• Home
  • »
  • News
  • »
  • business
  • »
  • Reliance: ರಿಲಯನ್ಸ್ ಪ್ರತಿಷ್ಠಾನಕ್ಕೆ ಒಲಿದ 'ಸಮಾಜದ ಒಳಿತಿಗೆ ಕ್ರೀಡೆ' ಪ್ರಶಸ್ತಿ

Reliance: ರಿಲಯನ್ಸ್ ಪ್ರತಿಷ್ಠಾನಕ್ಕೆ ಒಲಿದ 'ಸಮಾಜದ ಒಳಿತಿಗೆ ಕ್ರೀಡೆ' ಪ್ರಶಸ್ತಿ

ನಿಖಿಲ್ ಮೇಸ್ವಾನಿ

ನಿಖಿಲ್ ಮೇಸ್ವಾನಿ

Reliance ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಸಾಮಾಜಿಕ ಸೇವಾ ಕಾರ್ಯಗಳಿಗೆ ಇಂಬು ನೀಡಲು 2010ರಲ್ಲಿ ನೀತಾ ಅಂಬಾನಿ ನೇತೃತ್ವದಲ್ಲಿ ರಿಲಯನ್ಸ್ ಪ್ರತಿಷ್ಠಾನ ಆರಂಭಿಸಲಾಯಿತು.

  • Share this:

    ರಿಲಯನ್ಸ್ ಫೌಂಡೇಷನ್‌ಗೆ 'ಸಮಾಜದ ಒಳಿತಿಗೆ ಕ್ರೀಡೆ' (Sports For Social Good’) ಪ್ರಶಸ್ತಿಗೆ ಭಾಜನವಾಗಿದೆ.


    ಇಲ್ಲಿನ ತಾಜ್ ಮಹಲ್ ಪ್ಯಾಲೇಜ್(Taj Mahal Palace)‌ ಹೋಟೆಲ್‌ನಲ್ಲಿ ಶನಿವಾರ ನಡೆದ ಸ್ಪೋರ್ಟ್ಸ್‌ಸ್ಟಾರ್‌ ಏಸಸ್‌ ಪ್ರಶಸ್ತಿ –2022 (Sportstar Aces Prize 2022) ಪ್ರದಾನ ಕಾರ್ಯಕ್ರಮದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (Reliance industries ltd) ಕಾರ್ಯನಿರ್ವಾಹಕ ನಿರ್ದೇಶಕ ನಿಖಿಲ್ ಮೇಸ್ವಾನಿ ಈ ಗೌರವ ಸ್ವೀಕರಿಸಿದರು.


    ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಸಾಮಾಜಿಕ ಸೇವಾ ಕಾರ್ಯಗಳಿಗೆ ಇಂಬು ನೀಡಲು 2010ರಲ್ಲಿ ನೀತಾ ಅಂಬಾನಿ ನೇತೃತ್ವದಲ್ಲಿ ರಿಲಯನ್ಸ್ ಪ್ರತಿಷ್ಠಾನ ಆರಂಭಿಸಲಾಯಿತು.


    ದಿ ಹಿಂದೂ ಸಮೂಹದ ಮುಖ್ಯಸ್ಥೆ ಮಾಲಿನಿ ಪಾರ್ಥಸಾರಥಿ ಮಾತನಾಡಿ, 'ಈ ವರ್ಷದ 'ಸಮಾಜದ ಒಳಿತಿಗೆ ಕ್ರೀಡೆ' ಪ್ರಶಸ್ತಿಯನ್ನು ರಿಲಯನ್ಸ್ ಪ್ರತಿಷ್ಠಾನ ಭಾಜನರಾಗಿರುವುದನ್ನು ಪ್ರಕಟಿಸಲು ಖುಷಿಯಾಗುತ್ತಿದೆ. ಯುವ ಕ್ರೀಡಾ ಚಟುವಟಿಕೆಗಳ ಮೂಲಕ ಕ್ರೀಡಾ ಕೌಶಲ ಬೆಳೆಸಲು ‍ಪ್ರತಿಷ್ಠಾನವು ಬದ್ಧತೆ ತೋರುತ್ತಿದೆ' ಎಂದು ಶ್ಲಾಘಿಸಿದರು.


    'ನೀತಾ ಅಂಬಾನಿ ನೇತೃತ್ವದಲ್ಲಿ ರಿಲಯನ್ಸ್ ಪ್ರತಿಷ್ಠಾನವು ತ್ಯಾಗ ಮನೋಭಾವ, ಆಸಕ್ತಿ ಹಾಗೂ ಕಾಳಜಿಯಿಂದ ಕೆಲಸದಲ್ಲಿ ತೊಡಗಿದೆ. ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಸದಸ್ಯರೂ ಆಗಿರುವ ನೀತಾ ಅಂಬಾನಿ ಅವರ ಅವಿರತ ಪ್ರಯತ್ನದಿಂದ, 2023ರ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಅಧಿವೇಶನವನ್ನು ಮುಂಬೈನಲ್ಲಿ ನಡೆಸಲು ಘೋಷಣೆ ಮಾಡಿರುವುದು ಗಮನಾರ್ಹ ವಿಚಾರ‌’ ಎಂದರು.


    ಇದನ್ನೂ ಓದಿ: Twitter: ಸ್ಪೇಸಸ್‌ ಆಡಿಯೋ ರೂಂಗಾಗಿ ಟ್ವಿಟ್ಟರ್ ಪರೀಕ್ಷಿಸುತ್ತಿರುವ ಮತ್ತೊಂದು ಹೊಸ ವೈಶಿಷ್ಟ್ಯವೇನು ಗೊತ್ತಾ? ಇಲ್ಲಿ ತಿಳಿಯಿರಿ


    ‘ಭಾರತದ ನಿರ್ಗತಿಕ ಹಾಗೂ ಸೌಲಭ್ಯ ವಂಚಿತ ಯುವಜನತೆಯನ್ನು ಗುರಿಯಾಗಿಸಿ ವಿವಿಧ ಕಾರ್ಯಕ್ರಮಗಳ ಮೂಲಕ ಅವರ ಏಳಿಗೆಗಾಗಿ ರಿಲಯನ್ಸ್‌ ಪ್ರತಿಷ್ಠಾನ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿದೆ. ಪ್ರಮುಖ ಕ್ರೀಡೆಗಳಾದ ಫುಟ್‌ಬಾಲ್‌ ಹಾಗೂ ಕ್ರಿಕೆಟ್‌ನಲ್ಲಿ ಕೌಶಲ ಬೋಧನೆ, ತರಬೇತಿ ನೀಡುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


    ನೀತಾ ಅಂಬಾನಿ ಸಂದೇಶ


    ವಿಡಿಯೊ ಮೂಲಕ ಸಂದೇಶ ನೀಡಿದ ನೀತಾ ಅಂಬಾನಿ, ‘ನಮ್ಮ ದೇಶದ ಪ್ರತಿ ಮಗುವೂ ಶಿಕ್ಷಣದ ಹಕ್ಕು ಹಾಗೂ ಕ್ರೀಡಾ ಹಕ್ಕು ಪಡೆಯಬೇಕೆಂಬುದು ನನ್ನ ಕನಸು. ರಿಲಯನ್ಸ್‌ ಪ್ರತಿಷ್ಠಾನದ ‘ಎಲ್ಲರಿಗೂ ಶಿಕ್ಷಣ ಹಾಗೂ ಕ್ರೀಡೆ’ ಕಾರ್ಯಕ್ರಮದ ಮೂಲಕ 21.5 ದಶಲಕ್ಷ ಮಕ್ಕಳನ್ನು ತಲುಪಿದ್ದೇವೆ ಎಂಬುದನ್ನು ಹೇಳಿಕೊಳ್ಳಲು ಹೆಮ್ಮೆ ಇದೆ’ ಎಂದರು.


    ಇದನ್ನೂ ಓದಿ: iPhone: ಬ್ಯಾಟರಿ ಡ್ರೈನ್ ಸಮಸ್ಯೆ ಎದುರಿಸುತ್ತಿರುವ ಬಳಕೆದಾರರು! ಐಫೋನ್ iOS 15.4ಗೆ ಅಪ್‌ಡೇಟ್‌ ಮಾಡಿರೋದೇ ಇದಕ್ಕೆ ಕಾರಣ


    ‘ಭಾರತದಲ್ಲಿ ಕ್ರೀಡಾ ಏಳಿಗಾಗಿ ತಳಮಟ್ಟದಿಂದಲೇ ಸೌಲಭ್ಯ ದೊರಕಿಸಿಕೊಡಲು ನಾವು ಬದ್ಧರಾಗಿದ್ದೇವೆ. 2023ರ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಅಧಿವೇಶನವನ್ನು ಆಯೋಜಿಸಲು ಭಾರತ ಈಚೆಗೆ ಹಕ್ಕು ಪಡೆದುಕೊಂಡಿದೆ’ ಎಂದು ಸಂತೋಷ ವ್ಯಕ್ತಪಡಿಸಿದರು.


    ‘ಈ ಐತಿಹಾಸಿಕ ಅಧಿವೇಶನವು ಭಾರತ ಯುವಜನತೆಗೆ ಒಲಿಂಪಿಕ್ಸ್‌ನ ಅವಕಾಶಗಳ ಬಾಗಿಲು ತೆರೆಯಲಿದೆ. ಭಾರತದ ಕ್ರೀಡಾ ಲೋಕದ ನೂತನ ಅಧ್ಯಯನಕ್ಕೆ ಮುನ್ನುಡಿ ಬರೆಯಲಿದೆ’ ಎಂದು ಆಶಿಸಿದರು.

    Published by:Harshith AS
    First published: