ITR Filing: ಆದಾಯ ತೆರಿಗೆ ಸಲ್ಲಿಸುವ ಅಂತಿಮ ಗಡುವು ಡಿಸೆಂಬರ್ 31 ಆಗಿರುವುದರಿಂದ ತಮ್ಮ ಐಟಿಆರ್ಗಳನ್ನು (ITR) ಸಲ್ಲಿಸದೇ ಇರುವವರು ಈ ದಿನಾಂಕದೊಳಗೆ ಐಟಿಆರ್ ಫೈಲ್ ಮಾಡುವುದು ಉತ್ತಮವಾಗಿದೆ. ಹಿರಿಯ ನಾಗರಿಕರು (Senior Citizens) ಹಾಗೂ ತಂತ್ರಜ್ಞಾನದ ಬಗ್ಗೆ ತಿಳುವಳಿಕೆ ಮಾಹಿತಿ ಇಲ್ಲದವರು ಕೊ-ಬ್ರೌಸಿಂಗ್ (Co Browsing) (ಇಬ್ಬರು ಅಥವಾ ಹೆಚ್ಚಿನ ವ್ಯಕ್ತಿಗಳು ನೈಜ ಸಮಯದಲ್ಲಿ ಒಂದೇ ಬ್ರೌಸರ್ ಟ್ಯಾಬ್ನಲ್ಲಿ ನ್ಯಾವಿಗೇಟ್ ಮಾಡಬಹುದು) ಫೀಚರ್ (New Feature) ಬಳಸಿಕೊಂಡು ಐಟಿಆರ್ ಸಲ್ಲಿಸಬಹುದಾಗಿದೆ.
ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದ ಮೇಲೂ ನೀವು ಇಲಾಖೆಯಿಂದ ಸೂಚನೆಗಳನ್ನು ಪಡೆದುಕೊಳ್ಳುತ್ತಿದ್ದರೆ ಏನಾದರೂ ದೋಷ ಸಂಭವಿಸಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳುವುದು ಉತ್ತಮವಾಗಿದೆ.
ಏಕೆಂದರೆ ನಿಮ್ಮ ಆದಾಯ ತೆರಿಗೆ ರಿಟರ್ನ್ ಅನ್ನು ನೀವು ಸಮಯಕ್ಕೆ ಸರಿಯಾಗಿ ಸಲ್ಲಿಸದೇ ಇರುವುದರಿಂದ ಕೂಡ ಆದಾಯ ತೆರಿಗೆ ಇಲಾಖೆಯಿಂದ ನೀವು ಅನಿರೀಕ್ಷಿತ ಸೂಚನೆಯನ್ನು ಪಡೆದುಕೊಳ್ಳಬಹುದು.
ಇಲ್ಲದಿದ್ದರೆ ಕಂಪ್ಯೂಟರ್ ಸಮಸ್ಯೆಗಳು, ತಪ್ಪಾಗಿ ವರದಿ ಮಾಡಲಾದ ಆದಾಯ, ಅತಿಯಾದ ನಷ್ಟ ಹಾಗೂ ತಪ್ಪು ಸೂಚನೆಯ ಕಾರಣದಿಂದ ಕೂಡ ನೀವು ಇಂತಹ ಸಂವಹನವನ್ನು ಪಡೆಯುವ ಸಾಧ್ಯತೆ ಇರುತ್ತದೆ.
ತೆರಿಗೆ ಇಲಾಖೆಯ ಸೂಚನೆ ಯಾವ ಕಾರಣಗಳಿಗೆ ಬರಬಹುದು?
ಆನ್ಲೈನ್ ಆದಾಯ ತೆರಿಗೆ ಫೈಲಿಂಗ್ ಪೋರ್ಟಲ್ನ EZTax.in ನ ಸಂಸ್ಥಾಪಕ ಮತ್ತು CEO ಸುನೀಲ್ ದಾಸರಿ ತಿಳಿಸುವಂತೆ, ಆದಾಯ ತೆರಿಗೆ ಕಾಯಿದೆ, 1961 ರ ಪ್ರಕಾರ ಐಟಿಆರ್ ಅನ್ನು ಸಲ್ಲಿಸದ ಕಾರಣ, ಅಸಮರ್ಪಕ ತೆರಿಗೆ ಮರುಪಾವತಿಯ ಹಕ್ಕು, ತೆರಿಗೆಯ ಆದಾಯವನ್ನು ಮರೆಮಾಡುವುದು, ಕಂಪ್ಯೂಟಿಂಗ್ ಸಮಸ್ಯೆ ಮೊದಲಾದ ಕಾರಣಗಳಿಂದ ತೆರಿಗೆದಾರರು ಸಾಮಾನ್ಯವಾಗಿ ಸೆಕ್ಷನ್ 139(9), 143(1), 143(2), 143(3), 245 ಅಡಿಯಲ್ಲಿ I-T ಸೂಚನೆಗಳನ್ನು ಸ್ವೀಕರಿಸುತ್ತಾರೆ ಎಂದು ತಿಳಿಸಿದ್ದಾರೆ.
ಆದರೆ ನಿಮ್ಮ ಕಡೆಯಿಂದ ಯಾವುದೇ ತಪ್ಪು ಸಂಭವಿಸದೇ ಇದ್ದರೂ ಇಲಾಖೆಯಿಂದ ಸೂಚನೆ ಸ್ವೀಕರಿಸಿದರೆ ಏನು ಮಾಡಬೇಕು? ಕೆಲವೊಮ್ಮೆ ಐಟಿ ಇಲಾಖೆಯೂ ತಪ್ಪಾದ ಸೂಚನೆಯನ್ನು ಕಳುಹಿಸಬಹುದು. ನಿಜವಾಗಿ ಹೇಳುವುದಾದರೆ ಐಟಿಆರ್ ಅನ್ನು ಫೈಲ್ ಮಾಡುವ ಸಮಯದಲ್ಲಿ ಪಾನ್ ಕಾರ್ಡ್ ಸಂಖ್ಯೆ ತಪ್ಪಾದರೆ, ಸಂಬಂಧಪಟ್ಟ ವ್ಯಕ್ತಿ ತೊಂದರೆಗೆ ಸಿಲುಕಿಕೊಳ್ಳುವ ಸಾಧ್ಯತೆ ಇರುತ್ತದೆ.
ಈ ಸಂದರ್ಭದಲ್ಲಿ ಸಂಬಂಧಪಟ್ಟ ವ್ಯಕ್ತಿಯು ಪೋರ್ಟಲ್ ಸಹಾಯ ಪಡೆದುಕೊಂಡು ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದಾಗಿದೆ
ಹಂತ 1:
https://www.incometax.gov.in/iec/foportal/ಲಿಂಕ್ ಮೂಲಕ ಇ-ಫೈಲಿಂಗ್ ಪೋರ್ಟಲ್ಗೆ ಲಾಗಿನ್ ಮಾಡಿ
ಹಂತ 2:
ಇ-ಫೈಲ್ ಮೆನು ಆಯ್ಕೆಮಾಡಿ ಹಾಗೂ ನೋಟಿಸ್ ಯು/ಎಸ್ 139(9) ಗೆ ಪ್ರತಿಕ್ರಿಯೆಗೆ ಕ್ಲಿಕ್ ಮಾಡಿ
ಹಂತ 3:
ದಯವಿಟ್ಟು ITR, ಇ-ಫೈಲಿಂಗ್ ಸ್ವೀಕೃತಿ ಸಂಖ್ಯೆ, CPC ಉಲ್ಲೇಖ ಸಂಖ್ಯೆ ಮತ್ತು ಸೂಚನೆ ದಿನಾಂಕದಂತಹ ವಿವರಗಳನ್ನು ನಮೂದಿಸಿ. ಸೂಚನೆಯ ಸ್ಥಿತಿ ಮತ್ತು ಪ್ರತಿಕ್ರಿಯೆಯನ್ನು ಪ್ರದರ್ಶಿಸಲಾಗುತ್ತದೆ. ಪ್ರತಿಕ್ರಿಯೆ ಕಾಲಂನಲ್ಲಿ ಸಲ್ಲಿಸಿ ಹೈಪರ್ಲಿಂಕ್ ಅನ್ನು ಕ್ಲಿಕ್ ಮಾಡಿ.
ಹಂತ 4:
ಫೈಲ್ ಮಾಡಲಾದ ITR ನಿಂದ ಗುರುತಿಸಲಾದ ಎಲ್ಲಾ ದೋಷಗಳನ್ನು ತೆರಿಗೆದಾರರಿಗೆ ಪ್ರದರ್ಶಿಸಲಾಗುತ್ತದೆ. ‘ದೋಷವನ್ನು ನೀವು ಒಪ್ಪುತ್ತೀರಾ?’ ಅಂಕಣದಿಂದ ಹೌದು/ಇಲ್ಲ ಎಂಬುದನ್ನು ಆಯ್ಕೆ ಮಾಡಿ.
ಹೌದು ಆಯ್ಕೆ ಮಾಡುವಾಗ, ಸರಿಯಾದ XML ಅನ್ನು ಅಪ್ಲೋಡ್ ಮಾಡಿ ಮತ್ತು ಸಲ್ಲಿಸು ಬಟನ್ ಕ್ಲಿಕ್ ಮಾಡಿ. ಮತ್ತೊಂದೆಡೆ ಇಲ್ಲ ಆಯ್ಕೆ ಮಾಡಲು, 'ವಿಮರ್ಶೆಗಳನ್ನು ಮೌಲ್ಯಮಾಪನ ಮಾಡಿ' ಕಾಲಮ್ ಅಡಿಯಲ್ಲಿ ನಿಮ್ಮ ಟೀಕೆಗಳನ್ನು ನಮೂದಿಸಿ ಮತ್ತು ಸಲ್ಲಿಸು ಬಟನ್ ಕ್ಲಿಕ್ ಮಾಡಿ.
ಹಂತ 5:
ಸಲ್ಲಿಸಿದ ಪ್ರತಿಕ್ರಿಯೆಯನ್ನು ವೀಕ್ಷಿಸಲು, ಸಲ್ಲಿಸಿದ ಪ್ರತಿಕ್ರಿಯೆಯ ವಿವರಗಳನ್ನು ತಿಳಿಯಲು ಪ್ರತಿಕ್ರಿಯೆ ಕಾಲಮ್ನ ಅಡಿಯಲ್ಲಿ ವೀಕ್ಷಣೆ ಆಯ್ಕೆಯನ್ನು ಕ್ಲಿಕ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ