Reliance ಮತ್ತೊಂದು ಮೈಲಿಗಲ್ಲು.. ಅಬುಧಾಬಿಯ TAZIZ ಜೊತೆ $2 ಬಿಲಿಯನ್ ಮೌಲ್ಯದ ಉದ್ಯಮ ಆರಂಭ

ಜಂಟಿ ಉದ್ಯಮದ ಪ್ರಾರಂಭದ ಕುರಿತು ಪ್ರತಿಕ್ರಿಯಿಸಿದ ಮುಖೇಶ್​ ಅಂಬಾನಿ ಅವರು, ಇದು ಭಾರತ ಮತ್ತು ಯುಎಇ ನಡುವಿನ ದೀರ್ಘಕಾಲದ ಮತ್ತು ಮೌಲ್ಯಯುತ ಸಂಬಂಧವನ್ನು ಭದ್ರಪಡಿಸುತ್ತದೆ ಎಂದರು.

ಜಂಟಿ ಉದ್ಯಮಕ್ಕೆ ಸಹಿ

ಜಂಟಿ ಉದ್ಯಮಕ್ಕೆ ಸಹಿ

  • Share this:
ಆಯಿಲ್-ಟು-ಟೆಲಿಕಾಂ ಸಂಘಟಿತ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಇಂದು ಅಬುಧಾಬಿ ಕೆಮಿಕಲ್ಸ್ ಡೆರಿವೇಟಿವ್ಸ್ ಕಂಪನಿ RSC Ltd (TA'ZIZ) ನೊಂದಿಗೆ $2 ಬಿಲಿಯನ್ ಮೌಲ್ಯದ ರಾಸಾಯನಿಕ ಯೋಜನೆಗಳ  ಜಂಟಿ ಉದ್ಯಮವನ್ನು ಪ್ರಾರಂಭಿಸಿರುವುದಾಗಿ ಘೋಷಿಸಿದೆ. ಅಬುಧಾಬಿ ನಗರದ ಪಶ್ಚಿಮಕ್ಕೆ 240 ಕಿ.ಮೀ ದೂರಲ್ಲಿರುವ ರುವೈಸ್ ಎಂಬ ಪಟ್ಟಣದಲ್ಲಿ ಈ ಹೊಸ ಉದ್ಯಮ ತಲೆ ಎತ್ತಲಿದೆ. ಹೊಸ ಜಂಟಿ ಉದ್ಯಮವು ಕ್ಲೋರ್-ಆಲ್ಕಲಿ, ಎಥಿಲೀನ್ ಡೈಕ್ಲೋರೈಡ್ (ಇಡಿಸಿ) ಮತ್ತು ಪಾಲಿವಿನೈಲ್ ಕ್ಲೋರೈಡ್ (ಪಿವಿಸಿ) ಉತ್ಪಾದನಾ ಸೌಲಭ್ಯವನ್ನು ನಿರ್ಮಿಸುತ್ತದೆ ಮತ್ತು ನಿರ್ವಹಿಸುತ್ತದೆ.  ಇದು $ 2 ಶತಕೋಟಿಗಿಂತ ಹೆಚ್ಚಿನ ಹೂಡಿಕೆ ಎಂದು RIL ಹೇಳಿಕೆಯಲ್ಲಿ ತಿಳಿಸಿದೆ. 'TA'ZIZ EDC & PVC' ಹೆಸರಿನ ಜಂಟಿ ಉದ್ಯಮವು ರುವೈಸ್‌ನಲ್ಲಿರುವ TA'ZIZ ಕೈಗಾರಿಕಾ ರಾಸಾಯನಿಕ ವಲಯದಲ್ಲಿ ರಾಸಾಯನಿಕ ಉತ್ಪಾದನಾ ಪಾಲುದಾರಿಕೆ ಆಗಿರುತ್ತದೆ.

ದೀರ್ಘಾವಧಿಯ ಪಾಲುದಾರಿಕೆ

ಈ ಯೋಜನೆಯು ಯುಎಇಯ ಆರ್ಥಿಕತೆಯನ್ನು ವೈವಿಧ್ಯಗೊಳಿಸಲು ಮತ್ತು ಕೈಗಾರಿಕಾ ಅಭಿವೃದ್ಧಿಯನ್ನು ವೇಗಗೊಳಿಸಲು TA'ZIZ ಮಿಷನ್ ಅನ್ನು ಬೆಂಬಲಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಏಕೆಂದರೆ ಇದು ದೇಶದಲ್ಲಿ ಹೊಸ ರಾಸಾಯನಿಕಗಳ ಉತ್ಪಾದನೆಯ ಮೂಲಕ ಸ್ಥಳೀಯ ಪೂರೈಕೆ ಸರಪಳಿಗಳನ್ನು ಸಕ್ರಿಯಗೊಳಿಸುತ್ತದೆ.  ಜಂಟಿ ಉದ್ಯಮವು ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ (MENA) ಪ್ರದೇಶದಲ್ಲಿ ಸರ್ಕಾರಿ ಸ್ವಾಮ್ಯದ ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿ (ADNOC) ಮತ್ತು RIL ನಡುವಿನ ದೀರ್ಘಾವಧಿಯ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಯುಎಇ & ಭಾರತದ ದ್ವಿಪಕ್ಷೀಯ ಸಂಬಂಧಕ್ಕೆ ಬಲ

ಜಂಟಿ ಉದ್ಯಮದ ನಿಯಮಗಳಿಗೆ ಸಹಿ ಮಾಡಿದ್ದನ್ನು ವಿಡಿಯೋ ಕಾನ್ಫರೆನ್ಸ್​ ಮೂಲಕ RIL ಅಧ್ಯಕ್ಷ ಮತ್ತು MD ಮುಖೇಶ್ ಅಂಬಾನಿ, ಯುಎಇ ಕೈಗಾರಿಕಾ ಸಚಿವ ಡಾ.ಸುಲ್ತಾನ್ ಅಹ್ಮದ್ ಅಲ್ ಜಾಬರ್ , ADNOC ವ್ಯವಸ್ಥಾಪಕ ನಿರ್ದೇಶಕರು ಮತ್ತು ಗ್ರೂಪ್ ಸಿಇಒ ವೀಕ್ಷಿಸಿದರು.  ರಿಲಯನ್ಸ್ ಇಂಡಸ್ಟ್ರೀಸ್‌ನೊಂದಿಗಿನ ಈ ಕಾರ್ಯತಂತ್ರದ ಪಾಲುದಾರಿಕೆಯು ಯುಎಇ ಮತ್ತು ಭಾರತದ ನಡುವೆ ಬಲವಾದ ದ್ವಿಪಕ್ಷೀಯ ಸಂಬಂಧಗಳನ್ನು ನಿರ್ಮಿಸುತ್ತದೆ ಎಂದು ಡಾ ಅಲ್ ಜಾಬರ್ ಹೇಳಿದರು.

ಮುಖೇಶ್​ ಅಂಬಾನಿ ಮಾತು 

ಜಂಟಿ ಉದ್ಯಮದ ಪ್ರಾರಂಭದ ಕುರಿತು ಪ್ರತಿಕ್ರಿಯಿಸಿದ ಮುಖೇಶ್​ ಅಂಬಾನಿ ಅವರು, ಇದು ಭಾರತ ಮತ್ತು ಯುಎಇ ನಡುವಿನ ದೀರ್ಘಕಾಲದ ಮತ್ತು ಮೌಲ್ಯಯುತ ಸಂಬಂಧವನ್ನು ಭದ್ರಪಡಿಸುತ್ತದೆ. ನಾವು ರಾಸಾಯನಿಕಗಳ ಜಾಗತಿಕ ಕೇಂದ್ರವಾಗಿ ಅಭಿವೃದ್ಧಿಪಡಿಸುತ್ತಿರುವ  TA'ZIZ ಕೈಗಾರಿಕಾ ರಾಸಾಯನಿಕ ವಲಯದಲ್ಲಿ ಯುಎಇಯಲ್ಲಿ ವಿನೈಲ್ ಸರಪಳಿಯಲ್ಲಿ ಮೊದಲ ಯೋಜನೆಗಳನ್ನು ಸ್ಥಾಪಿಸಲು ಸಂತಸವಾಗಿದೆ ಎಂದು RIL ಮುಖ್ಯಸ್ಥರು ಹೇಳಿದರು.

ಇದನ್ನೂ ಓದಿ: ಡಿ.1ರಿಂದ Jio Prepaid Tariff ದರದಲ್ಲಿ ಶೇ.20ರಷ್ಟು ಏರಿಕೆ: ಜಿಯೋ ಪ್ಲಾನ್​​ಗಳ ಹೊಸ ಬೆಲೆ ಹೀಗಿದೆ

ಯುಎಇಯಲ್ಲಿ ಮೊದಲ ಬಾರಿಗೆ ನಿರ್ಣಾಯಕ ಕೈಗಾರಿಕಾ ಕಚ್ಚಾ ವಸ್ತುಗಳನ್ನು ತಯಾರಿಸುವ ಈ ಹೊಸ ಜಂಟಿ ಉದ್ಯಮದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಜೊತೆ ಪಾಲುದಾರಿಕೆ ಹೊಂದಲು ನಾವು ಸಂತೋಷಪಡುತ್ತೇವೆ. ಮುಂದಿನ 50 ವರ್ಷಗಳು ಕೈಗಾರಿಕಾ ವಲಯವನ್ನು ನಿಜವಾದ ಕ್ರಿಯಾತ್ಮಕ ಆರ್ಥಿಕತೆಯ ಪ್ರೇರಕ ಶಕ್ತಿಯಾಗಿಸಲು ನಮ್ಮ ರಾಷ್ಟ್ರೀಯ ಕಾರ್ಯತಂತ್ರವನ್ನು ಬೆಂಬಲಿಸುತ್ತದೆ ಎಂದು ಸಚಿವ ಡಾ.ಸುಲ್ತಾನ್ ಹೇಳಿದರು.

ಈ ಉದ್ಯಮವು ಆಗ್ನೇಯ ಏಷ್ಯಾ ಮತ್ತು ಆಫ್ರಿಕಾದ ಮಾರುಕಟ್ಟೆಗಳಿಗೆ ರಫ್ತು ಮಾಡಲು ಅವಕಾಶಗಳನ್ನು ಸೃಷ್ಟಿಸುತ್ತದೆ. ಜೊತೆಗೆ ಸ್ಥಳೀಯ ಉದ್ಯಮಕ್ಕೆ UAE ನಲ್ಲೇ ಮೊದಲ ಬಾರಿಗೆ ತಯಾರಿಸಿದ ಕಚ್ಚಾ ವಸ್ತುಗಳು ದೊರೆಯುತ್ತವೆ.ಈ ಉದ್ಯಮವು ಆಗ್ನೇಯ ಏಷ್ಯಾ ಮತ್ತು ಆಫ್ರಿಕಾದ ಮಾರುಕಟ್ಟೆಗಳಿಗೆ ರಫ್ತು ಮಾಡಲು ಅವಕಾಶಗಳನ್ನು ಸೃಷ್ಟಿಸುತ್ತದೆ. ಜೊತೆಗೆ ಸ್ಥಳೀಯ ಉದ್ಯಮಕ್ಕೆ UAE ನಲ್ಲೇ ಮೊದಲ ಬಾರಿಗೆ ತಯಾರಿಸಿದ ಕಚ್ಚಾ ವಸ್ತುಗಳು ದೊರೆಯುತ್ತವೆ.
Published by:Kavya V
First published: