Reliance: ಫ್ಯಾರಡಿಯನ್ ಸಂಸ್ಥೆಯಲ್ಲಿ ಶೇ 100% ಪಾಲನ್ನು ತನ್ನ ತೆಕ್ಕೆಗೆ ಪಡೆದ ರಿಲಯನ್ಸ್

ಇದಕ್ಕೂ ಮೊದಲು, ಯುಎಸ್ ಮೂಲದ ಇಂಧನ ಶೇಖರಣಾ ಕಂಪನಿ ಅಂಬ್ರಿ ಇಂಕ್‌ನಲ್ಲಿ 50 ಮಿಲಿಯನ್ ಡಾಲರ್‌ ಹೂಡಿಕೆಯೊಂದಿಗೆ ನವೀಕರಿಸಬಹುದಾದ ಇಂಧನ ವಲಯದಲ್ಲಿ RIL ತನ್ನ ಮೊದಲ ಕಾರ್ಯತಂತ್ರದ ಯೋಜನೆಯನ್ನು ಮಾಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಿಲಯನ್ಸ್ ಇಂಡಸ್ಟ್ರೀಯ ಕ್ಲೀನ್ ಎನರ್ಜಿ ಆರ್ಮ್ (Reliance Industrial Clean Energy Arm) , ರಿಲಯನ್ಸ್ ನ್ಯೂ ಎನರ್ಜಿ ಸೋಲಾರ್ ಲಿಮಿಟೆಡ್ (RNESL) ಫ್ಯಾರಡಿಯನ್ (100 million pounds) ಲಿಮಿಟೆಡ್‌ನಲ್ಲಿ 100% ಪಾಲನ್ನು (10 ಶತಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು) ಸ್ವಾಧೀನಪಡಿಸಿಕೊಳ್ಳಲು ನಿರ್ಣಾಯಕ ಒಪ್ಪಂದಗಳಿಗೆ ಸಹಿ ಹಾಕಿದೆ ಎಂಬುದಾಗಿ ಭಾರತೀಯ ಸಮೂಹವು ತಿಳಿಸಿದೆ. ರಿಲಯನ್ಸ್ ನ್ಯೂ ಎನರ್ಜಿ ಸೋಲಾರ್ ಲಿಮಿಟೆಡ್ (RNESL) ಕಂಪನಿಯ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದ್ದು, ಫ್ಯಾರಡಿಯನ್ ಲಿಮಿಟೆಡ್ (Faradion) ಮತ್ತು ಅದರ ಷೇರುದಾರರೊಂದಿಗೆ ಸಂಸ್ಥೆಯ ಒಟ್ಟು ಮೌಲ್ಯ GBP 100 ಮಿಲಿಯನ್ ಅನ್ನು ಆಧರಿಸಿ ಒಟ್ಟು GBP 94.42Mn ದ್ವಿತೀಯ ವಹಿವಾಟುಗಳ ಮೂಲಕ 100% ಈಕ್ವಿಟಿ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಒಪ್ಪಂದ ಮಾಡಿಕೊಂಡಿದೆ ಎಂದು RIL ಸ್ಟಾಕ್ ಎಕ್ಸ್‌ಚೇಂಜ್(RIL stock exchange) ಫೈಲಿಂಗ್‌ನಲ್ಲಿ ತಿಳಿಸಿದೆ.

ಈಕ್ವಿಟಿ ಷೇರು
ರೆಗ್ಯುಲೇಟರಿ ಫೈಲಿಂಗ್ ಪ್ರಕಾರ ಜನವರಿ 2022ರ ಆರಂಭದಲ್ಲಿ ನಿರೀಕ್ಷಿಸಲಾದ ಫ್ಯಾರಡೀನ್‌ನ 88.92% ಈಕ್ವಿಟಿ ಷೇರುಗಳನ್ನು 83.97 ಮಿಲಿಯನ್ (INR 8.43 ಮಿಲಿಯನ್) RIL ಅಂಗಸಂಸ್ಥೆಯು ಕ್ಲೋಸಿಂಗ್‌ನಲ್ಲಿ ಸ್ವಾಧೀನಪಡಿಸಿಕೊಳ್ಳುತ್ತಿದ್ದು, ಫ್ಯಾರಡೀನ್‌ನ ಉಳಿದ 11.08%ನ ಈಕ್ವಿಟಿ ಷೇರುಗಳನ್ನು 3 ವರ್ಷಗಳೊಳಗೆ 10.45 ಮಿಲಿಯನ್ ಪೌಂಡ್‌ಗಳ (INR 1.04 ಶತಕೋಟಿ) ವರೆಗಿನ ಒಟ್ಟು ಪರಿಗಣನೆಗೆ ಸ್ವಾಧೀನಪಡಿಸಿಕೊಳ್ಳಲಾಗುವುದು ಎಂದು ತಿಳಿಸಿದೆ.

ಫ್ಯಾರಡಿಯನ್‌ನ 31.59 ಮಿಲಿಯನ್ ಪೌಂಡ್‌ಗಳ ಒಟ್ಟಾರೆ ಪರಿಗಣನೆಯ (3.17 ಬಿಲಿಯನ್) ಹೊಸ ಈಕ್ವಿಟಿ ಷೇರುಗಳಲ್ಲಿ ಚಂದಾದಾರರಾಗಲು ರಿಲಯನ್ಸ್ ನ್ಯೂ ಎನರ್ಜಿ ಸೋಲಾರ್ ಅಂಗೀಕರಿಸಿದ್ದು, ಇದರಲ್ಲಿ 25 ಮಿಲಿಯನ್ ಪೌಂಡ್‌ಗಳನ್ನು (2.5 ಬಿಲಿಯನ್)ವಾಣಿಜ್ಯ ಬಿಡುಗಡೆಯನ್ನು ತ್ವರಿತಗೊಳಿಸಲು ಹಾಗೂ ಸಾಲ, ಇತರ ಶುಲ್ಕಗಳನ್ನು ಮರುಪಾವತಿಸುವ ಬ್ಯಾಲೆನ್ಸ್ ರೀತಿಯಲ್ಲಿ ಬೆಳವಣಿಗೆಯ ಬಂಡವಾಳದಂತೆ ಬಳಸಿಕೊಳ್ಳಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: Reliance: ಯಾರಾಗಲಿದ್ದಾರೆ ರಿಲಯನ್ಸ್​ ಉತ್ತರಾಧಿಕಾರಿ? ಬದಲಾವಣೆ ಕುರಿತು ಮುಖೇಶ್ ಅಂಬಾನಿ ಮಾತು

ತಂತ್ರಜ್ಞಾನ ಅಭಿವೃದ್ಧಿಗೆ ಹೂಡಿಕೆ
2035ರ ವೇಳೆಗೆ ನಿವ್ವಳ ಇಂಗಾಲ ತಟಸ್ಥಗೊಳಿಸುವ ಗುರಿ ಹೊಂದಿರುವ 75,000 ಕೋಟಿ ರೂ. ಗಳನ್ನು ಹೂಡಿಕೆ ಮಾಡುವ ಬಿಲಿಯನೇರ್ ಮುಖೇಶ್ ಅಂಬಾನಿಯವರ ಯೋಜನೆಗಳಲ್ಲಿ ಈ ಘೋಷಣೆಯು ಒಂದಾಗಿದೆ. ಯೋಜನೆಯು ಮೂರು ಭಾಗಗಳನ್ನು ಹೊಂದಿದ್ದು ವ್ಯವಹಾರಕ್ಕಾಗಿ ಎಲ್ಲಾ ನಿರ್ಣಾಯಕ ಘಟಕಗಳನ್ನು ತಯಾರಿಸುವ ಮತ್ತು ಸಂಪೂರ್ಣವಾಗಿ ಸಂಯೋಜಿಸುವ 60,000 ಕೋಟಿ ರೂ. ಹೂಡಿಕೆಯ ಗಿಗಾ ಫ್ಯಾಕ್ಟರಿಗಳ ಸ್ಥಾಪನೆ. ಅಂತೆಯೇ ಮೌಲ್ಯ ಸರಪಳಿ, ಪಾಲುದಾರಿಕೆಗಳು ಮತ್ತು ಭವಿಷ್ಯದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು 15,000 ಕೋಟಿ ರೂ. ಗಳ ಹೂಡಿಕೆ ಹೊಂದಿದೆ.

ಅತ್ಯಾಧುನಿಕ ತಂತ್ರಜ್ಞಾನದ ಬಳಕೆ:
ಭಾರತದ ಜಾಮ್‌ನಗರದಲ್ಲಿರುವ ಧೀರೂಭಾಯಿ ಅಂಬಾನಿ ಗ್ರೀನ್ ಎನರ್ಜಿ ಗಿಗಾ ಕಾಂಪ್ಲೆಕ್ಸ್ ಯೋಜನೆಯ ಭಾಗವಾಗಿ ರಿಲಯನ್ಸ್ ತನ್ನ ಉದ್ದೇಶಿತ ಸಂಪೂರ್ಣ ಸಮಗ್ರ ಇಂಧನ ಶೇಖರಣಾ ಗಿಗಾ-ಫ್ಯಾಕ್ಟರಿಯಲ್ಲಿ ಫ್ಯಾರಡಿಯನ್‌ನ ಅತ್ಯಾಧುನಿಕ ತಂತ್ರಜ್ಞಾನ ಬಳಸುತ್ತದೆ.

ಅಭಿವೃದ್ಧಿಯ ಪಥದತ್ತ ಭಾರತ:
ಇದು ಅತ್ಯಾಧುನಿಕ ಮತ್ತು ಸಂಯೋಜಿತ ಹೊಸ ಇಂಧನ ಪರಿಸರ ವ್ಯವಸ್ಥೆ ರಚಿಸಲು ಮತ್ತು ಪ್ರಮುಖ ಬ್ಯಾಟರಿ ತಂತ್ರಜ್ಞಾನಗಳಲ್ಲಿ ಭಾರತವನ್ನು ಮುಂಚೂಣಿಯಲ್ಲಿ ಇರಿಸಲು ನಮ್ಮ ಮಹತ್ವಾಕಾಂಕ್ಷೆಯನ್ನು ಇನ್ನಷ್ಟು ಬಲಪಡಿಸುತ್ತದೆ. ಫ್ಯಾರಡಿಯನ್ ಅಭಿವೃದ್ಧಿಪಡಿಸಿದ ಸೋಡಿಯಂ-ಐಯಾನ್ ತಂತ್ರಜ್ಞಾನವು ಜಾಗತಿಕವಾಗಿ ಪ್ರಮುಖ ಶಕ್ತಿ ಸಂಗ್ರಹಣೆ ಮತ್ತು ಬ್ಯಾಟರಿ ಪರಿಹಾರವನ್ನು ಒದಗಿಸುತ್ತದೆ. ಇದು ಸುರಕ್ಷಿತ, ಸಮರ್ಥನೀಯ, ಹೆಚ್ಚಿನ ಶಕ್ತಿಯ ಸಾಂದ್ರತೆ ಒದಗಿಸುತ್ತದೆ ಮತ್ತು ಗಮನಾರ್ಹವಾಗಿ ವೆಚ್ಚದಾಯಕವಾಗಿದೆ ಎಂದು RIL ಅಧ್ಯಕ್ಷರಾದ ಅಂಬಾನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭಾರತದ ಶಕ್ತಿಯ ಶೇಖರಣಾ ಅವಶ್ಯಕತೆಗಳನ್ನು ಸುರಕ್ಷಿತಗೊಳಿಸುವ ಯೋಜನೆ:
RIL ತಿಳಿಸಿರುವಂತೆ ತಂತ್ರಜ್ಞಾನವು ಸಮರ್ಥನೀಯ, ಕಡಿಮೆ ವೆಚ್ಚ ಹಾಗೂ ಬದಲಾಯಿಸಬಹುದಾಗಿದ್ದು ಲಿಥಿಯಂ-ಐಯಾನ್ ಫಾಸ್ಫೇಟ್‌ಗೆ ಸಮಾನವಾಗಿ ಹೆಚ್ಚಿನ ಸಾಂದ್ರತೆ ಹೊಂದಿದೆ ಮತ್ತು ಶೂನ್ಯ-ವೋಲ್ಟ್ ಸುರಕ್ಷಿತ ಸಾರಿಗೆ ಮತ್ತು ಸಂಗ್ರಹಣೆಗೆ ಪೇಟೆಂಟ್ ಹೊಂದಿದೆ ಎಂದು ತಿಳಿಸಿದೆ. ಹೆಚ್ಚು ಮುಖ್ಯವಾಗಿ ಸೋಡಿಯಂ ಅನ್ನು ಈ ತಂತ್ರಜ್ಞಾನವು ಬಳಸಿಕೊಳ್ಳುತ್ತದೆ. ಅಂತೆಯೇ ನವೀಕರಿಸಬಹುದಾದ ಶಕ್ತಿ ಮತ್ತು ವೇಗವಾಗಿ ಬೆಳೆಯುತ್ತಿರುವ EV ಚಾರ್ಜಿಂಗ್ ಮಾರುಕಟ್ಟೆಗಾಗಿ ಭಾರತದ ಶಕ್ತಿಯ ಶೇಖರಣಾ ಅವಶ್ಯಕತೆಗಳನ್ನು ಸುರಕ್ಷಿತಗೊಳಿಸುತ್ತದೆ. ಫ್ಯಾರಡಿಯನ್ ನಿರ್ವಹಣೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದು ಮತ್ತು ಭಾರತದಲ್ಲಿ ಸಮಗ್ರ ಮತ್ತು ಅಂತ್ಯದಿಂದ ಕೊನೆಯವರೆಗೆ ಗಿಗಾ ಪ್ರಮಾಣದ ಉತ್ಪಾದನೆಯ ಮೂಲಕ ತಂತ್ರಜ್ಞಾನವನ್ನು ವಾಣಿಜ್ಯೀಕರಿಸುವ ಅದರ ಯೋಜನೆಗಳನ್ನು ವೇಗಗೊಳಿಸುತ್ತೇವೆ ಎಂದು ಅಂಬಾನಿ ತಿಳಿಸಿದ್ದಾರೆ.

4 ಪ್ರಮುಖ ಒಪ್ಪಂದಗಳು:
ಅಕ್ಟೋಬರ್‌ನಲ್ಲಿ ರಿಲಯನ್ಸ್ ನ್ಯೂ ಎನರ್ಜಿ ಸೋಲಾರ್ ಪಾಲುದಾರಿಕೆಗಳ ಮೂಲಕ ಪೋರ್ಟ್‌ಫೋಲಿಯೊವನ್ನು ಬೆಳೆಸುವ ತನ್ನ ಕಾರ್ಯತಂತ್ರದ ಭಾಗವಾಗಿ, ನವೀಕರಿಸಬಹುದಾದ ಇಂಧನ ಯೋಜನೆಗಳಲ್ಲಿ 4 ಒಪ್ಪಂದಗಳನ್ನು ಘೋಷಿಸಿದೆ.

ಇದನ್ನೂ ಓದಿ: ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ: ರಿಲಯನ್ಸ್​ ಫೌಂಡೇಶನ್​ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಕಂಪನಿಯು ಜರ್ಮನ್ "ಗ್ರೀನ್ ಸೋಲಾರ್ ವೇಫರ್ಸ್" ತಂತ್ರಜ್ಞಾನ ಕಂಪನಿ NexWafe GmbHನಲ್ಲಿ ಹೂಡಿಕೆಯನ್ನು ಘೋಷಿಸಿತು, ಹೈಡ್ರೋಜನ್ ಎಲೆಕ್ಟ್ರೋಲೈಸರ್‌ಗಾಗಿ ಡ್ಯಾನಿಶ್ ಕಂಪನಿ Stiesdal A/Sನೊಂದಿಗೆ ಮತ್ತೊಂದು ಒಪ್ಪಂದಕ್ಕೆ ಸಹಿ ಹಾಕಿತು, ಚೀನಾ ನ್ಯಾಷನಲ್ ಬ್ಲೂಸ್ಟಾರ್ (ಗ್ರೂಪ್) Coನಿಂದ ಸೌರ ಫಲಕ ತಯಾರಕ REC ಸೋಲಾರ್ ಹೋಲ್ಡಿಂಗ್ಸ್ ASನಲ್ಲಿ 100% ಪಾಲನ್ನು ಸ್ವಾಧೀನಪಡಿಸಿಕೊಂಡಿದ್ದು ಮತ್ತು ಸ್ಟರ್ಲಿಂಗ್ & ವಿಲ್ಸನ್ ಪವರ್‌ನಲ್ಲಿ 40% ಪಾಲನ್ನು ಸ್ವಾಧೀನಪಡಿಸಿಕೊಂಡಿತು.

ಇದಕ್ಕೂ ಮೊದಲು, ಯುಎಸ್ ಮೂಲದ ಇಂಧನ ಶೇಖರಣಾ ಕಂಪನಿ ಅಂಬ್ರಿ ಇಂಕ್‌ನಲ್ಲಿ 50 ಮಿಲಿಯನ್ ಡಾಲರ್‌ ಹೂಡಿಕೆಯೊಂದಿಗೆ ನವೀಕರಿಸಬಹುದಾದ ಇಂಧನ ವಲಯದಲ್ಲಿ RIL ತನ್ನ ಮೊದಲ ಕಾರ್ಯತಂತ್ರದ ಯೋಜನೆಯನ್ನು ಮಾಡಿದೆ. ಈ ಮಧ್ಯೆ, ಷೇರು ಮಾರುಕಟ್ಟೆಯಲ್ಲಿ, ಬೆಳಗ್ಗೆ 9:30 ಗಂಟೆಗೆ, RILನ ಷೇರುಗಳು BSEನಲ್ಲಿ 0.7 ರಷ್ಟು ಏರಿಕೆಯಾಗಿ 2372.95 ರೂ.ಗಳಲ್ಲಿ ವಹಿವಾಟು ನಡೆಸಿದರೆ, ಬೆಂಚ್‌ಮಾರ್ಕ್ ಸೆನ್ಸೆಕ್ಸ್ 376.78 ಪಾಯಿಂಟ್ ಅಥವಾ 0.65% ದಷ್ಟು ಏರಿಕೆಯಾಗಿ 58,171.10 ಕ್ಕೆ ತಲುಪಿದೆ.
Published by:vanithasanjevani vanithasanjevani
First published: