Reliance AGM 2022: ಮೋದಿ ವಿಷನ್ 2047 ಬಗ್ಗೆ ಅಂಬಾನಿ ಹೇಳಿದ್ದೇನು? ಇಲ್ಲಿದೆ ಭಾಷಣದ ಹೈಲೈಟ್ಸ್​ ಇಲ್ಲಿದೆ

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ಎಂಡಿ ಮುಕೇಶ್ ಅಂಬಾನಿ, "ರಿಲಯನ್ಸ್ ಉದ್ಯೋಗ ಸೃಷ್ಟಿಯಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದೆ. ಅದರ ಎಲ್ಲಾ ವ್ಯವಹಾರಗಳಲ್ಲಿ 2.32 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ರಿಲಯನ್ಸ್ ರಿಟೇಲ್ ಈಗ ಭಾರತದಲ್ಲಿ ಅತಿ ದೊಡ್ಡ ಉದ್ಯೋಗ ಸೃಷ್ಟಿಕರ್ತವಾಗಿದೆ."

ಮುಕೇಶ್ ಅಂಬಾನಿ

ಮುಕೇಶ್ ಅಂಬಾನಿ

  • Share this:
ಮುಂಬೈ(ಆ.29): ಸೋಮವಾರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (ಎಜಿಎಂ) ರಿಲಯನ್ಸ್ ಇಂಡಸ್ಟ್ರೀಸ್ (Reliance Industries Ltd) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇ್ಶ್ ಅಂಬಾನಿ (Mukesh Anbani) ಮಾತನಾಡಿ, “ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಸಹಾಯದಿಂದ ಪ್ರಪಂಚದಾದ್ಯಂತದ ಷೇರುದಾರರು ಎಜಿಎಂನಲ್ಲಿ ಭಾಗವಹಿಸಲು ಸಾಧ್ಯವಾಯಿತು. ಆದಾಗ್ಯೂ, ನಮ್ಮ ನೇರ ಸಂವಹನದ ಕೊರತೆ ಕಂಡು ಬರುತ್ತಿದೆ. ಮುಂದಿನ ವರ್ಷ, ನಾವು ಹೈಬ್ರಿಡ್ ಮೋಡ್‌ಗೆ ಹೋಗಲು ಸಾಧ್ಯವಾಗುತ್ತದೆ ಎಂದು ನಾನು ನಂಬಿದ್ದೇನೆ. ಇದು ಭೌತಿಕ ಮತ್ತು ಡಿಜಿಟಲ್ ಮೋಡ್‌ಗಳ ಅತ್ಯುತ್ತಮ ಸಂಯೋಜನೆಯಾಗಿದೆ ಎಂದಿದ್ದಾರೆ.

ಉದ್ಯೋಗ ಸೃಷ್ಟಿ ಕುರಿತು ಮಾತನಾಡಿದ ಮುಕೇಶ್ ಅಂಬಾನಿ, 'ಉದ್ಯೋಗ ಸೃಷ್ಟಿಯಲ್ಲಿ ರಿಲಯನ್ಸ್ ಹೊಸ ದಾಖಲೆ ಸೃಷ್ಟಿಸಿದೆ. ಕಂಪನಿಯು ಎಲ್ಲಾ ಕ್ಷೇತ್ರಗಳಲ್ಲೂ ಸುಮಾರು 2.32 ಲಕ್ಷ ಉದ್ಯೋಗಗಳನ್ನು ನೀಡಿದೆ. ರಿಲಯನ್ಸ್ ರಿಟೇಲ್ ಈಗ ಭಾರತದಲ್ಲಿ ದೊಡ್ಡ ಉದ್ಯೋಗ ಸೃಷ್ಟಿಕರ್ತವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Reliance AGM 2022: ಕ್ವಾಲ್​ಕಾಮ್ ಜೊತೆ ಪಾಲುದಾರಿಕೆಯನ್ನು ಘೋಷಿಸಿದ ಮುಖೇಶ್ ಅಂಬಾನಿ!

Jio 5G 100 ಮಿಲಿಯನ್ ಮನೆಗಳನ್ನು ಸಂಪರ್ಕಿಸುತ್ತದೆ

ಜಿಯೋ 5G ದೇಶದ 100 ಮಿಲಿಯನ್‌ಗಿಂತಲೂ ಹೆಚ್ಚು ಮನೆಗಳನ್ನು "ವಿಶಿಷ್ಟ ಡಿಜಿಟಲ್ ಅನುಭವಗಳು ಮತ್ತು ಸ್ಮಾರ್ಟ್ ಹೋಮ್ ಪರಿಹಾರಗಳೊಂದಿಗೆ" ಸಂಪರ್ಕಿಸುತ್ತದೆ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ. ನಾವು ಲಕ್ಷಾಂತರ ಸಣ್ಣ ವ್ಯಾಪಾರಿಗಳು ಮತ್ತು ಸಣ್ಣ ಉದ್ಯಮಗಳನ್ನು ಹೊಸ ಹಂತಕ್ಕೆ ಕೊಂಡೊಯ್ಯುತ್ತೇವೆ. ಕ್ಲೌಡ್‌ನಿಂದ ವಿತರಿಸಲಾದ ಅತ್ಯಾಧುನಿಕ, ಪ್ಲಗ್ ಮತ್ತು ಪ್ಲೇ ಪರಿಹಾರಗಳೊಂದಿಗೆ ಅವರನ್ನು ಮತ್ತಷ್ಟು ಸಶಕ್ತರಾಗಿಸುತ್ತಿದ್ದೇವೆ ಎಂದಿದ್ದಾರೆ.

ಮುಂದಿನ 25 ವರ್ಷಗಳು ಅತ್ಯಂತ ಮಹತ್ವಪೂರ್ಣ

ಇದಕ್ಕೂ ಮುನ್ನ ಮುಕೇಶ್ ಅಂಬಾನಿ ತಮ್ಮ ಭಾಷಣದಲ್ಲಿ, 'ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 15 ರ ತಮ್ಮ ಭಾಷಣದಲ್ಲಿ 'ಪಂಚ ಪ್ರಣ' ಅಥವಾ ಐದು ಅಗತ್ಯಗಳ ಬಗ್ಗೆ ಮಾತನಾಡಿದ್ದಾರೆ. ಇದು ಖಂಡಿತವಾಗಿಯೂ 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುತ್ತದೆ' ಎಂದು ಅವರು ಹೇಳಿದರು. ಸ್ವಾತಂತ್ರ್ಯದ ನಂತರದ ಪೀಳಿಗೆ ಇಲ್ಲಿಯವರೆಗೆ ಸಾಮೂಹಿಕವಾಗಿ ಸಾಧಿಸಿದ್ದಕ್ಕಿಂತ ಹೆಚ್ಚಿನದನ್ನು ಸಾಧಿಸಲು ಭಾರತೀಯರು ಸಿದ್ಧರಾಗಿದ್ದಾರೆ ಮತ್ತು ಭಾರತದ ಸಮೃದ್ಧಿ ಮತ್ತು ಪ್ರಗತಿಗೆ ರಿಲಯನ್ಸ್ ಹಿಂದೆಂದಿಗಿಂತಲೂ ಹೆಚ್ಚಿನ ಕೊಡುಗೆ ನೀಡಲು ಸಿದ್ಧವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: Reliance AGM 2022 Live Updates: ದೀಪಾವಳಿಗೆ ಭಾರತೀಯರಿಗೆ ಬಂಪರ್! ಜಿಯೋ 5ಜಿ ಆರಂಭ

ರಿಲಯನ್ಸ್‌ನ ಏಕೀಕೃತ ಆದಾಯ 47% ಹೆಚ್ಚಳ

ಮುಕೇಶ್ ಅಂಬಾನಿ, 'ನಮ್ಮ ಕಂಪನಿ ವಾರ್ಷಿಕ ಆದಾಯದಲ್ಲಿ 100 ಬಿಲಿಯನ್ ಡಾಲರ್ ದಾಟಿದ ಭಾರತದ ಮೊದಲ ಕಾರ್ಪೊರೇಟ್ ಎನಿಸಿಕೊಂಡಿದೆ. ರಿಲಯನ್ಸ್‌ನ ಏಕೀಕೃತ ಆದಾಯವು 47% ರಷ್ಟು ಬೆಳೆದು ರೂ 7.93 ಲಕ್ಷ ಕೋಟಿ ಅಥವಾ $104.6 ಶತಕೋಟಿಗೆ ತಲುಪಿದೆ. ರಿಲಯನ್ಸ್‌ನ ವಾರ್ಷಿಕ ಇಬಿಐಟಿಡಿಎ 1.25 ಲಕ್ಷ ಕೋಟಿಯ ನಿರ್ಣಾಯಕ ಗುರಿಯನ್ನು ದಾಟಿದೆ ಎಂದಿದ್ದಾರೆ.

ಇದು ರಿಲಯನ್ಸ್ ಇಂಡಸ್ಟ್ರೀಸ್‌ನ 45 ನೇ ವಾರ್ಷಿಕ ಸಭೆಯಾಗಿದ್ದು, ಕಳೆದ ವರ್ಷ ನಡೆದ ಎಜಿಎಂನಲ್ಲಿ ಕಂಪನಿಯು ಹಸಿರು ಇಂಧನ ಕ್ಷೇತ್ರಕ್ಕೆ ಪ್ರವೇಶಿಸುವ ದೊಡ್ಡ ಘೋಷಣೆಯನ್ನು ಮಾಡಿತ್ತು. ಅದೇ ಸಮಯದಲ್ಲಿ, 2020 ರಲ್ಲಿ, ಕಂಪನಿಯಲ್ಲಿ ಹೂಡಿಕೆ ಮಾಡುಬ ಬಗ್ಗೆ ಗೂಗಲ್ ಘೋಷಿಸಿತು.

RIL ದೇಶದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ಕಂಪನಿಯಾಗಿದೆ

ರಿಲಯನ್ಸ್ ಅತಿ ಹೆಚ್ಚು ತೆರಿಗೆ ಪಾವತಿಸುವ ಕಂಪನಿಯಾಗಿದೆ. ರಾಷ್ಟ್ರೀಯ ಖಜಾನೆಗೆ ರಿಲಯನ್ಸ್ ಕೊಡುಗೆ ಶೇ.39ರಷ್ಟು ಏರಿಕೆಯಾಗಿದ್ದು ₹1,88,012 ಕೋಟಿಗೆ ತಲುಪಿದೆ. ಹೆಚ್ಚು ತೆರಿಗೆ ಪಾವತಿಸುವ ಕಂಪನಿಯ ವಿಷಯಕ್ಕೆ ಬಂದರೆ, ಅದರಲ್ಲಿ ಇತರ ಹಲವು ವಿಷಯಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ ಎಂದು ಅಧ್ಯಕ್ಷ ಮುಕೇಶ್ ಅಂಬಾನಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ರಿಲಯನ್ಸ್ ವಾರ್ಷಿಕ 100 ಬಿಲಿಯನ್ ಡಾಲರ್ ಆದಾಯದ ಗಡಿ ದಾಟಿದ ದೇಶದ ಮೊದಲ ಕಾರ್ಪೊರೇಟ್ ಕಂಪನಿಯಾಗಿದೆ ಎಂದು ಅವರು ಹೇಳಿದರು.
Published by:Precilla Olivia Dias
First published: