• Home
  • »
  • News
  • »
  • business
  • »
  • Rishi Sunak: ರಿಷಿ ಸುನಕ್​-ಅಕ್ಷತಾ ನಡುವೆ ಪ್ರೀತಿ ಹುಟ್ಟಿದ್ದೇ ರೋಚಕ, ಕರ್ನಾಟಕ ಅಳಿಯನ ಕಂಪ್ಲೀಟ್ ಪ್ರೇಮ್​ ಕಹಾನಿ ಇಲ್ಲಿದೆ!

Rishi Sunak: ರಿಷಿ ಸುನಕ್​-ಅಕ್ಷತಾ ನಡುವೆ ಪ್ರೀತಿ ಹುಟ್ಟಿದ್ದೇ ರೋಚಕ, ಕರ್ನಾಟಕ ಅಳಿಯನ ಕಂಪ್ಲೀಟ್ ಪ್ರೇಮ್​ ಕಹಾನಿ ಇಲ್ಲಿದೆ!

ರಿಷಿ ಸುನಕ್, ಅಕ್ಷತಾ ಮೂರ್ತಿ

ರಿಷಿ ಸುನಕ್, ಅಕ್ಷತಾ ಮೂರ್ತಿ

Rishi Sanak-Akshata Murthy : ಭಾರತೀಯ ಮೂಲದ ರಿಷಿ ಸನಕ್​ ಅವರು  ಬ್ರಿಟನ್​ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಇದೇ ತಿಂಗಳ 28ರಂದು ಅಧಿಕಾರ ವಹಿಸುತ್ತಿದ್ದಾರೆ. ರಿಷಿ ಸನಕ್ ಭಾರತೀಯ ಅನ್ನುವದ್ದಕ್ಕಿಂತ ಕರ್ನಾಟಕದ ಅಳಿಯ ಎಂದು ಕರೆಯುವ ಸಂತೋಷವೇ ಬೇರೆ.

  • News18 Kannada
  • Last Updated :
  • Karnataka, India
  • Share this:

200 ವರ್ಷಗಳ ಹಿಂದೆ ಬ್ರಿಟಿಷರು ( British) ನಮ್ಮನ್ನು ಆಳುತ್ತಿದ್ದರು. ಭಾರತೀಯ(Indians) ರನ್ನು ಗುಲಾಮರಂತೆ ನೋಡುತ್ತಿದ್ದರೆ. ಅವರ ಹೇಳುವ ಪ್ರತಿಯೊಂದು ಕೆಲಸವನ್ನು ತಲೆ ಎತ್ತದೆ ಭಾರತೀಯರು ಮಾಡಬೇಕಿತ್ತು. ಆದರೆ, ಈಗ ಭಾರತೀಯರು ಬ್ರಿಟಿಷರನ್ನು ಆಳುವ ಸಮಯ ಬಂದಿದೆ. ಭಾರತೀಯರು ಹೇಳಿದ್ದನ್ನು ಚಾಚು ತಪ್ಪದೇ ಆ ಇಂಗ್ಲಿಷರು ಮಾಡಬೇಕಾಗಿದೆ. ಹೌದು, ಭಾರತೀಯ ಮೂಲದ ರಿಷಿ ಸನಕ್​ (Rishi Sunak) ಅವರು  ಬ್ರಿಟನ್​ ಪ್ರಧಾನ ಮಂತ್ರಿಯಾಗಿ (Britain Prime Minister) ಆಯ್ಕೆಯಾಗಿದ್ದಾರೆ. ಇದೇ ತಿಂಗಳ 28ರಂದು ಅಧಿಕಾರ ವಹಿಸುತ್ತಿದ್ದಾರೆ. ರಿಷಿ ಸನಕ್ ಭಾರತೀಯ ಅನ್ನುವದ್ದಕ್ಕಿಂತ ಕರ್ನಾಟಕದ ಅಳಿಯ ಎಂದು ಕರೆಯುವ ಸಂತೋಷವೇ ಬೇರೆ. ಹೌದು, ಇನ್ಫೊಸೀಸ್​ (Infosys)​ ನಾರಾಯಣ ಮೂರ್ತಿ (Narayana Murthy), ಸುಧಾ ಮೂರ್ತಿ (Sudha Murthy) ಯವರ ಪುತ್ರಿ ಅಕ್ಷತಾ ಮೂರ್ತಿ (Akshata Murthy) ಯವರ ಪತಿ ಈ ರಿಷಿ ಸನಕ್​.


ಇವರಿಬ್ಬರ ನಡುವೆ ಪ್ರೀತಿ ಚಿಗುರೊಡೆದಿದ್ದೆಲ್ಲಿ? ಇವರಿಬ್ಬರ ಮೊದಲ ಭೇಟಿ ಯಾವಾಗ? ಇವರ ಪ್ರೀತಿಗೆ ಒಂದೇ ಬಾರಿಗೆ ಪೋಷಕರು ಒಪ್ಪಿಕೊಂಡ್ರಾ? ಮದುವೆಯಾದ ಮಂಟಪವಾದರೂ ಯಾವುದು? ಈ ರೀತಿಯ  ಹತ್ತು ಹಲವು ಪ್ರಶ್ನೆಗಳು ಈಗ ಮುನ್ನೆಲೆಗೆ ಬಂದಿದೆ. ರಿಷಿ ಸನಕ್​ ಬ್ರಿಟನ್ ಪ್ರಧಾನಮಂತ್ರಿಯಾಗಿ ಆಯ್ಕೆಯಾಗುತ್ತಿದ್ದಂತೆ, ಇಲ್ಲಿ ಕರ್ನಾಟಕದಲ್ಲಿ ಜನರು ಇವರ ಬಗ್ಗೆ ಹೆಚ್ಚಾಗಿ ಹುಡುಕಲು ಶುರು ಮಾಡಿಕೊಂಡಿದ್ದಾರೆ.


ರಿಷಿ ಸುನಕ್​-ಅಕ್ಷತಾ ಮೂರ್ತಿ ಮೊದಲ ಭೇಟಿ?


ಇನ್ಫೋಸಿಸ್ ಸಹ ಸಂಸ್ಥಾಪಕಿ ಮತ್ತು ಮಾಜಿ ಅಧ್ಯಕ್ಷ ಎನ್.ಆರ್.ನಾರಾಯಣ ಮೂರ್ತಿ ಅವರ ಮೊದಲ ಪುತ್ರಿ ಅಕ್ಷತಾ ಮೂರ್ತಿ. ಮೊದಲು ಅಕ್ಷತಾ ಮೂರ್ತಿ ಅವರು ರಿಷಿ ಸುನಕ್ ಅವರನ್ನು ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಭೇಟಿಯಾದರು. ಭೇಟಿ ಸ್ನೇಹಕ್ಕೆ ತಿರುಗಿತ್ತು. ಆ ಸ್ನೇಹ ಪ್ರೀತಿಗೆ ತಿರುಗಿತ್ತು. ಇಬ್ಬರು ಅದೇ ವಿಶ್ವವಿದ್ಯಾಲಯದಲ್ಲಿ ಎಂಬಿಎ ಓದುತ್ತಿದ್ದರು.


ರಿಷಿ ಸುನಕ್​ ಕುಟುಂಬ


ಸ್ನೇಹದಿಂದ ಹುಟ್ಟಿತ್ತು ಪ್ರೀತಿ!


ಸುಮಾರು 5000 ಕೋಟಿ ಮೌಲ್ಯದ ಇನ್ಫೋಸಿಸ್​ ಪಾಲನ್ನು ಹೊಂದಿರುವ ಅಕ್ಷತಾ ಓದಿನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಅಷ್ಟೇಲ್ಲಾ ಸಂಪತ್ತಿದ್ದರು, ವಿದ್ಯಾರ್ಥಿವೇತನ ಮೇಲೆ ಸ್ಟ್ಯಾನ್ ಫೋರ್ಡ್​ ವಿಶ್ವವಿದ್ಯಾಲಯದಲ್ಲಿ ಸೀಟು ಪಡೆದುಕೊಂಡಿದ್ದರು. ಈ ವೇಳೆ ರಿಷಿ ಸನಕ್​ ಮೇಲೆ ಇವರಿಗೆ ಪ್ರೇಮಾಂಕುರವಾಗಿತ್ತು. ನೋಡಿದ ಮೊದಲ ನೋಟದಲ್ಲೇ ಅವರೇ ನನಗೆ ಸರಿಯಾದ ಜೀವನ ಸಂಗಾತಿ ಎಂದು ಅಕ್ಷತಾ ಮೂರ್ತಿ ಅಂದುಕೊಂಡಿದ್ದರಂತೆ. ಇಬ್ಬರು ಒಪ್ಪಿಕೊಳ್ಳಲು ಕೆಲ ಕಾಲ ಸಮಯ ತೆಗೆದುಕೊಂಡಿದ್ದರಂತೆ.


ಇದನ್ನೂ ಓದಿ: ಬ್ರಿಟನ್ ಪ್ರಧಾನಿಯಾದ ರಿಷಿ ಸುನಕ್, ಮಾವ ನಾರಾಯಣ ಮೂರ್ತಿ ಹೇಳಿದ್ದೇನು?


2009ರಲ್ಲಿ ಮದುವೆಯಾಗಿದ್ದ ಜೋಡಿ!


ಅದು ಇತ್ಯರ್ಥವಾದ ನಂತರ ಇಬ್ಬರು ಪೋಷಕರಿಗೆ ತಮ್ಮ ಪ್ರೀತಿ ಬಗ್ಗೆ ಹೇಳಿಕೊಂಡಿದ್ದರು. ಇಬ್ಬರ ಮನೆಯಲ್ಲೂ ಒಪ್ಪಿಕೊಂಡ ನಂತರ ದಂಪತಿಗಳು ಆಗಸ್ಟ್ 2009ರಲ್ಲಿ ಮೂರು ದಿನಗಳ ಕಾಲ ಗ್ರ್ಯಾಂಡ್​ ಆಗಿ ಬೆಂಗಳೂರಿನಲ್ಲಿ ಮದುವೆಯಾದರು. ಟೆಕ್ ಸಿಟಿಯಲ್ಲಿ ನಡೆದ ವಿವಾಹದಲ್ಲಿ  ಸಂಬಂಧಿಕರು ಮತ್ತು ಸ್ನೇಹಿತರು ಭಾಗಿಯಾಗಿದ್ದರು. ಬ್ರಾಹ್ಮಣ ಸಂಪ್ರದಾಯದಂತೆ ಮದುವೆ ಕಾರ್ಯಕ್ರಮಗಳು ಜರುಗಿತ್ತು.


ಅಕ್ಷತಾ, ರಿಷಿ ಸುನಕ್​


ಸಮಾರಂಭದಲ್ಲಿ ಬಿಲಿಯನೇರ್​ಗಳು, ಸಿಇಒಗಳು, ಕ್ರಿಕೆಟಿಗರು, ಮುಂಬೈನ ಹೆಸರಾಂತ ಗಣ್ಯರು, ಮಾಧ್ಯಮ ಉದ್ಯಮಿಗಳು, ಕೇಂದ್ರ ಮತ್ತು ಸ್ಥಳೀಯ ಮಂತ್ರಿಗಳು ಭಾಗಿಯಾಗಿದ್ದರು.


ನಗರದ ಹೊರವಲಯದಲ್ಲಿರುವ ತನ್ನ ವಿಶಾಲವಾದ ಹಸಿಯೆಂಡಾ ಶೈಲಿಯ ಬಂಗಲೆಯಲ್ಲಿ ಆಪ್ತ ಸ್ನೇಹಿತೆ ಮತ್ತು ಪ್ರಸ್ತುತ ಇನ್ಫೋಸಿಸ್ ಮಂಡಳಿಯ ಸದಸ್ಯೆ ಕಿರಣ್ ಮಜುಂದಾರ್-ಶಾ ಅವರು ಆಯೋಜಿಸಿದ್ದ ಮೆಹಂದಿ ಸಮಾರಂಭದೊಂದಿಗೆ ಆಚರಣೆಗಳು ಪ್ರಾರಂಭವಾಗಿತ್ತು.


ಇದನ್ನೂ ಓದಿ: ಕರ್ನಾಟಕದ ಅಳಿಯ ರಿಷಿ ಸುನಕ್! ಬ್ರಿಟನ್ ನೂತನ ಪ್ರಧಾನಿ ಬಗ್ಗೆ ಆಸಕ್ತಿಕರ ಮಾಹಿತಿ ಇಲ್ಲಿದೆ


ಜಯನಗರದಲ್ಲಿ ನಡೆದಿತ್ತು ವರ ಪೂಜೆ!


ಮರುದಿನ, ಜಯನಗರದ ಚಾಮರಾಜ ಕಲ್ಯಾಣ ಮಂಟಪದಲ್ಲಿ ವರ ಪೂಜೆ ನಡೆದಿತ್ತು. ಪೂರ್ವ ವಿವಾಹ ಸಮಾರಂಭದಲ್ಲಿ ಅಡಿಗರು ಪೂರೈಸುವ ಸಾಂಪ್ರದಾಯಿಕ ಕನ್ನಡ ಊಟವಿತ್ತು. ಆಗಸ್ಟ್ 30 ರ ಬೆಳಿಗ್ಗೆ  ದಂಪತಿಗಳು ಲೀಲಾ ಪ್ಯಾಲೇಸ್ ಹೋಟೆಲ್​ನಲ್ಲಿ ತಮ್ಮ ಹತ್ತಿರದ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾದರು.


ರಿಷಿ ಸುನಕ್​, ಅಕ್ಷತಾ ಮೂರ್ತಿ


ಅದ್ಧೂರಿಯಾಗಿ ನಡೆದಿತ್ತು ಆರತಕ್ಷತೆ!


ಸಂಜೆಯ ಆರತಕ್ಷತೆ ಅದ್ದೂರಿಯಾಗಿ ನಡೆಯಿತು. ನಂದನ್ ನಿಕೇಕಣಿ, ಕ್ರಿಸ್ ಗೋಪ್ಲಾಕೃಷ್ಣನ್, ಎಸ್.ಡಿ.ಶಿಬುಲಾಲ್, ಕೆ.ದಿನೇಶ್, ಮೋಹನ್ ದಾಸ್ ಪೈ, ವಿಪ್ರೊದ ಸಹ ಟೆಕ್ ಟೈಟಾನ್ ಅಜೀಂ ಪ್ರೇಮ್ಜಿ, ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ, ಎನಾಮ್ನ ವಲ್ಲಭ್ ಭನ್ಸಾಲಿ, ಐಸಿಐಸಿಐ ಬ್ಯಾಂಕ್​ನ ಕೆ.ವಿ.ಕಾಮತ್, ಅಹ್ಲುವಾಲಿಯಾಸ್, ಮಾಂಟೆಕ್ & ಇಷರ್, ದೆಹಲಿ ಮತ್ತು ರಾಜ್ಯದ ರಾಜಕಾರಣಿಗಳು ಉಪಸ್ಥಿತರಿದ್ದರು.

Published by:ವಾಸುದೇವ್ ಎಂ
First published: