹ ಇತರ ದೇಶಗಳಿಗೆ ಹೋಲಿಸಿದರೆ ಭಾರತವು ವಿಮಾಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ದೂರುಗಳ ಪ್ರಮಾಣವನ್ನು ಹೊಂದಿದೆ” ಎಂದು ಫೇರ್ ಪ್ಲೇ ಇನ್ ಇಂಡಿಯನ್ ಹೆಲ್ತ್ ಇನ್ಶೂರೆನ್ಸ್ ಪತ್ರಿಕೆಯು ವರದಿ ಮಾಡಿದೆ.

ಭಾರತದಲ್ಲಿನ ಪಾಲಿಸಿದಾರರನ್ನು ಕಾಡುತ್ತಿರುವ ಇನ್ನೊಂದು ಸಮಸ್ಯೆಯೆಂದರೆ ಹೆಚ್ಚಿನ ಪಾಲಿಸಿಗಳು ಆಸ್ಪತ್ರೆಯ ವೆಚ್ಚವನ್ನು ಮಾತ್ರ ಒಳಗೊಂಡಿರುತ್ತವೆ ಎಂಬುದು ಗಮನಿಸಿಬೇಕಾದ ಮುಖ್ಯಾಂಶವಾಗಿದೆ.

ತಿರಸ್ಕೃತ ಕೈಮ್‌ಗಳು
ಪಾಲಿಸಿದಾರರ ಕ್ಲೈಮ್‌ಗಳನ್ನು ತಿರಸ್ಕರಿಸಲು ಹಲವು ಕಾರಣಗಳಿವೆ. ಅದರಲ್ಲಿ ಪ್ರಮುಖವಾದವುಗಳೆಂದರೆ ಗ್ರಾಹಕರು ನಿಗದಿತ ಸಮಯದೊಳಗೆ ಸೂಕ್ತ ದಾಖಲೆಗಳನ್ನು ನೀಡಿಲ್ಲ ಎಂದು ಕ್ಲೈಮ್‌ಗಳನ್ನು ತಿರಸ್ಕೃತಗೊಳಿಸಲಾಗುತ್ತದೆ.

ಇನ್ನು ಕೆಲವು ಸಮಯ ಗ್ರಾಹಕರು ಪಾಲಿಸಿಯನ್ನು ತೆಗೆದುಕೊಳ್ಳುವ ಸಮಯದಲ್ಲಿ ರೋಗವನ್ನು ಬಹಿರಂಗಪಡಿಸಲಿಲ್ಲ ಎಂಬ ಆಧಾರದ ಮೇಲೆ ಕ್ಲೈಮ್‌ಗಳನ್ನು ವಜಾಗೊಳಿಸಲಾಗುತ್ತದೆ.

ಹೆಚ್ಚುತ್ತಿರುವ ಪ್ರೀಮಿಯಂಗಳು
ಆರೋಗ್ಯ ವಿಮೆಯಲ್ಲಿ ಒಂದು ವರ್ಷಕ್ಕೆ ಆರೋಗ್ಯ ವಿಭಾಗದಲ್ಲಿ FY23 ಕ್ಕೆ 21.9% ರಷ್ಟು ಏರಿಕೆ ಕಂಡಿದೆ. ಇದು ಕ್ಲೈಮ್‌ಗಳ ಅನುಪಾತ ಮತ್ತು ಪಾಲಿಸಿದಾರರಿಗೆ ನೀಡಿದ ಮರುಪಾವತಿಗೆ ಸಾಕ್ಷಿಯಾಗಿದೆ. ಭಾರತದಲ್ಲಿ ವೈದ್ಯಕೀಯ ಹಣದುಬ್ಬರವು ಸುಮಾರು 14% ರಷ್ಟು ಹೆಚ್ಚಿದೆ. ಅಂದರೆ ಇಂದು 3 ಲಕ್ಷ ರೂಪಾಯಿ ವೆಚ್ಚವಾಗುವ ಯಾವುದೇ ವೈದ್ಯಕೀಯ ಪ್ರಕ್ರಿಯೆಯು 5 ವರ್ಷಗಳ ನಂತರ ಸುಮಾರು 6 ಲಕ್ಷ ರೂಪಾಯಿ ವೆಚ್ಚವಾಗಬಹುದು ಎಂಬರ್ಥವನ್ನು ಒಳಗೊಂಡಿದೆ.

ವಿಮಾ ಕಂತುಗಳು 10-15% ರಷ್ಟು ಏರಿಕೆ
“ಹೆಚ್ಚುತ್ತಿರುವ ವೈದ್ಯಕೀಯ ಹಣದುಬ್ಬರದಿಂದಾಗಿ ಆರೋಗ್ಯ ವಿಮಾ ಕಂತುಗಳು ಕಾಲಕಾಲಕ್ಕೆ ಹೆಚ್ಚಾಗುತ್ತವೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಆಸ್ಪತ್ರೆಗೆ ದಾಖಲಾದ ಪ್ರಕರಣಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿ ಹೆಚ್ಚಿನ ಸಂಖ್ಯೆಯ ಕ್ಲೈಮ್‌ಗಳಿಗೆ ಇದು ಪ್ರಮುಖ ಕಾರಣವಾಯಿತು” ಎಂದು ಸಿಎಂಒ ಮತ್ತು ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್‌ನ ನೇರ ಮಾರಾಟದ ಮುಖ್ಯಸ್ಥ ವಿವೇಕ್ ಚತುರ್ವೇದಿ ಹೇಳುತ್ತಾರೆ.

“ಸಾಂಕ್ರಾಮಿಕ ರೋಗದಿಂದಾಗಿ, ಕಳೆದ ಎರಡು ವರ್ಷಗಳಲ್ಲಿ ಉದ್ಯಮದಲ್ಲಿನ ಆರೋಗ್ಯ ವಿಮಾ ಕಂತುಗಳು 10-15% ರಷ್ಟು ಏರಿಕೆಯಾಗಿರಬಹುದು ” ಎಂದು ಚತುರ್ವೇದಿ ವಿವರಿಸುತ್ತಾರೆ.

ಕಡಿಮೆ ವಿಮಾ ಕವರೇಜ್‌
ಇತರ ದೇಶಗಳಿಗೆ ಹೋಲಿಸಿದರೆ ಆರೋಗ್ಯ ವಿಮೆಯು ನೀಡುತ್ತಿರುವ ವಿಮಾ ಕವರೇಜ್‌ ಭಾರತದಲ್ಲಿ ಬಹಳಷ್ಟು ಕಡಿಮೆಯಿದೆ. ಚೀನಾದಲ್ಲಿ 0.7% ಮತ್ತು US ನಲ್ಲಿ 4.1% ರಷ್ಟು ವಿಮಾ ಕವರೇಜ್‌ಗೆ ಹೋಲಿಸಿದರೆ ಭಾರತದಲ್ಲಿ ಕೇವಲ 0.4% ರಷ್ಟಿದೆ ಎಂದು ದತ್ತಾಂಶಗಳು ಸೂಚಿಸುತ್ತವೆ. ಇದಕ್ಕೆ ಕಡಿಮೆ ತಲಾ ಆದಾಯ ಮತ್ತು ಜನತೆಯಲ್ಲಿ ವಿಮೆಯ ಬಗ್ಗೆ ಅರಿವು ಮತ್ತು ಶಿಕ್ಷಣದ ಕೊರತೆ ಇವುಗಳ ಹಿಂದಿನ ಕೆಲವು ಕಾರಣಗಳಾಗಿವೆ.

ಆರೋಗ್ಯ ವಿಮೆಯು ಭಾರತದ ಜನಸಂಖ್ಯೆಯ ಹೆಚ್ಚಿನ ಭಾಗದ ಜನರಿಗೆ ಇನ್ನು ಕನಸಾಗೇ ಉಳಿದಿರುವುದರಿಂದ, ಸರ್ಕಾರವು ಪ್ರತಿ ವರ್ಷವು ಕಡಿಮೆ ಆದಾಯ ಇರುವ ಜನರಿಗೆ ವಿವಿಧ ವಿಮಾ ಯೋಜನೆಗಳನ್ನು ನೀಡುತ್ತಿದೆ.

ಇದನ್ನೂ ಓದಿ: Explained: ನಿಮ್ಮ ಖಾಸಗಿ ಫೋಟೋ, ವಿಡಿಯೋ ವೈರಲ್ ಆಗಿದ್ರೆ ಹೀಗೆ ಮಾಡಿ; ತಕ್ಷಣ ಪರಿಹಾರ ಸಿಗುತ್ತೆ

ಈ ಯೋಜನೆಗಳಲ್ಲಿ ಕೆಲವು ಆಯುಷ್ಮಾನ್ ಭಾರತ್ ಯೋಜನೆ, ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ, ಉದ್ಯೋಗ ರಾಜ್ಯ ವಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ, ಮತ್ತು ಆಮ್ ಆದ್ಮಿ ಬಿಮಾ ಯೋಜನೆ ಇನ್ನು ಹಲವು ಯೋಜನೆಗಳು ಸೇರಿವೆ. ಸರ್ಕಾರಿ ಯೋಜನೆಗಳ ಕಡಿಮೆ ಪ್ರೀಮಿಯಂಗಳನ್ನು ಹೊಂದಿದ್ದು ಹೆಚ್ಚು ಲಾಭದಾಯಕವಾಗಿವೆ ಎಂದು ದತ್ತಾಂಶಗಳು ಸೂಚಿಸುತ್ತವೆ. ಆದರೆ, ಇನ್ನೂ ಆರೋಗ್ಯ ಸೇವೆ ನಿರ್ಲಕ್ಷಿತ ಕ್ಷೇತ್ರವಾಗಿಯೇ ಉಳಿದಿದೆ. 2004-05 ರಿಂದ 2017-18 ರವರೆಗೆ ಸ್ವಲ್ಪ ಚೇತರಿಕೆಯನ್ನು ಕಂಡಿದೆ ಎಂದು ಹೇಳಬಹುದು.
Published by:Ashwini Prabhu
First published: