• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Reliance Industries: ರಿಲಯನ್ಸ್ ಇಂಡಸ್ಟ್ರೀಸ್ ಪಾಲಿಗೆ ಶುಭ ದೀಪಾವಳಿ! ಸೆಪ್ಟೆಂಬರ್ ತ್ರೈಮಾಸಿಕಕ್ಕೆ 15,512 ಕೋಟಿ ರೂಪಾಯಿ ನಿವ್ವಳ ಲಾಭ

Reliance Industries: ರಿಲಯನ್ಸ್ ಇಂಡಸ್ಟ್ರೀಸ್ ಪಾಲಿಗೆ ಶುಭ ದೀಪಾವಳಿ! ಸೆಪ್ಟೆಂಬರ್ ತ್ರೈಮಾಸಿಕಕ್ಕೆ 15,512 ಕೋಟಿ ರೂಪಾಯಿ ನಿವ್ವಳ ಲಾಭ

ಮುಕೇಶ್​ ಅಂಬಾನಿ

ಮುಕೇಶ್​ ಅಂಬಾನಿ

ರಿಲಯನ್ಸ್​ ಇಂಡಸ್ಟ್ರೀಸ್​​ (Reliance Industries) 2022ರ ಸೆಪ್ಟೆಂಬರ್​ಗೆ (FY23Q2 July To September) ಕೊನೆಯಾದ ತ್ರೈಮಾಸಿಕಕ್ಕೆ ಫಲಿತಾಂಶ ಪ್ರಕಟಿಸಿದ್ದು, 15,512 ಕೋಟಿ ರೂಪಾಯಿ ನಿವ್ವಳ ಲಾಭ (Net Profit) ಗಳಿಸಿದೆ.

  • Share this:

ರಿಲಯನ್ಸ್​ ಕಂಪನಿ (Reliance Company) ಬಗ್ಗೆ ಹೆಚ್ಚೆನು ಹೇಳಬೇಕಿಲ್ಲ. ಆಡು ಮುಟ್ಟದ ಸೊಪ್ಪಿಲ್ಲ, ರಿಲಯನ್ಸ್​ ಕಾಲಿಡಿದ ಕ್ಷೇತ್ರವಿಲ್ಲ ಎಂದರೆ ತಪ್ಪಾಗಲ್ಲ. ಎಲ್ಲ ಕಡೆಗಳಲ್ಲೂ ರಿಲಯನ್ಸ್​ ಕಾಲಿಟ್ಟಿದೆ. ತೈಲ (Crud Oil) , ರಾಸಾಯನಿಕ (Chemicals), ಬಟ್ಟೆ (Cloth), ಇಂಟರ್​ನೆಟ್ (Internet)​ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ವ್ಯವಹಾರ ಹೊಂದಿದೆ. ಇದೀಗ ರಿಲಯನ್ಸ್​ ಇಂಡಸ್ಟ್ರೀಸ್​​ (Reliance Industries) 2022ರ ಸೆಪ್ಟೆಂಬರ್​ಗೆ (FY23Q2 July To September) ಕೊನೆಯಾದ ತ್ರೈಮಾಸಿಕಕ್ಕೆ ಫಲಿತಾಂಶ ಪ್ರಕಟಿಸಿದ್ದು, 15,512 ಕೋಟಿ ರೂಪಾಯಿ ನಿವ್ವಳ ಲಾಭ (Net Profit) ಗಳಿಸಿದೆ. ಈ ಬಗ್ಗೆ ಕುರಿತಾದ ಹೆಚ್ಚಿನ ಮಾಹಿತಿಯನ್ನು ಪತ್ರಿಕಾ ಪ್ರಕಟಣೆ ಕೂಡ ಹೊರಡಿಸಿದೆ. ಕಳೆದ ಹಣಕಾಸು ವರ್ಷದ ಇದೇ ಅವಧಿಗೆ (FY22Q2) ಹೋಲಿಸಿದರೆ ಶೇ 0.2ರಷ್ಟು ಹೆಚ್ಚಳ ದಾಖಲಿಸಿದೆ. ಕಂಪನಿಯ ಒಟ್ಟಾರೆ ಆದಾಯ 2,53,497 ಕೋಟಿ ರೂಪಾಯಿ ತಲುಪಿದ್ದು, ಈ ಮೂಲಕ ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಗಳಿಸಿದ್ದಕ್ಕಿಂತ ಶೇ 32.4ರಷ್ಟು ಜಾಸ್ತಿ ಆಗಿದೆ.


ರಿಲಯನ್ಸ್ ಇಂಡಸ್ಟ್ರೀಸ್ ಪಾಲಿಗೆ ಶುಭ ದೀಪಾವಳಿ!


ಇದರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ನ ಏಕೀಕೃತ ಆದಾಯ 1,46,310 ಕೋಟಿ ರೂಪಾಯಿ ಬಂದಿದ್ದು, ವರ್ಷದಿಂದ ವರ್ಷಕ್ಕೆ ಶೇ 34.5ರಷ್ಟು ಮೇಲೇರಿದೆ. ಈ ತ್ರೈಮಾಸಿಕಕ್ಕೆ ರೂ. 6,915 ಕೋಟಿ ನಿವ್ವಳ ಲಾಭ ಆಗಿದ್ದು, ವರ್ಷದಿಂದ ವರ್ಷಕ್ಕೆ ಶೇ 25.1ರಷ್ಟು ಇಳಿಕೆ ಆಗಿದೆ. ಅಂದಹಾಗೆ ಕಂಪನಿಯ ರಫ್ತು ಪ್ರಮಾಣವು ಈ ತ್ರೈಮಾಸಿಕದಲ್ಲಿ 86,382 ಕೋಟಿ ಆಗಿದ್ದು, ಶೇ 57.5ರಷ್ಟು ಹೆಚ್ಚಳವಾಗಿದೆ.


4,729 ಕೋಟಿ ನಿವ್ವಳ ಲಾಭ ಗಳಿಸಿದ ಜಿಯೋ!


ಇನ್ನು ರಿಲಯನ್ಸ್ ಇಂಡಸ್ಟ್ರೀಸ್ ಅಂಗ ಸಂಸ್ಥೆಯಾದ ಜಿಯೋ ಪ್ಲಾಟ್ಫಾರ್ಮ್ ಈ ತ್ರೈಮಾಸಿಕದಲ್ಲಿ 4,729 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದ್ದು, ಕಳೆದ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದಲ್ಲಿ ಶೇ 26.9ರಷ್ಟು ಹೆಚ್ಚಳವನ್ನು ಕಂಡಿದೆ. ಜಿಯೋ ಪ್ಲಾಟ್ಫಾರ್ಮ್ಸ್ ಲಿಮಿಟೆಡ್ ಒಟ್ಟಾರೆ ಆದಾಯವು ಈ ತ್ರೈಮಾಸಿಕದಲ್ಲಿ 28,506 ಕೋಟಿ ರೂಪಾಯಿ ಆಗಿದ್ದು, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದಲ್ಲಿ ಶೇಕಡಾ 22.8ರಷ್ಟು ಮೇಲೇರಿದೆ.


ಸೆಪ್ಟೆಂಬರ್ 30, 2022ಕ್ಕೆ ಕೊನೆಗೊಂಡ ಅವಧಿಗೆ ಜಿಯೋ ಪ್ಲಾಟ್ಫಾರ್ಮ್ಸ್ ಗ್ರಾಹಕರ ನೆಲೆ (ಸಂಖ್ಯೆ) 427.6 ಮಿಲಿಯನ್ (42.76 ಕೋಟಿ) ಇದ್ದು, ಇನ್ನು ಪ್ರತಿ ಬಳಕೆದಾರರಿಂದ ಸರಾಸರಿ ಆದಾಯ (ARPU) ಪ್ರತಿ ತಿಂಗಳಿಗೆ/ಚಂದಾದಾರರಿಗೆ ತಲಾ 177.2 ರೂಪಾಯಿ ಇದೆ. ಈ ತ್ರೈಮಾಸಿಕಕ್ಕೆ ಒಟ್ಟಾರೆ ಡೇಟಾ ಟ್ರಾಫಿಕ್ 28.2 ಬಿಲಿಯನ್ ಜಿಬಿ ದಾಖಲಿಸಿದ್ದು, ಶೇ 22.7ರಷ್ಟು ಹೆಚ್ಚಳ ಕಂಡಿದೆ.


ಇದನ್ನೂ ಓದಿ: ರಿಲಯನ್ಸ್‌ ಜಿಯೋದಿಂದ ಮೊದಲ ಲ್ಯಾಪ್​ಟಾಪ್​ ಬಿಡುಗಡೆ, ಅದು ಇಷ್ಟು ಕಡಿಮೆ ಬೆಲೆಗೆ!


ರಿಲಯನ್ಸ್ ಇಂಡಸ್ಟ್ರೀಸ್​ನ ರೀಟೇಲ್ ವ್ಯವಹಾರ ಅಂಗವಾದ ರಿಲಯನ್ಸ್ ರೀಟೇಲ್ ಈ ತ್ರೈಮಾಸಿಕದಲ್ಲಿ 2,305 ಕೋಟಿ ರೂಪಾಯಿ ನಿವ್ವಳ ಲಾಭವನ್ನು ಕಂಡಿದ್ದು, ಕಳೆದ ಹಣಕಾಸು ವರ್ಷದಲ್ಲಿ ದಾಖಲಿಸಿದ್ದಕ್ಕಿಂತ ಶೇ 36ರಷ್ಟು ಜಾಸ್ತಿ ಆಗಿದೆ. ಒಟ್ಟಾರೆ ಆದಾಯವು 64,920 ಕೋಟಿ ರೂಪಾಯಿ ಬಂದಿದೆ. ಕಳೆದ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 42.9ರಷ್ಟು ಜಾಸ್ತಿಯಾಗಿದೆ. ರಿಲಯನ್ಸ್ ರೀಟೇಲ್ನ ಒಟ್ಟು 16,617 ಭೌತಿಕ ಮಳಿಗೆಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ತ್ರೈಮಾಸಿಕದಲ್ಲಿ 795 ಮಳಿಗೆಗಳು ಆರಂಭಿಸಲಾಗಿದೆ.


ಸಂತಸ ವ್ಯಕ್ತಪಡಿಸಿದ ಮುಖೇಶ್​ ಅಂಬಾನಿ


ತ್ರೈಮಾಸಿಕ ಫಲಿತಾಂಶಗಳ ಬಗ್ಗೆ ಪ್ರತಿಕ್ರಿಯಿಸಿದ ರಿಲಯನ್ಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ,"ನಮ್ಮ ಗ್ರಾಹಕ ವ್ಯವಹಾರಗಳ ದಾಖಲೆ ಕಾರ್ಯಕ್ಷಮತೆಯಿಂದ ನಾನು ಸಂತಸಗೊಂಡಿದ್ದೇನೆ. ಪ್ರತಿ ತ್ರೈಮಾಸಿಕದಲ್ಲಿ ಹೊಸ ಮೈಲುಗಲ್ಲುಗಳನ್ನು ತಲುಪುವುದನ್ನು ಮುಂದುವರಿಸಿದೆ. ಡಿಜಿಟಲ್ ಸೇವೆಗಳ ವಿಭಾಗದ ಎಂಗೇಜ್ಮೆಂಟ್​​ನಲ್ಲಿ ನಾವು ಸ್ಥಿರವಾದ ನಿವ್ವಳ ಚಂದಾದಾರರ ಸೇರ್ಪಡೆಗಳನ್ನು ಮತ್ತು ಹೆಚ್ಚಿನದನ್ನು ನೋಡಿದ್ದೇವೆ. ಜಿಯೋ ತನ್ನ ಉದ್ಯಮ-ಪ್ರಮುಖ ಸ್ಟ್ಯಾಂಡ್ಅಲೋನ್ಗಾಗಿ ಬೀಟಾ ಪ್ರಯೋಗವನ್ನು ಘೋಷಿಸಿದೆ. 5G ಸೇವೆಗಳು ಮತ್ತು ಮಹತ್ವಾಕಾಂಕ್ಷೆಯ ಹಾಗೂ ಅತ್ಯಂತ ವೇಗವಾಗಿ ಅಖಿಲ ಭಾರತ ಮಟ್ಟದಲ್ಲಿ ಟ್ರೂ 5Gಗಾಗಿ ವೇಗವಾಗಿ ಪ್ರಗತಿ ಸಾಧಿಸುತ್ತಿದೆ. ಎಂದು ಅವರು ಹೇಳಿದರು.


ಇದನ್ನೂ ಓದಿ: ರಿಲಯನ್ಸ್ ಜಿಯೋದಿಂದ ರಾಜಸ್ಥಾನದಲ್ಲಿ 5G ಸೇವೆಗಳ ಪ್ರಾರಂಭ


"ನಮ್ಮ ರೀಟೇಲ್ ವ್ಯಾಪಾರವು ಸಂಖ್ಯೆಯ ಲೆಕ್ಕಾಚಾರದಲ್ಲಿ ಸ್ಟೋರ್ನಲ್ಲಿ ಸೇರ್ಪಡೆಗಳು ಮತ್ತು ಡಿಜಿಟಲ್ ಏಕೀಕರಣ ಬಲವಾದ ಪುನರುಜ್ಜೀವನದೊಂದಿಗೆ ದಾಖಲೆಯ ಕಾರ್ಯಕ್ಷಮತೆಯನ್ನು ನೀಡಿದೆ. ರಿಲಯನ್ಸ್ ರೀಟೇಲ್ ಬಲವಾದ ಪ್ರತಿಪಾದನೆ ನೀಡುವುದನ್ನು ಮುಂದುವರಿಸಿದೆ. ಬಳಕೆಯ ಬುಟ್ಟಿಗಳು ಮತ್ತು ವಿವಿಧ ದರಗಳಾದ್ಯಂತ ಶಾಪಿಂಗ್ ಅನುಭವ ಮತ್ತು ಉತ್ತಮ ಮೌಲ್ಯ ನೀಡುತ್ತದೆ" ಎಂದು ಮುಖೇಶ್​ ಅಂಬಾನಿ ಹೇಳಿದರು

Published by:ವಾಸುದೇವ್ ಎಂ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು