MG Motors ಖರೀದಿಯ ರೇಸ್‌ನಲ್ಲಿ ರಿಲಯನ್ಸ್ ಸಂಸ್ಥೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

MG ಈಗಾಗಲೇ ತನ್ನ ಗುಜರಾತ್ ಕಾರ್ಖಾನೆಯಲ್ಲಿ ವರ್ಷಕ್ಕೆ 1.2 ಲಕ್ಷ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಮತ್ತಷ್ಟು ಬೆಳವಣಿಗೆಗಾಗಿ 5,000 ಕೋಟಿ ರೂ. ಕೂಡ ಹೂಡಿಕೆ ಮಾಡಿದೆ.

  • Share this:

ಮುಕೇಶ್ ಅಂಬಾನಿ (Mukesh Ambani)ನೇತೃತ್ವದ‌ ರಿಲಯನ್ಸ್ ಸಂಸ್ಥೆಯು ಹಲವಾರು ವಲಯಗಳಿಗೆ ಎಂಟ್ರಿ ನೀಡುತ್ತಾ ಇಂದು ದೇಶದ ಟಾಪ್‌ ಉದ್ಯಮಗಳಲ್ಲಿ ಅಗ್ರಪಂಥಿಯಲ್ಲಿ ನಿಂತಿರೋದು ಎಲ್ಲರಿಗೂ ತಿಳಿದ ವಿಚಾರ. ಸದ್ಯ ಆಟೋ (Auto Mobile) ಮೊಬೈಲ್‌ ಕ್ಷೇತ್ರದಲ್ಲಿ ಪಾರುಪತ್ಯ ವಿಸ್ತರಿಸಲು ಹೊರಟಿರುವ ರಿಲಯನ್ಸ್‌ ಯುಕೆ ಮಾಲೀಕತ್ವದ ಕಂಪನಿಯನ್ನು (Company) ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಗಿದೆ.


MG ಮೋಟರ್‌ನ ಖರೀದಿ ರೇಸ್‌ನಲ್ಲಿ ರಿಲಯನ್ಸ್
ಚೀನಾದ ದೈತ್ಯ ಎಸ್‌ಎಐಸಿ (ಶಾಂಘೈ ಆಟೋಮೋಟಿವ್ ಇಂಡಸ್ಟ್ರಿ ಕಾರ್ಪೊರೇಷನ್) ಒಡೆತನದ ಎಂಜಿ ಅಥವಾ ಮೋರಿಸ್‌ ಗ್ಯಾರೆಜ್ ಮೋಟಾರ್ ಆಟೋ ಕಂಪನಿಯು ಕಾರು ವ್ಯಾಪಾರದಲ್ಲಿ ತನ್ನ ಬಹುಪಾಲನ್ನು ಭಾರತದಲ್ಲಿ ಮಾರಾಟ ಮಾಡಲು ಯೋಜಿಸುತ್ತಿದ್ದು, ಆಟೋ ದೈತ್ಯನನ್ನು ಖರೀದಿ ಮಾಡಲು ಹೀರೋ, ಪ್ರೇಮ್‌ಜಿ ಇನ್ವೆಸ್ಟ್ ಮತ್ತು JSW ಸೇರಿದಂತೆ ಹಲವು ಕಂಪನಿಗಳು ರೇಸ್‌ಗೆ ಇಳಿದಿವೆ. ಇದರಲ್ಲಿ ಮುಕೇಶ್ ಅಂಬಾನಿ ನೇತೃತ್ವದ‌ ರಿಲಯನ್ಸ್ ಸಂಸ್ಥೆ ಪ್ರಮುಖವಾಗಿದೆ.


ಕ್ಯಾಂಪಾ ಕೋಲಾ ಮತ್ತು ಸೊಸ್ಯೊ ತಯಾರಕ ಹಜೂರಿ ನಂತರ ಎಂಜಿ ಮೋಟರ್ಸ್‌ ಮೂಲಕ ಮುಖೇಶ್ ಅಂಬಾನಿಯ ರಿಲಯನ್ಸ್ ಗ್ರೂಫ್ ಜನಪ್ರಿಯ ಸ್ವದೇಶಿ ಬ್ರಾಂಡ್‌ಗಳನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಎದುರು ನೋಡುತ್ತಿದೆ. ಗಡಿಯಾಚೆಗೆ ತನ್ನ ಪರಿಧಿ ವಿಸ್ತರಿಸಲು ಯಾವಾಗಲೂ ಹವಣಿಸುವ ರಿಲಯನ್ಸ್ ಇಂಡಸ್ಟ್ರೀಸ್ ಮೋರಿಸ್ ಗ್ಯಾರೇಜ್‌ನೊಂದಿಗೆ ಆಟೋ ಮಾರುಕಟ್ಟೆಯನ್ನು ಪ್ರವೇಶಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ.


ಇದನ್ನೂ ಓದಿ: WhatsApp: ನಿಮಗೇ ತಿಳಿಯದಂತೆ ನಿಮ್ಮ ಫೋನಿನ ಮೈಕ್ರೋಫೋನ್ ಬಳಸುತ್ತಾ ವಾಟ್ಸಾಪ್? ಈ ಬಗ್ಗೆ ಏನಂತ ಎಚ್ಚರಿಕೆ ನೀಡಿದ್ರು ಮಸ್ಕ್

"ಮುಂದಿನ ಎರಡು-ನಾಲ್ಕು ವರ್ಷಗಳಲ್ಲಿ ಷೇರುದಾರಿಕೆ, ಕಂಪನಿಯ ಮಂಡಳಿ, ನಿರ್ವಹಣೆ, ಪೂರೈಕೆ ಸರಪಳಿಯನ್ನು ಭಾರತೀಕರಿಸಲು ನಾವು ಉದ್ದೇಶಿಸಿದ್ದೇವೆ" ಎಂದು MG ಮೋಟಾರ್ ಇಂಡಿಯಾ ಸಿಇಒ ಎಮೆರಿಟಸ್ ರಾಜೀವ್ ಚಬಾಟೋಲ್ಡ್ ‌ಈ ಬಗ್ಗೆ ಅಧಿಕೃತವಾಗಿ ಹೇಳಿದ್ದಾರೆ.


ಈ ವರ್ಷದ ಅಂತ್ಯದಲ್ಲಿ ಒಪ್ಪಂದ ಮುಕ್ತಾಯ
ಈ ವಿಚಾರ ಇನ್ನೂ ಸಂವಾದದ ಹಂತದಲ್ಲಿಯೇ ಇದ್ದು, ಭಾರತೀಯ ಕಂಪನಿಗಳೊಂದಿಗೆ ತೀವ್ರವಾದ ಚರ್ಚೆಗಳು ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ MG ಮೋಟಾರ್ ಈ ವರ್ಷದ ಅಂತ್ಯದ ವೇಳೆಗೆ ಒಪ್ಪಂದವನ್ನು ಕೊನೆಗೊಳಿಸಲು ನಿರ್ಧರಿಸಿದೆ ಎಂದು ಕಂಪನಿಯ ವರದಿಗಳು ತಿಳಿಸಿವೆ.


ಎಲ್ಲವೂ ಅಂದುಕೊಂಡಂತೆ ಆದರೆ ರಿಲಯನ್ಸ್‌ ತೆಕ್ಕೆಗೆ ಎಂಜಿ ಮೋಟಾರ್ಸ್‌ ಕೂಡ ಬೀಳಲಿದೆ. ಈ ಮೂಲಕ ಭಾರತದ ಅತಿದೊಡ್ಡ ಸಂಘಟಿತ ಸಂಸ್ಥೆಗಳಲ್ಲಿ ಒಂದಾದ ರಿಲಯನ್ಸ್ ಲೀಗ್‌ಗೆ ಎಂಜಿ ಮೋಟರ್ಸ್‌ ಸೇರಲಿದ್ದು, ಕಂಪನಿಯ ಮತ್ತೊಂದು ಆದಾಯದ ಕೊಡುಗೆ ಆಗಲಿದೆ.


ಭಾರತಕ್ಕಾಗಿ ತನ್ನ ಪೋರ್ಟ್‌ಫೋಲಿಯೊದಲ್ಲಿ ಹೆಚ್ಚಿನ EV ವಾಹನಗಳನ್ನು ಪರಿಚಯಿಸಲು ಆಶಿಸುತ್ತಿರುವ ಕಾರು ತಯಾರಕ ಕಂಪನಿ, ತನ್ನ ಚೀನೀ ಸಂಸ್ಥಾಪಕರಿಂದ ಹಣವನ್ನು ಸಂಗ್ರಹಿಸಲು ಭಾರತ ಸರ್ಕಾರದಿಂದ ಅನುಮೋದನೆ ಪಡೆಯಲು ಪರದಾಡುತ್ತಿದೆ.ಭಾರತೀಕರಣಗೊಳಿಸಲು ಸಿದ್ಧತೆ
ಮುಂದಿನ ನಾಲ್ಕು ವರ್ಷಗಳಲ್ಲಿ ತನ್ನ ಮಂಡಳಿ, ಪೂರೈಕೆ ಸರಪಳಿ ಮತ್ತು ಕಾರ್ಯಾಚರಣೆಯ ಇತರ ಅಂಶಗಳನ್ನು ಭಾರತೀಕರಣಗೊಳಿಸುವ ಉದ್ದೇಶವನ್ನು ಕಂಪನಿಯು ಈಗಾಗಲೇ ಹೇಳಿದೆ. MG ಈಗಾಗಲೇ ತನ್ನ ಗುಜರಾತ್ ಕಾರ್ಖಾನೆಯಲ್ಲಿ ವರ್ಷಕ್ಕೆ 1.2 ಲಕ್ಷ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಮತ್ತಷ್ಟು ಬೆಳವಣಿಗೆಗಾಗಿ 5,000 ಕೋಟಿ ರೂ. ಕೂಡ ಹೂಡಿಕೆ ಮಾಡಿದೆ.


ಭಾರತದಲ್ಲಿ ಶೇಕಡಾ 1 ಕ್ಕಿಂತ ಸ್ವಲ್ಪ ಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದಿರುವ MG, ಈ ವರ್ಷ ಭಾರತದಲ್ಲಿ ತನ್ನ ಮಾರಾಟದ ಸುಮಾರು 25 ಪ್ರತಿಶತದಷ್ಟು EVಗಳನ್ನು ಮಾಡಬೇಕೆಂಬ ಗುರಿಯೊಂದಿಗೆ ಕೆಲಸ ಮಾಡಲು ಯೋಜಿಸಿದೆ.
ರಿಲಯನ್ಸ್ ತನ್ನ ವ್ಯವಹಾರಗಳನ್ನು ಹೆಚ್ಚು ಗ್ರಾಹಕ ಕೇಂದ್ರಿತವಾಗಿಸಲು ಹಲವಾರು ಹೊಸ ವ್ಯಾಪಾರ ವಿಭಾಗಗಳಿಗೆ ಮುನ್ನುಗ್ಗಿದೆ. ಎಫ್‌ಎಂಸಿಜಿ ಮತ್ತು ವಾಣಿಜ್ಯ ರಿಯಲ್ ಎಸ್ಟೇಟ್‌ಗೆ ಪ್ರವೇಶಿಸಿದ ನಂತರ, ಕಂಪನಿಯು ವಿಮೆ ಮತ್ತು ಎಎಮ್‌ಸಿ ವ್ಯವಹಾರಗಳ ಮೇಲೆಯೂ ಗಮನಹರಿಸುತ್ತಿದೆ ಎಂದು ವರದಿಯಾಗಿದೆ.


top videos
    First published: