Reliance: ಅಮೆರಿಕದ ಸೋಲಾರ್ ಎನರ್ಜಿ ಸಾಫ್ಟ್‌ವೇರ್ ಸಂಸ್ಥೆ ಸೆನ್ಸ್‌ಹಾಕ್‌ ಖರೀದಿ ಮಾಡಿದ ರಿಲಯನ್ಸ್‌

ಸೆನ್ಸ್‌ಹಾಕ್‌ನಲ್ಲಿ ರಿಲಯನ್ಸ್‌ ಶೇ. 79.4 ರಷ್ಟು ಷೇರುಗಳನ್ನು ಖರೀದಿ ಮಾಡಲಿದೆ. 2018 ರಲ್ಲಿ ಸ್ಥಾಪನೆಯಾದ ಸೆನ್ಸ್‌ಹಾಕ್‌ ಸೌರ ಉದ್ಯಮದಲ್ಲಿ ಕಂಪನಿಗಳು ತಮ್ಮ ಸೇವೆಗಳನ್ನು ಸುಧಾರಿಸಿಕೊಳ್ಳಲು ಮತ್ತು ಆಟೋಮೇಶನ್‌ಗೆ ಸಾಫ್ಟ್‌ವೇರ್ ಅನ್ನು ಅಭಿವೃದ್ಧಿಪಡಿಸುತ್ತದೆ.

ರಿಲಯನ್ಸ್‌

ರಿಲಯನ್ಸ್‌

 • Share this:
  ನವದೆಹಲಿ, ಸೆ.7: ಕ್ಯಾಲಿಫೋರ್ನಿಯಾ ಮೂಲದ ಸೌರ ಶಕ್ತಿ ಸಾಫ್ಟ್‌ವೇರ್ ಅಭಿವೃದ್ಧಿ ಕಂಪನಿ ಸೆನ್ಸ್‌ಹಾಕ್‌ (sensehawk) ಅನ್ನು ಅಂದಾಜು 256 ಕೋಟಿ ರೂ.ಗೆ ರಿಲಯನ್ಸ್‌ ಇಂಡಸ್ಟ್ರೀಸ್ (Reliance Industries) ಖರೀದಿ ಮಾಡುತ್ತಿರುವುದಾಗಿ ಮಂಗಳವಾರ ಪ್ರಕಟಿಸಿದೆ. ಸೆನ್ಸ್‌ಹಾಕ್‌ನಲ್ಲಿ ರಿಲಯನ್ಸ್‌ ಶೇ. 79.4 ರಷ್ಟು ಷೇರುಗಳನ್ನು ಖರೀದಿ ಮಾಡಲಿದೆ. 2018 ರಲ್ಲಿ ಸ್ಥಾಪನೆಯಾದ ಸೆನ್ಸ್‌ಹಾಕ್‌ ಸೌರ ಉದ್ಯಮದಲ್ಲಿ ಕಂಪನಿಗಳು ತಮ್ಮ ಸೇವೆಗಳನ್ನು ಸುಧಾರಿಸಿಕೊಳ್ಳಲು ಮತ್ತು ಆಟೋಮೇಶನ್‌ಗೆ ಸಾಫ್ಟ್‌ವೇರ್ (Automation Software) ಅನ್ನು ಅಭಿವೃದ್ಧಿಪಡಿಸುತ್ತದೆ. ಕಳೆದ ಹಣಕಾಸು ವರ್ಷದಲ್ಲಿ 2.3 ಮಿಲಿಯನ್ ಯುಎಸ್‌ಡಿ ವಹಿವಾಟನ್ನು ಕಂಪನಿ ಮಾಡಿದೆ.

  "ಭವಿಷ್ಯದ ಪ್ರಗತಿ, ಉತ್ಪನ್ನಗಳ ವಾಣಿಜ್ಯಿಕ ಬಳಕೆ ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿಗಾಗಿ ಹಣಕಾಸು ಒದಗಿಸುವುದೂ ಸೇರಿದಂತೆ 32 ಮಿಲಿಯನ್ ಡಾಲರ್ ಮೌಲ್ಯದ ಒಟ್ಟು ವಹಿವಾಟಿಗೆ ಸೆನ್ಸ್‌ಹಾಕ್‌ ಇಂಕ್ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಸೌರ ವಲಯದಲ್ಲಿನ ಕಂಪನಿಗಳಿಗೆ ಯೋಜನೆಯಿಂದ ಉತ್ಪಾದನೆಯವರೆಗೆ ಎಲ್ಲ ಹಂತದಲ್ಲೂ ಸೆನ್ಸ್‌ಹಾಕ್‌ ನೆರವು ನೀಡುತ್ತದೆ. 15 ದೇಶಗಳಲ್ಲಿನ 140 ಕ್ಕೂ ಹೆಚ್ಚು ಗ್ರಾಹಕರು ತಮ್ಮ 600 ಕ್ಕೂ ಹೆಚ್ಚು ಸೈಟ್‌ಗಳಿಗೆ ತಂತ್ರಜ್ಞಾನ ಸುಧಾರಣೆ ಮಾಡಿಕೊಳ್ಳಲು ಕಂಪನಿಯು ಸಹಾಯ ಮಾಡಿದೆ.

  ಇಪಿಸಿ, ತಂತ್ರಜ್ಞಾನ ಮತ್ತು ಪೂರೈಕೆ ಸರಣಿ ವಿಭಾಗದಲ್ಲಿ ಹೊಸ ಸಾಧ್ಯತೆಗಳಿಗಾಗಿ 1.6 ಬಿಲಿಯನ್ ಡಾಲರ್ ಮೊತ್ತವನ್ನು ರಿಲಯನ್ಸ್‌ ಕಳೆದ ಎರಡು ವರ್ಷಗಳಲ್ಲಿ ಹೂಡಿಕೆ ಮಾಡಿದೆ. 2030 ರ ವೇಳೆಗೆ 100 ಗಿ.ವ್ಯಾ. ಸೌರ ಶಕ್ತಿಯನ್ನು ಉತ್ಪಾದನೆ ಮಾಡುವ ಧ್ಯೇಯಕ್ಕೆ ನಮ್ಮ ಕಂಪನಿ ಬದ್ಧವಾಗಿದೆ ಎಂದು ರಿಲಯನ್ಸ್‌ ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್‌ ಅಂಬಾನಿ ಹೇಳಿದ್ದಾರೆ. ಸೆನ್ಸ್‌ಹಾಕ್‌ ಸಹಾಯದಿಂದ ನಾವು ವೆಚ್ಚ ಕಡಿಮೆ ಮಾಡುತ್ತೇವೆ, ಉತ್ಪಾದಕತೆ ಹೆಚ್ಚಿಸುತ್ತೇವೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತೇವೆ ಎಂದು ಅವರು ಹೇಳಿದ್ದಾರೆ.

  ಇದನ್ನೂ ಓದಿ:Mobile Video Game: ಕಣ್ಣಿನ ಸಮಸ್ಯೆ ಇದೆಯಾ? ಈ ವಿಡಿಯೋ ಗೇಮ್​​ಗೆ ಗ್ಲುಕೋಮಾವನ್ನು ನಿವಾರಿಸುವ ಶಕ್ತಿಯಿದೆಯಂತೆ!

  Jasprit Bumrah: ಪರ್ಫಾರ್ಮ್ಯಾಕ್ಸ್ ಬ್ರ್ಯಾಂಡ್‌ಗೆ ಜಸ್‌ಪ್ರೀತ್‌ ಬುಮ್ರಾ ಬ್ರ್ಯಾಂಡ್‌ ಅಂಬಾಸಿಡರ್‌!

  ಲಯನ್ಸ್‌ ರಿಟೇಲ್‌ನ (Reliance retail) ಅಧಿಕ ಕಾರ್ಯಕ್ಷಮತೆಯ ಮತ್ತು ತಾಂತ್ರಿಕವಾಗಿ ಸುಧಾರಿತ ಕ್ರೀಡಾ ಉಡುಪು (Sport Wear) ಬ್ರ್ಯಾಂಡ್‌ ಪರ್ಫಾರ್ಮ್ಯಾಕ್ಸ್‌ (Performax) ಕ್ರಿಕೆಟ್ ಸ್ಟಾರ್ (Cricket Star) ಹಾಗೂ ಭಾರತದ ಪ್ರಮುಖ ಬೌಲರ್ ಜಸ್‌ಪ್ರೀತ್ ಬುಮ್ರಾ (Jasprit Bumrah) ಅವರನ್ನು ಬ್ರ್ಯಾಂಡ್‌ ಅಂಬಾಸಿಡರ್ ಆಗಿ ನೇಮಿಸಿದೆ. ಪರ್ಫಾರ್ಮ್ಯಾಕ್ಸ್‌ ಭಾರತೀಯ ಬ್ರ್ಯಾಂಡ್ ಆಗಿದ್ದು, ದೇಶದ ನಂ.1 ಕ್ರೀಡಾ ಉಡುಪು ಬ್ರ್ಯಾಂಡ್ ಆಗಿ ಹೊರಹೊಮ್ಮುವ ಗುರಿಯನ್ನು ಹೊಂದಿದೆ. ಬುಮ್ರಾ ಮತ್ತು ಪರ್ಫಾರ್ಮ್ಯಾಕ್ಸ್‌ ಬದ್ಥತೆ ಮತ್ತು ಪರಿಣಿತಿಗೆ ಹೆಸರಾಗಿದ್ದಾರೆ. ಹೀಗಾಗಿ, ಬ್ರ್ಯಾಂಡ್‌ಗೆ ಬುಮ್ರಾ ಅತ್ಯಂತ ಸೂಕ್ತವಾಗಿ ಹೊಂದುತ್ತಾರೆ.

  ಇದನ್ನೂ ಓದಿ: Sleeping Tablets: ಪ್ರತಿದಿನ ನಿದ್ದೆ ಮಾತ್ರೆ ಸೇವನೆ ಅಪಾಯಕ್ಕೆ ಆಹ್ವಾನ ಕೊಟ್ಟಂತೆ ನೆನಪಿರಲಿ

  ಈ ಸಂದರ್ಭದಲ್ಲಿ ಮಾತನಾಡಿದ ರಿಲಯನ್ಸ್‌ ರಿಟೇಲ್‌ನ ಫ್ಯಾಷನ್‌ ಮತ್ತು ಲೈಫ್‌ಸ್ಟೈಲ್‌ನ ಸಿಇಒ ಅಖಿಲೇಶ್‌ ಪ್ರಸಾದ್ "ಜಸ್‌ಪ್ರೀತ್ ಬುಮ್ರಾ ಜೊತೆಗೆ ನಮ್ಮ ಸಹಭಾಗಿತ್ವವನ್ನು ಘೋಷಿಸುವುದಕ್ಕೆ ನನಗೆ ಹೆಮ್ಮೆಯಾಗುತ್ತಿದೆ. ಜಸ್‌ಪ್ರೀತ್ ಹಲವು ವರ್ಷಗಳಿಂದಲೂ ಭಾರತ ತಂಡದ ಪ್ರಮುಖ ಪೇಸರ್ ಆಗಿ ಕಾಣಿಸಿಕೊಂಡಿದ್ದಾರೆ. ಅದೇ ರೀತಿ, ಅಂತಾರಾಷ್ಟ್ರೀಯ ಮಾನ್ಯತೆ ಹೊಂದಿರುವ ಭಾರತದ ನಂ.1 ಕ್ರೀಡಾ ಬ್ರ್ಯಾಂಡ್ ಆಗಿ ಪರ್ಫಾರ್ಮ್ಯಾಕ್ಸ್ ಅನ್ನು ರೂಪಿಸುವ ಧ್ಯೇಯವನ್ನು ನಾವು ಹೊಂದಿದ್ದೇವೆ. ಪರ್ಫಾರ್ಮ್ಯಾಕ್ಸ್‌ ಅನ್ನು ನಮ್ಮ ಗ್ರಾಹಕರಿಗೆ ಒಂದು ಉತ್ತಮ ಮತ್ತು ಆದ್ಯತೆಯ ಬ್ರ್ಯಾಂಡ್ ಆಗಿಸುವ ನಿಟ್ಟಿನಲ್ಲಿ ನಾವು ಇಡುತ್ತಿರುವ ಹೆಜ್ಜೆಗಳಲ್ಲಿ ಇದು ಮೊದಲನೆಯಾಗಿದೆ" ಎಂದು ಹೇಳಿದ್ದಾರೆ.

  ಜಸ್‌ಪ್ರೀತ್‌ ಬುಮ್ರಾ ಈ ಬಗ್ಗೆ ಮಾತನಾಡಿ "ಕ್ರೀಡಾಳುವಾಗಿ ನಾನು ಧರಿಸುವ ಉಡುಪಿನ ಬಗ್ಗೆ ವಿಶೇಷ ಕಾಳಜಿ ವಹಿಸುತ್ತೇನೆ. ಸರಿಯಾಗಿ ಫಿಟ್ ಆಗಿರುವ ಉಡುಪು ಉತ್ತಮ ಆಟ ಆಡಲು ನೆರವಾಗುತ್ತದೆ. ಪರ್ಫಾರ್ಮ್ಯಾಕ್ಸ್‌ನಲ್ಲಿ ತಾಂತ್ರಿಕವಾಗಿ ಸುಧಾರಿತ ಆಕ್ಟಿವ್ ವೇರ್‌ನ ಹಲವು ವಿಧಗಳಿವೆ. ಇವು ಭಾರತದ ಮುಂದಿನ ತಲೆಮಾರಿನ ಅಥ್ಲೀಟ್‌ಗಳಿಗೆ ಉತ್ತಮ ಸಂಗಾತಿಯಾಗಬಲ್ಲವು. ಉತ್ತಮ ಸಾಧನೆ ಮಾಡಬೇಕು ಎಂಬ ನನ್ನ ಧ್ಯೇಯಕ್ಕೂ ಈ ಬ್ರ್ಯಾಂಡ್‌ನ ಧ್ಯೇಯಕ್ಕೂ ಹೊಂದಿಕೆ ಆಗುವುದರಿಂದ ಇದರ ಜೊತೆಗೆ ನಾನು ಗುರುತಿಸಿಕೊಳ್ಳುತ್ತಿರುವುದು ಖುಷಿಯ ಸಂಗತಿ" ಎಂದಿದ್ದಾರೆ.
  Published by:Harshith AS
  First published: