ವಜ್ರ (Diamond) ಎಂದರೆ ಅದೊಂದು ದುಬಾರಿ (Costly) ಹಾಗೂ ಬೆಲೆಬಾಳುವ ವಸ್ತು. ವಜ್ರವು ಪ್ರಕೃತಿಯ ಅತ್ಯುತ್ತಮ ಸೃಷ್ಟಿಗಳಲ್ಲಿ ಒಂದಾಗಿದೆ. ಚಿನ್ನ, ಬೆಳ್ಳಿ, ಪ್ಲಾಟಿನಮ್ ಆಭರಣದ (Jewellery) ಮಧ್ಯೆ ಹೊಳೆಯುವ ಈ ವಜ್ರದ ಗತ್ತೇ ಬೇರೆ ಅಷ್ಟು ಭವ್ಯವಾಗಿರುತ್ತೆ ವಜ್ರದ ಪ್ರಕಾಶಮಾನ. ಅಪರೂಪದಲ್ಲಿ ಅಪರೂಪವಾದ ವಜ್ರಗಳಲ್ಲಿ ನೀಲಿ ವಜ್ರವು ಒಂದು. ಬಿಳಿ ವಜ್ರಕ್ಕಿಂತ ನೀಲಿ ವಜ್ರ (Blue Diamond) ಹೆಚ್ಚು ದುಬಾರಿಯಾಗಿರುತ್ತದೆ. ಪ್ರಸ್ತುತ ನೀಲಿ ಬಣ್ಣದ ವಜ್ರವೊಂದನ್ನು ಸೋಥೆಬಿಸ್ ಹರಾಜು (Auction) ಮನೆಯಲ್ಲಿ ಹರಾಜು ಮಾಡಲು ಯೋಜಿಸಿದ್ದು, ಬರೋಬ್ಬರಿ $48 ಮಿಲಿಯನ್ಗೆ ಅಂದರೆ ಭಾರತದ ಕರೆನ್ಸಿ ಅನ್ವಯ 3,60,81,84,000.00 ರೂಪಾಯಿಗೆ ಹರಾಜಾಗುವ ನೀರಿಕ್ಷೆಯಿದೆ.
ಹರಾಜಿನಲ್ಲಿ ಇದುವರೆಗೆ ಕಾಣಿಸಿಕೊಂಡಿರುವ ಅತ್ಯಮೂಲ್ಯವಾದ ನೀಲಿ ವಜ್ರಗಳಲ್ಲಿ ಇದು ಒಂದು ಎಂದು ಸೋಥೆಬಿಸ್ ಹರಾಜು ಮನೆ ತನ್ನ ವರದಿಯಲ್ಲಿ ತಿಳಿಸಿದೆ. ಅಲ್ಲದೇ ಇದರ ಮೂಲಕ ಹೊಸ ದಾಖಲೆಯನ್ನು ಈ ನೀಲಿ ಡೈಮಂಡ್ ಬರೆಯುತ್ತದೆ ಎಂದು ವರದಿಗಳು ತಿಳಿಸಿವೆ.
ಈ ನೀಲಿ ವಜ್ರವು ಹರಾಜಿನಲ್ಲಿ 48 ಮಿಲಿಯನ್ ಡಾಲರ್ಗಿಂತಲೂ ಹೆಚ್ಚು ಮೌಲ್ಯಕ್ಕೆ ಮಾರಾಟ ಆಗಬಹುದು ಎಂದು ಅಂದಾಜಿಸಲಾಗಿದೆ. ಸೋಥೆಬಿಸ್ ಪತ್ರಿಕಾ ಪ್ರಕಟಣೆಯ ಪ್ರಕಾರ, "ದಿ ಬಿಯರ್ಸ್ ಕಲ್ಲಿನಾನ್ ಬ್ಲೂ" ಎಂದು ಹೆಸರಿಸಲಾದ ಈ ವಜ್ರವು ಹರಾಜಿಗೆ ಇಡಲಾದ ಅತಿದೊಡ್ಡ ಎದ್ದು ಕಾಣುವ ನೀಲಿ ವಜ್ರವಾಗಿದೆ.
15.10-ಕ್ಯಾರೆಟ್ ರತ್ನವು ದೋಷರಹಿತ ಸ್ಟೆಪ್ ಕಟ್ ಎದ್ದು ಕಾಣುವ ನೀಲಿ ವಜ್ರ ಎಂದು ಜೆಮಲಾಜಿಕಲ್ ಇನ್ಸ್ಟಿಟ್ಯೂಟ್ ಆಫ್ ಅಮೆರಿಕ (ಜಿಐಎ) ಯಿಂದ ಮೌಲ್ಯಮಾಪನ ಮಾಡಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಅಪರೂಪದ ನೀಲಿ ವಜ್ರವು 2021ರಲ್ಲಿ ದಕ್ಷಿಣ ಆಫ್ರಿಕಾದ (Africa) ಕಲ್ಲಿನಾನ್ ಗಣಿಯಲ್ಲಿ ಕಂಡುಬಂದಿದೆ ಮತ್ತು ಬಣ್ಣದ ವಜ್ರಗಳನ್ನು ನಿರ್ಣಯಿಸುವ ಮಾನದಂಡಗಳ ಪ್ರಕಾರ ಅತ್ಯುನ್ನತ ಶ್ರೇಣಿಯನ್ನು ಇದು ಪಡೆದುಕೊಂಡಿದೆ. ಇದನ್ನು GIA ಯಿಂದ ಅಲಂಕಾರಿಕ ಮತ್ತು ಅಪರೂಪದ ವಜ್ರ ಎಂದು ವರ್ಗೀಕರಿಸಲಾಗಿದೆ.
ಜಿಐಎ ವೆಬ್ಸೈಟ್ ಪ್ರಕಾರ, ವಜ್ರವು ಅತ್ಯುತ್ತಮವಾದ ಹೊಳಪು ಹೊಂದಿದೆ ಮತ್ತು ಟೈಪ್ IIb ಆಗಿದೆ, ಅಂದರೆ ಇದು ಬೋರಾನ್ ಅನ್ನು ಹೊಂದಿದ್ದು, ಆದ್ದರಿಂದಲೇ ನೀಲಿ ಬೂದು ಛಾಯೆಯನ್ನು ಹೊಂದಿರುತ್ತದೆ. 0.5%ಕ್ಕಿಂತ ಕಡಿಮೆ ವಜ್ರಗಳು ಇಂತಹ ವರ್ಗದ ಭಾಗವಾಗಿದೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.
ದಕ್ಷಿಣ ಆಫ್ರಿಕಾದ ಕೇಪ್ ಟೌನ್ ಡೈಮಂಡ್ ಮ್ಯೂಸಿಯಂ ಪ್ರಕಾರ, 1905ರಲ್ಲಿ ಪತ್ತೆಯಾದ 3,106-ಕ್ಯಾರೆಟ್ ಕಲ್ಲಿನನ್ ಡೈಮಂಡ್ ಸೇರಿದಂತೆ, ಕಲಿನ್ನನ್ ಗಣಿಯಲ್ಲಿ ಲಭಿಸಿರುವ ಈ ನಿಲಿ ವಜ್ರ ಇದುವರೆಗೆ ದಾಖಲಾದ ಅತಿದೊಡ್ಡ ವಜ್ರವಾಗಿದೆ ಎಂದು ಹೇಳಿದೆ.
ಇತ್ತೀಚೆಗೆ ದುಬೈನಲ್ಲಿ "ದಿ ಎನಿಗ್ಮಾ" ಹೆಸರಿನ ಕಪ್ಪು ವಜ್ರವನ್ನು ಹರಾಜಿಗೆ ಇಡುವ ಬಗ್ಗೆ ಸುದ್ದಿಯಾಗಿತ್ತು, ಈ ವಜ್ರ ಸುಮಾರು 5 ಮಿಲಿಯನ್ ಡಾಲರ್ಗೆ ಮಾರಾಟವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿತ್ತು.
"ಬ್ಲೂ ಮೂನ್ ಆಫ್ ಜೋಸೆಫೀನ್" ಹೆಸರಿನ ವಜ್ರವು 2015ರಲ್ಲಿ $48.4 ಮಿಲಿಯನ್ಗೆ ಮಾರಾಟವಾದ 12.03 ಕ್ಯಾರೆಟ್ ನೀಲಿ ವಜ್ರವಾಗಿದೆ.ಇತ್ತೀಚಿನ ಆವಿಷ್ಕಾರಗಳಲ್ಲಿ "ದಿ ಸಕುರಾ", 15.81-ಕ್ಯಾರೆಟ್ ನೇರಳೆ-ಗುಲಾಬಿ ವಜ್ರವು ಕಳೆದ ವರ್ಷ ಮೇ ತಿಂಗಳಲ್ಲಿ ಕ್ರಿಸ್ಟಿಸ್ನಲ್ಲಿ $29.3 ಮಿಲಿಯನ್ಗೆ ಮಾರಾಟವಾಗಿತ್ತು.
ರಾಜು ಮನೆಗೆ ಪ್ರವೇಶ ಪಡೆದಿರುವ ನೀಲಿ ವಜ್ರವು ಏಪ್ರಿಲ್ ಅಂತ್ಯದಲ್ಲಿ ನಡೆಯಲಿರುವ ಸೋಥೆಬಿಯ ಹಾಂಗ್ ಕಾಂಗ್ ಐಷಾರಾಮಿ ವೀಕ್ನಲ್ಲಿ "ದಿ ಬಿಯರ್ಸ್ ಕಲ್ಲಿನನ್ ಬ್ಲೂ" ಹರಾಜಿಗೆ ಹೋಗುತ್ತಿದ್ದು, ಬರೋಬ್ಬರಿ 48 ಮಿಲಿಯನ್ ಟಾಲರ್ಗೆ ಅಂದರೆ ಭಾರತದ ಕರೆನ್ಸಿ ಅನ್ವಯ 3,60,81,84,000.00 ರೂಪಾಯಿಗೆ ಹರಾಜಾಗುವ ನಿರೀಕ್ಷೆಯಿದೆ..
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ