• Home
  • »
  • News
  • »
  • business
  • »
  • Reliance: ಮೆಟ್ರೋ ಖರೀದಿಗೆ ಮುಂದಾದ ರಿಲಯನ್ಸ್​, 4,060 ಕೋಟಿ ಒಪ್ಪಂದ!

Reliance: ಮೆಟ್ರೋ ಖರೀದಿಗೆ ಮುಂದಾದ ರಿಲಯನ್ಸ್​, 4,060 ಕೋಟಿ ಒಪ್ಪಂದ!

ಮುಖೇಶ್​ ಅಂಬಾನಿ

ಮುಖೇಶ್​ ಅಂಬಾನಿ

ರಿಲಯನ್ಸ್ ಇಂಡಸ್ಟ್ರೀಸ್ ಸುಮಾರು 4,060 ಕೋಟಿ ಅಂದಾಜು ಒಪ್ಪಂದದಲ್ಲಿ ಮೆಟ್ರೋ ಎಜಿಯ ಕ್ಯಾಶ್ & ಕ್ಯಾರಿ ವ್ಯವಹಾರವನ್ನು ಭಾರತದಲ್ಲಿ ಸ್ವಾಧೀನಪಡಿಸಿಕೊಳ್ಳಲು ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ.

  • Share this:

ಭಾರತ (India) ದ ದೈತ್ಯ ಕಂಪನಿ (Company) ಗಳಲ್ಲೊಂದಾಗಿರುವ ರಿಲಯನ್ಸ್‌ (Reliance) ಮತ್ತೊಂದು ಬೃಹತ್‌ ಕಂಪನಿಯ ಸ್ವಾಧೀನಕ್ಕೆ ಮುಂದಾಗಿದೆ. ಜರ್ಮನಿಯ ಚಿಲ್ಲರೆ ವ್ಯಾಪಾರಿ ಕಂಪನಿಯಾದ ಮೆಟ್ರೋ ಕ್ಯಾಶ್‌ ಆಂಡ್‌ ಕ್ಯಾರಿ (Metro Cash And Carry) ಇಂಡಿಯಾದ ಸ್ವಾಧೀನದ ಒಪ್ಪಂದದ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಒಪ್ಪಂದವು 31 ಸಗಟು ವಿತರಣಾ ಕೇಂದ್ರಗಳು, ಲ್ಯಾಂಡ್ ಬ್ಯಾಂಕ್‌ಗಳು ಮತ್ತು METRO ಕ್ಯಾಶ್ & ಕ್ಯಾರಿ ಒಡೆತನದ ಇತರ ಆಸ್ತಿಗಳನ್ನು ಒಳಗೊಂಡಿದೆ ಎನ್ನಲಾಗಿದೆ.


4 ಸಾವಿರ ಕೋಟಿ ರೂಗಳ ಒಪ್ಪಂದ !


ರಿಲಯನ್ಸ್ ಇಂಡಸ್ಟ್ರೀಸ್ ಸುಮಾರು 500 ಮಿಲಿಯನ್ ಯುರೋಗಳ ಅಂದರೆ ಭಾರತೀಯ ರೂಪಾಯಿಗಳಲ್ಲಿ ಹೇಳೋದಾದ್ರೆ, 4,060 ಕೋಟಿ ಅಂದಾಜು ಒಪ್ಪಂದದಲ್ಲಿ ಮೆಟ್ರೋ ಎಜಿಯ ಕ್ಯಾಶ್ & ಕ್ಯಾರಿ ವ್ಯವಹಾರವನ್ನು ಭಾರತದಲ್ಲಿ ಸ್ವಾಧೀನಪಡಿಸಿಕೊಳ್ಳಲು ಸಿದ್ಧವಾಗಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ. ಡೀಲ್‌ನಲ್ಲಿ 31 ಸಗಟು ವಿತರಣಾ ಕೇಂದ್ರಗಳು, ಲ್ಯಾಂಡ್ ಬ್ಯಾಂಕ್‌ಗಳು ಮತ್ತು ಮೆಟ್ರೋ ಕ್ಯಾಶ್ & ಕ್ಯಾರಿ ಒಡೆತನದ ಇತರ ಆಸ್ತಿಗಳು ಸೇರಿವೆ ಎನ್ನಲಾಗಿದೆ. ಇದು ದೇಶದ ಅತಿದೊಡ್ಡ ಚಿಲ್ಲರೆ ವ್ಯಾಪಾರಿ ರಿಲಯನ್ಸ್ ರಿಟೇಲ್‌ಗೆ B2B ವಿಭಾಗದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಲು ಸಹಾಯ ಮಾಡಲಿದೆ.


ಅಂದಹಾಗೆ, ಬಿಲಿಯನೇರ್ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಮೆಟ್ರೋ ನಡುವೆ ಕಳೆದ ಕೆಲವು ತಿಂಗಳುಗಳಿಂದ ಚರ್ಚೆ ನಡೆಯುತ್ತಿತ್ತು. ಹಾಗೆಯೇ ಕಳೆದ ವಾರ ಜರ್ಮನಿಯ ಮೂಲ ಸಂಸ್ಥೆಯು ರಿಲಯನ್ಸ್ ರಿಟೇಲ್‌ನಿಂದ ಪ್ರಸ್ತಾಪವನ್ನು ಒಪ್ಪಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.


ಕೆಲವೇ ದಿನಗಳಲ್ಲಿ ಅಧಿಕೃತ ಮಾಹಿತಿ!


ರಿಲಾಯನ್ಸ್‌ ಇಂಡಸ್ಟ್ರೀಸ್‌ ಮೆಟ್ರೋವನ್ನು ಸ್ವಾಧೀಪಡಿಸಿಕೊಳ್ಳುವ ಸುದ್ದಿಯ ಬಗ್ಗೆ ಪ್ರತಿಕ್ರಿಯೆ ನೀಡಲು METRO ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಎರಡೂ ಕಂಪನಿಗಳ ಅಧಿಕಾರಿಗಳು ನಿರಾಕರಿಸಿದ್ದಾರೆ. ರಿಲಯನ್ಸ್ ವಕ್ತಾರರು, "ನಮ್ಮ ಕಂಪನಿಯು ನಡೆಯುತ್ತಿರುವ ಆಧಾರದ ಮೇಲೆ ವಿವಿಧ ಅವಕಾಶಗಳನ್ನು ಮೌಲ್ಯಮಾಪನ ಮಾಡುತ್ತದೆ" ಎಂದಿದ್ದಾರೆ.


ಇದನ್ನೂ ಓದಿ: 7000 ಕೋಟಿ ಡೀಲ್​, ಬಿಸ್ಲೇರಿ ಕಂಪನಿ ಖರೀದಿಸಲು ಮುಂದಾದ ಟಾಟಾ!


METRO AG ಯ ವಕ್ತಾರರು, "ನಾವು ಮಾರುಕಟ್ಟೆಯ ವದಂತಿಗಳು ಅಥವಾ ಊಹಾಪೋಹಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. METRO ಕ್ಯಾಶ್ & ಕ್ಯಾರಿ ಗ್ರಾಹಕರು ಚಿಲ್ಲರೆ ವ್ಯಾಪಾರಿಗಳು ಮತ್ತು ಕಿರಾನಾ ಸ್ಟೋರ್‌ಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಕ್ಯಾಟರರ್‌ಗಳು (HoReCa), ಕಾರ್ಪೊರೇಟ್‌ಗಳು, SMEಗಳು, ಕಂಪನಿಗಳು ಮತ್ತು ಸಂಸ್ಥೆಗಳನ್ನು ಒಳಗೊಂಡಿರುತ್ತಾರೆ” ಎಂದಿದ್ದಾರೆ.


B2B ವಿಭಾಗವನ್ನು ಕಡಿಮೆ-ಮಾರ್ಜಿನ್ ವ್ಯಾಪಾರವೆಂದು ಪರಿಗಣಿಸಲಾಗಿದೆ. ಅದರಲ್ಲೂ ಕ್ಯಾರಿಫೋರ್‌ನಂತಹ ಬಹುರಾಷ್ಟ್ರೀಯ ಕಂಪನಿಗಳು 2014 ರಲ್ಲಿ ದೇಶದಿಂದ ನಿರ್ಗಮಿಸಿವೆ. ಜುಲೈ 2020 ರಲ್ಲಿ, ಇ-ಕಾಮರ್ಸ್ ಪ್ರಮುಖ ಫ್ಲಿಪ್‌ಕಾರ್ಟ್ ಗ್ರೂಪ್ ವಾಲ್‌ಮಾರ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನಲ್ಲಿ 100 ಪ್ರತಿಶತ ಪಾಲನ್ನು ಸ್ವಾಧೀನಪಡಿಸಿಕೊಂಡಿತು.ಇದು ಅತ್ಯುತ್ತಮ ಬೆಲೆಯ ನಗದು ಮತ್ತು ಕ್ಯಾರಿ ವ್ಯವಹಾರವನ್ನು ನಿರ್ವಹಿಸುತ್ತದೆ.


ಇದನ್ನೂ ಓದಿ: ಒಳಉಡುಪು ಮಾರಾಟ ಕುಸಿದ್ರೆ ಆರ್ಥಿಕ ಕುಸಿತದ ಮುನ್ಸೂಚನೆಯಂತೆ! ಇನ್ನೂ ಸಾಕಷ್ಟು ರೀಸನ್ಸ್​ ಇಲ್ಲಿದೆ​ ನೋಡಿ


ಈ ಮಧ್ಯೆ, ಸಿಯಾಮ್ ಮ್ಯಾಕ್ರೊ ಸೇರಿದಂತೆ ಇತರ ಚಿಲ್ಲರೆ ವ್ಯಾಪಾರದ ಕಂಪನಿಗಳು ಸಹ METRO ನಗದು ಮತ್ತು ಕ್ಯಾರಿಯನ್ನು ಸ್ವಾಧೀನಪಡಿಸಿಕೊಳ್ಳುವ ರೇಸ್‌ನಲ್ಲಿದ್ದರು. ಅಂದಹಾಗೆ ಸಿಯಾಮ್ ಮ್ಯಾಕ್ರೊ ಕಂಪನಿ ಲಾಟ್ಸ್ ಹೋಲ್‌ಸೇಲ್ ಸೊಲ್ಯೂಷನ್ಸ್ ಎಂಬ ಬ್ರ್ಯಾಂಡ್ ಹೆಸರಿನಲ್ಲಿ ಲಾಟ್ಸ್ ಹೋಲ್‌ಸೇಲ್ ಕ್ಯಾಶ್ ಮತ್ತು ಕ್ಯಾರಿ ಟ್ರೇಡಿಂಗ್ ವ್ಯಾಪಾರವನ್ನು ನಿರ್ವಹಿಸುತ್ತದೆ. ಆದ್ರೆ, ಕಳೆದ ತಿಂಗಳು, ಥೈಲ್ಯಾಂಡ್‌ನ ಚರೋಯೆನ್ ಪೋಕ್‌ಫಾಂಡ್ ಗ್ರೂಪ್‌ನ ಭಾಗವಾಗಿರುವ ಸಿಯಾಮ್ ಮ್ಯಾಕ್ರೋ, ಮೆಟ್ರೋ ಕ್ಯಾಶ್ & ಕ್ಯಾರಿ ಇಂಡಿಯಾಗಾಗಿ ಬಿಡ್ಡಿಂಗ್‌ನಿಂದ ಹಿಂದೆ ಸರಿಯುವುದಾಗಿ ಘೋಷಿಸಿತು.


34 ದೇಶಗಳಲ್ಲಿ ಮೆಟ್ರೋ ಕಾರ್ಯ!


ಅಂದಹಾಗೆ 34 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ METRO AG ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದ್ದು 2003 ರಲ್ಲಿ. ಇದು ಬೆಂಗಳೂರಿನಲ್ಲಿ ಆರು, ಹೈದರಾಬಾದ್‌ನಲ್ಲಿ ನಾಲ್ಕು, ಮುಂಬೈ ಮತ್ತು ದೆಹಲಿಯಲ್ಲಿ ತಲಾ ಎರಡು ಮತ್ತು ಕೋಲ್ಕತ್ತಾ, ಜೈಪುರ, ಜಲಂಧರ್, ಜಿರಾಕ್‌ಪುರ, ಅಮೃತಸರ, ಅಹಮದಾಬಾದ್, ಸೂರತ್, ಇಂದೋರ್, ಲಕ್ನೋ, ಮೀರತ್, ನಾಸಿಕ್, ಗಾಜಿಯಾಬಾದ್, ತುಮಕೂರು, ವಿಜಯವಾಡ, ವಿಶಾಖಪಟ್ಟಣ, ಗುಂಟೂರು ಮತ್ತು ಹುಬ್ಬಳ್ಳಿಗಳಲ್ಲಿ ತಲಾ ಒಂದು ಮಳಿಗೆಗಳನ್ನು ನಿರ್ವಹಿಸುತ್ತದೆ.

Published by:ವಾಸುದೇವ್ ಎಂ
First published: