2022 ರ ಅರ್ಧ ವರ್ಷಕ್ಕೇ ಇಷ್ಟೊಂದು ನಕಲಿ ನೋಟುಗಳಾ? RBI ಕೊಟ್ಟ ಮಾಹಿತಿ ನೋಡಿದ್ರೆ ಬೆಚ್ಚಿ ಬೀಳ್ತೀರಾ

ಇತ್ತೀಚೆಗೆ ಡಿಜಿಟಲ್ ಪೇಮೆಂಟ್​ ಕೂಡಾ ತೀವ್ರಗತಿಯಲ್ಲಿ ಏರಿಕೆಯಾಗಿದೆ. ನಕಲಿ ನೋಟು ದಂಧೆ, ಕಪ್ಪು ಹಣ ನಿಯಂತ್ರಣ ಮಾಡಲೆಂದೇ ಕೇಂದ್ರ ಸರ್ಕಾರ ನೋಟು ರದ್ದು ಮಾಡಿತ್ತು. ಆದರೆ, ಈಗ ಆರ್​​ಬಿಐ ಕೊಟ್ಟಿರುವ ಮಾಹಿತಿ ನೋಡಿದರೆ,  ನೋಟು ರದ್ದತಿ ವಿಫಲವಾಯಿತೇ ಎಂಬ ಪ್ರಶ್ನೆ ಮೂಡುತ್ತೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವೆಂಬರ್​ (November) 8 2016.. ಈ ದಿನವನ್ನು ಯಾವೊಬ್ಬ ಭಾರತೀಯನು ಮರೆಯಲು ಸಾಧ್ಯವಿಲ್ಲ. ಆ ದಿನ ಪ್ರಧಾನ ಮಂತ್ರಿ ಮೋದಿ (Prime Minister Modi) ಮಾಡಿದ ಆ ಒಂದು ಘೋಷಣೆ ಇಡೀ ಭಾರತವನ್ನೇ ನಡುಗಿಸಿಬಿಟ್ಟಿತ್ತು. ಬ್ಲ್ಯಾಕ್ ಮನಿ (Black money) ಕಳ್ಳರಿಗಂತೂ ಬರ ಸಿಡಿಲೆ ಬಡಿದಿತ್ತು. ಯಾಕೆಂದರೆ  ಅಂದು ಪ್ರಧಾನ ಮಂತ್ರಿ ಚಾಲ್ತಿಯಲ್ಲಿದ್ದ ನೋಟುಗಳನ್ನು ಬ್ಯಾನ್ (Note Ban)​ ಮಾಡಿ ಆದೇಶ ಹೊರಡಸಿದ್ದರು. 500 ರೂಪಾಯಿ 1000 ರೂಪಾಯಿ ನೋಟುಗಳನ್ನು ಬ್ಯಾನ್​ ಮಾಡಲಾ ಯಿತು. ಇದಾಗಿ 7 ವರ್ಷಗಳೇ ಕಳೆದಿವೆ. ನೋಟ್​ ಬ್ಯಾನ್ ನಂತರದ ಕೆಲವು ದಿನಗಳಲ್ಲಿ ನಗದು ವಹಿವಾಟಿನಲ್ಲಿ ಸಾಕಷ್ಟು ಅವ್ಯವಸ್ಥೆ ಕಂಡುಬಂದಿತ್ತು.

ಇತ್ತೀಚೆಗೆ ಡಿಜಿಟಲ್ ಪೇಮೆಂಟ್​ ಕೂಡಾ ತೀವ್ರಗತಿಯಲ್ಲಿ ಏರಿಕೆಯಾಗಿದೆ. ನಕಲಿ ನೋಟು ದಂಧೆ, ಕಪ್ಪು ಹಣ ನಿಯಂತ್ರಣ ಮಾಡಲೆಂದೇ ಕೇಂದ್ರ ಸರ್ಕಾರ ನೋಟು ರದ್ದು ಮಾಡಿತ್ತು. ಆದರೆ, ಈಗ ಆರ್​​ಬಿಐ ಕೊಟ್ಟಿರುವ ಮಾಹಿತಿ ನೋಡಿದರೆ,  ನೋಟು ರದ್ದತಿ ವಿಫಲವಾಯಿತೇ ಎಂಬ ಪ್ರಶ್ನೆ ಮೂಡುತ್ತೆ. ಏನಪ್ಪಾ ಇಷ್ಟಲ್ಲಾ ಮಾಡಿದರೂ ಹೀಗೆ ಆಗುತ್ತಿದೆಯಲ್ಲಾ. ಇದನ್ನು ನಿಲ್ಲಿಸೋಕೆ ಸಾಧ್ಯವೇ ಇಲ್ಲವಾ? ಎಂಬ ಪ್ರಶ್ನೆ ಕೂಡ ಮೂಡುತ್ತೆ. ಅದೇನು ಅಂತೀರಾ ಮುಂದೆ ನೋಡಿ.

ಆಘಾತಕಾರಿ ಮಾಹಿತಿ ಕೊಟ್ಟ ಆರ್​​ಬಿಐ!

ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ಮಾಹಿತಿಯಿಂದ ಇದೀಗ ಹಲವಾರು ರೀತಿಯ ಪ್ರಶ್ನೆಗಳು ಉದ್ಭವಿಸಿದೆ.  2016ರಲ್ಲಿ ಚಾಲ್ತಿಯಲ್ಲಿದ್ದ ರೂ.500 ಮತ್ತು ರೂ.1,000 ನೋಟುಗಳ ಅಮಾನ್ಯೀಕರಣದ ಪ್ರಮುಖ ಉದ್ದೇಶವೆಂದರೆ ನಕಲಿ ಕರೆನ್ಸಿ ನೋಟುಗಳ ಚಲಾವಣೆ ತಡೆಯುವುದಾಗಿತ್ತು. ಇದಾದ ಬಳಿಕ ನಕಲಿ ನೋಟುಗಳ ತಯಾರಿಕೆಗೆ ಬ್ರೇಕ್​ ಬಿದ್ದಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಇದೀಗ ಆರ್​​ಬಿಐ ಆಘಾತಕಾರಿ ಮಾಹಿತಿ ನೀಡಿದೆ.  2022 ವಿತ್ತೀಯ ವರ್ಷದಲ್ಲಿ 500 ರೂ ಮುಖ ಬೆಲೆಯ 79,669 ನಕಲಿ ನೋಟುಗಳು ಪತ್ತೆಯಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

ಇದನ್ನೂ ಓದಿ: ಬ್ಯಾಂಕ್ ಅಕೌಂಟ್ ಹೊಂದಿರುವವರ ಗಮನಕ್ಕೆ! ಪ್ರಮುಖ ಬ್ಯಾಂಕ್​ ನಿಯಮದಲ್ಲಿ ಬದಲಾವಣೆ

79, 669 ನಕಲಿ ನೋಟುಗಳು ಪತ್ತೆ!

2022 ವಿತ್ತೀಯ ವರ್ಷದಲ್ಲಿ 500 ರೂ ಮುಖ ಬೆಲೆಯ 79,669 ನಕಲಿ ನೋಟುಗಳ ಪತ್ತೆಯಾಗಿದ್ದು, ಹಿಂದಿನ ಹಣಕಾಸು ವರ್ಷದಲ್ಲಿ (2020–21) ಒಟ್ಟು 2.08 ಲಕ್ಷ ನಕಲಿ ನೋಟುಗಳು ಪತ್ತೆಯಾಗಿದ್ದವು. ಅದರಂತೆ ಮಾರ್ಚ್‌ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ದೇಶದಲ್ಲಿ ಒಟ್ಟು 2.30 ಲಕ್ಷ ನಕಲಿ ನೋಟುಗಳು ಪತ್ತೆಯಾಗಿವೆ. ಈ ವರ್ಷ ಇನ್ನೂ ಮುಗಿದಿಲ್ಲ. ಆಗಲೇ ಇಷ್ಟೊಂದು 500 ರೂಪಾಯಿಯ ನಕಲಿ ನೋಟುಗಳು  ಪತ್ತೆಯಾಗಿರೋದು ಆತಂಕ ಮೂಡಿಸಿರುವುದಂತೂ ನಿಜ.


2019–20ನೆಯ ಹಣಕಾಸು ವರ್ಷದಲ್ಲಿ ಪತ್ತೆಯಾದ ನಕಲಿ ನೋಟುಗಳ ಒಟ್ಟು ಸಂಖ್ಯೆಗೆ ಹೋಲಿಸಿದರೆ ಇದು ಕಡಿಮೆ. ಆ ವರ್ಷದಲ್ಲಿ ಒಟ್ಟು 2.96 ಲಕ್ಷ ನಕಲಿ ನೋಟುಗಳು ಪತ್ತೆಯಾಗಿದ್ದವು. 100ರೂ ಮುಖಬೆಲೆಯ 92,237 ನಕಲಿ ನೋಟುಗಳು 2021–22ನೇ ಹಣಕಾಸು ವರ್ಷದಲ್ಲಿ ಪತ್ತೆಯಾಗಿವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ವರದಿ ನೀಡಿದೆ.

ಇದನ್ನೂ ಓದಿ: ನೆನಪಿಡಿ, ಶೀಘ್ರದಲ್ಲಿಯೇ ರಿಸರ್ವ್ ಬ್ಯಾಂಕ್ ನೀಡಲಿದೆ ಮತ್ತೊಂದು ಆಘಾತ

ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ನಕಲಿ ನೋಟು ಪತ್ತೆ!

ಬ್ಯಾಂಕಿಂಗ್ ವ್ಯವಸ್ಥೆಯಿಂದ ಪತ್ತೆಯಾದ 500 ರೂಪಾಯಿ ಮುಖಬೆಲೆಯ ನಕಲಿ ನೋಟುಗಳ ಸಂಖ್ಯೆಯು ಹಿಂದಿನ ವರ್ಷಕ್ಕಿಂತ 2021-22ನೇ ಹಣಕಾಸು ವರ್ಷದಲ್ಲಿ ದ್ವಿಗುಣಗೊಂಡಿದ್ದು, ಅಂದರೆ 79,669 ನಕಲಿ ನೋಟುಗಳು ಪತ್ತೆಯಾಗಿವೆ. ಬ್ಯಾಕಿಂಗ್ ವ್ಯವಸ್ಥೆಯಲ್ಲಿ ಪತ್ತೆಯಾದ 2,000 ರೂ ಮುಖಬೆಲೆಯ ನಕಲಿ ನೋಟುಗಳ ಸಂಖ್ಯೆಯು 2021-22ರ ಅವಧಿಯಲ್ಲಿ 13,604ಗಳಾಗಿದ್ದು, ಹಿಂದಿನ ಹಣಕಾಸು ವರ್ಷಕ್ಕಿಂತ 54.6 ಶೇಕಡಾ ಹೆಚ್ಚಾಗಿದೆ. ಈ ಮಾಹಿತಿ ನಿಜಕ್ಕೂ ಆತಂಕ ಮೂಡಿಸಿದೆ. ಹೀಗೇ ಮುಂದುವರೆದರೆ ಹೇಗೆ ಎಂಬ ಪ್ರಶ್ನೆ ಮೂಡಿದೆ.
Published by:Vasudeva M
First published: