• Home
  • »
  • News
  • »
  • business
  • »
  • Reliance New Energy Limited: ಕ್ಯಾಲಕ್ಸ್‌ನಲ್ಲಿ ಹೂಡಿಕೆ ಮಾಡಿದ ರಿಲಯನ್ಸ್‌ ನ್ಯೂ ಎನರ್ಜಿ ಲಿಮಿಟೆಡ್‌

Reliance New Energy Limited: ಕ್ಯಾಲಕ್ಸ್‌ನಲ್ಲಿ ಹೂಡಿಕೆ ಮಾಡಿದ ರಿಲಯನ್ಸ್‌ ನ್ಯೂ ಎನರ್ಜಿ ಲಿಮಿಟೆಡ್‌

ರಿಲಯನ್ಸ್ ಇಂಡಸ್ಟ್ರೀಸ್‌

ರಿಲಯನ್ಸ್ ಇಂಡಸ್ಟ್ರೀಸ್‌

ರಿಲಯನ್ಸ್ ಗುಜರಾತ್‌ನ ಜಾಮ್‌ನಗರದಲ್ಲಿ ವಿಶ್ವ ದರ್ಜೆಯ ಗಿಗಾ ಫ್ಯಾಕ್ಟರಿಯನ್ನು ಸ್ಥಾಪಿಸುತ್ತಿದೆ. ಈ ಹೂಡಿಕೆಯೊಂದಿಗೆ, ರಿಲಯನ್ಸ್ ಕ್ಯಾಲಕ್ಸ್‌ನ ಉತ್ಪನ್ನಗಳ ಲಾಭವನ್ನು ಪಡೆಯಲು ಮತ್ತು 'ಹೆಚ್ಚು ಶಕ್ತಿಯುತ' ಮತ್ತು ಕಡಿಮೆ ವೆಚ್ಚದ ಸೌರ ಮಾಡ್ಯೂಲ್‌ಗಳನ್ನು ತಯಾರಿಸಲು ಸಾಧ್ಯವಾಗುತ್ತದೆ.

ಮುಂದೆ ಓದಿ ...
  • Share this:

    ಹೊಸದಿಲ್ಲಿ, ಸೆಪ್ಟೆಂಬರ್ 24, 2022: ಮುಖೇಶ್ ಅಂಬಾನಿಯವರ (Mukesh Ambani) ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (Reliance Industries Limited ) ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ರಿಲಯನ್ಸ್ ನ್ಯೂ ಎನರ್ಜಿ ಲಿಮಿಟೆಡ್ (RNEL), ಯುಎಸ್‌ಎ ಕ್ಯಾಲಿಫೋರ್ನಿಯಾ ಮೂಲದ ಕ್ಯಾಲಕ್ಸ್ ಕಾರ್ಪೊರೇಶನ್‌ನಲ್ಲಿ ಹೂಡಿಕೆ ಮಾಡುವುದಾಗಿ ಘೋಷಿಸಿದೆ. ರಿಲಯನ್ಸ್ ನ್ಯೂ ಎನರ್ಜಿ ಕ್ಯಾಲಕ್ಸ್‌ನಲ್ಲಿ (Caelux ) 20% ಪಾಲನ್ನು ಪಡೆಯಲು 12 ಮಿಲಿಯನ್ ಡಾಲರ್ ಹೂಡಿಕೆ ಮಾಡುತ್ತದೆ. ಇದು ಮುಂದಿನ ಪೀಳಿಗೆಯ ಸೌರ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತದೆ. ಈ ಹೂಡಿಕೆಯಿಂದಾಗಿ 'ಸುಧಾರಿತ ಸೋಲಾರ್ ಸೆಲ್ ಟೆಕ್ನಾಲಜಿ'ಯಲ್ಲಿ ಕಂಪನಿ ಇನ್ನಷ್ಟು ಬಲಗೊಳ್ಳುವ ನಿರೀಕ್ಷೆಯಿದೆ.


    ಈ ಹೂಡಿಕೆಯು ಯುಎಸ್‌ ಜೊತೆಗೆ ಜಗತ್ತಿನ ವಿವಿಧೆಡೆ ನಡೆಯುತ್ತಿರುವ ತಂತ್ರಜ್ಞಾನ ಬೆಳವಣಿಗೆಗಳು ಮತ್ತು ಮಾರುಕಟ್ಟೆಗಳಲ್ಲಿ ಕ್ಯಾಲಕ್ಸ್‌ಗೆ ಹಿಡಿತ ಸಾಧಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ಎರಡೂ ಕಂಪನಿಗಳು ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿವೆ. ವಾಸ್ತವವಾಗಿ, ಕ್ಯಾಲಕ್ಸ್ ತನ್ನ ಪೆರೋವ್‌ಸ್ಕೈಟ್ ಆಧಾರಿತ ಸೌರ ತಂತ್ರಜ್ಞಾನಕ್ಕೆ ಹೆಸರುವಾಸಿಯಾಗಿದೆ. ಕಂಪನಿಯು 20% ಹೆಚ್ಚಿನ ಶಕ್ತಿಯನ್ನು ಉತ್ಪಾದಿಸುವ ಹೆಚ್ಚಿನ ದಕ್ಷತೆಯ ಸೌರ ಮಾಡ್ಯೂಲ್‌ಗಳನ್ನು ತಯಾರಿಸುತ್ತದೆ. 25 ವರ್ಷಗಳ ಕಾಲ ವಿದ್ಯುತ್ ಉತ್ಪಾದಿಸಬಲ್ಲ ಅದರ ಸೋಲಾರ್ ಯೋಜನೆಯ ವೆಚ್ಚವೂ ತೀರಾ ಕಡಿಮೆ.


    ರಿಲಯನ್ಸ್ ಗುಜರಾತ್‌ನ ಜಾಮ್‌ನಗರದಲ್ಲಿ ವಿಶ್ವ ದರ್ಜೆಯ ಗಿಗಾ ಫ್ಯಾಕ್ಟರಿಯನ್ನು ಸ್ಥಾಪಿಸುತ್ತಿದೆ. ಈ ಹೂಡಿಕೆಯೊಂದಿಗೆ, ರಿಲಯನ್ಸ್ ಕ್ಯಾಲಕ್ಸ್‌ನ ಉತ್ಪನ್ನಗಳ ಲಾಭವನ್ನು ಪಡೆಯಲು ಮತ್ತು 'ಹೆಚ್ಚು ಶಕ್ತಿಯುತ' ಮತ್ತು ಕಡಿಮೆ ವೆಚ್ಚದ ಸೌರ ಮಾಡ್ಯೂಲ್‌ಗಳನ್ನು ತಯಾರಿಸಲು ಸಾಧ್ಯವಾಗುತ್ತದೆ.


    ಈ ಹೂಡಿಕೆಯ ಕುರಿತು ಮಾತನಾಡಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ, “ಕ್ಯಾಲಕ್ಸ್‌ನಲ್ಲಿನ ಹೂಡಿಕೆಯು 'ವಿಶ್ವ ದರ್ಜೆಯ ಪರಿಸರ ಸ್ನೇಹಿ ಎನರ್ಜಿ ಸೃಷ್ಟಿ' ಮಾಡಬೇಕು ಎಂಬ ನಮ್ಮ ಕಾರ್ಯತಂತ್ರಕ್ಕೆ ಅನುಗುಣವಾಗಿದೆ. ಕ್ಯಾಲಕ್ಸ್‌ನ ಪೆರೋವ್‌ಸ್ಕೈಟ್-ಆಧಾರಿತ ಸೌರ ತಂತ್ರಜ್ಞಾನ ಮತ್ತು ಸೌರ ಮಾಡ್ಯೂಲ್‌ಗಳು ನಾವು ಇನ್ನಷ್ಟು ಸುಧಾರಣೆ ಸಾಧಿಸಲು ಸಹಾಯ ಮಾಡುತ್ತದೆ ಎಂದು ನಾವು ನಂಬುತ್ತೇವೆ" ಎಂದಿದ್ದಾರೆ.


    ಇದನ್ನೂ ಓದಿ: Neha Bhasin: ಗ್ಲಾಮರಸ್ ಫೊಟೋಸ್ ಹಂಚಿಕೊಂಡ ನೇಹಾ ಭಾಸಿನ್! ಉರ್ಫಿಯನ್ನೇ ಮೀರಿಸ್ತೀರಿ ಎಂದ ನೆಟ್ಟಿಗರು


    ಕ್ಯಾಲಕ್ಸ್ ಕಾರ್ಪೊರೇಷನ್ ಸಿಇಒ, ಸ್ಕಾಟ್ ಗ್ರೆಬೀಲ್, ರಿಲಯನ್ಸ್‌ಗೆ ಪ್ರಮುಖ ಹೂಡಿಕೆದಾರನಾಗಿ ಸೇರ್ಪಡೆಗೊಳ್ಳುವ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ, "ನಾವು ಸೌರ ಮಾಡ್ಯೂಲ್‌ಗಳನ್ನು ಹೆಚ್ಚು ಪರಿಣಾಮಕಾರಿ ಮತ್ತು ಕೈಗೆಟುಕುವಂತೆ ಮಾಡಲು ಮತ್ತು ನಮ್ಮ ಉತ್ಪಾದನಾ ಸಾಮರ್ಥ್ಯಗಳನ್ನು ವಿಸ್ತರಿಸಲು ಗಮನಹರಿಸುವುದನ್ನು ಮುಂದುವರಿಸುತ್ತೇವೆ. ನಾವು ರಿಲಯನ್ಸ್‌ನ ಜಾಗತಿಕ ವಿಸ್ತರಣೆ ಯೋಜನೆಗಳು ಮತ್ತು ಉತ್ಪನ್ನ ಮಾರ್ಗಸೂಚಿಯನ್ನು ಬೆಂಬಲಿಸುತ್ತೇವೆ."


    ಇದನ್ನೂ ಓದಿ: Money Mantra: ತಾಯಿಗಿಂತ ದೇವರಿಲ್ಲ, ಇವತ್ತು ಈ ರಾಶಿಯವರು ಅಮ್ಮನ ಮಾತು ಕೇಳಿ! ಸಂಜೆ ಗುಡ್​ ನ್ಯೂಸ್​​ ಪಕ್ಕಾ


    ಖೋಸ್ಲಾ ವೆಂಚರ್ಸ್‌ನ ವಿನೋದ್ ಖೋಸ್ಲಾ ಅವರು, "ಕ್ಯಾಲಕ್ಸ್‌ನಲ್ಲಿ ಆರಂಭಿಕ ಹೂಡಿಕೆದಾರರಾಗಿರುವ ನಾವು, ಅವರ ತಾಂತ್ರಿಕ ಪ್ರಗತಿಯಿಂದ ನಾವು ಆಳವಾಗಿ ಪ್ರಭಾವಿತರಾಗಿದ್ದೇವೆ ಮತ್ತು ಅವರೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ" ಎಂದಿದ್ದಾರೆ.

    Published by:Harshith AS
    First published: