Success Story: ಫಾರಿನ್​ ಬಿಟ್ಟು ತಾಯ್ನಾಡಿಗೆ ಬಂದು ಕೋಟ್ಯಾಧಿಪತಿಯಾದ ಉದ್ಯಮಿ! ಅಷ್ಟಕ್ಕೂ ಯಾರವರು?

ಉದ್ಯಮಿ

ಉದ್ಯಮಿ

ಅಮೆರಿಕದಲ್ಲಿಯೇ ಕೆಲಸ ಮಾಡುವುದು ಅಥವಾ ಭಾರತಕ್ಕೆ ಹಿಂತಿರುಗಿ ತಮ್ಮದೇ ಆದ ಉದ್ಯಮವನ್ನು ನಿರ್ಮಿಸುವುದು. ಆದರೆ ಒಂದನ್ನು ಆಯ್ಕೆ ಮಾಡಿಕೊಳ್ಳುವುದು ಅವರಿಗೆ ಅನಿವಾರ್ಯವಾಗಿತ್ತು.

  • Share this:

 ಬಹಳಷ್ಟು ಸಲ ಬದುಕಿನಲ್ಲಿ ಕವಲು ದಾರಿ ಎದುರಾಗುತ್ತವೆ. ಆದರೆ ನಾವು ಯಾವ ದಾರಿಯನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಅನ್ನೋದು ಮಹತ್ವದ್ದಾಗಿರುತ್ತದೆ. ಎರಡು ಆಯ್ಕೆಗಳಲ್ಲಿ ಸರಿಯದದ್ದನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯ. ಇಂಥದ್ದೇ ಪರಿಸ್ಥಿತಿ ಉದ್ಯಮಿ ಆನಂದ್‌ ದೇಶಪಾಂಡೆ (Anand Deshpande) ಅವರಿಗೂ ಬಂದಿತ್ತು. ಆದರೆ ಅವರು ಸರಿಯಾದ ಆಯ್ಕೆಯನ್ನೇ ಮಾಡಿದ್ದರು. ಅದರ ಪರಿಣಾಮವೇ (Effects) ಇಂದು 36 ಸಾವಿರ ಕೋಟಿಯ ಕಂಪನಿಯನ್ನು ಕಟ್ಟಿ ಬೆಳೆಸಿದ್ದಾರೆ. ಆನಂದ್‌ ದೇಶಪಾಂಡೆಯವರು ಮಾಸ್ಟರ್ಸ್‌ಗಾಗಿ ಯುನೈಟೆಡ್ ಸ್ಟೇಟ್ಸ್‌ಗೆ ತೆರಳಿದ ನಂತರ ಅವರ ಬಳಿ ಎರಡು ಆಯ್ಕೆಗಳಿದ್ದವು. ಅಮೆರಿಕದಲ್ಲಿಯೇ ಕೆಲಸ ಮಾಡುವುದು ಅಥವಾ ಭಾರತಕ್ಕೆ ಹಿಂತಿರುಗಿ ತಮ್ಮದೇ ಆದ ಉದ್ಯಮವನ್ನು(Business) ನಿರ್ಮಿಸುವುದು. ಆದರೆ ಒಂದನ್ನು ಆಯ್ಕೆ ಮಾಡಿಕೊಳ್ಳುವುದು ಅವರಿಗೆ ಅನಿವಾರ್ಯವಾಗಿತ್ತು.


ಕಠಿಣವಾದರೂ ಸರಿಯಾದ ನಿರ್ಧಾರ ತೆಗೆದುಕೊಂಡರು ಆನಂದ್‌ ದೇಶಪಾಂಡೆ. ಕೆಲಸದ ವೀಸಾ ಅಥವಾ ಗ್ರೀನ್ ಕಾರ್ಡ್ ಪಡೆಯುವ ಸಮಯ ಬಂದಾಗ, ಅವರು ಹೆವ್ಲೆಟ್ ಪ್ಯಾಕರ್ಡ್ (HP) ನಲ್ಲಿ ತನ್ನ ಉದ್ಯೋಗವನ್ನು ಆರು ತಿಂಗಳ ನಂತರ ಅದನ್ನು ತ್ಯಜಿಸಲು ನಿರ್ಧರಿಸಿದರು.


1990ರಲ್ಲಿ ತಮ್ಮದೇ ಸಾಫ್ಟ್‌ವೇರ್‌ ಕಂಪನಿ ಸ್ಥಾಪನೆ


ತಾಯ್ನಾಡಿಗೆ ಬಂದ ಆನಂದ್‌ ದೇಶಪಾಂಡೆ, 1990ರಲ್ಲಿ ಪುಣೆಯಲ್ಲಿ ತಮ್ಮ ಸ್ವಂತ ಸಾಫ್ಟ್‌ವೇರ್ ಕಂಪನಿ, ಪರ್ಸಿಸ್ಟೆಂಟ್ ಸಿಸ್ಟಮ್ಸ್ಅನ್ನು ಪ್ರಾರಂಭಿಸಿದರು. ಅಲ್ಲಿಯವರೆಗೂ ಕೂಡಿಟ್ಟ ತಮ್ಮ ಎಲ್ಲ ಉಳಿತಾಯವನ್ನು ಅದರಲ್ಲಿ ಹಾಕಿದರು. ಜೊತೆಗೆ ಉದ್ಯಮಿಯಾಗಲು ಸ್ನೇಹಿತರು ಮತ್ತು ಕುಟುಂಬದಿಂದ ಹಣವನ್ನು ಎರವಲು ಪಡೆದರು.


ಆದರೆ ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ. 2 ಲಕ್ಷ ಹೂಡಿಕೆಯೊಂದಿಗೆ ಆರಂಭವಾದ ಕಂಪನಿ ಇಂದು 36,000 ಕೋಟಿ ರೂ. ತಲುಪಿದೆ. ಪರ್ಸಿಸ್ಟೆಂಟ್ ಸಿಸ್ಟಮ್ಸ್ ಸಾಫ್ಟ್‌ವೇರ್ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ, ದೇಶಪಾಂಡೆ ಅವರು ಇಂದು ರೂ 10,600 ಕೋಟಿ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.


ಐಐಟಿ ವಿದ್ಯಾರ್ಥಿಯಾಗಿದ್ದ ಆನಂದ್‌ ದೇಶಪಾಂಡೆ


ಅಂದಹಾಗೆ ಆನಂದ್ ಅವರು ಮಹಾರಾಷ್ಟ್ರದ ಅಕೋಲಾದಲ್ಲಿ ಜನಿಸಿದವರು. ಮಧ್ಯಪ್ರದೇಶದ ಭೋಪಾಲ್‌ನಲ್ಲಿರುವ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ಟೌನ್‌ಶಿಪ್‌ನಲ್ಲಿ ಬೆಳೆದರು. ಶಾಲೆಯ ನಂತರ, ಅವರು ಎನ್‌ಡಿಎ (ನ್ಯಾಷನಲ್ ಡಿಫೆನ್ಸ್ ಅಕಾಡೆಮಿ) ಪ್ರವೇಶ ಪರೀಕ್ಷೆಯನ್ನು ಬರೆದು ಪಾಸಾಗಿದರು. ಆದರೆ ಐಐಟಿ-ಜೆಇಇ ಪ್ರವೇಶ ಪರೀಕ್ಷೆ ಪಾಸಾದ ನಂತರ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಖರಗ್‌ಪುರಕ್ಕೆ ಸೇರಲು ನಿರ್ಧರಿಸಿದರು.


ಇದನ್ನೂ ಓದಿ: ಅಂದು ಬೀದಿ ಬದಿಯಲ್ಲಿ ಪುಸ್ತಕ ಮಾರಿದ ಈ ವ್ಯಕ್ತಿ ಇಂದು ಗಳಿಸಿದ ಹಣದ ಲೆಕ್ಕ ಕೇಳಿದ್ರೆ ದಂಗಾಗ್ತೀರಾ!


ಐಐಟಿ ನಂತರ, ಅವರು ಹೆಚ್ಚಿನ ಅಧ್ಯಯನಕ್ಕಾಗಿ ಅಮೆರಿಕದ ಇಂಡಿಯಾನಾ ವಿಶ್ವವಿದ್ಯಾಲಯಕ್ಕೆ ಸೇರಿದರು. ದೇಶಪಾಂಡೆ ಅವರು ಇಂಡಿಯಾನಾ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಪಿಎಚ್‌ಡಿ ಪಡೆದಿದ್ದಾರೆ.


ಹಂತ ಹಂತವಾಗಿ ಬೆಳೆಯಿತು ದೇಶಪಾಂಡೆಯವರ ಕಂಪನಿ


10 ವರ್ಷಗಳ ಪ್ರಾರಂಭದ ನಂತರ, ದೇಶಪಾಂಡೆಯವರ ಕಂಪನಿಯು 2000 ರಲ್ಲಿ ಇಂಟೆಲ್ ಕ್ಯಾಪಿಟಲ್‌ನಿಂದ $1 ಮಿಲಿಯನ್ ತನ್ನ ಮೊದಲ ನಿಧಿಯನ್ನು ಸಂಗ್ರಹಿಸಿತು. ನಂತರದಲ್ಲಿ ನಾರ್ವೆಸ್ಟ್ ವೆಂಚರ್ ಪಾರ್ಟ್‌ನರ್ಸ್ ಮತ್ತು ಗೇಬ್ರಿಯಲ್ ವೆಂಚರ್ ಪಾರ್ಟ್‌ನರ್ಸ್ ದೇಶಪಾಂಡೆಯವರ ಸಂಸ್ಥೆಯಲ್ಲಿ 20 ಮಿಲಿಯನ್ ಹೂಡಿಕೆ ಮಾಡಿದರು. 2010 ರಲ್ಲಿ, ಅವರು ಯಶಸ್ವಿ IPO ನೊಂದಿಗೆ ಕಂಪನಿಯನ್ನು ಸಾರ್ವಜನಿಕವಾಗಿ ತೆಗೆದುಕೊಂಡರು.


ಇದನ್ನೂ ಓದಿ: ರೈಲುಗಳಿಗೆ ರಾಜಧಾನಿ, ಶತಾಬ್ಧಿ ಮತ್ತು ದುರಂತೋ ಅನ್ನೋ ಹೆಸರುಗಳು ಬಂದಿದ್ದು ಹೇಗೆ?


ಇನ್ನು, ದೇಶಪಾಂಡೆ ಅವರು ಸಾಮಾಜಿಕ ಕಳಕಳಿಯುಳ್ಳವರು ಕೂಡ. ಅವರು ತಮ್ಮ ಕುಟುಂಬದೊಂದಿಗೆ ದೇಆಸ್ರಾ ಫೌಂಡೇಶನ್ಅನ್ನು ಸ್ಥಾಪಿಸಿದರು. ಈ ಮೂಲಕ ಅವರು ಯುವ ಉದ್ಯಮಿಗಳಿಗೆ, ಪ್ರತಿಭಾವಂತರಿಗೆ ಅವರ ಕನಸುಗಳನ್ನು ಸಾಕಾರಗೊಳಿಸಲು ಸಾಕಷ್ಟು ಬೆಂಬಲ ನೀಡುತ್ತಾರೆ.


top videos    ಒಟ್ಟಾರೆ, ಐಐಟಿ ಪದವೀಧರರಾದ ಆನಂದ್‌ ದೇಶಪಾಂಡೆಯವರು ಇಂಥದ್ದೊಂದು ಸಾಫ್ಟ್‌ವೇರ್‌ ಕಂಪನಿಯನ್ನು ಸ್ಥಾಪಿಸುವಂಥ ನಿರ್ಧಾರ ತೆಗೆದುಕೊಂಡಿದ್ದು, ಆರಂಭದಲ್ಲಿ ಉಂಟಾದ ಹಣದ ತೊಂದರೆ ಹಾಗೆಯೇ ಇದೀಗ ಆ ಕಂಪನಿ ಬೆಳೆದು ನಿಂತಿರುವ ರೀತಿ ಎಂಥವರಿಗಾದರೂ ಸೂರ್ತಿ ನೀಡುವಂಥದ್ದು.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು