Ginger Price: ಉತ್ತರ ಭಾರತದಿಂದ ಭಾರೀ ಬೇಡಿಕೆ; ದಿಢೀರ್ ಏರಿಕೆಯಾದ ಶುಂಠಿ ಬೆಲೆ

ಒಂದು ಎಕರೆ ಶುಂಠಿ ಬೆಳೆಯಲು ರೈತರು 3 ರಿಂದ 4 ಲಕ್ಷ ರೂ. ಖರ್ಚು ಮಾಡಬೇಕಾಗುತ್ತದೆ. ಒಂದು ಎಕರೆಯಲ್ಲಿ ರೈತರ ಕೈಗೆ 200 ರಿಂದ 300 ಕ್ವಿಂಟಲ್ ಶುಂಠಿ ಬೆಳೆ ಕೈ ಸೇರುತ್ತದೆ. ಆದ್ರೆ ಶುಂಠಿ ಬೆಳೆಗೆ ರೋಗ ತಗುಲುವ ಸಾಧ್ಯತೆ ಹೆಚ್ಚಿರುತ್ತದೆ. ರೈತರು ಸ್ವಲ್ಪ ನಿರ್ಲಕ್ಷ್ಯ ವಹಿಸಿದ್ರೂ ಫಸಲು ಹಾಳಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಶುಂಠಿ (Ginger) ಅಡುಗೆಯಲ್ಲಿದ್ರೆ ಅದರ ರುಚಿಯೇ ಬೇರೆಯಾಗಿರುತ್ತದೆ. ಉತ್ತರ ಕರ್ನಾಟಕದಲ್ಲಿ (North Karnataka) ಶುಂಠಿಗೆ ಅದರಕ್ ಅಂತ ಕರೆಯುತ್ತಾರೆ. ಈ ಹಿಂದೆ ಕಡಿಮೆ ಬೆಲೆಗೆ ಶುಂಠಿ ಮಾರಾಟ ಮಾಡಿದ್ದ ರೈತರು (Farmers) ಈಗ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಕಾರಣ ಇದೀಗ ಶುಂಠಿಗೆ ಮಾರುಕಟ್ಟೆಯಲ್ಲಿ (Ginger Market) ಹೆಚ್ಚು ಬೇಡಿಕೆಯುಂಟಾಗಿದೆ. ಕಳೆದ ಎರಡ್ಮೂರು ದಿನಗಳಿಂದ ಶುಂಠಿಯ ಬೆಲೆ ಹಂತ ಹಂತವಾಗಿ ಏರಿಕೆಯಾಗುತ್ತಿದೆ. ಕಳೆದ ವಾರ ಅಂದ್ರೆ ಎಂಟರಿಂದ 10 ದಿನಗಳ ಹಿಂದೆ ಶುಂಠಿ ಬೆಲೆ (Ginger Price) ಕ್ವಿಂಟಲ್​ಗೆ 1,600 ರೂ.ಗಳಿಂದ 2,200 ರೂ.ಗೆ ಮಾರಾಟವಾಗಿತ್ತು. ಇದೀಗ ಒಂದೇ ವಾರದಲ್ಲಿ ಶುಂಠಿ ಬೆಲೆ ಮೂರುಪಟ್ಟು ಹೆಚ್ಚಳವಾಗಿದೆ.   

ಶುಂಠಿ ಬೆಲೆ ಏರಿಕೆ ಆಗಿದ್ದೇಕೆ?

ಶುಂಠಿ ಉತ್ತರ ಭಾರತದಲ್ಲಿ ಹೆಚ್ಚು ಬೇಡಿಕೆ ಹೊಂದಿದೆ. ಈಗ ಶುಂಠಿ ಬಿತ್ತನೆ ಕಾರ್ಯ ಸಹ ನಡೆಯುತ್ತಿದೆ. ಅಡುಗೆ ಬಳಕೆ ಮತ್ತು ಬಿತ್ತನೆಗೂ ಶುಂಠಿ ಬೇಕು. ಆದ್ದರಿಂದ ಬೇಡಿಕೆ ಹೆಚ್ಚಾಗಿದ್ದರಿಂದ ಬೆಲೆ ಸಹ ಏರಿಕೆಯಾಗಿದೆ. ಕಳೆದ ವಾರ ಧಾರಣೆ ಹೆಚ್ಚಾಗಲ್ಲ ಎಂಬ ನಂಬಿಕೆಯಿಂದ ಬಹುತೇಕ ರೈತರು ಶುಂಠಿಯನ್ನು 1,600 ರೂ.ಗಳಿಂದ 2,200 ರೂ.ಗೆ ಮಾರಾಟ ಮಾಡಿದ್ದರು. ಅದ್ರೆ ಈಗ ಬದಲಾದ ಪರಿಸ್ಥಿತಿಯಲ್ಲಿ  ಶುಂಠಿ ಬೆಲೆ ಏರಿಕೆ ಕಂಡಿದೆ.

ಇನ್ನೂ ಕಡಿಮೆ ಬೆಲೆ ಅಂತ ಶುಂಠಿಯನ್ನು ಇರಿಸಿಕೊಂಡಿದ್ದ ರೈತರಿಗೆ ದೊಡ್ಡ ಮಟ್ಟದಲ್ಲಿ ಲಾಭ ಸಿಗುತ್ತದೆ. ಕಳೆದ ವಾರವೇ ರಾಜ್ಯದಲ್ಲಿ ಶೇ.50ರಷ್ಟು ಶುಂಠಿ ಕಡಿಮೆ ಬೆಲೆಗೆ ಮಾರಾಟವಾಗಿದೆ.

ಇದನ್ನೂ ಓದಿ:  BRTS Chigari: ಬರೋಬ್ಬರಿ ₹970 ಕೋಟಿ ಖರ್ಚು ಮಾಡಿ ರಸ್ತೆ ಮಾಡಿದ್ರು, ಮೂರೇ ವರ್ಷದಲ್ಲಿ ಮತ್ತೆ 70 ಕೋಟಿ ವೆಚ್ಚ!

ಬೆಲೆ ಸ್ಥಿರತೆಯಲ್ಲಿ ಅಸ್ಪಷ್ಟತೆ

ಸದ್ಯ ಬೆಲೆ ಏರಿಕೆಯಾಗಿದ್ರೂ ಇದು ಹೀಗೆ ಎಷ್ಟು ದಿನ ಇರುತ್ತೆ ಅನ್ನೋದರ ಸ್ಪಷ್ಟತೆ ಇಲ್ಲ. ಹಾಗಾಗಿ ಶುಂಠಿಯನ್ನು ಮಾರಾಟ ಮಾಡಬೇಕಾ ಅಥವಾ ಇನ್ನುಷ್ಟು ದಿನ ಇಟ್ಟುಕೊಳ್ಳಬೇಕಾ ಅನ್ನೋ ಗೊಂದಲದಲ್ಲಿದ್ದಾರೆ.

ಸದ್ಯ ಮಾರುಕಟ್ಟೆಯಲ್ಲಿ ಅಂದ್ರೆ ಶುಕ್ರವಾರ 4,200 ರೂ. ಇತ್ತು. ಆದ್ರೆ ಶನಿವಾರ ವೇಳೆ ಶುಂಠಿ 3,500 ರೂ.ಗಳಿಗೆ ಕುಸಿತಕೊಂಡಿತ್ತು. ಕಳೆದ ವರ್ಷ ಈ ಸಮಯದಲ್ಲಿ ಶುಂಠಿ ಬೆಲೆ ಕುಸಿತ ಕಂಡಿತ್ತು. ಪ್ರತಿ ಕ್ವಿಂಟಲ್ ಶುಂಠಿ 2,200 ರಿಂದ 3,300 ರೂ.ಗೆ ಮಾರಾಟವಾಗಿತ್ತು.

Rising ginger price raises in market mrq
ಸಾಂದರ್ಭಿಕ ಚಿತ್ರ


ಜೂಜಾಟವಿದ್ದಂತೆ ಶುಂಠಿ ಕೃಷಿ

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಭಾಗದ ರೈತರು ಹೆಚ್ಚಾಗಿ ಶುಂಠಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಆದ್ರೆ ಶುಂಠಿ ಬೆಲೆ ಮಾತ್ರ ಮಾರುಕಟ್ಟೆಯಲ್ಲಿ ಸ್ಥಿರವಾಗಿರಲ್ಲ. ಕೆಲವೊಮ್ಮೆ ಬೆಲೆ ದಿಢೀರ್ ಏರಿಕೆಯಾದ್ರೆ, ಇಳಿಕೆಯಾಗುತ್ತದೆ. ಶುಂಠಿ ಬೆಳೆದ ಕೆಲವರು ಕೋಟ್ಯಧಿಪತಿಯಾಗಿರೋರು ಉಂಟು. ಒಂದಿಷ್ಟು ಜನ ಹಣ ಕಳೆದುಕೊಂಡಿದ್ದಾರೆ.

ಒಂದು ಎಕರೆ ಶುಂಠಿ ಬೆಳೆಯಲು ರೈತರು 3 ರಿಂದ 4 ಲಕ್ಷ ರೂ. ಖರ್ಚು ಮಾಡಬೇಕಾಗುತ್ತದೆ. ಒಂದು ಎಕರೆಯಲ್ಲಿ ರೈತರ ಕೈಗೆ 200 ರಿಂದ 300 ಕ್ವಿಂಟಲ್ ಶುಂಠಿ ಬೆಳೆ ಕೈ ಸೇರುತ್ತದೆ. ಆದ್ರೆ ಶುಂಠಿ ಬೆಳೆಗೆ ರೋಗ ತಗುಲುವ ಸಾಧ್ಯತೆ ಹೆಚ್ಚಿರುತ್ತದೆ. ರೈತರು ಸ್ವಲ್ಪ ನಿರ್ಲಕ್ಷ್ಯ ವಹಿಸಿದ್ರೂ ಫಸಲು ಹಾಳಾಗುತ್ತದೆ.

ಲಾಭ ಅನಿಶ್ಚಿತತೆ

ಕೊರೊನಾ ಮತ್ತು ಲಾಕ್ ಡೌನ್ ನಿಂದಾಗಿ ಕಳೆದ ಎರಡು ವರ್ಷ ಶುಂಠಿ ಮಾರಾಟಗಾರರು ಕೈ ಸುಟ್ಟುಕೊಳ್ಳುವಂತಾಗಿತ್ತು. ಶುಂಠಿ ಬೆಳೆಯಲು ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಸದ್ಯ ಬೆಲೆ ಏರಿಕೆಯಾಗಿದ್ದರಿಂದ ರೈತರು ಸಂತಸಗೊಂಡಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ನಿಶ್ಚಿತ ರೂಪದಲ್ಲಿರಲ್ಲ ಎಂದು ರೈತರು ಹೇಳುತ್ತಾರೆ.

ಇದನ್ನೂ ಓದಿ:  Belagavi: ಭೀಕರ ಅಪಘಾತ ಪ್ರಕರಣ, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

ಸದ್ಯ ಗುಣಮಟ್ಟದ ಶುಂಠಿಗೆ ಹೆಚ್ಚು ಬೇಡಿಕೆಯುಂಟಾಗಿದೆ. ಇತ್ತ ಉತ್ತರ ಭಾರತದಲ್ಲಿ ಶುಂಠಿ ಬಳಕೆ ಹೆಚ್ಚು. ಕೊರೊನಾ ಬಳಿಕ ಶುಂಠಿ ರಫ್ತು ಸಹ ಹೆಚ್ಚಾಗಿರೋದರಿಂದ ಬೆಲೆ ಏರಿಕೆಯಾಗಿದೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.

ಟೊಮಾಟೋ ಬೆಲೆ ಏರಿಕೆ

ಕಳೆದ ಒಂದು ವಾರದಿಂದ ಇಳಿಕೆಯಾಗಿದ್ದ ಟೊಮಾಟೋ ಬೆಲೆ ದಿಢೀರ್ ಏರಿಕೆಯಾಗಿದೆ. ಒಂದು ಕೆಜಿ ಟೊಮ್ಯಾಟೋ ಬೆಲೆ 70 ರಿಂದ 80 ರೂ.ಗೆ ತಲುಪಿದೆ.
Published by:Mahmadrafik K
First published: