• Home
  • »
  • News
  • »
  • business
  • »
  • Income Tax: ಆದಾಯ ತೆರಿಗೆ ಪಾವತಿಸುವವರಿಗೆ ನಿಶ್ಚಿಂತೆ, ಉದ್ಯೋಗಿಗಳಿಗೆ ಲಾಭ!

Income Tax: ಆದಾಯ ತೆರಿಗೆ ಪಾವತಿಸುವವರಿಗೆ ನಿಶ್ಚಿಂತೆ, ಉದ್ಯೋಗಿಗಳಿಗೆ ಲಾಭ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೇಂದ್ರ ಬಜೆಟ್ 2023 (ಕೇಂದ್ರ ಬಜೆಟ್ 2023) ಮಂಡನೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಬಜೆಟ್ ಬಗ್ಗೆ ಜನರಲ್ಲಿ ಕುತೂಹಲ ಹೆಚ್ಚುತ್ತಿದೆ. ಬಜೆಟ್‌ನಿಂದ ಹೆಚ್ಚು ನಿರೀಕ್ಷೆಯನ್ನಿಟ್ಟುಕೊಳ್ಳುವವರು ನಿರೀಕ್ಷಿತ ಉದ್ಯೋಗ ವೃತ್ತಿಪರರು ಹಾಗೂ ರೈತರು.

  • Trending Desk
  • 3-MIN READ
  • Last Updated :
  • Share this:

ಆದಾಯ ತೆರಿಗೆ (Income Tax) ಸಲ್ಲಿಕೆಯು ಪ್ರತಿಯೊಬ್ಬ ಭಾರತೀಯ ನಾಗರಿಕರ ಪ್ರಮುಖ ಕರ್ತವ್ಯ ಎಂದೆನಿಸಿದ್ದು ಸಂಬಳ (Salary) ಪಡೆಯುವ ವ್ಯಕ್ತಿಯಾಗಲಿ ಅಥವಾ ಉದ್ಯಮಿಯಾಗಲಿ (Employee) ತೆರಿಗೆ ಸಲ್ಲಿಕೆಯನ್ನು ಕಡ್ಡಾಯವಾಗಿ ಮಾಡಬೇಕು. ಇದಕ್ಕೆ ಸಂಬಂಧಿಸಿದಂತೆ ಪ್ರತಿ ವರ್ಷ, ಭಾರತದ ಹಣಕಾಸು ಸಚಿವಾಲಯವು ಐಟಿ (IT) ಕಡಿತಗಳ ಬಗ್ಗೆ ಏನು ಮಾಡಬೇಕು ಹಾಗೂ ಮಾಡಬಾರದು ಎಂಬುದನ್ನು ವಿವರಿಸುವ ಬಜೆಟ್ (Budget) ಅನ್ನು ಹೊರತರುತ್ತದೆ. ಕೇಂದ್ರ ಬಜೆಟ್ 2023 (ಕೇಂದ್ರ ಬಜೆಟ್ 2023) ಮಂಡನೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಬಜೆಟ್ ಬಗ್ಗೆ ಜನರಲ್ಲಿ ಕುತೂಹಲ ಹೆಚ್ಚುತ್ತಿದೆ. ಬಜೆಟ್‌ನಿಂದ ಹೆಚ್ಚು ನಿರೀಕ್ಷೆಯನ್ನಿಟ್ಟುಕೊಳ್ಳುವವರು ನಿರೀಕ್ಷಿತ ಉದ್ಯೋಗ ವೃತ್ತಿಪರರು ಹಾಗೂ ರೈತರು.


ಕೇಂದ್ರ ಬಜೆಟ್ ಮೇಲೆ ಜನರ ನಿರೀಕ್ಷೆ!


ಇದಲ್ಲದೆ ತೆರಿಗೆದಾರರ ಅನುಕೂಲಕ್ಕಾಗಿ ಆದಾಯ ತೆರಿಗೆ ಇಲಾಖೆಯು ಆಗಾಗ್ಗೆ ತನ್ನ ನಿಯಮಗಳನ್ನು ಬದಲಾಯಿಸುತ್ತಿರುತ್ತದೆ. ಇದೀಗ ಇಲಾಖೆಯು ಮಹತ್ವದ ಪ್ರಕಟಣೆಯೊಂದನ್ನು ಹೊರತಂದಿದ್ದು ಇದರ ಅನ್ವಯ ತೆರಿಗೆದಾರರು ಚಿಕಿತ್ಸೆಗಾಗಿ ಪಡೆಯುವ ಮೊತ್ತಕ್ಕೆ ಇಲಾಖೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಿದೆ.


ತೆರಿಗೆದಾರರು ತೆರಿಗೆ ಉಳಿತಾಯವನ್ನು ಹೇಗೆ ಮಾಡಬಹುದು?


ಪ್ರತಿಯೊಬ್ಬರೂ ಪ್ರತಿ ವರ್ಷ ಕೆಲವು ಮೊತ್ತದ ತೆರಿಗೆಯನ್ನು ಪಾವತಿಸಬೇಕು ಎಂಬುದು ಕಡ್ಡಾಯವಾಗಿದ್ದು, ತೆರಿಗೆಗಳನ್ನು ಉಳಿಸಲು ಅಥವಾ ರಿಯಾಯಿತಿಯನ್ನು ಪಡೆಯಲು ಕೆಲವೊಂದು ವಿಧಾನಗಳಿದ್ದು ಅದನ್ನು ತೆರಿಗೆದಾರರು ಅನುಸರಿಸಬಹುದಾಗಿದೆ.


PPF, EPF ಮತ್ತು ಇತರವುಗಳಂತಹ ತೆರಿಗೆ-ಉಳಿತಾಯ ಹೂಡಿಕೆ ಆಯ್ಕೆಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ ಮತ್ತು ಅವು ನಿಮಗೆ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ನೀಡುತ್ತವೆ.


ದೂರುಗಳ ಪರಿಹಾರಕ್ಕೆ ಸಮಿತಿ ರಚನೆಗೆ ಪ್ರಕಟಣೆ


ತೆರಿಗೆ ಇಲಾಖೆಯು ತೆರಿಗೆದಾರರ ಅನುಕೂಲ ಹಾಗೂ ಸಹಕಾರಕ್ಕಾಗಿ ಬದಲಾವಣೆಗಳನ್ನು ಮಾಡುತ್ತಿದ್ದು, ಕರೋನಾ ಸಮಯದಲ್ಲಿ ಕುಟುಂಬದ ಸದಸ್ಯರ ಸಾವಿನಲ್ಲಿ ಆದಾಯ ತೆರಿಗೆ ಇಲಾಖೆಯಿಂದ ಪಡೆದ ಸಹಾಯದ ಮೊತ್ತಕ್ಕೂ ತೆರಿಗೆ ವಿನಾಯಿತಿ ನೀಡಲಾಗಿದೆ.


ಇಲಾಖೆಯಿಂದ ಯಾವುದೇ ರೀತಿಯ ದೂರುಗಳಿದ್ದಲ್ಲಿ ಶೀಘ್ರ ಪರಿಹಾರಕ್ಕಾಗಿ ಸ್ಥಳೀಯ ಸಮಿತಿಗಳನ್ನು ರಚಿಸುವುದಾಗಿಯೂ ಘೋಷಿಸಲಾಗಿದೆ. ಇದರಿಂದ ತೆರಿಗೆದಾರರ ದೂರುಗಳನ್ನು ಶೀಘ್ರದಲ್ಲಿ ಸಮಿತಿಗಳ ಮೂಲಕ ಪರಿಹರಿಸಬಹುದಾಗಿದೆ. ಇದಲ್ಲದೆ, ಡಿಜಿಟಲೀಕರಣವನ್ನು ಉತ್ತೇಜಿಸುವ ಮತ್ತು ಜನರ ಅನುಕೂಲಕ್ಕಾಗಿ ಆದಾಯ ತೆರಿಗೆ ಇಲಾಖೆಯು ಅನೇಕ ರೀತಿಯ ಸೇವೆಗಳು ಮತ್ತು ಸಂಬಂಧಿತ ನಮೂನೆಗಳನ್ನು ಡಿಜಿಟಲೀಕರಣಗೊಳಿಸಿದೆ.


ಇದನ್ನೂ ಓದಿ: IRCTCಯ ಶೇಕಡಾ 5ರಷ್ಟು ಷೇರು ಮಾರಲು ಮುಂದಾದ ಸರ್ಕಾರ! ಇದೇ ಕಾರಣನಾ?


ಡಿಜಿಟಲ್ ವ್ಯವಸ್ಥೆಯಡಿಯಲ್ಲಿ ತೆರಿಗೆ ಸಂಬಂಧಿತ ಯಾವುದೇ ಕೆಲಸ ಕಾರ್ಯಗಳನ್ನು ನಡೆಸಲು ಕಚೇರಿಗಳನ್ನು ಸುತ್ತುವ ಪ್ರಯಾಸವಿರುವುದಿಲ್ಲ ಪ್ರತಿಯೊಂದನ್ನು ಡಿಜಿಟಲ್ ವ್ಯವಸ್ಥೆಯ ಮೂಲಕ ಸುಗಮವಾಗಿ ನೀವು ಮಾಡಬಹುದಾಗಿದೆ.


123 ಕ್ಕೂ ಹೆಚ್ಚು ಫಾರ್ಮ್‌ಗಳು ಆನ್‌ಲೈನ್‌ನಲ್ಲಿ ಲಭ್ಯ


ತೆರಿಗೆ ಇಲಾಖೆಯ ಮೊತ್ತೊಂದು ಮಹತ್ವದ ಹೆಜ್ಜೆಯೆಂದರೆ ಆದಾಯ ತೆರಿಗೆಗೆ ಸಂಬಂಧಿಸಿದ ಕೆಲಸವನ್ನು ಸರಾಗಗೊಳಿಸಲು ಇಲಾಖೆಯಿಂದ 123 ಕ್ಕೂ ಹೆಚ್ಚು ಫಾರ್ಮ್‌ಗಳನ್ನು ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡುವುದಾಗಿದೆ.ಇದಲ್ಲದೆ, 2020 ಮತ್ತು 2021 ವರ್ಷಗಳಲ್ಲಿ ಕರೋನಾ ಅವಧಿಯಲ್ಲಿ ಚಿಕಿತ್ಸೆಗಾಗಿ ಪಡೆದ ಮೊತ್ತದ ಮೇಲೆ ತೆರಿಗೆ ವಿನಾಯಿತಿಯನ್ನು ಇಲಾಖೆ ಘೋಷಿಸಿದೆ.


ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ಮುಗ್ಗರಿಸಿದ ಎಲ್​ಐಸಿ, ಖಾಸಗಿ ವಲಯದಿಂದ ಕಾರ್ಯನಿರ್ವಾಹಕರ ಆಯ್ಕೆ!


ವಾಸ್ತವವಾಗಿ, ಕೋವಿಡ್ ಅವಧಿಯಲ್ಲಿ, ಎಲ್ಲಾ ಕುಟುಂಬಗಳು ಕೋವಿಡ್ ಚಿಕಿತ್ಸೆಗಾಗಿ ನೆರವು ಪಡೆದಿದ್ದವು. ಹೀಗೆ ಪಡೆದ ಚಿಕಿತ್ಸೆಗೆ ಇಲ್ಲಿಯವರೆಗೆ ಆದಾಯ ತೆರಿಗೆಯ ನಿಬಂಧನೆ ಇತ್ತು. ಆದರೆ ಈಗ ಇದರಿಂದ ಪರಿಹಾರ ಸಿಗಲಿದೆ. ಇದರಿಂದ ತೆರಿಗೆದಾರರು ಕೊಂಚ ನಿರಾಳತೆಯನ್ನು ಅನುಭವಿಸಲಿದ್ದಾರೆ.


ತೆರಿಗೆ ಇಲಾಖೆಯಿಂದ ಕುಂದುಕೊರತೆ ಪೋರ್ಟಲ್ ಆರಂಭ


ವಿಡಿಯೋ ಕಾನ್ಫರೆನ್ಸಿಂಗ್ ಸೇವೆಯನ್ನೊದಗಿಸಲು SOP (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸಿಜರ್) ಅನ್ನು ಸಹ ನೀಡಲಾಗಿದೆ. ವೀಡಿಯೊ ಕಾನ್ಫರೆನ್ಸ್ ಮೂಲಕ ಸಲ್ಲಿಸಿದ ತೆರಿಗೆಯ ಕುರಿತು ವೈಯಕ್ತಿಕ ವಿಚಾರಣೆಯನ್ನು ಪಾವತಿದಾರ ಮಾಡಬಹುದಾಗಿದೆ.ತೆರಿಗೆ ಪಾವತಿದಾರರ ಕುಂದುಕೊರತೆಗಳನ್ನು ನಿವಾರಿಸಲು ಕುಂದುಕೊರತೆ ಪೋರ್ಟಲ್ ‘ಸಮಾಧನ್’ ಆರಂಭಿಸಲಾಗಿದೆ.

Published by:ವಾಸುದೇವ್ ಎಂ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು