Reliance AGM 2022: FMCG ವಿಭಾಗಕ್ಕೆ ಹೆಜ್ಜೆ ಇಡಲು ಸಜ್ಜಾದ ರಿಲಯನ್ಸ್​ ರಿಟೇಲ್​

Reliance Retail And Nisha Ambani: ಈ ಹೊಸ ಯೋಜನೆಯೊಂದಿಗೆ, ರಿಲಯನ್ಸ್ ರಿಟೇಲ್, ಹಿಂದೂಸ್ತಾನ್ ಯೂನಿಲಿವರ್, ನೆಸ್ಲೆ, ಬ್ರಿಟಾನಿಯಾ ಮುಂತಾದ ಎಫ್‌ಎಂಸಿಜಿ ಪ್ರತಿಷ್ಠಿತ ಕಂಪೆನಿಗಳ ಜೊತೆ ಸ್ಪರ್ಧಿಸಲಿದೆ. 

ನಿಶಾ ಅಂಬಾನಿ

ನಿಶಾ ಅಂಬಾನಿ

  • Share this:
ರಿಲಯನ್ಸ್ ರಿಟೇಲ್ (Reliance Retail), ಆಯಿಲ್-ಟು-ಟೆಲಿಕಾಂ ಸಂಘಟಿತ ರಿಲಯನ್ಸ್ ಇಂಡಸ್ಟ್ರೀಸ್‌ನ ರಿಟೇಲ್ ಅಂಗವಾಗಿದ್ದು, ಇದೀಗ ಫಾಸ್ಟ್​ ಮೂವಿಂಗ್​ ಗ್ರಾಹಕ ಸರಕುಗಳ ( fast moving consumer goods) ವಿಭಾಗಕ್ಕೆ ಪ್ರವೇಶಿಸಲು ಸಿದ್ಧವಾಗಿದೆ ಎಂದು ಕಂಪನಿಯ ನಿರ್ದೇಶಕಿ ಇಶಾ ಅಂಬಾನಿ (Nisha Ambani) ಆಗಸ್ಟ್ 29 ರಂದು ನಡೆದ 45 ನೇ ವಾರ್ಷಿಕ ಸಾಮಾನ್ಯ (Annual General Meeting) ಸಭೆಯಲ್ಲಿ ಘೋಷಿಸಿದ್ದಾರೆ.  ಈ ವರ್ಷ ನಾವು ನಮ್ಮ ಫಾಸ್ಟ್​ ಮೂವಿಂಗ್ ಗ್ರಾಹಕ ಸರಕುಗಳ ವ್ಯಾಪಾರವನ್ನು ಪ್ರಾರಂಭಿಸುತ್ತೇವೆ ಎಂದು ಘೋಷಿಸಲು ನಾನು ಉತ್ಸುಕಳಾಗಿದ್ದೇನೆ. ಪ್ರತಿಯೊಬ್ಬ ಭಾರತೀಯನ ದೈನಂದಿನ ಅಗತ್ಯಗಳನ್ನು ಪರಿಹರಿಸುವ ಉತ್ತಮ ಗುಣಮಟ್ಟದ, ಕೈಗೆಟುಕುವ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವುದು ಮತ್ತು ತಲುಪಿಸುವುದು ಈ ವ್ಯವಹಾರದ ಉದ್ದೇಶವಾಗಿದೆ ಎಂದು ನಿಶಾ ಅಂಬಾನಿ ಹೇಳಿದ್ದಾರೆ.

ಆದಿವಾಸಿಗಳಿಗೆ ಉತ್ತಮ ಅವಕಾಶ ನೀಡಲು ಚಿಂತನೆ

ಈ ಹೊಸ ಯೋಜನೆಯೊಂದಿಗೆ, ರಿಲಯನ್ಸ್ ರಿಟೇಲ್, ಹಿಂದೂಸ್ತಾನ್ ಯೂನಿಲಿವರ್, ನೆಸ್ಲೆ, ಬ್ರಿಟಾನಿಯಾ ಮುಂತಾದ ಎಫ್‌ಎಂಸಿಜಿ ಪ್ರತಿಷ್ಠಿತ ಕಂಪೆನಿಗಳ ಜೊತೆ ಸ್ಪರ್ಧಿಸಲಿದೆ. ಇದಲ್ಲದೇ, ಕಂಪನಿಯು ಶೀಘ್ರದಲ್ಲೇ ಭಾರತದಾದ್ಯಂತ ಆದಿವಾಸಿಗಳು ಮತ್ತು ಇತರ ಕೆಳ ಮಟ್ಟದ ಸಮುದಾಯಗಳು ಉತ್ಪಾದಿಸುವ ಗುಣಮಟ್ಟದ ಸರಕುಗಳನ್ನು ಮಾರಾಟ ಮಾಡಲು ಪ್ರಾರಂಭಿಸುತ್ತದೆ ಎಂದು ತಿಳಿಸಿದ್ದಾರೆ.

ಇದು ಈ ಸಮುದಾಯಗಳಿಗೆ ಉದ್ಯೋಗ ಮತ್ತು ಉದ್ಯಮಶೀಲತೆಗೆ ಲಾಭದಾಯಕ ಅವಕಾಶಗಳನ್ನು ಒದಗಿಸುವುದಲ್ಲದೆ, ನಮ್ಮ ಸಾಂಪ್ರದಾಯಿಕ ಭಾರತೀಯ ಕುಶಲಕರ್ಮಿಗಳ, ವಿಶೇಷವಾಗಿ ಮಹಿಳೆಯರ ಶ್ರೀಮಂತ ಪ್ರತಿಭೆ, ಕೌಶಲ್ಯ ಮತ್ತು ಜ್ಞಾನದ ಮೂಲವನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ, ”ಎಂದು ನಿಶಾ ಅಂಬಾನಿ ಹೇಳಿದ್ದಾರೆ.

ಇನ್ನು ರಿಲಯನ್ಸ್ ವಾರ್ಷಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮುಕೇಶ್​ ಅಂಬಾನಿ, ಇದೇ ವರ್ಷದ ದೀಪಾವಳಿ ಹಬ್ಬದ ವೇಳೆಗೆ ರಿಲಯನ್ಸ್ ಜಿಯೋ 5G ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈ ಮಹಾನಗರಗಳು ಸೇರಿದಂತೆ ಹಲವು ನಗರಗಳಲ್ಲಿ  ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಗ್ಯಾಪ್‌ ಜೊತೆ ಕೈಜೊಡಿಸಿದ ರಿಲಯನ್ಸ್, ಅಮೆರಿಕನ್‌ ಬ್ರ್ಯಾಂಡ್‌ ಬಟ್ಟೆಗಳು ಇನ್ನು ಭಾರತದಲ್ಲೇ ಲಭ್ಯ!

ಸಣ್ಣ ವ್ಯಾಪಾರಿಗಳಿಗೆ ಸಹಾಯಹಸ್ತ
ಜಿಯೋ 5G 100 ಮಿಲಿಯನ್ ಮನೆಗಳನ್ನು ಸಾಟಿಯಿಲ್ಲದ ಡಿಜಿಟಲ್ ಅನುಭವಗಳು ಮತ್ತು ಸ್ಮಾರ್ಟ್ ಹೋಮ್ ಪರಿಹಾರಗಳೊಂದಿಗೆ ಸಂಪರ್ಕಿಸುತ್ತದೆ ಎಂದು ಮುಕೇಶ್ ಅಂಬಾನಿ ಹೇಳಿದರು. ನಾವು ಹತ್ತಾರು ಮಿಲಿಯನ್ ಸಣ್ಣ ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಗಳನ್ನು ಹೆಚ್ಚಿನ ಎತ್ತರಕ್ಕೆ ತಲುಪಿಸುತ್ತೇವೆ ಎಂದು ಅವರು ಭರವಸೆ ನೀಡಿದರು.

ಮ್ಮ ಮಾಧ್ಯಮ ವ್ಯವಹಾರವು ಕಳೆದ ವರ್ಷ ಅತ್ಯಧಿಕ ಬೆಳವಣಿಗೆಯನ್ನು ಸಾಧಿಸಿತು. ಇದರ ಪರಿಣಾಮವಾಗಿ ದಾಖಲೆಯ ಚಂದಾದಾರಿಕೆಗಳು ಮತ್ತು ಜಾಹೀರಾತು ಆದಾಯಗಳು ಹರಿದು ಬಂದಿವೆ. ನಮ್ಮ ರಾಷ್ಟ್ರಮಟ್ಟದ ಸುದ್ದಿವಾಹಿನಿಗಳಾದ  CNN-News18, CNBC-TV18 ಮತ್ತು News18 ಇಂಡಿಯಾ ಸತತವಾಗಿ ನಂಬರ್ 1 ಸ್ಥಾನದಲ್ಲಿವೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಆಕಾಶ್ ಅಂಬಾನಿ ಭಾರತವು ಶೀಘ್ರದಲ್ಲೇ ಸ್ಥಿರ ಬ್ರಾಡ್‌ಬ್ಯಾಂಡ್‌ ಸೇವೆ ಒದಗಿಸುವ ದೇಶಗಳಲ್ಲಿ ಅಗ್ರ 10 ರಾಷ್ಟ್ರಗಳಲ್ಲಿ ಸೇರಬಹುದು, ಜಿಯೋ 5G ಅಲ್ಟ್ರಾ-ಹೈ-ಸ್ಪೀಡ್ ಫಿಕ್ಸೆಡ್ ಬ್ರಾಡ್‌ಬ್ಯಾಂಡ್ ಅನ್ನು ಸಹ ನೀಡುತ್ತದೆ ಎಂದು ತಿಳಿಸಿದರು. JioMart ಮತ್ತು WhatsApp ಪಾಲುದಾರಿಕೆ ಬೆಳವಣಿಗೆಗೆ ಸಹಾಯ ಮಾಡುತ್ತದೆ. JioMart-WhatsApp ಬಳಕೆದಾರರು WhatsApp ಪಾವತಿ, ಕ್ಯಾಶ್ ಆನ್ ಡೆಲಿವರಿ ಮತ್ತು ಇತರ ಪಾವತಿ ವಿಧಾನಗಳನ್ನು ಬಳಸಬಹುದು ಎಂದು ಇಶಾ ಅಂಬಾನಿ ರಿಲಯನ್ಸ್ ವಾರ್ಷಿಕ ಸಭೆಯಲ್ಲಿ ಘೋಷಿಸಿದರು.

ಮುಕೇಶ್ ಅಂಬಾನಿ ಅವರು 3D ವರ್ಲ್ಡ್ ಆಫ್ ಮೆಟಾವರ್ಸ್‌ನಲ್ಲಿ ಮಾತನಾಡಿದ್ದಾರೆ. ಈ ಮೂಲಕ ವರ್ಚುವಲ್ ರಿಯಾಲಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಏಕಕಾಲದಲ್ಲಿ ವಾರ್ಷಿಕ ಸಾಮಾನ್ಯ ಸಭೆಯನ್ನು (AGM) ನಡೆಸುವ ಜಾಗತಿಕವಾಗಿ ಮೊದಲ ಕಂಪನಿಗಳಲ್ಲಿ ರಿಲಯನ್ಸ್ ಒಂದಾಗಲಿದೆ.

ಇದನ್ನೂ ಓದಿ: ದೀಪಾವಳಿಗೆ ಭಾರತೀಯರಿಗೆ ಬಂಪರ್! ಜಿಯೋ 5ಜಿ ಆರಂಭ

ಜೊತೆಗೆ ಅಧಿಕೃತ ಜಿಯೋಮೀಟ್ ಪ್ರಸಾರದ ಜೊತೆಗೆ ಐದು ಪ್ರಮುಖ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವಾರ್ಷಿಕ ಸಭೆಯನ್ನು ನೇರ ಪ್ರಸಾರ ಮಾಡಲಾಗುತ್ತದೆ. ಕಂಪನಿಯ ವಾರ್ಷಿಕ ವರದಿ 2021-22 ರ ವ್ಯಾಪಾರವಾರು ಮುಖ್ಯಾಂಶಗಳು ಈ ಸಭೆಯಲ್ಲಿ ಪ್ರಸ್ತಾವನೆಗೊಳ್ಳಲಿದೆ.
Published by:Sandhya M
First published: