Mukesh Ambani: 3D ವರ್ಲ್ಡ್ ಆಫ್ ಮೆಟಾವರ್ಸ್‌ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಸಭೆ! ನೀವೂ ಹೀಗೆ ಭಾಗವಹಿಸಿ

Mukesh Ambani: ಮುಕೇಶ್ ಅಂಬಾನಿ ಅವರು ಕಳೆದ ವರ್ಷದ ವಾರ್ಷಿಕ ಸಾಮಾನ್ಯ ಸಭೆಯ ತಮ್ಮ ಭಾಷಣದಲ್ಲಿ "ರಿಲಯನ್ಸ್‌ನ ಅಂತರಾಷ್ಟ್ರೀಕರಣ" ದ ದೃಷ್ಟಿಕೋನವನ್ನು ಒತ್ತಿ ಹೇಳಿದ್ದರು.  ಅದೇ ರೀತಿ ಈ ವರ್ಷದ ವಾರ್ಷಿಕ ಸಾಮಾನ್ಯ ಸಭೆಯಲ್ಲಿಯೂ ರಿಲಯನ್ಸ್​ನ ಭವಿಷ್ಯದ ಯೋಜನೆಗಳ ಬಗ್ಗೆ ತೆರೆದಿಡುವ ಸಾಧ್ಯತೆ ಇದೆ

ಮುಕೇಶ್ ಅಂಬಾನಿ

ಮುಕೇಶ್ ಅಂಬಾನಿ

  • Share this:
    ಮುಂಬೈ: ದಿಗ್ಗಜ ಉದ್ಯಮಿ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ತನ್ನ 45 ನೇ ವಾರ್ಷಿಕ ಸಾಮಾನ್ಯ ಸಭೆ (Reliance AGM 2022) ಇಂದು (ಆಗಸ್ಟ್ 29) ಮಧ್ಯಾಹ್ನ 2 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿದ್ದು ಭಾರೀ ಕುತೂಹಲ ಹುಟ್ಟಿಸಿದೆ. ರಿಲಯನ್ಸ್ ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಮುಕೇಶ್ ಅಂಬಾನಿ (Mukesh Ambani) ಇಂದು ಮಧ್ಯಾಹ್ನ ಷೇರುದಾರರನ್ನು ಉದ್ದೇಶಿಸಿ ಸಂವಾದಾತ್ಮಕ 3D ವರ್ಲ್ಡ್ ಆಫ್ ಮೆಟಾವರ್ಸ್‌ನಲ್ಲಿ ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈಮೂಲಕ ವರ್ಚುವಲ್ ರಿಯಾಲಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಏಕಕಾಲದಲ್ಲಿ ವಾರ್ಷಿಕ ಸಾಮಾನ್ಯ ಸಭೆಯನ್ನು (AGM) ನಡೆಸುವ ಜಾಗತಿಕವಾಗಿ ಮೊದಲ ಕಂಪನಿಗಳಲ್ಲಿ ರಿಲಯನ್ಸ್ ಒಂದಾಗಲಿದೆ.

    ಜೊತೆಗೆ ಅಧಿಕೃತ ಜಿಯೋಮೀಟ್ ಪ್ರಸಾರದ ಜೊತೆಗೆ ಐದು ಪ್ರಮುಖ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವಾರ್ಷಿಕ ಸಭೆಯನ್ನು  ನೇರ ಪ್ರಸಾರ ಮಾಡಲಾಗುತ್ತದೆ. ಕಂಪನಿಯ ವಾರ್ಷಿಕ ವರದಿ 2021-22 ರ ವ್ಯಾಪಾರವಾರು ಮುಖ್ಯಾಂಶಗಳು ಈ ಸಭೆಯಲ್ಲಿ ಪ್ರಸ್ತಾವನೆಗೊಳ್ಳಲಿದೆ.

    ಈ ವರ್ಷದ ಸಭೆಯಲ್ಲಿ ಹೆಚ್ಚಿದ ನಿರೀಕ್ಷೆ
    ಮುಕೇಶ್ ಅಂಬಾನಿ ಅವರು ಕಳೆದ ವರ್ಷದ ವಾರ್ಷಿಕ ಸಾಮಾನ್ಯ ಸಭೆಯ ತಮ್ಮ ಭಾಷಣದಲ್ಲಿ ರಿಲಯನ್ಸ್‌ನ ಅಂತರಾಷ್ಟ್ರೀಕರಣದ ದೃಷ್ಟಿಕೋನವನ್ನು ಒತ್ತಿ ಹೇಳಿದ್ದರು. ಅದೇ ರೀತಿ ಈ ವರ್ಷದ ವಾರ್ಷಿಕ ಸಾಮಾನ್ಯ ಸಭೆಯಲ್ಲಿಯೂ ರಿಲಯನ್ಸ್​ನ ಭವಿಷ್ಯದ ಯೋಜನೆಗಳ ಬಗ್ಗೆ ತೆರೆದಿಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮಹತ್ವವಾಗಿ ಭಾರತದಲ್ಲಿ 5ಜಿ ಸೇವೆಗಳನ್ನು ಲಭ್ಯವಾಗಿಸುವ ಬಗ್ಗೆ ರಿಲಯನ್ಸ್ ಹಮ್ಮಿಕೊಂಡಿರುವ ಯೋಜನೆಗಳ ಬಗ್ಗೆ ಪ್ರಸ್ತಾಪಿಸುವ ಸಾಧ್ಯತೆ ದಟ್ಟವಾಗಿದೆ.

    ನೀವೂ ಹೀಗೆ ಭಾಗವಹಿಸಬಹುದು
    ಜಿಯೋ ಮೀಟ್ ಮೂಲಕ ರಿಲಯನ್ಸ್ ವಾರ್ಷಿಕ ಸಭೆಯಲ್ಲಿ ಭಾಗವಹಿಸಬಹುದು. ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ

    ಇಲ್ಲಿ ಕ್ಲಿಕ್ ಮಾಡಿದ ನಂತರ OTHERS ಮೇಲೆ ಕ್ಲಿಕ್ ಮಾಡಿ, ನಿಮ್ಮ ಪೂರ್ಣ ಹೆಸರು ಮತ್ತು ಸಂಸ್ಥೆಯನ್ನು ನಮೂದಿಸಿ ಮತ್ತು ನಿಮ್ಮ ಪರದೆಯ ಮೇಲೆ ಕಾಣಿಸಿಕೊಳ್ಳುವ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ. ಈವೆಂಟ್‌ನ ನಿಗದಿತ ಸಮಯಕ್ಕೆ 30 ನಿಮಿಷಗಳ ಮೊದಲು ಪ್ರವೇಶ ಲಭ್ಯವಿರುತ್ತದೆ.

    ಯೂಟ್ಯೂಬ್ ಮೂಲಕ ವೀಕ್ಷಿಸಲು
    Reliance Updates Channel: ಇಲ್ಲಿ ಕ್ಲಿಕ್ ಮಾಡಿ

    Playback URL: ಇಲ್ಲಿ ಕ್ಲಿಕ್ ಮಾಡಿ

    ಫೇಸ್​ಬುಕ್ ಮೂಲಕ ವೀಕ್ಷಿಸಲು

    Reliance Industries Limited Page: ಇಲ್ಲಿ ಕ್ಲಿಕ್ ಮಾಡಿ

    Playback URL: ಇಲ್ಲಿ ಕ್ಲಿಕ್ ಮಾಡಿ

    Jio Page: ಇಲ್ಲಿ ಕ್ಲಿಕ್ ಮಾಡಿ

    Playback URL: ಇಲ್ಲಿ ಕ್ಲಿಕ್ ಮಾಡಿ

    ಹೀಗೆ ನೀವೂ ನಿಮ್ಮ ಮನೆಯಲ್ಲೇ ಕುಳಿತು ರಿಲಯನ್ಸ್ ವಾರ್ಷಿಕ ಸಭೆಯಲ್ಲಿ ಭಾಗವಹಿಸಬಹುದಾಗಿದೆ.

    ಇದನ್ನೂ ಓದಿ: Congress President: ಕೌನ್ ಬನೇಗಾ ಕಾಂಗ್ರೆಸ್ ಪ್ರೆಸಿಡೆಂಟ್? ಅಕ್ಟೋಬರ್ 17ಕ್ಕೆ ಎಲೆಕ್ಷನ್

    ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಸೋಮವಾರ ತನ್ನ ವಾರ್ಷಿಕ ಸಾಮಾನ್ಯ ಸಭೆಯನ್ನು (AGM) ನಡೆಸಲಿದೆ, ಹೂಡಿಕೆದಾರರು ಮತ್ತು ವಿಶ್ಲೇಷಕರು ಪ್ರಮುಖ ಪ್ರಕಟಣೆಗಳನ್ನು ನಿರೀಕ್ಷಿಸುತ್ತಿದ್ದಾರೆ.

    5ಜಿ ಸೇವೆ ಮೇಲೆ ಹೆಚ್ಚಿದ ನಿರೀಕ್ಷೆ
    ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಇತ್ತೀಚೆಗೆ ಅಕ್ಟೋಬರ್ 12 ರೊಳಗೆ 5G ಸೇವೆಗಳನ್ನು ಪ್ರಾರಂಭಿಸುವ ಭರವಸೆಯನ್ನು ಸರ್ಕಾರ ಹೊಂದಿದೆ ಎಂದು ಹೇಳಿದ್ದರು. ರಿಲಯನ್ಸ್ ಜಿಯೋ 5G ಹರಾಜು ಸಮಯದಲ್ಲಿ $ 11 ಶತಕೋಟಿಗಿಂತ ಹೆಚ್ಚು ಮೌಲ್ಯದ ಏರ್​ವೇವ್​ಗಳನ್ನು ಖರೀದಿಸುವ ಮೂಲಕ ಅಗ್ರ ಬಿಡ್ಡರ್ ಆಗಿ ಹೊರಹೊಮ್ಮಿದೆ.

    ಇದನ್ನೂ ಓದಿ: Divita Rai: ಮಂಗಳೂರು ಮೂಲದ ದಿವಿತಾ ರೈ ಮುಡಿಗೆ 'ಲಿವಾ ಮಿಸ್ ದಿವಾ ಯುನಿವರ್ಸ್' ಕಿರೀಟ!

    ರಿಲಯನ್ಸ್ ಜಿಯೋ IPO
    ರಿಲಯನ್ಸ್ ಜಿಯೋ ಮತ್ತು ರಿಲಯನ್ಸ್ ರಿಟೇಲ್ ಲಿಮಿಟೆಡ್‌ನ ಐಪಿಒಗಳ ಸುತ್ತಲೂ ಸಹ ವಾರ್ಷಿಕ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
    Published by:guruganesh bhat
    First published: