• Home
  • »
  • News
  • »
  • business
  • »
  • Reliance: ರಿಲಯನ್ಸ್ ಸ್ವತಂತ್ರ ನಿರ್ದೇಶಕರಾಗಿ ಕನ್ನಡಿಗನ ಆಯ್ಕೆ, ಕುಂದಾಪುರ ಮೂಲದ ಕೆವಿ ಕಾಮತ್ ನೇಮಕ!

Reliance: ರಿಲಯನ್ಸ್ ಸ್ವತಂತ್ರ ನಿರ್ದೇಶಕರಾಗಿ ಕನ್ನಡಿಗನ ಆಯ್ಕೆ, ಕುಂದಾಪುರ ಮೂಲದ ಕೆವಿ ಕಾಮತ್ ನೇಮಕ!

ಕೆ.ವಿ.ಕಾಮತ್​

ಕೆ.ವಿ.ಕಾಮತ್​

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಶುಕ್ರವಾರ ಕಂಪನಿ ಮಂಡಳಿಗೆ ಸ್ವತಂತ್ರ ನಿರ್ದೇಶಕರಾಗಿ ಅನುಭವಿ ಬ್ಯಾಂಕರ್ ಆದ ಕೆ.ವಿ. ಕಾಮತ್ ಅವರನ್ನು ನೇಮಕ ಮಾಡಿದೆ.

  • Share this:

ಆಡು ಮುಟ್ಟದ ಸೊಪ್ಪಿಲ್ಲ, ರಿಲಯನ್ಸ್​ ಕಾಲಿಡದ ಕ್ಷೇತ್ರವಿಲ್ಲ ಎನ್ನಬಹುದು. ಹೌದು, ಎಲ್ಲಾ ಕ್ಷೇತ್ರಗಳಲ್ಲೂ ರಿಯಲನ್ಸ್​ ಯಶಸ್ವಿಯಾಗಿದೆ. ತೈಲ (Crud Oil) , ರಾಸಾಯನಿಕ (Chemicals), ಬಟ್ಟೆ (Cloth), ಇಂಟರ್​ನೆಟ್ (Internet)​ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ವ್ಯವಹಾರ ಹೊಂದಿದೆ. ಇದೀಗ ರಿಲಯನ್ಸ್​ ಸ್ವತಂತ್ರ ನಿರ್ದೇಶಕರಾಗಿ ನಮ್ಮ ಕರ್ನಾಟಕದವರು ಆಯ್ಕೆಯಾಗಿದ್ದಾರೆ. ಕುಂದಾಪುರ ಮೂಲದ ಕೆವಿ ಕಾಮತ್​ ನೇಮಕ ಆಗಿದ್ದಾರೆ.  ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಶುಕ್ರವಾರ ಕಂಪನಿ ಮಂಡಳಿಗೆ ಸ್ವತಂತ್ರ ನಿರ್ದೇಶಕರಾಗಿ ಅನುಭವಿ ಬ್ಯಾಂಕರ್ ಆದ ಕೆ.ವಿ. ಕಾಮತ್ ಅವರನ್ನು ನೇಮಕ ಮಾಡಿದೆ. 74 ವರ್ಷದ ಕಾಮತ್ ಅವರನ್ನು 5 ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ.


ರಿಲಯನ್ಸ್​​ ಸ್ವತಂತ್ರ ನಿರ್ದೇಶಕರಾಗಿ ಆಯ್ಕೆಯಾದ ಕನ್ನಡಿಗರು!


74 ವರ್ಷದ ಕಾಮತ್ ಅವರನ್ನು ಐದು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ ಎಂದು ಸಂಸ್ಥೆಯು ಷೇರು ವಿನಿಮಯ ಕೇಂದ್ರದಲ್ಲಿ ತಿಳಿಸಿದೆ. ಐಐಎಂ ಅಹಮದಾಬಾದ್ ಪದವೀಧರರಾದ ಕುಂದಾಪುರ ವಾಮನ್ ಕಾಮತ್ (ಕೆ.ವಿ. ಕಾಮತ್) ನಿಷ್ಣಾತ ಭಾರತೀಯ ಬ್ಯಾಂಕರ್ ಆಗಿದ್ದು, ಅವರು 1971ನೇ ಇಸವಿಯಲ್ಲಿ ಐಸಿಐಸಿಐ ಜತೆಗೆ ವೃತ್ತಿಜೀವನ ಪ್ರಾರಂಭಿಸಿದರು. 1988ರಲ್ಲಿ ಅವರು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB)ನಲ್ಲಿ ಕಾರ್ಯ ನಿರ್ವಹಿಸಿದ್ದಾರೆ.


ಯಾರು ಈ ವಾಮನ್​ ಕಾಮತ್​?


ವಾಮನ್​ ಕಾಮತ್ ಅವರಿಗೆ ಸಾಕಷ್ಟು ಅನುಭವವಿದೆ. ಬ್ಯಾಂಕ್​ ಕ್ಷೇತ್ರದಲ್ಲಿ ಹೆಚ್ಚು ಅನುಭವ ಹೊಂದಿದ್ದಾರೆ. 1996ರಲ್ಲಿ ಐಸಿಐಸಿಗೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ನಂತರ  ಸಿಇಒ ಆಗಿ ಹಿಂತಿರುಗುವ ಮೊದಲು ಮತ್ತು ಐಸಿಐಸಿಐ ಬ್ಯಾಂಕ್‌ಗೆ ಅದರ ವಿಲೀನದ ನಂತರ ಆಗ್ನೇಯ ಏಷ್ಯಾದಲ್ಲಿ ಹಲವಾರು ವರ್ಷಗಳ ಕಾಲ ಕೆಲಸ ಮಾಡಿದರು.


ಕೆ.ವಿ.ಕಾಮತ್​


ಕೆವಿ ಕಾಮತ್ ನಾಯಕತ್ವದಲ್ಲಿ ಐಸಿಐಸಿಐ ಭಾರತದಲ್ಲಿ ಬ್ಯಾಂಕಿಂಗ್, ವಿಮೆ ಮತ್ತು ಆಸ್ತಿ ನಿರ್ವಹಣೆ ಮತ್ತು ಜಾಗತಿಕ ಅಸ್ತಿತ್ವದಾದ್ಯಂತ ವೈವಿಧ್ಯಮಯ, ತಂತ್ರಜ್ಞಾನ-ಚಾಲಿತ ಹಣಕಾಸು ಸೇವೆಗಳ ಗುಂಪಾಗಿ ರೂಪಾಂತರಗೊಂಡಿದೆ.2009ರಲ್ಲಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ವಾಮನ್ ಕಾಮತ್​ ನಿವೃತ್ತರಾದರು. 2015ರ ವರೆಗೆ ಐಸಿಐಸಿಐ ಬ್ಯಾಂಕ್ ಅಧ್ಯಕ್ಷರಾಗಿ ಮುಂದುವರಿದರು.


ಇದನ್ನೂ ಓದಿ: ರಿಲಯನ್ಸ್ ಇಂಡಸ್ಟ್ರೀಸ್ ಪಾಲಿಗೆ ಶುಭ ದೀಪಾವಳಿ! ಸೆಪ್ಟೆಂಬರ್ ತ್ರೈಮಾಸಿಕಕ್ಕೆ 15,512 ಕೋಟಿ ರೂಪಾಯಿ ನಿವ್ವಳ ಲಾಭ


ಕೆ.ವಿ.ಕಾಮತ್​ ಜವಾಬ್ದಾರಿಗಳೇನು?


ಕಾಮತ್ ಅವರು ರಿಲಯನ್ಸ್‌ನ ಹಣಕಾಸು ಸೇವೆಗಳ ವಿಭಾಗ ರಿಲಯನ್ಸ್ ಸ್ಟ್ರಾಟೆಜಿಕ್‌ ಇನ್ವೆಸ್ಟ್‌ಮೆಂಟ್ಸ್ ಲಿಮಿಟೆಡ್ (RSIL) ಕಾರ್ಯನಿರ್ವಾಹಕೇತರ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. "ಮೊದಲೇ ಸೂಚಿಸಿದಂತೆ, ಆರ್‌ಎಸ್‌ಐಎಲ್ ಅನ್ನು ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ (ಜೆಎಫ್‌ಎಸ್‌ಎಲ್) ಎಂದು ಮರುನಾಮಕರಣ ಮಾಡಲಾಗುತ್ತದೆ. ಕಂಪನಿಯ ಹಣಕಾಸು ಸೇವೆಗಳ ವ್ಯವಹಾರವನ್ನು ಆರ್‌ಎಸ್‌ಐಎಲ್‌ಗೆ ವಿಭಜಿಸಲು ನಿರ್ದೇಶಕರ ಮಂಡಳಿಯಿಂದ ಅನುಮೋದಿಸಲಾದ ವಿಂಗಡಣೆಯ ಯೋಜನೆ ಪ್ರಕಾರ ಲಿಸ್ಟ್‌ ಮಾಡಲಾಗುತ್ತದೆ," ಎಂದು ರಿಲಯನ್ಸ್ ಫೈಲಿಂಗ್‌ನಲ್ಲಿ ತಿಳಿಸಿದೆ.


ಕೆ.ವಿ.ಕಾಮತ್​


ಇದನ್ನೂಓದಿ: ಜಿಯೋದಿಂದ 6500 ರೂಪಾಯಿಯ ಅತ್ಯಾಕರ್ಷಕ ಕೊಡುಗೆ, 1 ದಿನ ಕಳೆದ್ರೆ ಈ ಆಫರ್ ಮಿಸ್ ಆಗುತ್ತೆ!


2010 ರಿಂದ ಕೆ.ವಿ. ಕಾಮತ್​ ಹ್ಯೂಸ್ಟನ್ ಮೂಲದ ತೈಲ ಸೇವಾ ಕಂಪನಿ ಸ್ಕ್ಲಂಬರ್ಗರ್ ಮತ್ತು ಭಾರತೀಯ ಔಷಧೀಯ ತಯಾರಕ ಲುಪಿನ್ ಮಂಡಳಿಗಳಲ್ಲಿ ಸ್ವತಂತ್ರ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಪಂಡಿತ್ ದೀನದಯಾಳ್ ಪೆಟ್ರೋಲಿಯಂ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರೂ ಆಗಿದ್ದರು. ಪದ್ಮಭೂಷಣ ಗೌರವ ಪುರಸ್ಕೃತರಾದ ಕಾಮತ್ ಅವರು ಇತ್ತೀಚೆಗೆ ನಿವೃತ್ತರಾದ ರಿಲಯನ್ಸ್ ಬೋರ್ಡ್‌ನಲ್ಲಿರುವ ಇಬ್ಬರು ಸ್ವತಂತ್ರ ನಿರ್ದೇಶಕರಲ್ಲಿ ಒಬ್ಬರ ಸ್ಥಾನಕ್ಕೆ ಬದಲಿಯಾಗಿ ಸೇರ್ಪಡೆ ಆಗಲಿದ್ದಾರೆ.

Published by:ವಾಸುದೇವ್ ಎಂ
First published: