• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Ravi Jaipuria: ಭಾರತದ ಕೋಲಾ ಕಿಂಗ್ ರವಿ ಜೈಪುರಿಯಾ ಬಿಲಿಯನ್ ಡಾಲರ್ ವ್ಯವಹಾರದ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ

Ravi Jaipuria: ಭಾರತದ ಕೋಲಾ ಕಿಂಗ್ ರವಿ ಜೈಪುರಿಯಾ ಬಿಲಿಯನ್ ಡಾಲರ್ ವ್ಯವಹಾರದ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ

ರವಿ ಜೈಪುರಿಯಾ

ರವಿ ಜೈಪುರಿಯಾ

ತಂಪು ಪಾನೀಯಗಳು ತಯಾರಾಗುವ ಕಂಪನಿಯ ಮಾಲೀಕರು ಯಾರಿರಬಹುದು ಅಂತ ಯೋಚಿಸಿದ್ದೀರಾ? ಈ ತಂಪು ಪಾನೀಯಗಳ ತಯಾರಿಕೆಯ ಹಿಂದಿರುವ ವ್ಯಕ್ತಿ ರವಿ ಜೈಪುರಿಯಾ ಅಂತ ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ.

  • Share this:

ಬೇಸಿಗೆಕಾಲ (Summer Season) ಬಂತೆಂದರೆ ಸಾಕು ನಮ್ಮಲ್ಲಿ ಬಹುತೇಕರು ಅಂಗಡಿಗಳಿಗೆ ಹೋಗಿ ಈ ಪೆಪ್ಸಿ, 7 ಅಪ್, ಮೌಂಟೇನ್ ಡ್ಯೂ ಮತ್ತು ಮಿರಿಂಡಾದಂತಹ ಕಾರ್ಬೋನೇಟೆಡ್ ತಂಪು ಪಾನೀಯಗಳನ್ನು ಕುಡಿಯುತ್ತೇವೆ. ಈ ತಂಪಾದ ಪಾನೀಯಗಳು ಭಾರತದಲ್ಲಿ ತುಂಬಾನೇ ಜನಪ್ರಿಯವಾಗಿವೆ. ಅದರಲ್ಲೂ ವಿಶೇಷವಾಗಿ ಬೇಸಿಗೆ ಕಾಲದಲ್ಲಿ ಈ ತಂಪು (Cool) ಪಾನೀಯಗಳು ದೊಡ್ಡ ಪ್ರಮಾಣದಲ್ಲಿ ಮಾರಾಟವಾಗುತ್ತವೆ. ಆದರೆ ನೀವು ಎಂದಾದರೂ ಈ ಎಲ್ಲಾ ತಂಪು ಪಾನೀಯಗಳು ತಯಾರಾಗುವ ಕಂಪನಿಯ (Company) ಮಾಲೀಕರು ಯಾರಿರಬಹುದು ಅಂತ ಯೋಚಿಸಿದ್ದೀರಾ? ಈ ತಂಪು ಪಾನೀಯಗಳ ತಯಾರಿಕೆಯ ಹಿಂದಿರುವ ವ್ಯಕ್ತಿ ರವಿ ಜೈಪುರಿಯಾ ಅಂತ ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ.


ಬನ್ನಿ ಹಾಗಾದರೆ ಇವರ ಮತ್ತು ಇವರು ನಡೆಸುತ್ತಿರುವ ಬಿಲಿಯನ್ ಡಾಲರ್ ಮೌಲ್ಯದ ವ್ಯವಹಾರದ ಬಗ್ಗೆ ತಿಳಿದುಕೊಂಡು ಬರೋಣ. ರವಿ ಅವರ ಕಂಪನಿ ವರುಣ್ ಬೆವರೇಜಸ್ ಅಂತ. ಇದು ಇಡೀ ಭಾರತದಲ್ಲಿ ಈ ಪಾನೀಯಗಳನ್ನು ಉತ್ಪಾದಿಸುತ್ತದೆ, ಪಾನೀಯಗಳನ್ನು ಹಾಕಲು ಬೇರೆ ಬೇರೆ ರೀತಿಯ ಬಾಟಲಿಗಳನ್ನು ತಯಾರಿಸುತ್ತದೆ ಮತ್ತು ಇವುಗಳನ್ನು ಡೀಲರ್ ಗಳಿಗೆ ಮತ್ತು ಅಂಗಡಿಗಳಿಗೆ ವಿತರಿಸುತ್ತಾರೆ.


ಯಾರು ಈ ಭಾರತದ ಕೋಲಾ ಕಿಂಗ್ ರವಿ ಜೈಪುರಿಯಾ?


ಇದು ಯುಎಸ್ ಹೊರಗಿನ ಜಗತ್ತಿನಲ್ಲಿ ಪೆಪ್ಸಿಕೋದ ಪಾನೀಯಗಳಿಗೆ ಎರಡನೇ ಅತಿದೊಡ್ಡ ಬಾಟ್ಲಿಂಗ್ ಪಾಲುದಾರ. ಆದರೆ ಭಾರತದ ಕೋಲಾ ಕಿಂಗ್ ಎಂದು ಪರಿಗಣಿಸಲಾದ ರವಿ ಜೈಪುರಿಯಾ ಅವರು ಯಾರು ಅನ್ನೋ ಪ್ರಶ್ನೆ ಮಾತ್ರ ಅನೇಕರ ತಲೆಯಲ್ಲಿ ಓಡಾಡುತ್ತಿರುತ್ತದೆ. ರವಿ ಜೈಪುರಿಯಾ ಒಬ್ಬ ಭಾರತೀಯ ಬಿಲಿಯನೇರ್ ಉದ್ಯಮಿ.


ಇದನ್ನೂ ಓದಿ: ಕೃಷಿಯಲ್ಲಿ ಲಿಂಗ ತಾರತಮ್ಯ ಮಾಡದಿದ್ದರೆ 1 ಟ್ರಿಲಿಯನ್ ಲಾಭ ಸಿಗಲಿದೆಯಂತೆ


ರವಿ ಅವರು ಮಾರ್ವಾಡಿ ಕುಟುಂಬದಿಂದ ಬಂದವರು. ರವಿ ಜೈಪುರಿಯಾ ಅವರು ಆರ್‌ಜೆ ಕಾರ್ಪ್ ನ ಅಧ್ಯಕ್ಷರಾಗಿದ್ದಾರೆ, ಇದರ ಅಡಿಯಲ್ಲಿ ಅವರು ದೇವಯಾನಿ ಇಂಟರ್ನ್ಯಾಷನಲ್ ಮತ್ತು ವರುಣ್ ಬೆವರೇಜಸ್ ಅನ್ನೋ ಕಂಪನಿಗಳನ್ನು ನಡೆಸುತ್ತಾರೆ.


ಜೈಪುರಿಯಾ ಯುಎಸ್ ನಲ್ಲಿ ಬಿಸಿನೆಸ್ ಮ್ಯಾನೇಜ್ಮೆಂಟ್ ಅನ್ನು ಅಧ್ಯಯನ ಮಾಡಿದ್ದಾರೆ. ಅವರು ನವದೆಹಲಿಯ ಮಥುರಾ ರಸ್ತೆಯಲ್ಲಿರುವ ಡಿಪಿಎಸ್ ನಲ್ಲಿ ತಮ್ಮ ಹೈಯರ್ ಸೆಕೆಂಡರಿ ಶಿಕ್ಷಣವನ್ನು ಪೂರ್ಣಗೊಳಿಸಿದರು.


ಅವರು 1985 ರಲ್ಲಿ ಭಾರತಕ್ಕೆ ಮರಳಿದರು ಮತ್ತು ಪೆಪ್ಸಿ-ಕೋಲಾದ ಕುಟುಂಬ ವ್ಯವಹಾರಕ್ಕೆ ಸೇರಿದರು. 1987 ರಲ್ಲಿ, ಕುಟುಂಬ ವಿಭಜನೆಯ ನಂತರ ಅವರು ತಮ್ಮ ಪಾಲಿನ ಒಂದು ಬಾಟ್ಲಿಂಗ್ ಸ್ಥಾವರವನ್ನು ಪಡೆದರು, ನಂತರ ಅವರು ಪೆಪ್ಸಿಕೋಗೆ ಬದಲಾಯಿಸಿದರು.


ಫೋರ್ಬ್ಸ್ 2022 ರಲ್ಲಿ ಭಾರತದ ಶ್ರೀಮಂತರ ಪಟ್ಟಿಯಲ್ಲಿ ರವಿ ಅವರು 21ನೇ ಸ್ಥಾನದಲ್ಲಿದ್ದರಂತೆ


ಫೋರ್ಬ್ಸ್ ಪ್ರಕಾರ, ಏಪ್ರಿಲ್ 23, 2023 ರ ಹೊತ್ತಿಗೆ ರವಿ ಅವರ ಕಂಪನಿಯ ನಿವ್ವಳ ಮೌಲ್ಯವು 8.9 ಬಿಲಿಯನ್ ಡಾಲರ್ (7301,635,65,000 ರೂಪಾಯಿ) ಆಗಿದೆ. ನಿಯತಕಾಲಿಕದ ಶತಕೋಟ್ಯಾಧಿಪತಿಗಳ (2023) ಪಟ್ಟಿಯಲ್ಲಿ ಅವರು 232ನೇ ಸ್ಥಾನದಲ್ಲಿದ್ದರು. ಫೋರ್ಬ್ಸ್ 2022 ರಲ್ಲಿ ಭಾರತದ ಶ್ರೀಮಂತರ ಪಟ್ಟಿಯಲ್ಲಿ ಅವರು 21ನೇ ಸ್ಥಾನದಲ್ಲಿದ್ದರು.


ಇದನ್ನೂ ಓದಿ: ಆಭರಣ ಪ್ರಿಯರಿಗೆ ಬಂಪರ್ ಸುದ್ದಿ: ಚಿನ್ನ- ಬೆಳ್ಳಿ ದರ ಎರಡೂ ಅಗ್ಗ!


1985 ರಲ್ಲಿ, ಅವರ ಪತ್ನಿ ವಿಮಾನ ಅಪಘಾತದಲ್ಲಿ ನಿಧನರಾದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ, ವರುಣ್ ಎಂಬ ಮಗ ಮತ್ತು ದೇವಯಾನಿ ಎಂಬ ಮಗಳು. ಅವರು ತಮ್ಮ ಕಂಪನಿಗೆ ತಮ್ಮ ಮಗನ ಹೆಸರನ್ನು ವರುಣ್ ಬೆವರೇಜಸ್ ಮತ್ತು ದೇವಯಾನಿ ಇಂಟರ್ನ್ಯಾಷನಲ್ ಗೆ ತಮ್ಮ ಮಗಳ ಹೆಸರನ್ನು ಇಟ್ಟರು.


ದೇವಯಾನಿ ಇಂಟರ್ನ್ಯಾಷನಲ್ ಕೆಎಫ್‌ಸಿ, ಪಿಜ್ಜಾ ಹಟ್, ಕೋಸ್ಟಾ ಕಾಫಿ ಮತ್ತು ಟಿಡಬ್ಲ್ಯೂಜಿ ಟೀ ಮಳಿಗೆಗಳನ್ನು ನಿರ್ವಹಿಸುತ್ತಿದ್ದರೆ, ವರುಣ್ ಬೆವರೇಜಸ್ ಯುಎಸ್ ಹೊರಗೆ ಪೆಪ್ಸಿಕೋದ ಅತಿದೊಡ್ಡ ಬಾಟಲ್ ಪೂರೈಕೆದಾರ ಸಂಸ್ಥೆಗಳಲ್ಲಿ ಒಂದಾಗಿದೆ.


top videos



    ಮಾರ್ಚ್ 31, 2023 ರಂದು ಸಲ್ಲಿಸಿದ ಕಾರ್ಪೊರೇಟ್ ಷೇರುದಾರರ ಪ್ರಕಾರ, ಆರ್‌ಜೆ ಕಾರ್ಪ್ ಲಿಮಿಟೆಡ್ ಸಾರ್ವಜನಿಕವಾಗಿ 37,334.1 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯದ 7 ಸ್ಟಾಕುಗಳನ್ನು ಹೊಂದಿದೆ.

    First published: