• Home
  • »
  • News
  • »
  • business
  • »
  • ರಿಲಯನ್ಸ್ ನಿಂದ Jio World Centre... ಭಾರತದ ಅತಿದೊಡ್ಡ ಕನ್ವೆನ್ಶನ್ ಸೆಂಟರ್ ಪ್ರಾರಂಭ

ರಿಲಯನ್ಸ್ ನಿಂದ Jio World Centre... ಭಾರತದ ಅತಿದೊಡ್ಡ ಕನ್ವೆನ್ಶನ್ ಸೆಂಟರ್ ಪ್ರಾರಂಭ

ನೀತಾ ಅಂಬಾನಿ

ನೀತಾ ಅಂಬಾನಿ

Jio World Centre: ಧೀರೂಭಾಯಿ ಅಂಬಾನಿ ಸ್ಕ್ವೇರ್ ಮತ್ತು ಮುಂಬೈ ನಗರಕ್ಕೆ ಸಂಗೀತ ಕಾರಂಜಿಯ ಫೌಂಟೇನ್ ಆಫ್ ಜಾಯ್ ಮತ್ತು ಭಾರತದ ಅತಿದೊಡ್ಡ ಮತ್ತು ಅತ್ಯುತ್ತಮವಾದ ಜಿಯೋವರ್ಲ್ಡ್ ಕನ್ವೆನ್ಷನ್ ಸೆಂಟರ್ನ ಆರಂಭದೊಂದಿಗೆ ಇದು ಮುಂದಿನ ಹಲವು ಅವಧಿಗಳಲ್ಲಿ ಹಂತ ಹಂತವಾಗಿ ತೆರೆಯಲಿದೆ.

  • Share this:

    ಮುಂಬೈ, 5 ಮಾರ್ಚ್ 2022 - ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (Reliance Industries Limited) ಇಂದು ದೇಶದ ಅತಿದೊಡ್ಡ ಮತ್ತು ಅತ್ಯಂತ ಪ್ರತಿಷ್ಠಿತ ಬಹುಮುಖಿ ತಾಣವಾದ ಜಿಯೋ ವರ್ಲ್ಡ್ ಸೆಂಟರ್ (Jio World Centre) ಅನ್ನು ತೆರೆಯುವುದಾಗಿ ಘೋಷಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್ ನಿರ್ದೇಶಕಿ ಮತ್ತು ರಿಲಯನ್ಸ್ ಫೌಂಡೇಶನ್ನ ಸಂಸ್ಥಾಪಕ-ಅಧ್ಯಕ್ಷರಾದ ಶ್ರೀಮತಿ ನೀತಾ ಅಂಬಾನಿ (Nita Ambani) ಅವರು ಮುಂಬೈನ (Mumbai) ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್​ನಲ್ಲಿ 18.5 ಎಕರೆಗಳಷ್ಟು ವಿಸ್ತಾರವಾದ ಪ್ರದೇಶವನ್ನು ಹೊಂದಿದ್ದು, ಭಾರತದ ನಾಗರಿಕರಿಗೆ ಅಪ್ರತಿಮ ವ್ಯಾಪಾರ, ವಾಣಿಜ್ಯ ಮತ್ತು ಸಂಸ್ಕೃತಿಯ ಅನುಭವ ನೀಡುವ ತಾಣವಾಗುವ ಮೂಲಕ ವಿಶ್ವದರ್ಜೆಯ ಗುಣಮಟ್ಟವನ್ನು ಒದಗಿಸಲು ಸಿದ್ಧವಾಗಿದೆ.


    ಧೀರೂಭಾಯಿ ಅಂಬಾನಿ ಸ್ಕ್ವೇರ್ ಮತ್ತು ಮುಂಬೈ ನಗರಕ್ಕೆ ಸಂಗೀತ ಕಾರಂಜಿಯ ಫೌಂಟೇನ್ ಆಫ್ ಜಾಯ್ ಮತ್ತು ಭಾರತದ ಅತಿದೊಡ್ಡ ಮತ್ತು ಅತ್ಯುತ್ತಮವಾದ ಜಿಯೋವರ್ಲ್ಡ್ ಕನ್ವೆನ್ಶನ್ ಸೆಂಟರ್ನ ಆರಂಭದೊಂದಿಗೆ ಇದು ಮುಂದಿನ ಹಲವು ಅವಧಿಗಳಲ್ಲಿ ಹಂತ ಹಂತವಾಗಿ ತೆರೆಯಲಿದೆ.


    ಭಾರತದಲ್ಲಿ ಸಾಂಸ್ಕೃತಿಕ ಕೇಂದ್ರ, ಸಂಗೀತ ಕಾರಂಜಿ, ಉನ್ನತ ಮಟ್ಟದ ರಿಟೇಲ್ ಅನುಭವ, ಕೆಫೆಗಳು ಮತ್ತು ಉತ್ತಮ ಭೋಜನದ ರೆಸ್ಟೋರೆಂಟ್ಗಳು, ಸರ್ವಿಸ್ಡ್ ಅಪಾರ್ಟ್ಮೆಂಟ್ಗಳು ಮತ್ತು ಕಛೇರಿಗಳು ಮತ್ತು ಸ್ಟೇಟ್-ಆಫ್ ದಿ- ಆರ್ಟ್ ಸೌಲಭ್ಯಗಳನ್ನು ಒಳಗೊಂಡಿರುವ ಭಾರತದ ಮೊದಲ ತಾಣ ಜಿಯೋ ವರ್ಲ್ಡ್ ಸೆಂಟರ್ ಆಗಿರಲಿದೆ.


    ಈ ಕೇಂದ್ರದ ಬಗ್ಗೆ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡಿರುವ ಶ್ರೀಮತಿ ನೀತಾ ಅಂಬಾನಿ, "ಜಿಯೋ ವರ್ಲ್ಡ್ ಸೆಂಟರ್ ನಮ್ಮ ಭವ್ಯ ರಾಷ್ಟ್ರದ ಗೌರವ ಮತ್ತು ನವ ಭಾರತದ ಆಕಾಂಕ್ಷೆಗಳ ಪ್ರತಿಬಿಂಬವಾಗಿದೆ. ಅತಿದೊಡ್ಡ ಸಮಾವೇಶಗಳನ್ನು ನಡೆಸಲು ಅನುಕೂಲ ಕಲ್ಪಿಸುವುದರಿಂದ ಹಿಡಿದು ಸಾಂಸ್ಕೃತಿಕ ಅನುಭವಗಳವರೆಗೆ ಚಿಲ್ಲರೆ ವ್ಯಾಪಾರ ಮತ್ತು ಊಟದ ಸೌಲಭ್ಯಗಳವರೆಗೆ, ಜಿಯೋ ವರ್ಲ್ಡ್ ಸೆಂಟರ್ ಮುಂಬೈನ ಹೊಸ ಹೆಗ್ಗುರುತಾಗಲಿದೆ. ಭಾರತದ ಬೆಳವಣಿಗೆಯ ಕಥೆಯ ಮುಂದಿನ ಅಧ್ಯಾಯವನ್ನು ಬರೆಯಲು ನಾವು ಒಟ್ಟಿಗೆ ಸೇರಲಿದ್ದೇವೆ’ ಎಂದರು.


    ಧೀರೂಭಾಯಿ ಅಂಬಾನಿ ಚೌಕ


    ಮುಂಬೈ ನಗರದಲ್ಲಿ ಹೊಸ ಹೆಗ್ಗುರುತಾಗಿ ನಿರ್ಮಾಣವಾಗುತ್ತಿರುವ ಧೀರೂಭಾಯಿ ಅಂಬಾನಿ ಸ್ಕ್ವೇರ್ ರಿಲಯನ್ಸ್ನ ಪ್ರೀತಿಯ ಸಂಸ್ಥಾಪಕ ಶ್ರೀ ಧೀರೂಭಾಯಿ ಅಂಬಾನಿ ಮತ್ತು ಮುಂಬೈ ನಗರಕ್ಕೆ ನೀಡುತ್ತಿರುವ ಸಮರ್ಪಣೆಯಾಗಿದೆ. ಮುಕ್ತ-ಪ್ರವೇಶ, ಮುಕ್ತ ಸಾರ್ವಜನಿಕ ಸ್ಥಳದೊಂದಿಗೆ ಇದು ಸ್ಥಳೀಯ ನಾಗರಿಕರು ಮತ್ತು ಪ್ರಪಂಚದಾದ್ಯಂತದ ಪ್ರವಾಸಿಗರಿಗೆ ನೋಡಲೇಬೇಕಾದ ತಾಣವಾಗುವ ಭರವಸೆ ನೀಡುತ್ತದೆ.


    ಧೀರೂಭಾಯಿ ಅಂಬಾನಿ ಚೌಕವು ಫೌಂಟೇನ್ ಆಫ್ ಜಾಯ್ ಸುತ್ತಲೂ ನಿರ್ಮಾಣವಾಗಲಿದೆ. ಇದು ನೀರು, ದೀಪಗಳು ಮತ್ತು ಸಂಗೀತದ ಅದ್ಭುತ ಕಾರಂಜಿ ಪ್ರದರ್ಶನಗಳ ಸರಣಿಯಾಗಿರಲಿದೆ. ಕಾರಂಜಿ ಭಾರತ ಹಾಗೂ ಅದರ ಹಲವು ಬಣ್ಣಗಳನ್ನು ಸಂಕೇತಿಸಲಿದೆ. ಎಂಟು ಫೈರ್ ಶೂಟರ್ಗಳು, 392 ವಾಟರ್ ಜೆಟ್ಗಳು ಮತ್ತು 600 ಕ್ಕೂ ಹೆಚ್ಚು ಎಲ್ಇಡಿ ದೀಪಗಳು ಸಂಗೀತದ ಮಾಧುರ್ಯಕ್ಕೆ ನೃತ್ಯ ಮಾಡುವ ಹೂವಿನ ದಳಗಳಾಗಿ ಬದಲಾಗಿ ಮರೆಯಲಾಗದ ಪ್ರದರ್ಶನವನ್ನು ಸೃಷ್ಟಿಸಲಿವೆ.


    ಸಂಗೀತ ಕಾರಂಜಿಯನ್ನು ಲೋಕಾರ್ಪಣೆ ಮಾಡಿದ ಶ್ರೀಮತಿ ನೀತಾ ಅಂಬಾನಿ, “ಅತ್ಯಂತ ಸಂತೋಷ ಮತ್ತು ಹೆಮ್ಮೆಯಿಂದ, ನಾವು ಧೀರೂಭಾಯಿ ಅಂಬಾನಿ ಚೌಕ ಮತ್ತು ವಿಶ್ವ ದರ್ಜೆಯ ಫೌಂಟೇನ್ ಆಫ್ ಜಾಯ್ ಅನ್ನು ಮುಂಬೈನ ಜನರಿಗೆ ಮತ್ತು ನಗರಕ್ಕೆ ಅರ್ಪಿಸುತ್ತೇವೆ. ನಗರದಲ್ಲಿ ಸಂಭ್ರಮಾಚರಣೆ ನಡೆಸುವ, ಜನರು ಸಂತೋಷಗಳನ್ನು ಹಂಚಿಕೊಳ್ಳುವ ಮತ್ತು ಆಮ್ಚಿ ಮುಂಬೈ ಬಣ್ಣಗಳು ಮತ್ತು ಶಬ್ದಗಳಲ್ಲಿ ನೆನೆಯುವ ಅಪ್ರತಿಮ ಹೊಸ ಸಾರ್ವಜನಿಕ ಸ್ಥಳವಾಗಿ ಬದಲಾಗಿದೆ! ಆರಂಭಗೊಂಡ ಮೊದಲ ರಾತ್ರಿಯ ಸಂತಸವನ್ನು ಶಿಕ್ಷಕರಿಗೆ ವಿಶೇಷ ಗೌರವವಾಗಿ ಅರ್ಪಿಸಲು ನಾನು ಸಂತೋಷಪಡುತ್ತೇನೆ. ನಾನೇ ಶಿಕ್ಷಕಳಾಗಿರುವ ಹಿನ್ನೆಲೆಯಲ್ಲಿ, ಈ ಸವಾಲಿನ ಸಮಯದಲ್ಲಿ ದಣಿವಿನ ಅರಿವಿಲ್ಲದೆ ಕೆಲಸ ಮಾಡಿದ ಮತ್ತು ಜ್ಞಾನದ ಜ್ವಾಲೆಯನ್ನು ಉರಿಯುತ್ತಿರುವ ನಮ್ಮ ಶಿಕ್ಷಕರಿಗೆ ಧನ್ಯವಾದಗಳು. ನಮ್ಮ ಈ ಗೌರವಾರ್ಪಣೆಯು ನಿಜವಾದ ವೀರರನ್ನು ಶ್ಲಾಘಿಸುತ್ತದೆ” ಎಂದರು.


    ಜ್ಞಾನದ ಜ್ವಾಲೆಯನ್ನು ಪ್ರಜ್ವಲಿಸುವ ಮತ್ತು ಭವ್ಯ ಭಾರತದ ಭವಿಷ್ಯವನ್ನು ಮುಂದಿನ ಜನಾಂಗದಲ್ಲಿ ಕಟ್ಟಿಕೊಡುವ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳಲ್ಲಿ ಹೊಸ ಬೋಧನಾ ವಿಧಾನಗಳಿಗೆ ಹೊಂದಿಕೊಳ್ಳುವಲ್ಲಿ ಹೆಚ್ಚಿನ ಪ್ರಯತ್ನಗಳನ್ನು ಹಾಕಿದ ಮುಂಬೈನಾದ್ಯಂತ BMC ಶಾಲೆಗಳು ಮತ್ತು ಇತರ ಶಾಲೆಗಳಿಂದ 250 ಕ್ಕೂ ಹೆಚ್ಚು ಶಿಕ್ಷಕರನ್ನು ಆರಂಭಿಕ ಪ್ರದರ್ಶನಕ್ಕೆ ಆಹ್ವಾನಿಸಲಾಯಿತು.


    ಚೌಕವು ಪ್ರತಿದಿನ ಸಂಜೆಯ ಪ್ರದರ್ಶನಗಳೊಂದಿಗೆ ಆರಂಭಗೊಳ್ಳುತ್ತದೆ. ಉಚಿತ ಪ್ರವೇಶ ಪಾಸ್ಗಳನ್ನು dhirubhaiambanisquare.com ನಲ್ಲಿ ಬುಕ್ ಮಾಡಬಹುದು.


    ಜಿಯೋ ವರ್ಲ್ಡ್ ಕನ್ವೆನ್ಶನ್ ಸೆಂಟರ್


    ಜಿಯೋ ವರ್ಲ್ಡ್ ಕನ್ವೆನ್ಶನ್ ಸೆಂಟರ್, ಭಾರತದ ಅತ್ಯುತ್ತಮ, ಬೃಹತ್ ಸಮಾವೇಶ ಮತ್ತು ಪ್ರದರ್ಶನ ಸೌಲಭ್ಯಗಳನ್ನು ನೀಡುತ್ತದೆ ಮತ್ತು ವೇಗವಾಗಿ ಬೆಳೆಯುತ್ತಿರುವ ಜಾಗತಿಕ ಸಮಾವೇಶ ಮತ್ತು ಪ್ರದರ್ಶನಗಳ ಪರಿಸರ ವ್ಯವಸ್ಥೆಯಲ್ಲಿ ಭಾರತವನ್ನು ದೃಢವಾಗಿ ಇರಿಸುವ ಗುರಿಯನ್ನು ಹೊಂದಿದೆ. ಇದು ಭಾರತ ಮತ್ತು ಮುಂಬೈ ನಗರಕ್ಕೆ ಅತಿ ದೊಡ್ಡ ಕೊಡುಗೆಯಾಗಿದೆ.


    ಜಿಯೋ ವರ್ಲ್ಡ್ ಕನ್ವೆನ್ಶನ್ ಸೆಂಟರ್ ಗ್ರಾಹಕರ ಪ್ರದರ್ಶನಗಳು, ಸಮ್ಮೇಳನಗಳು, ಎಕ್ಸಿಬಿಷನ್, ಮೆಗಾ ಕನ್ಸರ್ಟ್ಗಳು, ಗಾಲಾ ಔತಣಕೂಟಗಳು ಮತ್ತು ವಿವಾಹಗಳು ಸೇರಿದಂತೆ ವಿಶಿಷ್ಟ ವ್ಯಾಪಾರ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ಭಾರತದ ಅಗ್ರಗಣ್ಯ ಸ್ಥಳವಾಗಿದೆ. ಬಹು ಆಯಾಮವನ್ನು ಹೊಂದಿರುವ ಈ ಪ್ರದೇಶವು ತಂತ್ರಜ್ಞಾನದ ಬೆಂಬಲದೊಂದಿಗೆ ಭಾರತದಲ್ಲಿ ಜಾಗತಿಕ ಮಾನದಂಡಗಳನ್ನು ಒದಗಿಸುತ್ತದೆ.


    ಇದನ್ನೂ ಓದಿ: Future Group's ಮಳಿಗೆಯನ್ನು ಸ್ವಾಧೀನ ಪಡಿಸಿಕೊಂಡ Reliance; ನಿಟ್ಟುಸಿರು ಬಿಟ್ಟ ಮಾಲೀಕರು ಮತ್ತು ಉದ್ಯೋಗಿಗಳು


    ಜಿಯೋ ವರ್ಲ್ಡ್ ಕನ್ವೆನ್ಶನ್ ಸೆಂಟರ್ ಮುಖ್ಯಾಂಶಗಳು:


    · 161460 ಚದರ ಅಡಿ ವಿಸ್ತೀರ್ಣದ 3 ಪ್ರದರ್ಶನ ಸಭಾಂಗಣಗಳು, 16,500 ಅತಿಥಿಗಳಿಗೆ ಅವಕಾಶ ಕಲ್ಪಿಸುತ್ತೆ


    · 107640 ಚದರ ಅಡಿಗಳ ಒಟ್ಟು 2 ಕನ್ವೆನ್ಶನ್ ಹಾಲ್ಗಳು 10,640 ಅತಿಥಿಗಳಿಗೆ ಅವಕಾಶ


    · ಭವ್ಯವಾದ 32290 ಚದರ ಅಡಿ ಬಾಲ್ ರೂಂ, 3200 ಅತಿಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ


    · ಒಟ್ಟು 29062 ಚದರ ಅಡಿ ವಿಸ್ತೀರ್ಣದೊಂದಿಗೆ 25 ಸಭಾ ಕೊಠಡಿಗಳು.


    · ಎಲ್ಲಾ ಹಂತಗಳಲ್ಲಿ 139930 ಚದರ ಅಡಿ ಪೂರ್ವ-ಕಾರ್ಯ ಸಭೆಯ ಒಟ್ಟು ಪ್ರದೇಶ


    · ಹೈಬ್ರಿಡ್ ಮತ್ತು ಡಿಜಿಟಲ್ ಅನುಭವಗಳಿಗಾಗಿ 5G ನೆಟ್ವರ್ಕ್ ಅನ್ನು ಸಕ್ರಿಯಗೊಳಿಸಲಾಗಿದೆ


    · ದಿನಕ್ಕೆ 18,000 ಕ್ಕೂ ಹೆಚ್ಚು ಊಟವನ್ನು ಪೂರೈಸುವ ಸಾಮರ್ಥ್ಯ ಹೊಂದಿರುವ ದೊಡ್ಡ ಅಡುಗೆ ಮನೆ


    · 5,000 ಕಾರುಗಳ ನಿಲುಗಡೆಗೆ ಸಾಮರ್ಥ್ಯವಿರುವ ಕನ್ವೆನ್ಶನ್ ಸೆಂಟರ್ ಭಾರತದ ಅತಿದೊಡ್ಡ ಆನ್-ಸೈಟ್ ಪಾರ್ಕಿಂಗ್ ಆಗಲಿದೆ.


    · ಧೀರೂಭಾಯಿ ಅಂಬಾನಿ ಸ್ಕ್ವೇರ್ ಮತ್ತು ಜಿಯೋ ವರ್ಲ್ಡ್ ಕನ್ವೆನ್ಶನ್ ಸೆಂಟರ್ನ ಸಾರ್ವಜನಿಕ ತೆರೆಯುವಿಕೆಗಳು ಸ್ಮಾರಕ ಯೋಜನೆಗೆ ಪೂರ್ವಭಾವಿಯಾಗಿವೆ ಮತ್ತು ಜಿಯೋ ವರ್ಲ್ಡ್ ಸೆಂಟರ್ ಗೆ ಭೇಟಿನೀಡುವವರು ಅಸಾಧಾರಣ ಅನುಭವಗಳನ್ನು ಪಡೆಯುವುದನ್ನು ನಿರೀಕ್ಷಿಸಬಹುದು. ನಾವೀನ್ಯತೆ ಮತ್ತು ಕಲ್ಪನೆಗಳ ಭಾರತದ ಮುಂಬರುವ ಪರಿವರ್ತಕ ಕೇಂದ್ರವಾಗಿ ಇದನ್ನು ನಿರ್ಮಿಸಲಾಗಿದೆ. ಇದು ಸಮುದಾಯಗಳನ್ನು ಪೋಷಿಸುವ, ಹೊಸತನವನ್ನು ಪ್ರೇರೇಪಿಸುವ ಮತ್ತು ಜನರನ್ನು ಒಟ್ಟಿಗೆ ಸೇರಿಸುವ ಸ್ಥಳವಾಗಿದೆ.


    ಒಬೆರಾಯ್ 360 ಸೇರಿದಂತೆ ಹಲವು ಹೊಸ ಹಾಗೂ ನವೀನ ಜಾಗತಿಕ ಪಾಕಶಾಲೆಯ ಪರಿಕಲ್ಪನೆಯನ್ನು ಒಳಗೊಂಡಿರಲಿದೆ. ಇಂಡಿಯಾ ಆಕ್ಸೆಂಟ್ ನಂಥ ವಿಶ್ವ ದರ್ಜೆಯ ಶಾಪಿಂಗ್ ಅನುಭವ ಮತ್ತು ಐಷಾರಾಮಿ ಬ್ರಾಂಡ್ಗಳು ಲಭ್ಯವಿರಲಿವೆ. ಹೀಗಿದ್ದೂ, ಸಾಂಸ್ಕೃತಿಕವಾಗಿ ಮನಸೂರೆಗಳ್ಳುವ ಅನುಭವಗಳ ಸಾಂಸ್ಕೃತಿಕ ಕೇಂದ್ರಬಿಂದುವಾಗಿ, ಕಲಾತ್ಮಕ ಸಮುದಾಯದ ಭಾಗವಾಗಿ ಇದು 2023ರಲ್ಲಿ ಆರಂಭವಾಗಲಿದೆ.


    ಇದನ್ನೂ ಓದಿ: Relianceನಿಂದ Make In Indiaಗೆ ಬೃಹತ್ ಕೊಡುಗೆ, Sanmina ಜೊತೆ ಜಂಟಿ ಯೋಜನೆ


    ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಬಗ್ಗೆ


    ರಿಲಯನ್ಸ್ ಭಾರತದ ಅತಿದೊಡ್ಡ ಖಾಸಗಿ ವಲಯದ ಕಂಪನಿಯಾಗಿದ್ದು, ರೂ.539,238 ಕೋಟಿ ($73.8 ಶತಕೋಟಿ), ರೂ.79,828 ಕೋಟಿ ($10.9 ಶತಕೋಟಿ) ನಗದು ಲಾಭ ಮತ್ತು ಮಾರ್ಚ್ 31 ಕ್ಕೆ ಕೊನೆಗೊಂಡ 2021ರ ಹಣಕಾಸು ವರ್ಷದಲ್ಲಿ ರೂ.53,739 ಕೋಟಿ ($7.4 ಶತಕೋಟಿ) ನಿವ್ವಳ ಲಾಭವನ್ನು ಹೊಂದಿದೆ. ರಿಲಯನ್ಸ್ನ ಚಟುವಟಿಕೆಗಳು ಹೈಡ್ರೋಕಾರ್ಬನ್ ಪರಿಶೋಧನೆ ಮತ್ತು ಉತ್ಪಾದನೆ, ಪೆಟ್ರೋಲಿಯಂ ಸಂಸ್ಕರಣೆ ಮತ್ತು ಮಾರುಕಟ್ಟೆ, ಪೆಟ್ರೋಕೆಮಿಕಲ್ಸ್, ಚಿಲ್ಲರೆ ಮತ್ತು ಡಿಜಿಟಲ್ ಸೇವೆಗಳಿಗೂ ವ್ಯಾಪಿಸಿವೆ. ಫಾರ್ಚೂನ್ನ "ವಿಶ್ವದ ಅತಿದೊಡ್ಡ ಕಂಪನಿಗಳ" ಗ್ಲೋಬಲ್ 500 ಪಟ್ಟಿಯಲ್ಲಿ ಭಾರತದಿಂದ ಕಾಣಿಸಿಕೊಂಡ ರಿಲಯನ್ಸ್, ಅಗ್ರ ಶ್ರೇಯಾಂಕದ ಕಂಪನಿಯಾಗಿದೆ. ಕಂಪನಿಯು ಫೋರ್ಬ್ಸ್ ಗ್ಲೋಬಲ್ 2000 ರ 2021 ರ "ವಿಶ್ವದ ಅತಿದೊಡ್ಡ ಸಾರ್ವಜನಿಕ ಕಂಪನಿಗಳ" ಶ್ರೇಯಾಂಕದಲ್ಲಿ 55 ನೇ ಸ್ಥಾನದಲ್ಲಿದೆ – ಅದರಲ್ಲೂ ಭಾರತೀಯ ಕಂಪನಿಗಳಲ್ಲಿ ಅಗ್ರಸ್ಥಾನದಲ್ಲಿದೆ. ಇದು ಲಿಂಕ್ಡ್ಇನ್ನ 'ಭಾರತದಲ್ಲಿ ಕೆಲಸ ಮಾಡಲು ಅತ್ಯುತ್ತಮ ಕಂಪನಿಗಳು' (2021) ರಲ್ಲೂ ಸೇರಿಕೊಂಡಿದೆ.

    Published by:Harshith AS
    First published: