Reliance Retail: ಗ್ಯಾಪ್‌ ಜೊತೆ ಕೈಜೊಡಿಸಿದ ರಿಲಯನ್ಸ್, ಅಮೆರಿಕನ್‌ ಬ್ರ್ಯಾಂಡ್‌ ಬಟ್ಟೆಗಳು ಇನ್ನು ಭಾರತದಲ್ಲೇ ಲಭ್ಯ!

ಭಾರತದ ಅತಿದೊಡ್ಡ ಸಂಸ್ಥೆ ರಿಲಯನ್ಸ್ ರಿಟೇಲ್ ಲಿಮಿಟೆಡ್ (Reliance Retail), ಐಕಾನಿಕ್ ಅಮೇರಿಕನ್ ಫ್ಯಾಶನ್ ಬ್ರ್ಯಾಂಡ್ ಗ್ಯಾಪ್ ಅನ್ನು ಭಾರತಕ್ಕೆ ತರಲು Gap Inc. ಜೊತೆಗೆ ದೀರ್ಘಾವಧಿಯ ಪಾಲುದಾರಿಕೆಯನ್ನು ಖರೀದಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮುಂಬೈ, 6 ಜುಲೈ: ಭಾರತದ ಅತಿದೊಡ್ಡ ಸಂಸ್ಥೆ ರಿಲಯನ್ಸ್ ರಿಟೇಲ್ ಲಿಮಿಟೆಡ್ (Reliance Retail), ಐಕಾನಿಕ್ ಅಮೆರಿಕನ್ ಫ್ಯಾಶನ್ ಬ್ರ್ಯಾಂಡ್ ಗ್ಯಾಪ್ ಅನ್ನು ಭಾರತಕ್ಕೆ ತರಲು Gap Inc. ಜೊತೆಗೆ ದೀರ್ಘಾವಧಿಯ ಪಾಲುದಾರಿಕೆಯನ್ನು ಖರೀದಿಸಿದೆ. ಈ ಮೂಲಕ ದೀರ್ಘಾವಧಿಯ ಫ್ರಾಂಚೈಸ್ ಒಪ್ಪಂದವನ್ನು ಮಾಡಿಕೊಂಡಿದೆ. ಇದರ ಭಾಗವಾಗಿ ಭಾರತದ ಎಲ್ಲಾ ರಿಲಯನ್ಸ್ ರಿಟೇಲ್‌ಗಳಲ್ಲಿ ಗ್ಯಾಪ್‌ನ ಇತ್ತೀಚಿನ ಫ್ಯಾಷನ್ (Fashion) ಕೊಡುಗೆಗಳನ್ನು ಪರಿಚಯಿಸುತ್ತಿದೆ. ಈ ಪಾಲುದಾರಿಕೆಯ ಪ್ರಮುಖ ಅಂಶವಾಗಿ ಭಾರತೀಯರಲ್ಲಿ ಸಾಮಾನ್ಯ ಜೀವನಶೈಲಿಯ ಭಾಗವಾಗಿ ಈ ಬ್ರ್ಯಾಂಡ್ (Brand) ಅನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. 1969 ರಲ್ಲಿ ಫ್ರಾನ್ಸಿಸ್ಕೋ, ಗ್ಯಾಪ್ ಡೆನಿಮ್ ಅವರ ಪರಂಪರೆಯ ಮೇಲೆ ಈ ಬ್ರ್ಯಾಂಡ್​ ನಿರ್ಮಾಣವಾಗಿದೆ. ಗ್ರಾಹಕರೊಂದಿಗೆ ಆನ್‌ಲೈನ್ ಮತ್ತು ಕಂಪನಿ-ಚಾಲಿತವಾಗಿ ಜಾಗತಿಕವಾಗಿ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡ್ಯಯುವುದಾಗಿ ರಿಲಾಯನ್ಸ್ ತಿಳಿಸಿದೆ.

  ಹೊಸ ಅನುಭವ ನೀಡಲಿದೆ ಗ್ಯಾಪ್‌ ಶಾಪಿಂಗ್

  ಭಾರತೀಯರ ಮತ್ತು ಅಮೆರಿಕನ್ ಶೈಲಿಯ ನಡುವಿನ ಅಂತರವನ್ನು ಕಡಿಮೆ ಮಾಡುವ ಮೂಲಕ ಅಮೆರಿಕನ್ ಶೈಲಿಯ ವಿಶಿಷ್ಟವಾದ ಮೂಲಭೂತ ಸಂಸ್ಕೃತಿಗಳ ಅನುಭವವನ್ನು ರಿಲಯನ್ಸ್ ರಿಟೇಲ್ ಗ್ಯಾಪ್‌ನ ಶಾಪಿಂಗ್ ನೀಡುತ್ತದೆ. ಭಾರತದಲ್ಲಿ ಗ್ರಾಹಕರು, ಪುರುಷರು, ಮಹಿಳೆಯರು ಮತ್ತು ಮಕ್ಕಳಿಗಾಗಿ ಬ್ರ್ಯಾಂಡ್‌ನ ಫ್ಯಾಶನ್ ಅನ್ನು ಗ್ಯಾಪ್‌ನ ಶಾಪಿಂಗ್ ನಲ್ಲಿ ನೀವು ಪಡೆದುಕೊಳ್ಳಬಹುದಾಗಿದೆ.

  ಈ ಪಾಲುದಾರಿಕೆ ನಮಗೆ ಹೆಮ್ಮೆ ತಂದಿದೆ

  “ರಿಲಯನ್ಸ್ ರಿಟೇಲ್‌ನಲ್ಲಿ, ನಮ್ಮ ಗ್ರಾಹಕರಿಗೆ ಇತ್ತೀಚಿನ ಮತ್ತು ಅತ್ಯುತ್ತಮವಾದದ್ದನ್ನು ತರಲು ನಾವು ಹೆಮ್ಮೆಪಡುತ್ತೇವೆ ಮತ್ತು ಐಕಾನಿಕ್ ಅಮೆರಿಕನ್ ಬ್ರ್ಯಾಂಡ್, ನಮ್ಮ ಫ್ಯಾಶನ್ ಗೆ ಗ್ಯಾಪ್ ಅನ್ನು ಸೇರಿಸಲು ನಾವು ಸಂತೋಷಪಡುತ್ತೇವೆ. ರಿಲಯನ್ಸ್ ಮತ್ತು ಗ್ಯಾಪ್ ತಮ್ಮ ದೃಷ್ಟಿಯಲ್ಲಿ ಪರಸ್ಪರ ಪೂರಕವಾಗಿರುತ್ತವೆ ಎಂದು ನಾವು ನಂಬುತ್ತೇವೆ. ಉದ್ಯಮದ ಪ್ರಮುಖ ಫ್ಯಾಷನ್ ಉತ್ಪನ್ನಗಳು ಮತ್ತು ಚಿಲ್ಲರೆ ಅನುಭವಗಳನ್ನು ತಮ್ಮ ಗ್ರಾಹಕರಿಗೆ ತರಲು ಗ್ಯಾಪ್​ನೊಂದಿಗೆ ಪಾಲುಧಾರಿಕೆ ಹೊಂದಿದ್ದೇವೆ‘ ಎಂದು ರಿಲಯನ್ಸ್ ರಿಟೇಲ್‌ನ ಫ್ಯಾಶನ್ ಮತ್ತು ಲೈಫ್‌ಸ್ಟೈಲ್  ಸಿಇಒ ಅಖಿಲೇಶ್ ಪ್ರಸಾದ್ ಹೇಳಿದ್ದಾರೆ.

  ಇದನ್ನೂ ಓದಿ: Business Idea: ಈ ಪದಾರ್ಥಕ್ಕೆ ಭಾರತದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್​! ಇದನ್ನು ಬೆಳೆದರೆ 6 ತಿಂಗಳಲ್ಲಿ 10 ಲಕ್ಷ ಆದಾಯ

  ರಿಲಯನ್ಸ್ ರಿಟೇಲ್ ಲಿಮಿಟೆಡ್ ಕುರಿತು

  ರಿಲಯನ್ಸ್ ರಿಟೇಲ್ ಲಿಮಿಟೆಡ್ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ಕಂಪನಿಯ ಅಂಗಸಂಸ್ಥೆಯಾಗಿದೆ. RIL ಗುಂಪಿನ ಅಡಿಯಲ್ಲಿ ಎಲ್ಲಾ ಚಿಲ್ಲರೆ ಕಂಪನಿಗಳು RRVL ವಹಿವಾಟು ವರದಿ ಕೊನೆಗೊಂಡ ವರ್ಷಕ್ಕೆ 199,704 ಕೋಟಿ ($ 26.3 ಶತಕೋಟಿ) ಮತ್ತು ₹7,055 ಕೋಟಿ ($ 931 ಮಿಲಿಯನ್) ನಿವ್ವಳ ಲಾಭ ಹೊಂದಿದೆ. ಮಾರ್ಚ್ 31, 2022ರಲ್ಲಿ ರಿಲಯನ್ಸ್ ರಿಟೇಲ್ ಭಾರತದಲ್ಲಿ ಅತಿ ದೊಡ್ಡ ಮತ್ತು ಹೆಚ್ಚು ಲಾಭದಾಯಕ ಚಿಲ್ಲರೆ ವ್ಯಾಪಾರಿ ಸಂಸ್ಥೆಯಾಗಿ ಹೊರಹೊಮ್ಮಿದೆ. ಡೆಲಾಯ್ಟ್‌ನ ಗ್ಲೋಬಲ್‌ನಲ್ಲಿ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಚಿಲ್ಲರೆ ವ್ಯಾಪಾರಿಗಳ ಪಟ್ಟಿಯಲ್ಲಿ ರಿಲಯನ್ಸ್ ರಿಟೇಲ್ ಲಿಮಿಟೆಡ್ ಸಹ ಸ್ಥಾನ ಪಡೆದುಕೊಂಡಿದೆ. ಅಲ್ಲದೇ ಟಾಪ್ ಗ್ಲೋಬಲ್ ರಿಟೇಲರ್‌ಗಳ ಪಟ್ಟಿಯಲ್ಲಿ 56 ನೇ ಸ್ಥಾನದಲ್ಲಿದೆ. ಇದರ ಜೊತೆಗೆ ಟಾಪ್ 100 ರಲ್ಲಿ ಕಾಣಿಸಿಕೊಂಡ ಏಕೈಕ ಭಾರತೀಯ ಚಿಲ್ಲರೆ ವ್ಯಾಪಾರಿ ಸಂಸ್ಥೆಯಾಗಿ ರಿಲಯನ್ಸ್ ರಿಟೇಲ್ ಲಿಮಿಟೆಡ್ ಕಾಣಿಸಿಕೊಂಡಿದೆ.

  ಗ್ಯಾಪ್ ಸಂಸ್ಥೆ ಕುರಿತು ಮಾಹಿತಿ

  ಆಧುನಿಕ ಅಮೆರಿಕನ್ ಶೈಲಿಯಲ್ಲಿ ಗ್ಯಾಪ್ ಎನ್ನುವುದೊಂದು ಸಂಸ್ಥೆಯಾಗಿದೆ. 1969ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಸ್ಥಾಪಿಸಸಲಾದ ಗ್ಯಾಪ್ ಎಂಬ ಕಂಪನಿ ಅಲ್ಲಿನ ಫ್ಯಾಷನ್​ ಲೋಕಕ್ಕೆ ಹೊಸ ತನವನ್ನು ಪರಿಚಯಿಸಿತ್ತು. ಇದರ ವಿಶೇಷತೆ ಎಂಬಂತೆ ಸಾಂಪ್ರದಾಯಿಕ ಬಟ್ಟೆ ತಯಾರಿಸುವ ಪದ್ದತಿಗೆ ಹೋಲಿಸಿದರೆ 20% ಕಡಿಮೆ ನೀರನ್ನು ಬಳಸುತ್ತದೆ ಎನ್ನಲಾಗಿದೆ. ಗ್ಯಾಪ್ ಎನ್ನುವುದು ಜೀವನಶೈಲಿ ಬ್ರ್ಯಾಂಡ್ ಆಗಿದ್ದು ಅದು ವಯಸ್ಕ ಉಡುಪುಗಳು ಮತ್ತು ಪರಿಕರಗಳನ್ನು ಒಳಗೊಂಡಿರುತ್ತದೆ, ಗ್ಯಾಪ್ ಟೀನ್, ಗ್ಯಾಪ್ ಕಿಡ್ಸ್, ಬೇಬಿ ಗ್ಯಾಪ್, ಗ್ಯಾಪ್ ಮೆಟರ್ನಿಟಿ, ಗ್ಯಾಪ್ ಬಾಡಿ, ಗ್ಯಾಪ್‌ ಫಿಟ್, ಯೀಜಿ ಗ್ಯಾಪ್
  ಅನೇಕ ಬ್ರ್ಯಾಂಡ್ ಪರಿಕರಗಳನ್ನು ಹೊಂದಿದೆ.

  ಇದನ್ನೂ ಓದಿ: LPG Cylinder Price: 1 ವರ್ಷದಲ್ಲಿ ಎಲ್​ಪಿಜಿ ಬೆಲೆ ಎಷ್ಟು ಹೆಚ್ಚಾಗಿದೆ ನೋಡಿ, ಅದ್ರಲ್ಲೂ ಇವರಿಗೆ ಮಾತ್ರ ಸಬ್ಸಿಡಿ!

  Gap Inc ಕುರಿತು:

  Gap Inc. ಉದ್ದೇಶವು ಮುಖ್ಯವಾಗಿ ಜೀವನಶೈಲಿ ಬ್ರ್ಯಾಂಡ್‌ಗಳ ಸಂಗ್ರಹವಾಗಿದೆ, ಇದು ಅತಿದೊಡ್ಡ ಅಮೇರಿಕನ್ ಸಂಸ್ಥೆಯಾಗಿದ್ದು, ಪುರುಷರಿಗಾಗಿ ಉಡುಪು, ಪರಿಕರಗಳು ಮತ್ತು ವೈಯಕ್ತಿಕ ಆರೈಕೆ ಉತ್ಪನ್ನಗಳನ್ನು ನೀಡುವ ಬಟ್ಟೆ ಕಂಪನಿ ಆಗಿದೆ. ಓಲ್ಡ್ ನೇವಿ, ಗ್ಯಾಪ್, ಬನಾನಾ ರಿಪಬ್ಲಿಕ್ ಮತ್ತು ಅಥ್ಲೆಟಾ ಬ್ರಾಂಡ್‌ಗಳ ಅಡಿಯಲ್ಲಿ ಮಹಿಳೆಯರು ಮತ್ತು ಮಕ್ಕಳಿಗೂ ಇದರಲ್ಲಿ ಶಾಪಿಂಗ್ ಮಾಡುವ ಅವಕಾಶಗಳಿವೆ. ಅಲ್ಲದೇ ಇದು ಶಾಪಿಂಗ್​ನ ಹೊಸ ಅನುಭವವನ್ನು ನೀಡುತ್ತದೆ. Gap Inc. ವೆಬ್​ ಸೈಟ್​ನಲ್ಲಿ ಉತ್ಪನ್ನಗಳು ಲಭ್ಯವಿದೆ. 2021r ಹಣಕಾಸಿನ ವರ್ಷದಲ್ಲಿ ನಿವ್ವಳ ಮಾರಾಟ $16.7 ಬಿಲಿಯನ್ ಆಗಿತ್ತು ಎಂಧು ವರದಿಯಲ್ಇ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ www.gapinc.com ಗೆ ಭೇಟಿ ನೀಡಿ.
  Published by:shrikrishna bhat
  First published: