ರೇಮಂಡ್ ಗ್ರೂಪ್‌ನ (Raymond Group) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ಗೌತಮ್ ಸಿಂಘಾನಿಯಾ ಹೆಸರಾಂತ ಬ್ಯುಸಿನೆಸ್ ಟೈಕೂನ್ ಎಂದೇ ಖ್ಯಾತಿ ಪಡೆದುಕೊಂಡವರು. ಸೆಪ್ಟೆಂಬರ್ 9, 1965 ರಂದು ಜನಿಸಿದ ಅವರು ಭಾರತದ ಪ್ರಸಿದ್ಧ ಕೈಗಾರಿಕೋದ್ಯಮಿ ಹಾಗೂ ಉದ್ಯಮಿಯಾಗಿದ್ದಾರೆ ಗೌತಮ್. ತಮ್ಮ ಕುಟುಂಬದ ಪರಂಪರೆಯನ್ನು ಮುಂದುವರಿಸಿರುವ ಗೌತಮ್ (Goutam) ಖ್ಯಾತ ಉದ್ಯಮಿಯಾಗಿ ತಮ್ಮದೇ ಹೆಸರು, ಗೌರವ ಸಂಪಾದಿಸಿದ್ದಾರೆ ಅಂತೆಯೇ ಇವರ ನಿವ್ವಳ ಆಸ್ತಿ ಮೌಲ್ಯ ರೂಪಾಯಿ 1.4 ಬಿಲಿಯನ್ ಡಾಲರ್ (Dollar) ಆಗಿದೆ. ಕುಟುಂಬದಿಂದ ಬಂದ ಉದ್ಯಮವನ್ನು ಮುಂದುವರಿಸಿಕೊಂಡು ಹೋಗುವುದಲ್ಲದೆ ರೇಮಂಡ್ ಇನ್ನಷ್ಟು ಖ್ಯಾತಿ ಹಾಗೂ ಹೆಸರು ಗಳಿಸಲು ಗೌತಮ್ ಕಾರಣೀಕರ್ತರಾಗಿದ್ದಾರೆ.
ಗೌತಮ್ ಸಿಂಘಾನಿಯಾ ತಮ್ಮ ಶಿಕ್ಷಣವನ್ನು ಎಲ್ಲಿ ಪೂರ್ಣಗೊಳಿಸಿದರು?
ಸಿಂಘಾನಿಯಾ ಅವರು ತಮ್ಮ ಉನ್ನತ ಶಿಕ್ಷಣಕ್ಕಾಗಿ ಯುನೈಟೆಡ್ ಸ್ಟೇಟ್ಸ್‌ಗೆ ತೆರಳುವ ಮೊದಲು ಮುಂಬೈನಲ್ಲಿ ತಮ್ಮ ಆರಂಭಿಕ ಶಾಲಾ ಶಿಕ್ಷಣವನ್ನು ಮುಗಿಸಿದರು. ನಂತರ ಅವರು ಮಿಶಿಗನ್ ವಿಶ್ವವಿದ್ಯಾಲಯದಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಪದವಿ ಪಡೆದರು. 1925 ರಲ್ಲಿ ಅವರ ಅಜ್ಜ ಲಾಲಾ ಕೈಲಾಶಪತ್ ಸಿಂಘಾನಿಯಾ ಸ್ಥಾಪಿಸಿದ ತಮ್ಮ ಕುಟುಂಬದ ಕಂಪನಿಯಾದ ರೇಮಂಡ್ ಗ್ರೂಪ್‌ಗೆ ಸೇರ್ಪಡೆಗೊಳ್ಳಲು ಶಿಕ್ಷಣ ಪೂರ್ಣಗೊಳಿಸಿ ನೇರವಾಗಿ ಭಾರತಕ್ಕೆ ಹಿಂತಿರುಗಿದರು.
ರೇಮಂಡ್ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದ ಸಿಂಘಾನಿಯಾ
ಗೌತಮ್ ಸಿಂಘಾನಿಯಾ ಅವರ ನಾಯಕತ್ವದಲ್ಲಿ, ರೇಮಂಡ್ ಗ್ರೂಪ್ ವರ್ಷಗಳಲ್ಲಿ ಅದ್ಭುತವಾಗಿ ಬೆಳೆದಿದೆ ಮತ್ತು ಭಾರತದಲ್ಲಿ ಪ್ರಮುಖ ಸಂಘಟಿತವಾಗಿ ವಿಕಸನಗೊಂಡಿದೆ. ರೇಮಂಡ್ ಗ್ರೂಪ್ಸ್ ಜವಳಿ, ಎಂಜಿನಿಯರಿಂಗ್ ಮತ್ತು ರಿಯಲ್ ಎಸ್ಟೇಟ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವೈವಿಧ್ಯತೆಯನ್ನು ಹೊಂದಿದೆ ಹಾಗೂ ದೇಶದ ಹೆಸರಾಂತ ಬ್ಯುಸಿನೆಸ್ ವಲಯಗಳಲ್ಲಿ ಒಂದೆಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.
ಇದನ್ನೂ ಓದಿ: ಮದ್ಯ ಪ್ರಿಯರಿಗೆ ಬಿಗ್ ಶಾಕ್, ರಾಜ್ಯದಲ್ಲಿ ಈ 3 ದಿನ ಎಣ್ಣೆ ಸಿಗೋದಿಲ್ಲ!
ಭಾರತದ ಜವಳಿ, ಕೈಗಾರಿಕೆ, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ರೇಮಂಡ್ ಖ್ಯಾತಿ
ಜವಳಿ ವಲಯದಲ್ಲಿ, ರೇಮಂಡ್ ವಿಶ್ವದ ಅತ್ಯಂತ ಮೃದುವಾದ ಉಣ್ಣೆಯ ಸೂಟಿಂಗ್ ಬಟ್ಟೆಗಳನ್ನು ಉತ್ಪಾದಿಸುವವರಲ್ಲಿ ಒಂದೆನಿಸಿದೆ. ತನ್ನ ಗುಣಮಟ್ಟ ಹಾಗೂ ಉತ್ಪಾದಕತೆಗೆ ಹೆಸರುವಾಸಿಯಾಗಿರುವ ರೇಮಂಡ್ ವಸ್ತ್ರಗಳ ಕ್ಷೇತ್ರದಲ್ಲಿ ತನ್ನದೇ ಬ್ರ್ಯಾಂಡ್ ಎಂಬುದಾಗಿ ಗುರುತಿಸಿಕೊಂಡಿದೆ.
ಇದೇ ಗ್ರೂಪ್‌ನ ಇಂಜಿನಿಯರಿಂಗ್ ವಿಭಾಗವು ಆಟೋ ಘಟಕಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ ಇದರೊಂದಿಗೆ ರೇಮಂಡ್ ರಿಯಲ್ ಎಸ್ಟೇಟ್ ವಿಭಾಗವು ಭಾರತದಾದ್ಯಂತ ಹಲವಾರು ವಸತಿ ಮತ್ತು ವಾಣಿಜ್ಯ ಆಸ್ತಿಗಳನ್ನು ಅಭಿವೃದ್ಧಿಪಡಿಸಿದೆ.
ಇದನ್ನೂ ಓದಿ: ಹೂಡಿಕೆದಾರರೇ ಎಚ್ಚರ, 15,000 ಕೋಟಿ ಹಣ ದೋಚಿ ಪರಾರಿಯಾದ ಮಹಿಳಾ ಉದ್ಯಮಿ
ಹೀಗೆ ವಸ್ತ್ರ, ಕೈಗಾರಿಕೆ, ರಿಯಲ್ ಎಸ್ಟೇಟ್ ಕ್ಷೇತ್ರಗಳಲ್ಲಿ ತನ್ನದೇ ಛಾಪು ಮೂಡಿಸಿರುವ ರೇಮಂಡ್ ವಿದೇಶಗಳಲ್ಲೂ ಖ್ಯಾತಿ ಗಳಿಸಿದ ಭಾರತೀಯ ಬ್ರ್ಯಾಂಡ್ ಎಂದೆನಿಸಿದೆ.
ಭಾರತದ ಎರಡನೇ ಅತ್ಯಂತ ದುಬಾರಿ ಮನೆಯಲ್ಲಿ ಗೌತಮ್ ವಾಸ
ಖ್ಯಾತ ಬ್ಯುಸಿನೆಸ್‌ಮೆನ್ ಗೌತಮ್ ಸಿಂಘಾನಿಯಾ ಐಷಾರಾಮಿ ಜೀವನ ನಡೆಸುತ್ತಿರುವ ಉದ್ಯಮಿಗಳಲ್ಲಿ ಒಬ್ಬರು. ಇವರು ವಾಸಿಸುವ ಬಂಗಲೆ ಜೆಕೆ ಹೌಸ್ ಆಗಿದ್ದು, ಮುಖೇಶ್ ಅಂಬಾನಿ ಒಡೆತನದ ಆಂಟಿಲಿಯಾ ನಂತರ 6,000 ಕೋಟಿ ರೂಪಾಯಿ ಮೌಲ್ಯದ ಭಾರತದ ಎರಡನೇ ಅತ್ಯಂತ ದುಬಾರಿ ಮನೆಯಾಗಿ ಜೆಕೆ ಹೌಸ್ ಗುರುತಿಸಿಕೊಂಡಿದೆ. ಅಂತೆಯೇ ಇದು ವಿಶ್ವದ ಅತ್ಯಂತ ದುಬಾರಿ ಮನೆಗಳಲ್ಲಿ ಒಂದೆಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.
ಕಾರು ಹಾಗೂ ರೇಸ್ ಅಂದರೆ ಇವರಿಗೆ ಬಲು ಪ್ರೀತಿ
ರೇಮಂಡ್ ಗ್ರೂಪ್‌ನಲ್ಲಿ ಗೌತಮ್ ಸಿಂಘಾನಿಯ ಹೊತ್ತಿರುವ ಮಹತ್ತರ ಜವಾಬ್ದಾರಿಯ ಹೊರತಾಗಿ, ಗೌತಮ್ ಸಿಂಘಾನಿಯಾ ಅವರು ಕಾರುಗಳು ಮತ್ತು ರೇಸಿಂಗ್ ಎಂದರೆ ತುಂಬಾ ಇಷ್ಟಪಡುತ್ತಾರೆ.
ವಿಪರೀತ ಕಾರು ಉತ್ಸಾಹಿಯಾಗಿರುವ ಉದ್ಯಮಿ ಭಾರತ ಮತ್ತು ವಿದೇಶಗಳಲ್ಲಿ ನಡೆದ ಹಲವಾರು ಕಾರ್ ರೇಸ್‌ಗಳಲ್ಲಿ ಭಾಗವಹಿಸಿದ್ದಾರೆ. ಅಂತೆಯೇ, ಅವರು ತಮ್ಮ ರೇಸಿಂಗ್ ಸಾಧನೆಗಳಿಗಾಗಿ ಕೆಲವು ವಿಶ್ವ ದಾಖಲೆಗಳನ್ನು ಸಹ ಮಾಡಿದ್ದಾರೆ.
ಇತ್ತೀಚಿನ ಸುದ್ದಿಗಳ ಪ್ರಕಾರ, ಗೌತಮ್ ಸಿಂಘಾನಿಯಾ ಕಾಂಡೋಮ್‌ಗಳನ್ನು ಮಾರಾಟ ಮಾಡುವ ಕಾಮಸೂತ್ರ ಬ್ರ್ಯಾಂಡ್‌ನ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುವುದಾಗಿ ಘೋಷಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ