Republic Day Special: 1947ರಲ್ಲಿ ಟ್ರೈನ್​ ಟಿಕೆಟ್ ಬೆಲೆ ಎಷ್ಟಿದೆ ಗೊತ್ತಾ? ನೋಡಿದ್ರೆ ನಿಜಕ್ಕೂ ಶಾಕ್​ ಆಗ್ತೀರಾ!

ವೈರಲ್​ ಆದ ಟಿಕೆಟ್ ಫೋಟೋ

ವೈರಲ್​ ಆದ ಟಿಕೆಟ್ ಫೋಟೋ

ಭಾರತವು 1947 ರಲ್ಲಿ ಸ್ವಾತಂತ್ರ್ಯ ಪಡೆದಾಗ, ಪಾಕಿಸ್ತಾನದಿಂದ ಭಾರತಕ್ಕೆ ಅನೇಕ ಜನರು ಬಂದರು. ಆ ಸಮಯದಲ್ಲಿ ಕೆಲವರು ರೈಲಿನಲ್ಲಿ ಭಾರತಕ್ಕೆ ಬಂದರು. ಅವರಿಗೊಂದು ಟಿಕೆಟ್ ನೀಡಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • Share this:

ಈ ವರ್ಷ 74 ನೇ ಗಣರಾಜ್ಯೋತ್ಸವದ (Republic Day) ಸಂದರ್ಭದಲ್ಲಿ, ಭಾರತ ಮತ್ತು ಪಾಕಿಸ್ತಾನದ ಸ್ವಾತಂತ್ರ್ಯದ ಆರಂಭಿಕ ದಿನಗಳ ರೈಲ್ವೆ ಟಿಕೆಟ್ (Train Ticket) ಸಾಮಾಜಿಕ ಮಾಧ್ಯಮ (Social Media) ದಲ್ಲಿ ವೈರಲ್ ಆಗಿದೆ. ನಿಮಗೆ ಗೊತ್ತಿರುವಂತೆ, ಬ್ರಿಟೀಷ್ ದೊರೆಗಳು ಭಾರತಕ್ಕೆ ಸ್ವಾತಂತ್ರ್ಯ (Independence) ಕೊಡುವ ಮುನ್ನ ಭಾರತವನ್ನು ಎರಡು ಭಾಗಗಳಾಗಿ ವಿಂಗಡಿಸಿದ್ದರು. ಒಡೆದು ಆಳುವ ನೀತಿ ತಂದ ನಂತರ ಪಾಕಿಸ್ತಾನ (Pakistan) ವನ್ನು ಇನ್ನೊಂದು ದೇಶ ಎಂದು ಘೋಷಿಸಲಾಯಿತು. ಆ ಸಂದರ್ಭಗಳಲ್ಲಿ, ಯಾರು ಯಾವ ದೇಶದಲ್ಲಿ ಉಳಿಯಬೇಕು ಎಂದು ನಿರ್ಧರಿಸಿ ಅನೇಕ ಜನರು ಎರಡು ದೇಶಗಳ ನಡುವೆ ಪ್ರಯಾಣಿಸಿದರು. 1947 ರಲ್ಲಿ, ಕೆಲವರು ಪಾಕಿಸ್ತಾನದ ರಾವಲ್ಪಿಂಡಿಯಿಂದ ಭಾರತದ ಅಮೃತಸರಕ್ಕೆ ರೈಲಿನಲ್ಲಿ ಪ್ರಯಾಣಿಸಿದರು.


1947ರ ಟ್ರೈನ್​ ಟಿಕೆಟ್​ ವೈರಲ್!


ಇಂತಹ ಪ್ರಯಾಣಿಕರ ರೈಲ್ವೆ ಟಿಕೆಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆ ಚೀಟಿಯಲ್ಲಿ ಒಂಬತ್ತು ಹೆಸರುಗಳನ್ನು ಬರೆಯಲಾಗಿದೆ. ಆ ಸಮಯದಲ್ಲಿ ಈ 9 ಮಂದಿ ಪ್ರಯಾನಿಸಿದ್ದರು. ಒಂಬತ್ತು ಜನರಿಗೆ ಸೇರಿಸಿ ಕೇವಲ 36 ರೂಪಾಯಿಗಳನ್ನು ಮಾತ್ರ ಚಾರ್ಜ್ ಮಾಡಲಾಗಿತ್ತು.  ಅಂದರೆ ಆ ಸಮಯದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ರೈಲ್ವೆ ಪ್ರಯಾಣ ದರವು ಒಬ್ಬರಿಗೆ ಕೇವಲ 4 ರೂಪಾಯಿ.


ಆಗ ಒಬ್ಬರಿಗೆ ಜಸ್ಟ್​ 4 ರೂಪಾಯಿ ಚಾರ್ಜ್​!


ಆಶ್ಚರ್ಯಕರವಾಗಿ, ಈ ಟಿಕೆಟ್ ಥರ್ಡ್ ಎಸಿಗೆ, ಇದು ಏಕಮುಖ ಪ್ರಯಾಣಕ್ಕೆ. ಈಗ ಸಾಮಾನ್ಯ ಟಿಕೆಟ್ ದರ ರೂ.250ಕ್ಕಿಂತ ಹೆಚ್ಚಿದೆ. ಖಂಡಿತಾ, ಆಗ 4 ರೂಪಾಯಿಗೂ ತುಂಬಾ ಬೆಲೆ ಇತ್ತು. ಆಗ ಒಂದು ರೂಪಾಯಿಗೆ 20 ಐಸ್‌ಕ್ರೀಮ್‌ಗಳು ಸಿಗುತ್ತಿದ್ದವು.


ಇದನ್ನೂ ಓದಿ: ಸುಕನ್ಯಾ ಸಮೃದ್ಧಿ ಖಾತೆಯಿಂದ ಹಣವನ್ನು ಹಿಂಪಡೆಯುವುದು ಹೇಗೆ? ಇಲ್ಲಿದೆ ನೋಡಿ ಕಂಪ್ಲೀಟ್​ ಮಾಹಿತಿ


ಈ ಟಿಕೆಟ್ ದಿನಾಂಕ 17 ಸೆಪ್ಟೆಂಬರ್ 1947. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಫೇಸ್‌ಬುಕ್‌ನಲ್ಲಿ ಪಾಕಿಸ್ತಾನ್ ರೈಲ್ ಲವರ್ಸ್ ಪೇಜ್‌ನಲ್ಲಿ ಟಿಕೆಟ್‌ನ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಇದುವರೆಗೆ 16,000 ಜನರು ಲೈಕ್ ಮಾಡಿದ್ದಾರೆ.


ವೈರಲ್​ ಆದ ಟಿಕೆಟ್ ಫೋಟೋ


ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್!


ಈ ಫೋಟೋಗೆ ನೂರಾರು ಜನರು ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಜನರು ಈ ಟಿಕೆಟ್ ಅನ್ನು ಅಪಾರವಾಗಿ  ಹಂಚಿಕೊಳ್ಳುತ್ತಿದ್ದಾರೆ. ಒಬ್ಬ ಬಳಕೆದಾರನು "ಇದು ಕೇವಲ ಕಾಗದವಲ್ಲ, ಇದು ಇತಿಹಾಸ" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ಇದನ್ನು "ಚಿನ್ನ" ಎಂದು ಕರೆದಿದ್ದಾರೆ. ಮತ್ತೊಬ್ಬ ಬಳಕೆದಾರರು, "ಇದು 75 ವರ್ಷಗಳಲ್ಲಿ ಮರೆಯಾಗದ ಅತ್ಯಂತ ಬಲವಾದ ಕಾರ್ಬನ್ ಕಾಪಿ" ಎಂದು ಪ್ರತಿಕ್ರಿಯಿಸಿದ್ದಾರೆ.


ಇವತ್ತಿಗೂ ನಮ್ಮ ದೇಶದಲ್ಲಿ ಸೈಕಲ್ (Cycle) ಗಳ ಬಳಕೆ ಹೆಚ್ಚು. ಈ ಹಿಂದೆ  ಹೇಗಿತ್ತೋ ಈಗಲೂ ಸೈಕಲ್‌ನ ನೋಟ (Cycle Look) ಮತ್ತು ಫೀಲ್ (Feel) ಮಾತ್ರ ಬದಲಾಗಿಲ್ಲ. ಆದರೆ ಅದರ ಬೆಲೆಯೂ ದಿನದಿಂದ ದಿನಕ್ಕೆ ಬದಲಾಗುತ್ತಿದೆ. 80 ವರ್ಷಗಳ ಹಿಂದೆ ಭಾರತದಲ್ಲಿ ಒಂದು ಬೈಸಿಕಲ್ ಬೆಲೆ ಕೇವಲ 18 ರೂಪಾಯಿ ಎಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ.


18 ರೂಪಾಯಿಗೆ ಸೈಕಲ್!


ಇಂದು, ಯಾವುದೇ ಮೆಕ್ಯಾನಿಕ್ ಸೈಕಲ್ ಪಂಕ್ಚರ್ ಅನ್ನುಆ ದುಡ್ಡಿಗೆ  ಸರಿಪಡಿಸುವುದಿಲ್ಲ. ಇಷ್ಟು ಹಣಕ್ಕೆ ಎರಡು ಕಪ್ ಚಹಾ ಕೂಡ ಸಿಗೋದಿಲ್ಲ. 1934 ರ ಬೈಸಿಕಲ್ ಬಿಲ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಬಿಲ್ ಕೋಲ್ಕತ್ತಾದ ಅಂಗಡಿಯಿಂದ ಬಂದಿದೆ.




ಈ ಬೈಸಿಕಲ್ ಅನ್ನು 7 ಜನವರಿ 1934 ರಂದು ಮಾರಾಟ ಮಾಡಲಾಗಿತ್ತು. 1933 ಮಾದರಿಯ ಅಗ್ಗದ ಬೈಸಿಕಲ್ ಕೂಡ ಬೆಲ್​ ಮತ್ತು ಬೆಳಕನ್ನು ಹೊಂದಿತ್ತು. ಕೇವಲ 18 ರೂ.ಗೆ ಮಾರಾಟವಾಗಿತ್ತು.

Published by:ವಾಸುದೇವ್ ಎಂ
First published: