Gold Bonds: ಸಾವರಿನ್ ಚಿನ್ನದ ಬಾಂಡ್‌ಗಳಲ್ಲಿ ಹೂಡಿಕೆ ಮಾಡುವುದು ಸರಿಯಾದ ನಿರ್ಧಾರವೇ..? ಇಲ್ಲಿದೆ ವಿವರ

ಚಿನ್ನದ ಬಾಂಡ್​ ಮೇಲೆ ಹೂಡಿಕೆ ಮಾಡುವುದು ಸರಿಯಾದ ನಿರ್ಧಾರವೇ..? ಹೂಡಿಕೆ ಮಾಡಬೇಕೇ ಬೇಡವೇ ಇದಕ್ಕೆ ಪರಿಹಾರಗಳು ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:

  ಭಾರತೀಯ ರಿಸರ್ವ್ ಬ್ಯಾಂಕ್ (RBI)ನಿಂದ 2021-22 ರ ಹಣಕಾಸು ವರ್ಷದ 7ನೇ ಸಾವರಿನ್ ಚಿನ್ನದ ಬಾಂಡ್ (SGB) ಸಂಚಿಕೆ ಸೋಮವಾರ ಪ್ರಾರಂಭಗೊಂಡಿದೆ. ಈ ಬಾಂಡ್‌ಗಳನ್ನು ರಿಸರ್ವ್ ಬ್ಯಾಂಕ್ ಇಂಡಿಯಾ ಸರಕಾರದ ಪರವಾಗಿ ಒದಗಿಸುತ್ತದೆ. ದೀಪಾವಳಿ ಸಮಯದಲ್ಲಿ ಭಾರತೀಯರು ಸಾಮಾನ್ಯವಾಗಿ ಚಿನ್ನ ಖರೀದಿಯನ್ನು ತುಸು ಜೋರಾಗಿಯೇ ನಡೆಸುತ್ತಾರೆ. ಸಪ್ಟೆಂಬರ್ 30, 2021 ಕ್ಕೆ ಕೊನೆಗೊಂಡ ಚಿನ್ನದ ಆಮದುಗಳು (Gold import) ಆರು ತಿಂಗಳುಗಳಲ್ಲಿ ಇದೇ ಮೊದಲ ಬಾರಿಗೆ 23.9 ಬಿಲಿಯನ್ ಡಾಲರ್‌ ಏರಿಕೆಯನ್ನು ಸಾಧಿಸಿದೆ. ಆದರೂ ಚಿನ್ನದ ಬೆಲೆ ಕಳೆದ ಒಂದು ವರ್ಷದಲ್ಲಿ ಇಳಿಮುಖವಾಗಿದೆ. ಈ ಸಮಯದಲ್ಲಿ SGBಗಳಲ್ಲಿ ನೀವು ಹೂಡಿಕೆ ಮಾಡುವುದು ಸರಿಯಾದ ನಿರ್ಧಾರವೇ..? ಹೂಡಿಕೆ ಮಾಡಬೇಕೇ ಬೇಡವೇ ಇದಕ್ಕೆ ಪರಿಹಾರಗಳು ಇಂದಿನ ಲೇಖನದಲ್ಲಿದೆ.


  ಆಫರ್‌ನಲ್ಲಿ ಏನಿದೆ?


  VII ಸರಣಿಯಲ್ಲಿನ SGBಗಳನ್ನು 4,761 ರೂ. ಗೆ ಒದಗಿಸಲಾಗುತ್ತದೆ. ಒಂದು ಗ್ರಾಂ ಚಿನ್ನದ ಬೆಲೆಯನ್ನು ಪ್ರತಿಯೊಂದು ಬಾಂಡ್ ಟ್ರ್ಯಾಕ್ ಮಾಡುತ್ತದೆ. ಬಾಂಡ್‌ನ ಮುಖಬೆಲೆಯು ಕೊನೆಯ ಮೂರು ವ್ಯವಹಾರ ದಿನಗಳ ಮುಕ್ತಾಯ ಬೆಲೆಯ ಸರಾಸರಿಯಾಗಿರುತ್ತದೆ. ಡಿಜಿಟಲ್ ಮೋಡ್ ಬಳಸಿಕೊಂಡು ನೀವು ಅಪ್ಲೈ ಮಾಡಿದರೆ ಪ್ರತಿ ಬಾಂಡ್‌ಗ 50 ರೂ.ಗಳ ವಿನಾಯಿತಿ ಪಡೆದುಕೊಳ್ಳಬಹುದಾಗಿದೆ.


  ಬಾಂಡ್‌ನ ಕಾಲಾವಧಿಯು ಎಂಟು ವರ್ಷಗಳಾಗಿದ್ದು ಬಾಂಡ್ ಮುಕ್ತಾಯವಾಗುವ ಸಮಯದಲ್ಲಿ ಹೂಡಿಕೆದಾರರಿಗೆ ಆ ಸಮಯದಲ್ಲಿ ಅಸ್ತಿತ್ವದಲ್ಲಿರುವ ಒಂದು ಗ್ರಾಂ ಚಿನ್ನದ ಬೆಲೆಗೆ ಸಮಾನವಾದ ಮೊತ್ತವನ್ನು ಪಾವತಿಸಲಾಗುತ್ತದೆ. ಮುಕ್ತಾಯದ ಸಮಯದವರೆಗೆ SGBಗಳನ್ನು ಹಿಡಿದಿಟ್ಟುಕೊಂಡಲ್ಲಿ ಲಾಭಗಳು ತೆರಿಗೆ ಮುಕ್ತವಾಗಿರುತ್ತವೆ. ಈ ಬಾಂಡ್‌ಗಳನ್ನು ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟು ಮಾಡಲಾಗುತ್ತದೆ.


  ಚಿನ್ನದ ಬೆಲೆಗಳಲ್ಲಿ ವ್ಯತ್ಯಯ ಉಂಟಾಗಲು ಕಾರಣಗಳೇನು?


  ಚಿನ್ನದ ಬೆಲೆಗಳು ಕಳೆದ ಎರಡು ವರ್ಷಗಳಲ್ಲಿ ಅತ್ಯಂತ ಅಸ್ಥಿರವಾಗಿದೆ. CY2019ರ ಮೊದಲಾರ್ಧದಲ್ಲಿ ಏರಿಕೆಯಾದ ನಂತರ ಕಳೆದ ಒಂದು ವರ್ಷದಿಂದ ಕ್ಷೀಣತೆಯತ್ತ ದರಗಳು ಮುಖಮಾಡುತ್ತಿದ್ದು ಇದು 4% ಇಳಿಕೆ ಕಂಡಿವೆ.


  ವರ್ಲ್ಡ್ ಗೋಲ್ಡ್ ಕೌನ್ಸಿಲ್ (WGC) ಪ್ರಕಾರ ಖರೀದಿದಾರರ ಆದಾಯದಲ್ಲಿ ಪ್ರತಿ ಶೇಕಡಾವಾರು ಏರಿಕೆಯಿಂದಾಗಿ ಚಿನ್ನದ ಬೆಲೆಯಲ್ಲಿ 0.9% ಏರಿಕೆಯಾಗುತ್ತದೆ ಎಂದು ತಿಳಿಸಿದೆ. ಚಿನ್ನಕ್ಕಿರುವ ಬೇಡಿಕೆಯೊಂದಿಗೆ ಚಿನ್ನದ ಬೆಲೆಗಳು ಅವಿನಾಭಾವ ಸಂಬಂಧವನ್ನು ಹೊಂದಿವೆ. ಚಿನ್ನದ ಬೆಲೆಯಲ್ಲಿ ಒಂದು ಶೇಕಡದಷ್ಟು ಏರಿಕೆಯು ಬೇಡಿಕೆಯನ್ನು 0.4%ಕ್ಕೆ ಕುಗ್ಗಿಸುತ್ತದೆ.


  ಚಿನ್ನದ ಆಮದು ಅಧಿಕ

  ಲಾಕ್‌ಡೌನ್ ನಿರ್ಬಂಧಗಳನ್ನು ತೆರವುಗೊಳಿಸಿರುವುದು ಹಾಗೂ ರೀಟೇಲ್ ಮಳಿಗೆಗಳು ಮರಳಿ ಉದ್ಯಮಕ್ಕೆ ತೆರೆದುಕೊಂಡಿರುವುದು, ವ್ಯಾಕ್ಸಿನೇಶನ್‌ನಲ್ಲಿನ ಸ್ಥಿರವಾದ ಅಭಿವೃದ್ಧಿಯಿಂದಾಗಿ ಗ್ರಾಹಕರ ಜೀವನದಲ್ಲಿ ಹಿಂದಿನ ಪ್ರಗತಿ, ಕೋವಿಡ್ ಮೂರನೇ ಅಲೆಯ ಭೀತಿ ಕ್ರಮೇಣ ಕ್ಷೀಣಿಸುತ್ತಿದ್ದು ಇದರೊಂದಿಗೆ ಹಬ್ಬ ಹಾಗೂ ವಿವಾಹ ಸೀಸನ್‌ಗಳಿಂದಾಗಿ ದಾಸ್ತಾನುಗಳ ಮರುಶೇಖರಣೆಯಿಂದಾಗಿ FY22ರಲ್ಲಿ ಇಲ್ಲಿಯವರೆಗೆ ಚಿನ್ನದ ಆಮದು ಹೆಚ್ಚಾಗಲು ಕಾರಣವಾಗಿವೆ ಎಂದು ಅಕ್ಯೂಟ್ ರೇಟಿಂಗ್ಸ್‌ನ ಮುಖ್ಯ ವಿಶ್ಲೇಷಣಾತ್ಮಕ ಅಧಿಕಾರಿ ಸುಮನ್ ಚೌಧರಿ ತಿಳಿಸಿದ್ದಾರೆ.


  ಸಾಂಕ್ರಾಮಿಕವು ಪ್ರಪಂಚದಾದ್ಯಂತ ವಿಸ್ತಾರಗೊಂಡಿದ್ದರಿಂದ ಆರಂಭದಲ್ಲಿ ಚಿನ್ನಕ್ಕೆ ಬೇಡಿಕೆ ಇತ್ತು ಹಾಗೂ ಕೇಂದ್ರ ಲೇವಾದೇವಿಗಾರರು ದರ ಕಡಿತಗೊಂದಿಗೆ ಪ್ರತಿಕ್ರಿಯಿಸಿದ್ದರು. ಆದರೆ ಇದೀಗ ಕೆಲವೊಂದು ಅಂಶಗಳು ಮಾರ್ಪಾಡಾಗುತ್ತಿವೆ. ಈ ವರ್ಷದ ಅಂತ್ಯಕ್ಕೆ US ಫೆಡರಲ್ ರಿಸರ್ವ್ ಟ್ಯಾಪರಿಂಗ್ (ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಕೇಂದ್ರೀಯ ಬ್ಯಾಂಕ್‌ನ ಪರಿಮಾಣಾತ್ಮಕ ಸರಾಗಗೊಳಿಸುವ ತಂತ್ರದ ಹೆಚ್ಚುತ್ತಿರುವ ಹಿಮ್ಮುಖ ಕ್ರಮ) ಅನ್ನು ಘೋಷಿಸಲಿದ್ದು CY2022ರ ಮಧ್ಯದ ಸಮಯಕ್ಕೆ ಟ್ಯಾಪರಿಂಗ್ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ


  ಹಣದುಬ್ಬರ ಕಳವಳ

  USAನಲ್ಲಿ ಹೆಚ್ಚುತ್ತಿರುವ ಬಡ್ಡಿದರಗಳು ಮತ್ತು ದ್ರವ್ಯತೆ ಬಿಗಿಗೊಳಿಸುವುದು US ಡಾಲರ್‌ಗೆ ಧನಾತ್ಮಕ ಅಂಶವಾಗಿ ಮಾರ್ಪಟ್ಟಿದೆ. ಬಲವಾದ ಡಾಲರ್ ಬೆಲೆಗಳು ಸಾಂಪ್ರದಾಯಿಕವಾಗಿ ದುರ್ಬಲ ಚಿನ್ನದ ದರಗಳನ್ನು ಸೂಚಿಸುತ್ತವೆ. ಹಣದುಬ್ಬರ ಕಳವಳಗಳಿಂದ ಚಿನ್ನದ ಬೆಲೆಗಳು ಏರಿಕೆಯಾಗುವ ನಿರೀಕ್ಷೆ ಇದ್ದರೂ ಇದೇ ಸಮಯದಲ್ಲಿ ಸಾಂಕ್ರಾಮಿಕದ ನಂತರ ಕಂಡುಬಂದ ಚೇತರಿಕೆ ಹಾಗೂ ಯುಎಸ್ ಫೆಡರಲ್ ಅಳವಡಿಸಿಕೊಂಡ ಆಕ್ರಮಣಕಾರಿ ನಿಲುವು ಲಾಭವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಎಂದು ಮೋತಿಲಾಲ್ ಓಸ್ವಾಲ್ ಹಣಕಾಸು ಸೇವೆಗಳ ರೀಸರ್ಚ್ ಮುಖ್ಯಸ್ಥ ನವನೀತ್ ದಮಾನಿ ಅಭಿಪ್ರಾಯವಾಗಿದೆ.


  ನಿರ್ಬಂಧಿತ ಬೇಡಿಕೆಗಳು:


  ಆರ್ಥಿಕ ಅಭಿವೃದ್ಧಿ ದುರ್ಬಲಗೊಂಡಾಗ ಚಿನ್ನಕ್ಕೂ ಬೇಡಿಕೆ ಇರುತ್ತದೆ. ಸ್ಟಾಕ್ ಮಾರುಕಟ್ಟೆಗಳು ಬೆಂಬಲಯುತವಾಗಿದ್ದರೂ ಸ್ಥೂಲ-ಆರ್ಥಿಕ ದೃಷ್ಟಿಕೋನವು ಸಕಾರಾತ್ಮಕವಾಗಿದ್ದರೂ ಹೆಚ್ಚಿನ ಹಣದುಬ್ಬರ, ಅದೃಶ್ಯವಾಗುತ್ತಿರುವ ಬೆಳವಣಿಗೆ, ಟ್ಯಾಪರಿಂಗ್‌ನ ಸಂಭಾವ್ಯ ಪರಿಣಾಮಗಳು ಅಪಾಯಕಾರಿಯವಾಗಿವೆ ಎಂಬುದು ಕ್ವಾಂಟಮ್ ಎಎಂಸಿಯ ಹಿರಿಯ ಫಂಡ್ ಮ್ಯಾನೇಜರ್ ಚಿರಾಗ್ ಮೆಹ್ತಾ ಅಭಿಪ್ರಾಯವಾಗಿದೆ. ಹೆಚ್ಚಿನ ಹಣದುಬ್ಬರವು ಗ್ರಾಹಕರ ಬೇಡಿಕೆಯನ್ನು ಹಾನಿಗೊಳಿಸಬಹುದು ಮತ್ತು ಆರ್ಥಿಕ ಚೇತರಿಕೆಯನ್ನು ನಿಧಾನಗೊಳಿಸಬಹುದು. ಬಡ್ಡಿದರಗಳು ಮತ್ತು ಹಣದುಬ್ಬರ ಹೆಚ್ಚಾದಂತೆ ಕಾರ್ಪೊರೇಟ್ ಲಾಭವು ಉಂಟಾಗುವುದಿಂದ ಸ್ಟಾಕ್ ಮಾರುಕಟ್ಟೆಯಲ್ಲಿ ಚಂಚಲತೆ ಕಾಣಬಹುದು.


  ಇದನ್ನು ಓದಿ: ಎಲ್​ಐಸಿಯ ಈ​ ಪಾಲಿಸಿ ಮೂಲಕ ತಿಂಗಳಿಗೆ ಕೇವಲ 1,302 ರೂ ಹೂಡಿಕೆ ಮಾಡಿ 28 ಲಕ್ಷ ಗಳಿಸಿ

  ಹೂಡಿಕೆದಾರರು ಮತ್ತು ಸಲಹೆಗಾರರು ಸುಮಾರು 18 ತಿಂಗಳ ದೃಢವಾದ ಲಾಭಗಳ ನಂತರ ತಮ್ಮ ಪೋರ್ಟ್‌ಫೋಲಿಯೋಗಳ (ವ್ಯಕ್ತಿ ಅಥವಾ ಸಂಸ್ಥೆಯು ಹೊಂದಿರುವ ಹೂಡಿಕೆಗಳ ಶ್ರೇಣಿ) ಬಗ್ಗೆ ಜಾಗರೂಕರಾಗಿರುತ್ತಾರೆ. ಎಲ್ಲಿಯವರೆಗೆ ಸ್ಟಾಕ್‌ಗಳು ಏರುತ್ತಲೇ ಇರುತ್ತವೋ ಅಲ್ಲಿಯವರೆಗೆ ಚಿನ್ನದ ಬೆಲೆಯು ಹೆಚ್ಚು ಏರಿಕೆಯಾಗುವುದಿಲ್ಲ. ಆದರೂ, ಷೇರುಗಳಲ್ಲಿನ ಕುಸಿತವು ಚಂಚಲತೆಯ ವಿರುದ್ಧ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಚಿನ್ನ ಖರೀದಿಸಲು ಹೂಡಿಕೆದಾರರನ್ನು ಒತ್ತಾಯಪಡಿಸಬಹುದು ಎಂದು ಸುಖನಿಧಿ ಹೂಡಿಕೆ ಸಲಹೆಗಾರರ ಸಂಸ್ಥಾಪಕ ಮತ್ತು ಸಿಐಒ ವಿನಾಯಕ ಸವಣೂರ್ ಅಭಿಪ್ರಾಯಪಡುತ್ತಾರೆ.


  ಇದನ್ನು ಓದಿ: ಮೊದಲ ಮೊಬಿಲಿಟಿ ಕೇಂದ್ರ ಆರಂಭಿಸಿದ Jio-bp

  SGBಗಳಲ್ಲಿ ಹೂಡಿಕೆ ಮಾಡಬೇಕೇ?


  ಹೂಡಿಕೆಗಳ ಶ್ರೇಣಿಗಳನ್ನು ವೈವಿಧ್ಯಗೊಳಿಸಲು ಬಯಸುವ ದೀರ್ಘಾವಧಿ ಹೂಡಿಕೆದಾರರಿಗೆ SGB ಒಂದು ಆಸಕ್ತಿದಾಯಕ ಹೂಡಿಕೆ ಮಾಧ್ಯಮವಾಗಿದೆ. ಮುಕ್ತಾಯ ಹಂತದವರೆಗೆ ನಿಮಗೆ ಹಿಡಿದಿಟ್ಟುಕೊಳ್ಳಲು ಸಾಧ್ಯ ಎಂದಾದಲ್ಲಿ SGBಗಳಲ್ಲಿ ಹೂಡಿಕೆ ಮಾಡುವುದು ಉತ್ತಮ ಉಪಾಯವಾಗಿದೆ.


  ಇತ್ತೀಚಿನ ದಿನಗಳಲ್ಲಿ ಷೇರು ವಿನಿಮಯಗಳಲ್ಲಿ ದ್ರವ್ಯತೆ (ಲಿಕ್ವಿಡಿಟಿ) ಸುಧಾರಣೆಗೊಂಡಿದ್ದರೂ ಚಿನ್ನದ ಬೆಲೆಯು ಸೌಹಾರ್ದಯುತವಾಗಿಲ್ಲದ ಸಮಯದಲ್ಲಿ ಅವುಗಳನ್ನು ನ್ಯಾಯವಾದ ಬೆಲೆಗಳಲ್ಲಿ ವ್ಯವಹಾರ ಮಾಡಬಹುದು ಎಂಬ ಭರವಸೆ ಇಲ್ಲ. ವಿತರಣೆಯ ನಂತರ ಐದು ವರ್ಷಗಳ ಕಾಲ ಹಿಡಿದಿಟ್ಟುಕೊಂಡ ಬಳಿಕ ನೀವು ಅವುಗಳನ್ನು ಮರಳಿ RBIಗೆ ಮಾರಾಟ ಮಾಡಬಹುದಾಗಿದೆ.


  First published: