• Home
  • »
  • News
  • »
  • business
  • »
  • Richest Indians: ಈ ಶ್ರೀಮಂತರ ಬಳಿ ಇದ್ಯಂತೆ ದೇಶದ 40 ಪ್ರತಿಶತಕ್ಕಿಂತ ಹೆಚ್ಚಿನ ಸಂಪತ್ತು!

Richest Indians: ಈ ಶ್ರೀಮಂತರ ಬಳಿ ಇದ್ಯಂತೆ ದೇಶದ 40 ಪ್ರತಿಶತಕ್ಕಿಂತ ಹೆಚ್ಚಿನ ಸಂಪತ್ತು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭಾರತದ ಹತ್ತು ಶ್ರೀಮಂತರಿಗೆ ಶೇ.5ರಷ್ಟು ತೆರಿಗೆ ವಿಧಿಸುವುದರಿಂದ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಸಂಪೂರ್ಣ ಹಣವನ್ನು ಪಡೆಯಬಹುದು ಎಂದು ಹೇಳಲಾಗಿದೆ.

  • Trending Desk
  • 3-MIN READ
  • Last Updated :
  • Share this:

ನಮ್ಮ ದೇಶದಲ್ಲಿನ ಶೇ. 1 ರಷ್ಟು ಶ್ರೀಮಂತರು ದೇಶದ ಒಟ್ಟು 40 ಪ್ರತಿಶತಕ್ಕಿಂತ ಹೆಚ್ಚಿನ ಸಂಪತ್ತನ್ನು ಹೊಂದಿದ್ದಾರೆ. ಹಾಗೆಯೇ ಇಲ್ಲಿನ ಜನಸಂಖ್ಯೆಯ ಅರ್ಧದಷ್ಟು ಜನರು ಕೇವಲ ಶೇ. 3 ರಷ್ಟು ಸಂಪತ್ತು ಹಂಚಿಕೊಂಡಿದ್ದಾರೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯ ಮೊದಲ ದಿನದಂದು ಹಕ್ಕುಗಳ ಗುಂಪು ಆಕ್ಸ್‌ಫ್ಯಾಮ್ ಇಂಟರ್‌ನ್ಯಾಷನಲ್ ತನ್ನ ವಾರ್ಷಿಕ ಅಸಮಾನತೆಯ ವರದಿಯ ಇಂಡಿಯಾ ಸಪ್ಲಿಮೆಂಟ್‌ಅನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಭಾರತದ ಹತ್ತು ಶ್ರೀಮಂತರಿಗೆ ಶೇ.5ರಷ್ಟು ತೆರಿಗೆ ವಿಧಿಸುವುದರಿಂದ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಸಂಪೂರ್ಣ ಹಣವನ್ನು ಪಡೆಯಬಹುದು ಎಂದು ಹೇಳಲಾಗಿದೆ.


ಇನ್ನು ವರದಿಗೆ ‘ಸರ್ವೈವಲ್ ಆಫ್ ದಿ ರಿಚೆಸ್ಟ್’ ಎಂದು ಶೀರ್ಷಿಕೆ ನೀಡಲಾಗಿದೆ ಎಂದು ಸುದ್ದಿ ಮಾದ್ಯಮ ವರದಿ ಮಾಡಿದೆ.


ಶ್ರೀಮಂತರ ಒಟ್ಟೂ ಸಂಪತ್ತಿಗೆ ತೆರಿಗೆ ವಿಧಿಸಿದರೆ ಏನಾಗುತ್ತದೆ?


ಭಾರತದ ಬಿಲಿಯನೇರ್‌ಗಳ ಒಟ್ಟೂ ಸಂಪತ್ತಿಗೆ ತೆರಿಗೆ ವಿಧಿಸಿದರೆ ಏನಾಗುತ್ತದೆ ಎಂಬುದರ ಕುರಿತು ಈ ರಿಪೋರ್ಟ್‌ ಅಂಕಿ-ಅಂಶಗಳನ್ನು ನೀಡಿದೆ. "ಕೇವಲ ಒಬ್ಬ ಬಿಲಿಯನೇರ್ ಗೌತಮ್ ಅದಾನಿ ಮೇಲೆ 2017-2021 ವರೆಗಿನ ಅವಾಸ್ತವಿಕ ಲಾಭಗಳ ಮೇಲೆ ಒಂದು ಬಾರಿ ತೆರಿಗೆ ವಿಧಿಸಿದರೂ ₹ 1.79 ಲಕ್ಷ ಕೋಟಿಯನ್ನು ಸಂಗ್ರಹಿಸಬಹುದಾಗಿತ್ತು.


ಇದು ಒಂದು ವರ್ಷಕ್ಕೆ 5 ಮಿಲಿಯನ್‌ಗಿಂತಲೂ ಹೆಚ್ಚು ಭಾರತೀಯ ಪ್ರಾಥಮಿಕ ಶಾಲಾ ಶಿಕ್ಷಕರನ್ನು ನೇಮಿಸಿಕೊಳ್ಳಲು ಸಾಕಾಗುತ್ತದೆ" ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆಕ್ಸ್‌ಫ್ಯಾಮ್ ವರದಿಯ ಪ್ರಕಾರ, ಭಾರತದ ಬಿಲಿಯನೇರ್‌ಗಳ ಸಂಪೂರ್ಣ ಸಂಪತ್ತಿನ ಮೇಲೆ ಒಮ್ಮೆ 2% ತೆರಿಗೆ ವಿಧಿಸಿದರೆ, ಮುಂದಿನ ಮೂರು ವರ್ಷಗಳವರೆಗೆ ದೇಶದ ಅಪೌಷ್ಟಿಕತೆಯ ಪೋಷಣೆಗಾಗಿ ₹40,423 ಕೋಟಿಗಳನ್ನು ಪಡೆಯಬಹುದಾಗಿದೆ ಎಂದು ಹೇಳಿದೆ.


ಇದನ್ನೂ ಓದಿ: ಈ ಮೂರು ಕಾರುಗಳನ್ನು ಕೇಳುವವರೇ ಇಲ್ಲ, ಒಂದೇ ಒಂದೂ ಕೂಡಾ ಸೇಲ್​ ಆಗಿಲ್ಲ!


ಅಲ್ಲದೇ ಲಿಂಗ ಅಸಮಾನತೆಯನ್ನು ಉಲ್ಲೇಖಿಸಿರುವ ವರದಿಯು ಪುರುಷ ಕಾರ್ಮಿಕರು ಗಳಿಸುವ ಪ್ರತಿ 1 ರೂಪಾಯಿಗೆ ಮಹಿಳಾ ಕಾರ್ಮಿಕರು ಕೇವಲ 63 ಪೈಸೆಗಳನ್ನು ಮಾತ್ರ ಗಳಿಸುತ್ತಾರೆ ಎಂದು ಹೇಳಿದೆ.


ಟಾಪ್‌ 10 ಬಿಲಿಯನೇರ್‌ಗಳಿಗೆ ಶೇ. 5 ರಷ್ಟು ತೆರಿಗೆ ವಿಧಿಸಿದರೂ ಸಾಕು!


"ಅಗ್ರ ಸ್ಥಾನದಲ್ಲಿರುವ 100 ಭಾರತೀಯ ಬಿಲಿಯನೇರ್‌ಗಳಿಗೆ ಶೇಕಡಾ 2.5 ತೆರಿಗೆ ವಿಧಿಸುವುದು ಅಥವಾ ಟಾಪ್‌ 10 ಭಾರತೀಯ ಬಿಲಿಯನೇರ್‌ಗಳಿಗೆ ಶೇಕಡಾ 5 ತೆರಿಗೆ ವಿಧಿಸುವುದರಿಂದ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಅಗತ್ಯವಿರುವ ಸಂಪೂರ್ಣ ಮೊತ್ತವನ್ನು ಸರಿದೂಗಿಸಬಹುದು ಎಂದು ಆಕ್ಸ್‌ಫ್ಯಾಮ್ ವರದಿ ಹೇಳಿದೆ.


ಭಾರತದಲ್ಲಿನ ಅಸಮಾನತೆಯ ಪರಿಣಾಮವನ್ನು ಅನ್ವೇಷಿಸಲು ಈ ವರದಿಯು ಗುಣಾತ್ಮಕ ಮತ್ತು ಪರಿಮಾಣಾತ್ಮಕ ಮಾಹಿತಿಯ ಮಿಶ್ರಣವಾಗಿದೆ ಎಂದು ಆಕ್ಸ್‌ಫ್ಯಾಮ್ ಹೇಳಿದೆ.ದೇಶದ ಸಂಪತ್ತಿನ ಅಸಮಾನತೆ ಮತ್ತು ಬಿಲಿಯನೇರ್ ಸಂಪತ್ತನ್ನು ನೋಡಲು ಫೋರ್ಬ್ಸ್‌ ಮತ್ತು Credit Suisse ನಂತಹ ಮಾಧ್ಯಮ ಮೂಲಗಳನ್ನು ಬಳಸಲಾಗಿದೆ.


NSS, ಯೂನಿಯನ್ ಬಜೆಟ್ ದಾಖಲೆಗಳು, ಸಂಸದೀಯ ಪ್ರಶ್ನೆಗಳು ಮುಂತಾದ ಸರ್ಕಾರಿ ಮೂಲಗಳನ್ನು ವರದಿಯ ಮೂಲಕ ಮಾಡಿದ ವಾದಗಳನ್ನು ದೃಢೀಕರಿಸಲು ಬಳಸಲಾಗಿದೆ ಎಂದು ಆಕ್ಸ್‌ಫ್ಯಾಮ್ ಹೇಳಿದೆ.


ಕೊರೋನಾ ಬಂದ ನಂತರದಲ್ಲಿ ಬಿಲಿಯನೇರ್‌ ಗಳ ಸಂಪತ್ತು ದುಪ್ಪಟ್ಟಾಗಿದೆ!


ಸಾಂಕ್ರಾಮಿಕ ಕೋವಿಡ್‌ ಪ್ರಾರಂಭವಾದಾಗಿನಿಂದ, ಭಾರತದಲ್ಲಿನ ಬಿಲಿಯನೇರ್‌ಗಳು ತಮ್ಮ ಸಂಪತ್ತಿನಲ್ಲಿ 121% ಏರಿಕೆ ಕಂಡಿದ್ದಾರೆ ಎಂದು ಆಕ್ಸ್‌ಫ್ಯಾಮ್ ಹೇಳಿದೆ.


ಭಾರತದಲ್ಲಿ 2020 ರಲ್ಲಿ 102ರಷ್ಟಿದ್ದ ಬಿಲಿಯನೇರ್‌ಗಳ ಸಂಖ್ಯೆ 2022 ರಲ್ಲಿ 166 ಕ್ಕೆ ಏರಿದೆ ಎಂದು ಹೇಳಲಾಗಿದೆ. ಅಲ್ಲದೇ ಭಾರತದ 100 ಶ್ರೀಮಂತರ ಒಟ್ಟು ಸಂಪತ್ತು USD 660 ಶತಕೋಟಿ (₹ 54.12 ಲಕ್ಷ ಕೋಟಿ) ಮುಟ್ಟಿದೆ ಎಂಬುದಾಗಿ ಹೇಳಲಾಗಿದೆ. ಈ ಮೂಲಕ ಬಿಕ್ಕಟ್ಟಿನ ಲಾಭಕೋರತನವನ್ನು ಕೊನೆಗೊಳಿಸಲು ಏಕಮಾತ್ರ ಸಂಪತ್ತಿನ ತೆರಿಗೆಗಳು ಮತ್ತು ವಿಂಡ್‌ಫಾಲ್ ತೆರಿಗೆಗಳನ್ನು ಪರಿಚಯಿಸಲು ಕೇಂದ್ರ ಹಣಕಾಸು ಸಚಿವರನ್ನು ಒತ್ತಾಯಿಸಲಾಗಿದೆ.

Published by:ವಾಸುದೇವ್ ಎಂ
First published: