Reliance: ಟೆಲಿಕಾಂ, ತೈಲ ಮತ್ತು ಅನಿಲ ಉತ್ಪಾದನೆ, ರೀಟೆಲ್; ಎಲ್ಲ ಕ್ಷೇತ್ರದಲ್ಲೂ ರಿಲಯನ್ಸ್ ಪಾರಮ್ಯ

ಭಾರತದಲ್ಲಿ ಇದೇ ಮೊದಲ ಬಾರಿಗೆ ಮುಂಬೈ, ದೆಹಲಿ, ಹೈದರಾಬಾದ್, ಜಾಮ್‌ನಗರ, ಕೋಲ್ಕತ್ತಾ, ಬೆಂಗಳೂರು, ಚೆನ್ನೈ ಮತ್ತು ಲಕ್ನೋ ನಗರಗಳಲ್ಲಿ ಅತ್ಯಂತ ವೇಗದ 5ಜಿ ಇಂಟರ್​ನೆಟ್ ಸೌಲಭ್ಯವನ್ನು ಒದಗಿಸುವ ತಯಾರಿಯಲ್ಲಿ ಜಿಯೋ ಸಂಸ್ಥೆಯಿದೆ.

ಮುಕೇಶ್ ಅಂಬಾನಿ

ಮುಕೇಶ್ ಅಂಬಾನಿ

  • Share this:
    ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್-KGD6 ತೈಲ ಮತ್ತು ಅನಿಲ ಉತ್ಪಾದನಾ ಸಂಸ್ಥೆಯೊಂದೇ  ಭಾರತದ ಅನಿಲ ಉತ್ಪಾದನೆಯಲ್ಲಿ ಶೇಕಡಾ 20ರಷ್ಟು ಕೊಡುಗೆ ನೀಡುತ್ತಿದೆ ಎಂದು ಸಿಎನ್​ಬಿಸಿ ರಿಸರ್ಚ್​ನಲ್ಲಿ (CNBC Research) ತಿಳಿದುಬಂದಿದೆ.  ಜೊತೆಗೆ ಇದೇ ಸಮೂಹದ ಸಂಸ್ಥೆಯಾದ JIO ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿ ಆಗಿ ಹೊರಹೊಮ್ಮಿರುವುದು ಸಹ ಸಿಎನ್​ಬಿಸಿ ರಿಸರ್ಚ್​ನಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಜಿಯೋ (Reliance Jio) ಒಟ್ಟಾರೆ ಬರೋಬ್ಬರಿ 42 ಕೋಟಿ ಬಳಕೆದಾರ ಗ್ರಾಹಕರನ್ನು ಇಡೀ ದೇಶದಾದ್ಯಂತ ಹೊಂದಿದೆ. ಈ ಮೂಲಕ ಇಡೀ ದೇಶದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಟೆಲಿಕಾಂ ಕಂಪನಿಯಾಗಿ ಅಗ್ರಸ್ಥಾವನ್ನು ತನ್ನದಾಗಿಸಿಕೊಂಡಿದೆ ಎಂದು ಸಿಎನ್​ಬಿಸಿ ರಿಸರ್ಚ್ ತಿಳಿಸಿದೆ. 

    ಇಷ್ಟೇ ಅಲ್ಲದೇ ವೈರ್‌ಲೆಸ್ ಬ್ರಾಡ್‌ಬ್ಯಾಂಡ್‌ನಲ್ಲಿ 53 ಶೇಕಡಾ ಮಾರುಕಟ್ಟೆ ಪಾಲು ಸಹ ಜಿಯೋದ್ದೇ ಆಗಿದೆ. ಜೊತೆಗೆ ಜಿಯೋ ಹೊಂದಿರುವ ಡೇಟಾ ಟ್ರಾಫಿಕ್ ಮಾರುಕಟ್ಟೆ ಪಾಲು ಶೇಕಡಾ 60ರಷ್ಟಿದ್ದು ಇತರ ಟೆಲಿಕಾಂ ಕಂಪನಿಗಳನ್ಜು ಹಿಂದಿಕ್ಕಿ ಶರವೇಗದಲ್ಲಿ ಬೆಳವಣಿಗೆಯನ್ನು ದಾಖಲಿಸುತ್ತಿದೆ.

    ಜಿಯೋ 5ಜಿ ಸೇವೆ ಎಲ್ಲೆಲ್ಲಿ ಸಿಗಲಿದೆ?
    ಜಿಯೋ ಸದ್ಯ ಭಾರತದಲ್ಲಿ 5ಜಿ ಸೇವೆಗಳನ್ನು ಅತ್ಯಂತ ಬೇಗ ಒದಗಿಸುವತ್ತ ತನ್ನ ಗಮನಹರಿಸಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಮುಂಬೈ, ದೆಹಲಿ, ಹೈದರಾಬಾದ್, ಜಾಮ್‌ನಗರ, ಕೋಲ್ಕತ್ತಾ, ಬೆಂಗಳೂರು, ಚೆನ್ನೈ ಮತ್ತು ಲಕ್ನೋ ನಗರಗಳಲ್ಲಿ ಅತ್ಯಂತ ವೇಗದ 5ಜಿ ಇಂಟರ್​ನೆಟ್ ಸೌಲಭ್ಯವನ್ನು ಒದಗಿಸುವ ತಯಾರಿಯಲ್ಲಿ ಜಿಯೋ ಸಂಸ್ಥೆಯಿದೆ. ಜಿಯೋ ಇತ್ತೀಚೆಗೆ ನಡೆದ ಸ್ಪೆಕ್ಟ್ರಮ್ ಹರಾಜಿನಲ್ಲಿ, ವಿಶೇಷವಾಗಿ 700Hz ಬ್ಯಾಂಡ್‌ನಲ್ಲಿ ಅತಿ ಹೆಚ್ಚು ಬಿಡ್ಡರ್ ಆಗಿದೆ.

    ಜಿಯೋ 5G ಫೋನ್ ಬಗ್ಗೆ ಹೆಚ್ಚಿದ ಕುತೂಹಲ
    ರಿಲಯನ್ಸ್ ಜಿಯೋ ಆಗಸ್ಟ್ 29 ರಂದು ತನ್ನ 45 ನೇ ವಾರ್ಷಿಕ ಸಾಮಾನ್ಯ ಸಭೆಯನ್ನು (AGM) ಆಯೋಜಿಸುವುದಾಗಿ ಘೋಷಿಸಿದೆ. ಈ ಕಾರ್ಯಕ್ರಮವು ದೇಶದಲ್ಲಿ ಜಿಯೋ ಕಂಪನಿಯ 5G ಸೇವೆಗಳ ಪ್ರಾರಂಭಕ್ಕೆ ಸಾಕ್ಷಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.  ಕಂಪನಿಯು ತನ್ನ 5G ಫೋನ್ ಆದ JioPhone 5G ಅನ್ನು ಈವೆಂಟ್‌ನಲ್ಲಿ ಪ್ರಕಟಿಸಬಹುದು ಎಂದು ಸಹ ಹೇಳಲಾಗಿದೆ. ಮುಖೇಶ್ ಅಂಬಾನಿ ಟೆಲಿಕಾಂ ಕಂಪನಿಯು ಕೆಲವು ಸಮಯದಿಂದ ತನ್ನ 5G ಸೇವೆಗಳಲ್ಲಿ ಕೆಲಸ ಮಾಡುತ್ತಿದೆ.

    ಇದನ್ನೂ ಓದಿ: JioPhone 5G: ಆಗಸ್ಟ್ 29ಕ್ಕೆ ಜಿಯೋಫೋನ್​ 5G ಬಿಡುಗಡೆಯಾಗುವ ನಿರೀಕ್ಷೆ!

    ಜಿಯೋ 5ಜಿಯಿಂದ ಸಿಗಲಿದೆ ತಲ್ಲೀನಗೊಳಿಸುವ ಅನುಭವ
    5ಜಿ ಗೆ ಸಂಬಂಧಿಸಿದ ನಿಯಂತ್ರಕ ತಂಡಗಳಿಗೆ ಜಿಯೋ ಈಗಾಗಲೇ ತಾನು ಒದಗಿಸಲಿರುವ ಸೌಲಭ್ಯಗಳ ಪಟ್ಟಿಯನ್ನು ಪ್ರದರ್ಶಿಸಿದೆ. 5G ರೇಡಿಯೋ, 5G ಕೋರ್ ನೆಟ್ವರ್ಕ್, 5G ಸಕ್ರಿಯವಾದ ಡ್ರೋನ್‌ಗಳು, 5G ಆಧಾರಿತ ರೊಬೊಟಿಕ್ಸ್​ಗಳ ಮೂಲಕ ಆರೋಗ್ಯ ರಕ್ಷಣೆ, 5G io ಅಪ್ಲಿಕೇಶನ್‌ಗಳು, ಅಲ್ಲದೇ 8K YouTube ವೀಡಿಯೊ ಸ್ಟ್ರೀಮಿಂಗ್ ಮುಂತಾದ ಸೇವೆಗಳು ಜಿಯೋ 5ಜಿ ಮೂಲಕ ಒದಗಿಸಲು ಕಂಪನಿಯು ಸನ್ನದ್ಧವಾಗಿದೆ. 5ಜಿ ಸೇವೆಗಳಲ್ಲಿ ವರ್ಚುವಲ್ ಅನುಭವಗಳು ಬಳಕೆದಾರರಿಗೆ ತಲ್ಲೀನಗೊಳಿಸುವ ಅನುಭವ ನೀಡಲಿವೆ ಎಂದೇ ಕಂಪನಿ ವ್ಯಾಖ್ಯಾನಿಸಿದೆ.

    ಇದನ್ನೂ ಓದಿ: Supreme Court: ಜೀವವೈವಿಧ್ಯದ ಮಹತ್ವ ಸಾರುವ GZRRC ಮೃಗಾಲಯದ ವಿರುದ್ಧ ಅರ್ಜಿ ವಜಾಗೊಳಿಸಿದ ಸುಪ್ರೀಂ

    ರಿಲಯನ್ಸ್ ರಿಟೇಲ್ ಸಹ ಅದ್ಭುತ ಬೆಳವಣಿಗೆ
    ರಿಲಯನ್ಸ್ ರಿಟೇಲ್ ಸಹ ತನ್ನ ಕ್ಷೇತ್ರದಲ್ಲಿ ಅದ್ಭುತ ಬೆಳವಣಿಗೆ ದಾಖಲಿಸಿದೆ. 33 ಲಕ್ಷ ಚದರ ಅಡಿಗಳಲ್ಲಿ ಉಗ್ರಾಣ, ಸಾಮಾಗ್ರಿ ಪೂರೈಕೆ ಕೇಂದ್ರಗಳ ಪ್ರದೇಶಗಳನ್ನು ರಿಲಯನ್ಸ್ ರಿಟೇಲ್ ಹೊಂದಿದೆ. 30ನೇ ಜೂನ್ 2022 ರಂತೆ ರಿಲಯನ್ಸ್ ರಿಟೇಲ್ ಒಟ್ಟು 15,866 ಅಂಗಡಿಗಳನ್ನು ಹೊಂದಿದೆ. AJIO ಸಹ ಭರ್ಜರಿ ಬೆಳವಣಿಗೆ ದಾಖಲಿಸುತ್ತಿದೆ.
    Published by:guruganesh bhat
    First published: