• Home
  • »
  • News
  • »
  • business
  • »
  • Reliance Retail ಕಡೆಯಿಂದ ಪ್ರೀಮಿಯಂ ಫ್ಯಾಷನ್ ಮತ್ತು ಲೈಫ್‌ಸ್ಟೈಲ್ ಸ್ಟೋರ್ ಅಝಾರ್ಟ್‌ ಬಿಡುಗಡೆ

Reliance Retail ಕಡೆಯಿಂದ ಪ್ರೀಮಿಯಂ ಫ್ಯಾಷನ್ ಮತ್ತು ಲೈಫ್‌ಸ್ಟೈಲ್ ಸ್ಟೋರ್ ಅಝಾರ್ಟ್‌ ಬಿಡುಗಡೆ

ಅಖಿಲೇಶ್‌ ಪ್ರಸಾದ - ರಾಕೇಶ್‌ ಜಲ್ಲಿಪಲ್ಲಿ

ಅಖಿಲೇಶ್‌ ಪ್ರಸಾದ - ರಾಕೇಶ್‌ ಜಲ್ಲಿಪಲ್ಲಿ

ಕ್ಯುರೇಟೆಡ್‌ ಕಲೆಕ್ಷನ್ ಅನ್ನು ಹೊಂದಿರುವ ಅಝಾರ್ಟ್‌, ರಿಲಯನ್ಸ್‌ ರಿಟೇಲ್‌ನ ಫ್ಯಾಷನ್ ಮತ್ತು ಲೈಫ್‌ಸ್ಟೈಲ್ ಪೋರ್ಟ್‌ಫೋಲಿಯೋಗೆ ಸೇರ್ಪಡೆಯಾಗಿದ್ದು, ಎಲ್ಲ ಗ್ರಾಹಕ ವಿಭಾಗಗಳಿಗೂ ಅನ್ವಯವಾಗುವ ಮಲ್ಟಿಫಾರ್ಮ್ಯಾಟ್ ವಿಧಾನವನ್ನು ಅಳವಡಿಸಿಕೊಂಡಿದೆ.

  • Share this:

    ಬೆಂಗಳೂರು: ಭಾರತದ ಅತಿದೊಡ್ಡ ರಿಟೇಲರ್ ರಿಲಯನ್ಸ್‌ ರಿಟೇಲ್‌ (Reliance Retail) ಇಂದು ಪ್ರೀಮಿಯಂ ಫ್ಯಾಷನ್ ಮತ್ತು ಲೈಫ್‌ಸ್ಟೈಲ್ ಸ್ಟೋರ್ ಬ್ರ್ಯಾಂಡ್ ಅಝಾರ್ಟ್‌ (AZORTE) ಅನ್ನು ಬಿಡುಗಡೆ ಮಾಡಿದ್ದು, ಇದು ಭಾರತೀಯರು ಪ್ರೀಮಿಯಂ ಇಂಟರ್‌ನ್ಯಾಷನಲ್ (International) ಮತ್ತು ಪಾರಂಪರಿಕ ಭಾರತೀಯ ಉಡುಪುಗಳನ್ನು ಖರೀದಿ ಮಾಡುವ ವಿಧಾನವನ್ನೇ ಬದಲಿಸಲಿದೆ.


    (AZORTE) ಅಝಾರ್ಟ್‌ನಲ್ಲಿ ಉತ್ತಮ ಜಾಗತಿಕ ಟ್ರೆಂಡ್‌ಗಳು ಮತ್ತು ಪಾರಂಪರಿಕ ಭಾರತೀಯ ಉಡುಪುಗಳು ಇರಲಿವೆ. ವೆಸ್ಟರ್ನ್‌, ಇಂಡಿಯನ್ ದಿರಿಸು, ಪಾದರಕ್ಷೆ, ಫ್ಯಾಷನ್ ಅಕ್ಸೆಸರಿಗಳು, ಹೋಮ್ ಮತ್ತು ಬ್ಯೂಟಿ ಸೇರಿದಂತೆ ವಿವಿಧ ವಿಭಾಗಗಳು ಇರಲಿವೆ.


    ಫ್ಯಾಷನ್‌ ಆಸಕ್ತಿ ಇರುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸ ಮಾಡಲಾಗಿರುವ ಹೊಸ ಸ್ಟೋರ್‌ನಲ್ಲಿ ಹಲವು ತಂತ್ರಜ್ಞಾನಗಳನ್ನೂ ಅಳವಡಿಸಲಾಗುತ್ತದೆ. ಸ್ಮಾರ್ಟ್‌ ಟ್ರಯಲ್ ರೂಮ್‌ಗಳು, ಫ್ಯಾಷನ್ ಡಿಸ್ಕವರಿ ಸ್ಟೇಷನ್‌ಗಳು, ಪಡಸಾಲೆಗಳು ಮತ್ತು ಸ್ವಯಂ ಚೆಕೌಟ್ ಕಿಯೋಸ್ಕ್‌ಗಳು ಶಾಪಿಂಗ್ ಅನ್ನು ಆನಂದದಾಯಕವಾಗಿಸಲಿವೆ.


    ರಿಲಯನ್ಸ್‌ ರಿಟೇಲ್‌ನ ಫ್ಯಾಷನ್ ಮತ್ತು ಲೈಫ್‌ಸ್ಟೈಲ್‌ ಸಿಇಒ ಅಖಿಲೇಶ್‌ ಪ್ರಸಾದ ಹೇಳುವಂತೆ "ಹೊಸ ಕಾಲದ ಭಾರತೀಯರು ಇತ್ತೀಚಿನ ಅಂತಾರಾಷ್ಟ್ರೀಯ ಮತ್ತು ಸಾಂಪ್ರದಾಯಿಕ ಭಾರತೀಯ ಫ್ಯಾಷನ್‌ ವಿಷಯದಲ್ಲಿ ಹೆಚ್ಚು ಇಷ್ಟಪಡುತ್ತಿರುವುರಿಂದ ಮಧ್ಯಮ ಪ್ರೀಮಿಯಂ ಫ್ಯಾಷನ್ ಸೆಗ್ಮೆಂಟ್ ಅತ್ಯಂತ ಹೆಚ್ಚು ಬೆಳೆಯುವ ವಿಭಾಗವಾಗಿದೆ. ಭಾರತದ ಹೊಸ ಕಾಲದ ಯುವಕ ಯುವತಿಯರು ತಮ್ಮ ವಾರ್ಡ್‌ರೋಬ್‌ನಲ್ಲಿ ಹೊಂದಿರಲೇಬೇಕಾದ ಉಡುಪುಗಳನ್ನು ಅಝಾರ್ಟ್‌ ಒದಗಿಸುತ್ತದೆ. ಸ್ಟೋರ್ ಉತ್ತಮ ತಂತ್ರಜ್ಞಾನವನ್ನು ಹೊಂದಿದ್ದು, ಇದು ಗ್ರಾಹಕರ ಪಯಣವನ್ನು ಇನ್ನಷ್ಟು ಉತ್ತಮವಾಗಿಸುತ್ತದೆ."




    ಅಝಾರ್ಟ್‌ನ ಉಪಾಧ್ಯಕ್ಷ ಮತ್ತು ವಹಿವಾಟು ವಿಭಾಗದ ಮುಖ್ಯಸ್ಥರಾಗಿರುವ ರಾಕೇಶ್‌ ಜಲ್ಲಿಪಲ್ಲಿ ಹೇಳುವಂತೆ "ಅಝಾರ್ಟ್‌ ಭಾರತದ ಮೊಟ್ಟ ಮೊದಲ ಫ್ಯಾಷನ್ ನಿಯೋಸ್ಟೋರ್. ಇದು ಚಾಲ್ತಿಯಲ್ಲಿರುವ ಸ್ಟೈಲ್‌ನ ದಿರಿಸುಗಳನ್ನು ಹೊಂದಿರುತ್ತದೆ ಮತ್ತು ಕ್ಲಾಸಿಕ್‌ಗಳಿಗೆ ಹೊಸ ಸ್ಪರ್ಶ ನೀಡುತ್ತದೆ. ಅಝಾರ್ಟ್‌ನಲ್ಲಿ ಗ್ರಾಹಕರು ಎಲ್ಲ ಕಾಲಕ್ಕೂ ಅನ್ವಯಿಸುವ ಉಡುಪುಗಳನ್ನು ಖರೀದಿ ಮಾಡಬಹುದು. ಉತ್ತಮ ವೆಸ್ಟರ್ನ್‌ ದಿರಿಸು, ಭಾರತೀಯ ದಿರಿಸು, ಮಕ್ಕಳ ದಿರಿಸು, ಪಾದರಕ್ಷೆ, ಫ್ಯಾಷನ್ ಅಕ್ಸೆಸರಿಗಳು, ಮನೆ, ಬ್ಯೂಟಿ ಮತ್ತು ಇತರ ಸ್ಟೈಲ್‌ಗಳಲ್ಲಿ ತಮ್ಮ ವ್ಯಕ್ತಿತ್ವವನ್ನು ವ್ಯಕ್ತಪಡಿಸಬಹುದು".


    ಕ್ಯುರೇಟೆಡ್‌ ಕಲೆಕ್ಷನ್ ಅನ್ನು ಹೊಂದಿರುವ ಅಝಾರ್ಟ್‌, ರಿಲಯನ್ಸ್‌ ರಿಟೇಲ್‌ನ ಫ್ಯಾಷನ್ ಮತ್ತು ಲೈಫ್‌ಸ್ಟೈಲ್ ಪೋರ್ಟ್‌ಫೋಲಿಯೋಗೆ ಸೇರ್ಪಡೆಯಾಗಿದ್ದು, ಎಲ್ಲ ಗ್ರಾಹಕ ವಿಭಾಗಗಳಿಗೂ ಅನ್ವಯವಾಗುವ ಮಲ್ಟಿಫಾರ್ಮ್ಯಾಟ್ ವಿಧಾನವನ್ನು ಅಳವಡಿಸಿಕೊಂಡಿದೆ.


    ಸ್ವಂತ ಮತ್ತು ಸಹ ಬ್ರ್ಯಾಂಡ್‌ಗಳನ್ನು ಸ್ಟೋರ್‌ನಲ್ಲಿ ಸುಂದರವಾಗಿ ವಿನ್ಯಾಸ ಮಾಡಲಾಗಿದೆ. ಸ್ಟೋರ್‌ನಲ್ಲಿ ಫ್ಯಾಷನ್ ಕನ್ಸಲ್ಟಂಟ್‌ಗಳು ಇದ್ದು, ಇವು ಉತ್ಪನ್ನ ಹುಡುಕಾಟ ಮತ್ತು ಸಂಶೋಧನೆಯಲ್ಲಿ ಗ್ರಾಹಕರಿಗೆ ನೆರವಾಗುತ್ತದೆ. ಇದು ಖರೀದಿದಾರರಿಗೆ ಖಂಡಿತವಾಗಿಯೂ ಇಷ್ಟವಾಗುತ್ತದೆ.




    ಸುಮಾರು 18,000 ಚದರ ಅಡಿ ಗಾತ್ರದ ಮೊದಲ ಸ್ಟೋರ್ ಬೆಂಗಳೂರಿನ ಎಂಜಿ ರೋಡ್‌ನಲ್ಲಿ 1 ಎಂಜಿ ಲಿಡೋ ಮಾಲ್‌ನಲ್ಲಿ ಅಝಾರ್ಟ್‌ ಸ್ಟೋರ್ ಆರಂಭವಾಗಲಿದೆ. ಮುಂದಿನ ತಿಂಗಳುಗಳಲ್ಲಿ ಪ್ರಮುಖ ಮಾರ್ಕೆಟ್‌ಗಳಲ್ಲಿ ಸ್ಟೋರ್ ಸಂಖ್ಯೆ ತ್ವರಿತವಾಗಿ ಹೆಚ್ಚಳ ಮಾಡುವುದಕ್ಕೆ ಕಂಪನಿ ಯೋಜಿಸಿದೆ.


    ಅಝಾರ್ಟ್‌ ಉತ್ಪನ್ನಗಳನ್ನು azorte.ajio.com ನಲ್ಲೂ ನೋಡಬಹುದು.


    ಇದನ್ನೂ ಓದಿ: Viral Vide: ಕಾರು ಚಾಲಕನ ನಿರ್ಲಕ್ಷ್ಯದಿಂದ ನಡೆದ ಈ ಅಪಘಾತದ ವಿಡಿಯೋ ನೋಡಿದ್ರೆ ಮೈ ಜುಂ ಅನ್ನುತ್ತೆ!


    ರಿಲಯನ್ಸ್‌ ರಿಟೇಲ್ ಲಿಮಿಟೆಡ್ ಬಗ್ಗೆ:


    ರಿಲಯನ್ಸ್‌ ರಿಟೇಲ್ ಲಿಮಿಟೆಡ್‌ ಎಂಬುದು ರಿಲಯನ್ಸ್‌ ರಿಟೇಲ್ ವೆಂಚರ್ಸ್‌ ಲಿಮಿಟೆಡ್‌ನ ಅಂಗಸಂಸ್ಥೆಯಾಗಿದ್ದು, ಆರ್‌ಐಎಲ್‌ (ರಿಲಯನ್ಸ್‌ ಇಂಡಸ್ಟ್ರೀಸ್ ಲಿಮಿಟೆಡ್‌) ಗ್ರೂಪ್ ಅಡಿಯಲ್ಲಿ ಎಲ್ಲ ರಿಟೇಲ್ ಕಂಪನಿಗಳನ್ನೂ ಒಳಗೊಂಡಿರುತ್ತದೆ. ಆರ್‌ಆರ್‌ವಿಎಲ್‌ 2022 ಮಾರ್ಚ್‌ 31 ಕ್ಕೆ ಕೊನೆಗೊಂಡ ವರ್ಷದಲ್ಲಿ ಕ್ರೋಢೀಕೃತ ವಹಿವಾಟು ₹ 199,704 ಕೋಟಿ ($ 26.3 ಬಿಲಿಯನ್‌) ಅನ್ನು ಮಾಡಿದ್ದು, ನಿವ್ವಳ ಲಾಭವು ₹ 7,055 ಕೋಟಿ ($ 931 ಮಿಲಿಯನ್) ಆಗಿದೆ.


    ಇದನ್ನೂ ಓದಿ: Cleaning Hacks: ತುಕ್ಕು ಹಿಡಿದಿರೋ ಸ್ಟೀಲ್​ ಗೇಟ್​ ಕ್ಲೀನ್ ಮಾಡೋಕೆ ಈ ವಸ್ತುಗಳು ಇದ್ರೆ ಸಾಕು


    ರಿಲಯನ್ಸ್‌ ರಿಟೇಲ್‌ ಅತಿದೊಡ್ಡ ಮತ್ತು ಅತ್ಯಂತ ಲಾಭದಾಯಕ ರಿಟೇಲರ್ ಆಗಿದ್ದು, ವಿಶಾಲ ವ್ಯಾಪ್ತಿಯನ್ನು ಹೊಂದಿದೆ. ಡೆಲಾಯ್ಟೆ ಗ್ಲೋಬಲ್ ಪವರ್ಸ್‌ ಆಫ್ ರಿಟೇಲಿಂಗ್ 2022 ಇಂಡೆಕ್ಸ್‌ನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಿಟೇಲರ್‌ಗಳ ಪೈಕಿ ಒಂದಾಗಿದೆ. ಟಾಪ್ ಗ್ಲೋಬಲ್ ರಿಟೇಲರ್‌ ಪಟ್ಟಿಯಲ್ಲಿ ಇದು 56ನೇಯದಾಗಿದೆ ಮತ್ತು ಟಾಪ್ 100 ನಲ್ಲಿ ಕಾಣಿಸಿಕೊಂಡ ಏಕೈಕ ಭಾರತೀಯ ರಿಟೇಲರ್ ಆಗಿದೆ.

    Published by:Harshith AS
    First published: