• Home
  • »
  • News
  • »
  • business
  • »
  • Rishi Sunak: ಶ್ರೀಮಂತರ ಪಟ್ಟಿಯಲ್ಲಿ ಸ್ಥಾನಪಡೆದ ರಿಷಿ ಸುನಕ್! ಬ್ರಿಟನ್ ಪ್ರಧಾನಿ ಕುಟುಂಬದ ಆಸ್ತಿ ಎಷ್ಟು ಗೊತ್ತಾ?

Rishi Sunak: ಶ್ರೀಮಂತರ ಪಟ್ಟಿಯಲ್ಲಿ ಸ್ಥಾನಪಡೆದ ರಿಷಿ ಸುನಕ್! ಬ್ರಿಟನ್ ಪ್ರಧಾನಿ ಕುಟುಂಬದ ಆಸ್ತಿ ಎಷ್ಟು ಗೊತ್ತಾ?

ರಿಷಿ ಸುನಕ್​

ರಿಷಿ ಸುನಕ್​

ಹಿಂದುಜಾ ಕುಟುಂಬ ಅಗ್ರಸ್ಥಾನದಲ್ಲಿರುವ ಯುಕೆಯ ಏಷ್ಯನ್ ಶ್ರೀಮಂತರ ಪಟ್ಟಿ 2022 ರಲ್ಲಿ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಪ್ರವೇಶ ಪಡೆದುಕೊಂಡಿದ್ದಾರೆ. ನೀವು ತಿಳಿದುಕೊಳ್ಳಬೇಕಾದ ವಿಷಯ ಏನು ಅಂದ್ರೆ ಬ್ರಿಟನ್ ಪ್ರಧಾನಿ ಕುಟುಂಬದ ಆಸ್ತಿ ಎಷ್ಟು ಅನ್ನೋದು.

ಮುಂದೆ ಓದಿ ...
  • News18 Kannada
  • Last Updated :
  • New Delhi, India
  • Share this:

    ಹಿಂದುಜಾ (Hinduja)  ಕುಟುಂಬ ಅಗ್ರಸ್ಥಾನದಲ್ಲಿರುವ ಯುಕೆಯ ಏಷ್ಯನ್ (UK Asian) ಶ್ರೀಮಂತರ ಪಟ್ಟಿ (Rich list) 2022 ರಲ್ಲಿ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ (British Prime minister) ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಪ್ರವೇಶ ಪಡೆದುಕೊಂಡಿದ್ದಾರೆ. ರಿಷಿ ಸುನಕ್ ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ ಹಾಗೂ ಇನ್ಫೋಸಿಸ್ (Infosys) ಸಹ ಸ್ಥಾಪಕರಾದ ಅಕ್ಷತಾ ಮೂರ್ತಿಯವರ ತಂದೆ ಎನ್‌ ಆರ್ ನಾರಾಯಣ್ ಮೂರ್ತಿ  ಅಂದಾಜು 790 ಮಿಲಿಯನ್ ಪೌಂಡ್ (7 Million Pound)  ಸಂಪತ್ತಿನೊಂದಿಗೆ 17 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.


    ಹೆಚ್ಚಳ ಕಂಡಿರುವ ಶ್ರೀಮಂತರ ಪಟ್ಟಿ


    ಈ ವರ್ಷದ ಪಟ್ಟಿಯ ಒಟ್ಟು ಸಂಪತ್ತು 113.2 ಶತಕೋಟಿ ಪೌಂಡ್‌ಗಳಷ್ಟಿದ್ದು, ಕಳೆದ ವರ್ಷಕ್ಕಿಂತ 13.5 ಶತಕೋಟಿ ಪೌಂಡ್‌ಗಳ ಹೆಚ್ಚಳವಾಗಿದೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಹಿಂದೂಜಾ ಕುಟುಂಬವು ಸತತ ಎಂಟನೇ ಬಾರಿಗೆ 30.5 ಶತಕೋಟಿ ಪೌಂಡ್‌ಗಳ ಅಂದಾಜು ಸಂಪತ್ತನ್ನು ಹೊಂದಿದ್ದು, ಕಳೆದ ವರ್ಷಕ್ಕಿಂತ 3 ಬಿಲಿಯನ್ ಪೌಂಡ್‌ಗಳ ಹೆಚ್ಚಳದೊಂದಿಗೆ ಅಗ್ರಸ್ಥಾನದಲ್ಲಿದೆ.


    ಹಿಂದೂಜಾ ಕುಟುಂಬಕ್ಕೆ ಅಗ್ರಸ್ಥಾನ


    ವೆಸ್ಟ್‌ಮಿನ್‌ಸ್ಟರ್ ಪಾರ್ಕ್ ಪ್ಲಾಜಾ ಹೋಟೆಲ್‌ನಲ್ಲಿ ನಡೆದ 24ನೇ ವಾರ್ಷಿಕ ಏಷ್ಯನ್ ಬಿಸಿನೆಸ್ ಅವಾರ್ಡ್ಸ್ ಸಮಾರಂಭದಲ್ಲಿ, ಲಂಡನ್ ಮೇಯರ್ ಸಾದಿಕ್ ಖಾನ್ ಏಷ್ಯನ್ ಶ್ರೀಮಂತರ ಪಟ್ಟಿ 2022 ರ ಪ್ರಶಸ್ತಿ ಪ್ರತಿಯನ್ನು ಹಿಂದೂಜಾ ಗ್ರೂಪ್‌ನ ಸಹ-ಅಧ್ಯಕ್ಷ ಗೋಪಿಚಂದ್ ಹಿಂದುಜಾ ಅವರ ಪುತ್ರಿ ರಿತು ಛಾಬ್ರಿಯಾ ಅವರಿಗೆ ನೀಡಿದ್ದಾರೆ. ಹಿಂದೂಜಾ ಗ್ರೂಪ್ ಭಾರತೀಯ ಬಹುರಾಷ್ಟ್ರೀಯ ಸಂಘಟಿತ ಸಂಸ್ಥೆಯಾಗಿದೆ. ಹನ್ನೊಂದು ವಲಯಗಳಲ್ಲಿ ಹಿಂದೂಜಾ ಗುಂಪು ಸಂಸ್ಥೆಗಳನ್ನು ಹೊಂದಿದೆ.


    Rishi Sunak ranked in the list of rich people Do you know how much property
    ರಿಷಿ ಸುನಕ್​


    ಏಷ್ಯನ್ನರ ಮಹತ್ವದ ಸಾಧನೆ


    ಸಭೆಯ ಮುಖ್ಯ ಅತಿಥಿಗಳಾಗಿದ್ದ ಡಚಿ ಆಫ್ ಲ್ಯಾಂಕಾಸ್ಟರ್ ವಾಯ್ಸ್ ಚಾನ್ಸೆಲರ್ ಆಲಿವರ್ ಡೌಡೆನ್ ಮಾತನಾಡಿ, ಪ್ರತೀ ವರ್ಷ ಬ್ರಿಟನ್‌ನ ಏಷ್ಯನ್ ಸಮುದಾಯವು ಪ್ರಗತಿಯನ್ನು ಸಾಧಿಸುತ್ತಿದ್ದು ಇದು ಅತ್ಯಂತ ಮಹತ್ತರವಾದ ಸಾಧನೆ ಎಂದು ಬಣ್ಣಿಸಿದ್ದಾರೆ. ಏಷ್ಯನ್ನರ ದೃಢತೆ, ಉದ್ಯಮಶೀಲತೆ, ಕಠಿಣ ಪರಿಶ್ರಮವನ್ನು ಚೆನ್ನಾಗಿಯೇ ಅರಿತಿದ್ದು ಇದುವೇ ಅವರ ಯಶಸ್ಸಿನ ಗುಟ್ಟಾಗಿದೆ ಎಂದು ತಿಳಿಸಿದ್ದಾರೆ.


    ಇದನ್ನೂ ಓದಿ: Business Idea: ಈ ಬ್ಯುಸಿನೆಸ್​ಗೆ ಇಂತಿಷ್ಟೇ ಅಂತ ಹೂಡಿಕೆ ಬೇಕಿಲ್ಲ, ತಿಂಗಳಿಗೆ 40 ಸಾವಿರ ಆರಾಮಾಗಿ ದುಡಿಯಬಹುದು!


    ಇದೀಗ ಬ್ರಿಟಿಷ್ ಏಷ್ಯನ್ ಬಾಸ್ ಆಗಿ ರಿಷಿ ಸುನಕ್‌ರ ಆಡಳಿತದಲ್ಲಿ ನಾನಿದ್ದು, ಯುಕೆಯ ಮೊದಲ ಬ್ರಿಟಿಷ್ ಏಷ್ಯನ್ ಪ್ರಧಾನ ಮಂತ್ರಿ ರಿಷಿ ಸುನಕ್ ಆಗಿದ್ದಾರೆ ಎಂದು ತಿಳಿಸಿದ್ದಾರೆ.


    ಅತ್ಯಂತ ಕಿರಿಯ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್


    10 ಡೌನಿಂಗ್ ಸ್ಟ್ರೀಟ್‌ಗಾಗಿ ಲಿಜ್ ಟ್ರಸ್‌ಗೆ ಪ್ರತಿಸ್ಪರ್ಧಿಯಾಗಿ ಸೋತ ಏಳು ವಾರಗಳ ನಂತರ ಅಕ್ಟೋಬರ್ 25 ರಂದು ಯುಕೆಯ ಮೊದಲ ಭಾರತೀಯ ಮೂಲದ ಪ್ರಧಾನ ಮಂತ್ರಿಯಾಗಿ ನೇಮಕಗೊಂಡು ಪ್ರಭಾವಶಾಲಿ ಪುನರ್ ಆಗಮನವನ್ನು ಮಾಡಿದ್ದರು ರಿಷಿ ಸುನಕ್. 42 ರ ಹರೆಯದ ಹೂಡಿಕೆ ಬ್ಯಾಂಕರ್ ಅಗಿರುವ ರಿಷಿ, 210 ವರ್ಷಗಳ ಇತಿಹಾಸದಲ್ಲಿ ಅತ್ಯಂತ ಕಿರಿಯ ಬ್ರಿಟಿಷ್ ಪ್ರಧಾನಿ ಮತ್ತು ಯುಕೆಯ ಮೊದಲ ಹಿಂದೂ ಪ್ರಧಾನಿಯಾಗಿದ್ದಾರೆ.


    ಪಟ್ಟಿಯಲ್ಲಿರುವ ಇತರ ಶ್ರೀಮಂತರು


    ಈ ವರ್ಷದ ಏಷ್ಯನ್ ಶ್ರೀಮಂತರ ಪಟ್ಟಿಯು ಯುಕೆಯಿಂದ 16 ಬಿಲಿಯನೇರ್‌ಗಳನ್ನು ಹೊಂದಿದೆ. ಕಳೆದ ವರ್ಷಕ್ಕಿಂತ ಒಬ್ಬರು ಹೆಚ್ಚಾಗಿದ್ದಾರೆ ಎಂದು ತಿಳಿದುಬಂದಿದೆ. ಶ್ರೀ ಪ್ರಕಾಶ್ ಲೋಹಿಯಾ ಮತ್ತು ಕುಟುಂಬವು ಈ ವರ್ಷದ ಪಟ್ಟಿಯಲ್ಲಿ ಸಂಪತ್ತಿನ ಅತಿದೊಡ್ಡ ಹೆಚ್ಚಳವನ್ನು ಕಂಡಿದ್ದು, ಅವರ ಸಂಪತ್ತು 4 ಬಿಲಿಯನ್ ಪೌಂಡ್‌ಗಳಿಂದ 8.8 ಬಿಲಿಯನ್ ಪೌಂಡ್‌ಗಳಿಗೆ ಏರಿಕೆಯಾಗಿದೆ.




    ಲಕ್ಷ್ಮಿ ಮಿತ್ತಲ್ ಮತ್ತು ಅವರ ಪುತ್ರ ಆದಿತ್ಯ (12.8 ಬಿಲಿಯನ್ ಪೌಂಡ್) ಮತ್ತು ಪ್ರಕಾಶ್ ಲೋಹಿಯಾ ಮತ್ತು ಕುಟುಂಬ (8.8 ಬಿಲಿಯನ್ ಪೌಂಡ್) ಮತ್ತು ನಿರ್ಮಲ್ ಸೇಥಿಯಾ (6.5 ಬಿಲಿಯನ್ ಪೌಂಡ್) ಪಟ್ಟಿಯಲ್ಲಿರುವ ಇತರ ಶ್ರೀಮಂತರಾಗಿದ್ದಾರೆ.


    ಬ್ರಿಟನ್ ಏಷ್ಯಾದ ಸಂಪತ್ತಿಗೆ ಪಟ್ಟಿ ನಿರ್ಣಾಯಕ


    ಏಷ್ಯನ್ ಶ್ರೀಮಂತರ ಪಟ್ಟಿಯನ್ನು ತಜ್ಞರ ತಂಡವು ಎಚ್ಚರಿಕೆಯಿಂದ ಸಂಗ್ರಹಿಸಿದ್ದು ಇದು ಬ್ರಿಟನ್‌ನಲ್ಲಿ ಏಷ್ಯಾದ ಸಂಪತ್ತಿಗೆ ನಿರ್ಣಾಯಕ ಮಾರ್ಗದರ್ಶಿಯಾಗಿದೆ ಎಂದು ಏಷ್ಯನ್ ಮಾರ್ಕೆಟಿಂಗ್ ಗ್ರೂಪ್ (AMG) ನ ಕಾರ್ಯನಿರ್ವಾಹಕ ಸಂಪಾದಕ ಮತ್ತು ಕಾರ್ಯಕ್ರಮದ ನಿರೂಪಕ ಶೈಲೇಶ್ ಆರ್ ಸೋಲಂಕಿ ತಿಳಿಸಿದ್ದಾರೆ.

    Published by:Gowtham K
    First published: